ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, March 16, 2018

CRIME INCIDENTS 16-03-2018

 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-03-2018 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 15-03-2018 ರಂದು 2200 ಗಂಟೆಗೆ ಜಿಗಳೂರ ಗ್ರಾಮದ ಪಿರ್ಯಾದಿ ರಾಜಶೇಖರ ಬಡಿಗೇರ ಇವರ ಮನೆಯ ಹಿತ್ತಲ ಜಾಗೆಯಲ್ಲಿ ಎಲ್ಲ ಆರೋಪಿತರಾದ ಪ್ರವೀಣಕುಮಾರ ಬಡಿಗೇರಿ ಮತ್ತು 7 ಜನರು ಗೈರ ಕಾಯ್ದೆಶೀರ ಮಂಡಳಿಯಾಗಿ ಗುಂಪುಗೂಡಿಕೊಂಡು ಒಟ್ಟಾಗಿ ಹಿತ್ತಲ ಜಾಗೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ, ಸದರ ಹಿತ್ತಲ ಜಾಗೆಯು ತಮ್ಮದು ಇರುತ್ತದೆ ಅಂತಾ ಪಿರ್ಯಾದಿಯೊಂದಿಗೆ ತಂಟೆ ತೆಗೆದು ಅವಾಚ್ಯ ಬೈದಾಡಿ, ಜೀವ ಬೆದರಿಕೆ ಹಾಕಿ, ಬಡಿಗೆಯಿಂದ ಹಾಗೂ ಕೈಯಿಂದ ಹೊಡೆ ಬಡೆ ಮಾಡಿ, ನೆಲಕ್ಕೆ ಕೆಡವಿ ಕಾಲಿನಿಂದ ಜಾಡಿಸಿ ಒದೆಯಹತ್ತಿದ್ದು ಬಿಡಿಸಲು ಹೋದ ಪಿರ್ಯಾದಿಯ ತಂದೆಗೆ, ತಂಗಿಗೆ, ಚಿಕ್ಕಮ್ಮನಿಗೆ ಹಾಗೂ ಚಿಕ್ಕಮ್ಮನ ಮಗನಿಗೂ ಸದರಿ ಆರೋಪಿತರು ಬಡಿಗೆಯಿಂದ ಹಾಗೂ ಕೈಯಿಂದ ಹೊಡೆ ಬಡೆ ಮಾಡಿ ದುಃಖಾಪತಪಡಿಸಿದ್ದಲ್ಲದೇ, ಪಿರ್ಯಾದಿ ಹಾಗೂ ಸಾಕ್ಷಿದಾರರಿಗೆ ಜೀವ ಬೆದರಿಕೆ ಹಾಕಿದ ಅಪರಾಧ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 68/2018 ಕಲಂ IPC 1860 (U/s-143,147,148,323,324,447,504,506,149) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಯಲ್ಲಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಮುಂಜಾಗ್ರತ ಕ್ರಮವಾಗಿ ಗುನ್ನಾ ನಂ. 37/2018, 38/2018, 39/2018 ಮತ್ತು 40/2018 ನೇದ್ದು ಪ್ರಕರಣಗಳನ್ನು ದಾಖಲಿಸಿದ್ದು ಇರುತ್ತದೆ.