ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, December 18, 2017

CRIME INCIDENTS 18-12-2017
ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-12-2017 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಶಹರ ಗ್ರಾಮದ ಹತ್ತಿರ  ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ರೋಣ್ ಕ್ರಾಸ್ ಹತ್ತಿರ ಯಾರೋ ಇಬ್ಬರೂ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದು ಅವರು ಏನಾದರೂ ಸಣ್ಣಪುಟ್ಟ ಕಳ್ಳತನ ಮಾಡುವ ಉದ್ದೆಶದಿಂದ ನವಲಗುಂದರೋಣ ರಸ್ತೆ ರೊಣ ಕ್ರಾಸ್ ಹತ್ತಿರ ತಮ್ಮ ಇರುವಿಕೆ ಮುಚ್ಚಿಕೊಂಡು ತಿರುಗಾಡುತ್ತಿರುವರು ಕೂಡಲೇ ಫಿರ್ಯಾದಿ ಮತ್ತು ಸಂಗಡ ಇದ್ದ  ಸಿಎಚ್ಜಿ 360 ನೇದ್ದವರಿಗೆ ಕರೆದುಕೊಂಢು ಮೋಟಾರ್ ಸೈಕಲ್ದಲ್ಲಿ ಸದರಿ ಅಪರಿಚತರಿಗೆ ಹಿಡಿಯಲು ಹೋದಾಗ ಅವರು ತಪ್ಪಿಸಿ ತಮ್ಮ ಇರುವಿಕೆ ಮುಚ್ಚಿಕೊಂಡು ರೋಣ ಕ್ರಾಸ್ ಹತ್ತಿರ ಇರುವ ರವಾಮೀಲ್ದಲ್ಲಿ ಹೋಗಿ ಅಡಗಿ ಕುಳಿತಿದ್ದು ಸದರಿಯವರಿಗೆ ಬೆನ್ನು ಹತ್ತಿ ಹಿಡಿದು ವಿಚಾರಿಸಿದಾಗ ಅವರ ಪೈಕಿ 1) ಮಲ್ಲಪ್ಪ ಬೆಲ್ಲಪ್ಪ ಶಿಂಗಾಡಿ 2) ಮುತ್ತಪ್ಪ ಶಿವಪುತ್ರಪ್ಪ ಬೂಡ್ಡಣ್ಣವರ ಅಂತಾ ಹೇಳಿದರು ಆಗ ಮತ್ತೊಮ್ಮೆ ವಿಚಾರಿಸಿದಾಗ ತಮ್ಮ ಹೆಸರು 1) ಶ್ರೀಕಾಂತ ತಂದೆ ಸೋಮಪ್ಪ ಈಟಿ ವಯಾ 20 ವರ್ಷ ಸಾ!! ನವಲಗುಂದ ಹಳ್ಳದ ಓಣಿ 2) ಮಹ್ಮದಲಿ ರಾಜೇಸಾಬ ಮುದೋಳ ವಯಾ 20 ವರ್ಷ ಸಾ!! ನವಲಗುಂದ ಕುಂಭಾರ ಓಣಿ ಈ ಪ್ರಕಾರ ತಮ್ಮ ಹೆಸರು ವಿಳಾಸ ಹೇಳಿದ್ದು ಸದರಿಯವರಿಗೆ ಸದರ ಇದ್ದ ಸ್ಥಳದಲ್ಲ ಸಂಶಯಾಸ್ಪಾದವಾಗಿ ತಿರುಗಾಡುತ್ತಿದ್ದ ಬಗ್ಗೆ ವಿಚಾರಿಸಿದಾಗ ಸರಿಯಾದ ಸಮರ್ಪಕ ಉತ್ತರ ನೀಡಲಿಲ್ಲ ಒಬ್ಬರಿಗೊಬ್ಬರೂ ಗಾಬರಿಯಿಂದ ಅನುಮಾನ ಬರುವಂತೆ ತಮ್ಮ ಹೆಸರು ವಿಳಾಸ ಸಹ ತಡವರಸಿ ಹೇಳಿದ್ದು ಸದರಿಯವರ ವರ್ತನೆ ಮೇಲಿಂದಾ ಸದರ ಆರೋಪಿತರು ಸಣ್ಣ ಪುಟ್ಟ ಕಳ್ಳತನ ಮಾಡುವ ಉದ್ದೇಶದಿಂದ ಊರ ಹೊರ ವಲಯದಲ್ಲಿ ವಸ್ತುಗಳನ್ನು ಕಳವು ಮಾಡಲು ಬಂದಿರುವ ಬಗ್ಗೆ ಸಂಶಯ ಬಂದಿದ್ದು ಸದರ ಆರೋಪಿತರನ್ನು ಹಿಡಿದು ದಸ್ತಗೀರ ಮಾಡಿ ಒಂದು ಖಾಸಗಿ ವಾಹನದಲ್ಲಿ ತಂದು  ಠಾಣೆಗೆ ಹಾಜರಪಡಿಸಿದ್ದು  ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 147/2017 ಕಲಂ ಕಲಂ 109 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, December 16, 2017

CRIME INCIDENTS 16-12-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-12-2017 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಬೆಂಡಲಗಟ್ಟಿ ಗ್ರಾಮದ ಬಸ್ಟ್ಯಾಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾಧ ಬಸಪ್ಪ ತಂದೆ ನಿಂಗಪ್ಪ ಚಂದಾಯಿ ಸಾ..ಬೆಂಡಲಗಟ್ಟಿ ಇವನು 1 ರೂ ಗೆ 80 ರೂ ಕೊಡುವದಾಗಿ ಹೇಳಿ ಸಾರ್ವಜನಿಕರಿಗೆ ಕರೆದು ಅವರಿಂದ ಹಣ ಇಸಿದುಕೊಂಡು ಅಂಕಿ ಸಂಖ್ಯೆಗಳ ಆಧಾರದ ಮೇಲಿಂದಾ ಓಸಿ ಎಂಬ ಜೂಜಾಟ ಆಡಿಸುತ್ತಿದ್ದಾಗ ಮಾಲ ಸಮೇತ ಸಿಕ್ಕಿದ್ದು ಅವನಿಂದ ರೂ 4.225-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 376/2017 ಕಲಂ 78(3) ನೇದದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಗರಗ ತಡಕೋಡ ಗ್ರಾಮದ ಹಂಗರಕಿ ಗ್ರಾಮದ ಹತ್ತಿರ ಜೀಪ ನಂ.ಕೆ.ಎ.22/ಬಿ/3652 ನೇದ್ದರ ಚಾಲಕನು ತನ್ನ ಜೀಪನ್ನು ದಿನಾಂಕ:15-12-2017 ರಂದು ರಾತ್ರಿ-21-30 ಗಂಟೆ ಸುಮಾರಿಗೆ ಗರಗ ಕಡೆಯಿಂದ ತಡಕೊಡ ಕಡಗೆ ಅತೀಜೋರಿನಿಂದ ವ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಸಫಾ ದಾಬಾದ ಹತ್ತೀರ  ರಸ್ತೆಯ ಎಡಸೈಡಿನಿಂದ ಹೊರಟ  ಶಿವಾನಂದ  ಸನ್ನಟ್ಟಕ್ಕಿ ಇವರಿಗೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿ ಇವರ ಎರಡೂ ಕಾಲುಗಳಿಗೆ ಭಾರಿ ಗಾಯವನ್ನು ಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 184/2007 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ಶಹರದ ಹರಿಜನಕೇರಿ ಕ್ರಾಸ್ ನ ಸಾರ್ವಜನಿಕ ಸ್ಥಳದಲ್ಲಿ ತನ್ನ ಫಾಯದೇಗೋಸ್ಕರ ಆರೋಪಿತನಾದ ರಮಜಾನಸಾಬ ಹೊಂಬಳ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು  ಅಂಕಿ ಸಂಖ್ಯೆಗಳ ಸಹಾಯದಿಂದ ಓ ಸಿ ಮಟಕಾ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 350-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು  ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 152/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.