ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, April 27, 2017

CRIME INCIDENTS 27-04-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 27/04/2017 ರಂದು ವರದಿಯಾದ ಪ್ರಕರಣಗಳು
1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನೀರಲಕೇರಿ ಹಾಗೂ ನರಗುಂದದಲ್ಲಿರುವ ಜಮೀನುಗಳ ಹಿಸ್ಸೆ ಬಗ್ಗೆ ದತ್ತಕವಾಗಿರುವ ದೊಡ್ಡಪ್ಪನ ಮಕ್ಕಳು ತಂಟೆ ಮಾಡುತ್ತ ಬಂದಿದ್ದು ಈ ಬಗ್ಗೆ ಮೃತನು ಅವರ ವಿರುದ್ದ ಕೊರ್ಟನಲ್ಲಿ ದಾವಾ ಹೂಡಿದ್ದು ಅವರು ಮೃತನಿಗೆ ಆಸ್ತಿ ಸಾಗುವಳಿ ಮಾಡದಂತೆ ತೊಂದರೆ ಕೊಡ ಹತ್ತಿದ್ದರಿಂದ ಮೃತನು ತನ್ನ ಹೆಂಡತಿ ತವರೂರ ಅಮರಗೋಳದಲ್ಲಿ ಶಾಂತವ್ವ ಮಡ್ಡಿ ಇವರ  ಜೊತೆಗೆ ವಾಸವಿದ್ದು ಈಗ 2 ತಿಂಗಳು ಹಿಂದೆ ನರಗುಂದದಲ್ಲಿ ಹಿತ್ತಲ ಸ್ವಚ್ಚ ಮಾಡಲು ಹೋದಾಗ ಮೃತನೊಂದಿಗೆ ತಕರಾರು ಮಾಡಿ ಕಳಿಸಿದ್ದು ಮೃತನು ತನ್ನ ಆಡು ಮೇಯಿಸಲು ಹೋದವನು ವಾಪಾಸು ಬಾರದ್ದರಿಂದ ಹುಡುಕಾಡಿದರು ಸಿಕ್ಕಿರಲಿಲ್ಲ ಈ ದಿನ ಬೆಳಗಿನ 7-00 ಗಂಟೆ ಸುಮಾರಿಗೆ ಪಿರ್ಯಾದಿ ಅಣ್ಣ ಹುಡುಕಲು ಹೋದಾಗ ಪಿರ್ಯಾದಿಯ ಗಂಡ ಕೊಲೆಯಾದ ಸ್ಥಿತಿಯಲ್ಲಿ ಬಿದ್ದಿದ್ದು ಸ್ಥಿತಿಗತಿ ಮೇಲಿಂದ ಆಸ್ತಿ ತಂಟೆ ಮಾಡುತ್ತಿದ್ದ ದೊಡ್ಡಪ್ಪನ ಮಕ್ಕಳಾದ 1.ಲೇಕಪ್ಪಾ ಹಲಗೇರಿ 2.ಸಿದ್ದಲಿಂಗಪ್ಪಾ ಹಲಗೇರಿ ಹಾಗೂ ಇನ್ನೂ 07 ಜನರು  ಮೃತನಿಗೆ ಹೊಡೆದು ಕೊಲೆ ಮಾಡಿರುವ ಬಗ್ಗೆ ಸಂಶಯ ವಿದೆ ಅಂತಾ ಪಿರ್ಯಾಧಿ ನೀಡಿದ್ದು ಈ  ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 48/2017 ಕಲಂ 302 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.
2.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ  ಗುನ್ನಾನಂ 60/2017.61/2017.62/2017.63/2017 ನೇದ್ದರಲ್ಲಿ ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಚವರಗುಡ್ಡ ವ್ಯಾಪ್ತಿಯಲ್ಲಿ ಬಸಪ್ಪ ಬಸಪ್ಪ ತೆಳಗಿನಮನಿ ಸಾ: ರಾಮಾಪೂರ ಇವರ ಜಮೀನ ಸಮೀಪ ಇದರಲ್ಲಿ ಆರೋಪಿರಾದ 1.ನಾರಾಯಣ ಹಿರಮೆಣ್ಣವರ 2.ಚನ್ನಪ್ಪಗೌಡ ಪಾಟೀಲ 3.ಸುರೇಶ ಶಂಕರಪ್ಪಾ 4.ಮುಗಪ್ಪಾ ಹಡಪದ  ಇವರು  ತಮ್ಮ ತಮ್ಮ ಪಾಯ್ದೇಗೋಸ್ಕರ ಪಣಕ್ಕೆ ಹಣ ಹಚ್ಚಿ ಅಂದರ ಭಾಹರ ಅಂಬುವ ಜೂಜಾಟ ಆಡುತ್ತಿರುವಾಗ ಸಿಕ್ಕಿದ್ದು  ಅವರಿಂದ ರೂ ಹಣ 1050/- ರೂಪಾಯಿ ಮತ್ತು ಇಸ್ಪೀಟ್ ಎಲೆಗಳ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 100/17 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 

Wednesday, April 26, 2017

CRIME INCIDENTS 26-04-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 26/04/2017 ರಂದು ವರದಿಯಾದ ಪ್ರಕರಣಗಳು
1 ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹೆಬಸೂರ ಬಸ್ ನಿಲ್ದಾಣದ ಹತ್ತಿರ, ಹುಬ್ಬಳ್ಳಿ ನವಲಗುಂದ ರಸ್ತೆ ಮೇಲೆ, ಆರೋಪಿತನಾದ  ವಾಸಿಂಅಕ್ರಮ ಮಾಬುಸಾಬ ಹೂಲಿ ಸಾ. ಹೆಬಸೂರ ಇವನು ತನ್ನ ಮೋಟರ ಸೈಕಲ್ ನಂ. ಕೆಎ-25-ಇ.ಎಕ್ಸ್-0489 ನೇದ್ದನ್ನು ಹೆಬಸೂರ ಬಸ್ ನಿಲ್ದಾಣದ ಕಡೆಯಿಂದ, ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ, ರಸ್ತೆ ಸೈಡ ಹಿಡಿದು ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಯ ಸಹೋದರ ಜಾಫರಖಾನ ನೂರಸಾಬ ಪೀರಖಾನ ಇವರಿಗೆ ಡಿಕ್ಕಿ ಮಾಡಿ ಬಲಗಾಲಿಗೆ ತೀವ್ರ ಗಾಯಪಡಿಸಿ, ಅಫಘಾತದ ವಿಷಯವನ್ನು ಠಾಣೆಗೆ ತಿಳಿಸದೇ ಹಾಗೆ ಹೋಗಿದ್ದು ಇರುತ್ತದೆ  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 96/2017 ಕಲಂ 279.338. ವಾಹನ ಕಾಯ್ದೆ 134.187. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2.  ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಕ್ಕಲ್ಲ ರಸ್ತೆಯ ಮೇಲೆ ಸೋಮನಕೊಪ್ಪ ಗ್ರಾಮದ ಸಮೀಪ ಕುದರಿಗುಂಡ ಕ್ರಾಸ್ ಹತ್ತಿರ ಇದರಲ್ಲಿ  ಆರೋಪಿತನಾದ  ಬಸವರಾಜ ತಂದೆ ಯಲ್ಲಪ್ಪ ಇಟಿಗಟ್ಟಿ  ಸಾ; ಹಿಂಡಸಗೇರಿ ಇವನು ತಾನು ನಡೆಸುತ್ತಿದ್ದ ಕ್ರೂಸರ ವಾಹನ ನಂಬರ ಕೆ.ಎ 25/ ಸಿ 5853 ನೇದ್ದನ್ನು ಕಲಘಟಗಿ ರಸ್ತೆ ಕಡೆಯಿಂದ  ಮುಕ್ಕಲ್ಲ ರಸ್ತೆ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬಾಜುಕ್ಕೆ ಕಚ್ಚಾ ರಸ್ತೆ ಮೇಲೆ ನಡಕೊಂತ ಹೋರಟ್ಟಿದ ಪಿರ್ಯಾದಿ ಚಿಕ್ಕಪ್ಪನ ಮಗ ಈರಪ್ಪ ದ್ಯಾಮಪ್ಪ ಕುಂಬಾರ ಸಾ: ಸೋಮನಕೋಪ್ಪ ಇವನಿಗೆ ಡಿಕ್ಕಿ ಮಾಡಿ  ತಲೆಗೆ ಮೈ ಕೈಗೆ ಸಾದಾ ವ ಬಾರಿ ಗಾಯಪಡಿಸಿ  ಉಪಚಾರಕ್ಕೆ ಕೀಮ್ಸ್ ಆಸ್ಪತ್ರೆಗೆ ಧಾಖಲು ಮಾಡಿ ಅಲ್ಲಿಂದ ಹೆಚ್ಚಿನ  ಉಪಚಾರಕ್ಕೆ ಹುಬ್ಬಳ್ಳಿಯ ಸುಶೃತಾ ಆಸ್ಪತ್ರೆಗೆ ಕರೆದುಕೊಂಡು   ಹೋಗುವಾಗ ಕೀಮ್ಸ್ ಆಸ್ಪತ್ರೆ ಹುಬ್ಬಳ್ಳಿಯ ಮುಂದೆ ಹೊರಗಡೆ ಆವರಣದಲ್ಲಿ ಮರಣ ಹೊಂದುವಂತೆ  ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 145/2017 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
3.. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ದಿನಾಂಕ 26-04-2017 ರಂದು ಸಂಜೆ 4-30 ಗಂಟೆಯ ಸುಮಾರಿಗೆ ಹುಬ್ಬಳ್ಳಿ ಕಾರವಾರ ರಸ್ತೆಯ ಮೇಲೆ ಭಾರತ ದಾಬಾ ಸಮೀಪ  ಆರೋಪಿ ಸಂಜೆಯ ತಂದೆ ಕೃಷ್ಣಾ ಜಾದವ ಸಾ: ಹೋನ್ನಾವರ ಇವನು  ತಾನು ನಡೆಸುತ್ತಿದ್ದ ಕಾರ ನಂಬರ MH. 46/ Z 8595 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಕಾರವಾರ ರಸ್ತೆ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ರಾಂಗ್ ಸೈಡ್ ನಡೆಸಿಕೊಂಡು ಬಂದು ಕಾರವಾರ ರಸ್ತೆ ಕಡೆಯಿಂದ ಹುಬ್ಬಳ್ಳಿ ರಸ್ತೆ ಕಡೆಗೆ ಬರುತ್ತಿದ್ದ ಪಿರ್ಯಾದಿ ದೋಡ್ಡಪನ ಮಗ ವಿರುಪಾಕ್ಷಪ್ಪ  ಶಿವಪ್ಪ ಮುದಿಗೌಡ್ರ  ಸಾ; ದೇವಿಕೋಪ್ಪ ಇವನ ಮೋಟರ್ ಸೈಕಲ್ ನಂಬರ KA 25/ EL 2883 ಗೆ ಡಿಕ್ಕಿ ಮಾಡಿ ಅದರ ಸವಾರ ವಿರುಪಾಕ್ಷಪ್ಪ ಇವನಿಗೆ ಭಾರಿ ಗಾಯಪಡಿಸಿ ಸ್ಥಳದಲ್ಲಿಯೇ ಮರಣ ಪಡಿಸಿದ ಅಪರಾದ ಮೋಟರ್ ಸೈಕಲ್ ಸವಾರ ಹೇಲ್ಮೇಟ್ ಹಾಕದೇ ವಾಹನ ನಡೆಸಿದ ಅಪರಾದ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 146/2017 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

CRIME INCIDENTS 25-04-2017
ಯಾವುದೇ ಪ್ರಕರಣಗಳು ವರದಿಯಾಗಿರುವುದಿಲ್ಲ.

Monday, April 24, 2017

CRIME INCIDENTS 24-04-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 24/04/2017 ರಂದು ವರದಿಯಾದ ಪ್ರಕರಣಗಳು
1.ಗರಗ ಪೊಲೀಸ ಠಾಣಾ ವ್ಯಾಪ್ತಿಯ:ಧಾರವಾಡ-ಬೆಳಗಾವಿ ಪಿ.ಬಿ. ರಸ್ತೆಯ ಮೇಲೆ ಗರಗ ಕ್ರಾಸ ಹತ್ತಿರ ಯಾವುದೋ ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಧಾರವಾಡ ಕಡೆಯಿಂದಾ ಬೆಳಗಾವಿ ಕಡೆಗೆ ಪಿ.ಬಿ.ರಸ್ತೆಯ ಮೇಲೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಗರಗ ಕ್ರಾಸ ಹತ್ತಿರ ರಸ್ತೆ ದಾಟುತ್ತಿದ್ದ [ಮೃತ] ಬಸವಂತಪ್ಪಾ ತಂದೆ ಫಕ್ಕೀರಪ್ಪಾ ಭಜಂತ್ರಿ. ಸಾಃ ಧಾರವಾಡ ಇತನಿಗೆ ಢಿಕ್ಕಿ ಮಾಡಿ ಅಪಘಾತಪಡಿಸಿ ಭಾರಿ ಗಾಯಗೊಳಿಸಿ ವಾಹನ ನಿಲ್ಲಿಸದೆ ಹೋಗಿದ್ದು. ಸದರಿ ಗಾಯಾಳು ಹೆಚ್ಚಿನ ಉಪಚಾರಕ್ಕಾಗಿ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಾಗಿ ಉಪಚಾರ ಫಲಿಸದೆ ಮೃತಪಟ್ಟಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 58/2017 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮುಗದ ಕ್ರಾಸ್ ಹತ್ತಿರ ಆರೋಪಿತನಾದ ಶಿವಶಂಕರ ಬಸಪ್ಪಾ ಕುಂಬಾರ  ವಯಾ-27 ವರ್ಷ, ಜಾತಿ-ಹಿಂದೂ ಕುಂಬಾರ ಉದ್ಯೋಗ-ಕೂಲಿ ಸಾಃಮುಗದ ಇವನು ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ ತನ್ನ ಸ್ವಂತ ಪಾಯ್ದೇಗೋಸ್ಕರ ಯಾವುದೇ ಪಾಸು ವ ಪರ್ಮಿಟು ಇಲ್ಲದೇ  ಒಂದು ಕರೆ ಬ್ಯಾಗಿನಲ್ಲಿ  ಒಟ್ಟು 96 ಹೈವರ್ಡ್ಸ ಚೀಯರ್ಸ ವಿಸ್ಕಿ  ತುಂಬಿದ 90 ಎಂ.ಎಲ್ ಅಳತೆಯ  ಸರಾಯಿ ಟೆಟ್ರಾ  ಪಾಕೀಟಗಳ ಅ:ಕಿ: 2592/-  ರೂ  ನೇದ್ದವುಗಳನ್ನು ಮಾರಾಟ ಮಾಡುವ ಉದ್ದೇಶ ದಿಂದ ಸಾಗಾಟ ಮಾಡುತ್ತಿರುವಾಗ  ಸಿಕ್ಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 83/2017 ಕಲಂ 32.34 ನೇದ್ದರಲ್ಲಿಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಲಘಟಗಿ  ಗ್ರಾಮದ  ಶಿಲ್ಪಾ ಕೋಂ ಬಸಯ್ಯಾ ಚಿಕ್ಕಮಠ ಸಾ..ಕಲಘಟಗಿ ತನ್ನ ಗಂಡನಾದ ಬಸಯ್ಯಾ ತಂದೆ ಅಡವಯ್ಯಾ ಚಿಕ್ಕಮಠ 33 ವರ್ಷ ಸಾ..ಕಲಗಟಗಿ ಇವನು ಸಂತೋಷ ಲಾಡ್ ಇವರ ಮನೆಯಲ್ಲಿ ಮೀಟಿಂಗ್ ಇದೆ ಅಂತಾ ಹೇಳಿ ವಾಸದ ಮನೆಯಿಂದಾ ಹೋದವನು ಈವರೆಗೆ ಮರಳೀ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 144/2017 ಕಲಂ ಮನುಷ್ಯ ಕಾಣೆ ನೇದ್ದಕ್ಕೆ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

Sunday, April 23, 2017

CRIME INCIDENTS 23-04-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 23/04/2017 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಕಾರವಾರ ರಸ್ತೆಯ ಮೇಲೆ ಸಂಗಟಿಕೋಪ್ಪ ಬಸ್ಸ ಸ್ಯಾಂಡ ಸಮೀಪ  ಆರೋಪಿತನಾದ ಹಷಱ ಕೆ ಇತನು ನಡೆಸುತ್ತಿದ್ದ  ಟ್ಯಾಕ್ಟ್ರರ ನಂಬರ ಕೆ.ಎ 30/ಟಿ 2152 ಹಾಗೂ ಟ್ರೇಲರ್ ನಂ ಕೆ.ಎ 30 /ಟಿ 2153 ನೇದ್ದನ್ನು ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಯಾವುದೇ ಮುನ್ಸೂಚನೆ ನೀಡದೇ ಇಂಡಿಕೇಟರ್ ಹಾಕದೇ ರಸ್ತೆ ಮದ್ಯದಲ್ಲಿ ನಿರ್ಲಕ್ಷತನದಿಂದ ಟ್ಯಾಕ್ಟರ್ ರಸ್ತೆಯ ಮೇಲೆ ನಿಲ್ಲಿಸಿ ಹುಬ್ಬಳ್ಳಿ ರಸ್ತೆ ಕಡೆಯಿಂದ ಕಾರವಾರ ರಸ್ತೆ ಕಡೆಗೆ ಬರುತ್ತಿದ್ದ ಕಾರ ನಂಬರ ಕೆ.ಎ30/ 9842 ನೇದ್ದು   ಅಪಘಾತವಾಗುವಂತೆ ಮಾಡಿ ಕಾರನಲ್ಲಿದ  ಅನ್ನಪೂಣಱ ಮಂಜಪ್ಪಾ ಹಾಗೂ ನಿಮಱಲ ದೇವಿ ಇವರ ತಂದೆಗೆ ಹಾಗೂ ತಾಯಿಗೆ ಸಾದಾ ವ ಬಾರಿ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 143/2017 ಕಲಂ 279.338. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, April 22, 2017

CRIME INCIDENTS 22-04-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 22/04/2017 ರಂದು ವರದಿಯಾದ ಪ್ರಕರಣಗಳು
1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 35/2017.36/2017 ಕಲಂ 107 ಸಿ.ಆರ್.ಪಿ.ಸಿ. ಅಡಿಯಲ್ಲಿ ಕ್ರಮವನ್ನು ಕೈಗೊಂಡಿದ್ದು ಇರುತ್ತದೆ.
2.ಕುಂದಗೋಳ  ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 62/2017.63/2017 ಕಲಂ 107 ಸಿ.ಆರ್.ಪಿ.ಸಿ. ಅಡಿಯಲ್ಲಿ ಕ್ರಮವನ್ನು ಕೈಗೊಂಡಿದ್ದು ಇರುತ್ತದೆ.
3. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಹಲಗೇರಿ ಗ್ರಾಮದ   ಶ್ರೀ ಸುಭಾಷ ತಂದೆ ಸಿದ್ದಪ್ಪಾ ವಾಲಿಕಾರ ವಯಾ 48 ವರ್ಷ ಉದ್ಯೋಗ ಡ್ರೈವರ ಜ್ಯಾತಿ ಹಿಂದೂ ಮರಾಠಾ ಸಾ|| ಹಳ್ಳಿಗೇರಿ ಗ್ರಾಮ ತಾ||ಜಿ||ದಾರವಾಡ  ಇವರ ಮಗಳಾದ  ಸಿದ್ದವ್ವಾ ಕೊಂ ಸುಭಾಷ ಕೊಂಡೇಕರ  ವಯಾ 27 ವರ್ಷ ಉ: ಖಾಸಗಿ ಕೆಲಸ ಇವಳು ದಿನಾಂಕಃ 04-04-2017 ಮುಂಜಾನೆ 10-00 ಗಂಟೆಗೆ ಧಾರವಾಡದ ಬಟ್ಟೆ ಅಂಗಡಿಗೆ ಕೆಲಸಕ್ಕೆ ಅಂತಾ ಹೇಳಿ ಹೋದವಳು ಮರಳಿ ಇಲ್ಲಿಯವರೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಸದರಿಯವಳನ್ನು ನಮ್ಮ ಸಂಬಂಧಿಕರಲ್ಲಿ, ಗ್ರಾಮದ ಸುತ್ತ ಮುತ್ತಲಿನಲ್ಲಿ  ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಸಿಕ್ಕಿರುವದಿಲ್ಲ  ಅಂತಾ ಫಿಯಾಱದಿ ನೀಡಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 42/2017 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಗ್ರಾಮದ  ಮೃತನಾದ ನಾಗಪ್ಪ ಚಂದ್ರಪ್ಪ ಹರಿನಶಿಕಾರಿ, ವಯಾ 42 ವರ್ಷ ಈತನು ತನ್ನ ಜಮೀನದ ಮೇಲೆ ಅಣ್ಣಿಗೇರಿಯ ಕೆನರಾ ಬ್ಯಾಂಕಿನಲ್ಲಿ ಬೆಳೆ ಸಾಲ ಅಂತಾ 40,000/- ರೂ ಸಾಲವನ್ನು ಪಡೆದಿದ್ದು ಇರುತ್ತದೆ ಹಾಗು ಅವನ ಮಗನ ಕಾಲು ಊನವಾಗಿದ್ದರಿಂದ ಅವನ ಉಪಚಾರಕ್ಕೆ ಅಂತಾ ಹಾಗು ತನ್ನ ಜಮೀನದಲ್ಲಿ ಬೆಳೆಗೆ ಅಂತಾ ಕೈಗಡ ಸಾಲವನ್ನು ಮಾಡಿದ್ದು ಸದರ ಸಾಲವನ್ನು ತೀರಿಸುವ ಬಗ್ಗೆ ಮಾನಸೀಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ದಿನಾಂ 20-04-2017 ರಂದು ತನ್ನ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿ ಅಸ್ವಸ್ಥನಾಗಿದ್ದು ಸದರೀಯವನನ್ನು ಉಪಚಾರಕ್ಕೆ ದಾಖಲ್ ಮಾಡಿದಾಗಿಯೂ ಸಹಿತ ಉಪಚಾರ ಫಲಿಸದೇ ದಿನಾಂಕ 22-04-2017 ಮರಣ ಹೊಂದಿದ್ದು ಅವನ ಮರಣದಲ್ಲಿ ಯಾವುದೇ ಸಂಶಯ ವಿರುವುದಿಲ್ಲ ಅಂತಾ ತಿಪ್ಪವ್ವ ಫಿಯಾಱಧಿ ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 07/2017 ಕಲಂ 174 ಸಿ.ಆರ್ ಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಲಿಸಿದ್ದು ಇರುತ್ತದೆ.

Friday, April 21, 2017

CRIME INCIDENTS 21-04-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 21/04/2017 ರಂದು ವರದಿಯಾದ ಪ್ರಕರಣಗಳು
1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶೀ ಗ್ರಾಮದ ಬಸ್ ಸ್ಟ್ಯಾಂಡ ಹತ್ತಿರ ಆರೋಪಿತನಾದ ಬಸಲಿಂಗಪ್ಪಾ ಧಾರವಾಡ ಇತನು ಸಾರ್ವಜನಿಕ ರಸ್ತೆ ಮೇಲೆ ಅವಾಚ್ಯ ಶಬ್ದಗಳಿಂದ ಬೈದಾಡಿ ನೋಡೊಕೋತೇನಿ, ನನ್ನ ಯಾರಿಗೂ ಏನು ಮಾಡಿಕೊಳ್ಳಲಿಕ್ಕೆ ಆಗುವುದಿಲ್ಲ, ಅಂತಾ ಹೋಗಿ ಬರುವ ಜನರಿಗೆ ಒದರಾಡುವುದು, ಚೀರಾಡುವುದು ಮಾಡುತ್ತಾ ಹೊಡೆಯುತ್ತೇನೆ, ಬಡೆಯುತ್ತೇನೆ ಅಂತಾ ಅವರ ಮೈಮೇಲೆ ಏರಿ ಹೋಗುವುದು ಮಾಡುತ್ತಿದ್ದು ಸದರಿಯವನಿಗೆ ಹಿಗೇಯೇ ಬಿಟ್ಟಲ್ಲಿ ಯಾರದಾದರೂ ಮೇಲೆ ಎರಗಿ ಹೊಡೆ ಬಡೆ ಮಾಡಿ ರಕ್ತ ಪಾತ ಮಾಡಿ ಸಾರ್ವಜನಿಕ ಶಾಂತತ ಭಂಗವನ್ನುಂಟು ಮಾಡುವುದಲ್ಲದೇ ಯಾವುದಾದರೂ ಸಂಜ್ಞೆಯ ಅಪರಾಧವೆಸಗಿ   ಘೋರ ಸ್ವರೂಪದ ಗುನ್ನೆ ಮಾಡುವ ಸಾಧ್ಯತೆಗಳು ಇದ್ದುದ್ದರಿಂದ ಸದರಿಯವನ ಮೇಲೆ ಗುನ್ನಾನಂ 60/2017 ಕಲಂ 110(ಇ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕುಸುಗಲ್ಲ ಗ್ರಾಮದ ಶ್ರೀಮತಿ ಇಂದ್ರವ್ವ ಕೊಂ ಅಡಿವೆಪ್ಪ ದೇವನ್ನವರ ಸಾ!! ಕುಸುಗಲ್ಲ ಇವರ ಮಗಳಾದ ಶ್ರೀಮತಿ ಮೇಘಾ ಕೊಂ ಹನಮಂತಪ್ಪ ದೊಡಮನಿ ವಯಾ 20 ವರ್ಡ ಸಾ!! ಗುಡಿಸಾಗರ ತಾ!! ನವಲಗುಂದ ಇತಳು ಮನೆಯಿಂದ ಯಾರಿಗೂ ಹೇಳದೇ ಕೇಳದೇ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 94/2017 ಕಲಂ ಮಹಿಳೆ ಕಾಣೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ನಾಗರಹಳ್ಳಿ ಗ್ರಾಮದ  ಮೃತನಾದ ಶರಣಪ್ಪ ಬಸಪ್ಪ ಬಸಾಪೂರ , ವಯಾ 35 ವರ್ಷ ಈತನು ನವಲಗುಂದ ಸ್ಟೆ ಬ್ಯಾಂಕಿನಲ್ಲಿ  ತನ್ನ ಜಮೀನದ ಮೇಲೆ ಬೆಳೆ ಸಾಲ ಅಂತಾ ಸಾಲವನ್ನು ಪಡೆದುಕೊಂಡಿದ್ದು ಇರುತ್ತದೆ ಈ ಬಾರಿ ಮಳೆಯು ಸರಿಯಾಗಿ ಆಗದೇ ಪೀಕು ಸರಿಯಾಗಿ ಬರದೇ ಇರುವ ಬಗ್ಗೆ ಹಾಗೂ ಬ್ಯಾಂಕಿನ ಸಾಲವನ್ನು ಹೇಗೆ ತೀರಿಸುವುದು ಅಂತಾ ಮಾನಸೀಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ದಿನಾಂಕ 19-04-2017 ರಂದು ರಾತ್ರಿ 22-30 ಘಂಟೆಗೆ ನಾಗರಹಳ್ಳಿ ಗ್ರಾಮದ  ತನ್ನ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದು ಅವನನ್ನು ಉಪಚಾರಕ್ಕೆ ಅಂತಾ ನವಲಗುಂದ ಸರಕಾರಿ ಆಸ್ಪತ್ರೆಗೆ  ದಾಖಲ್ ಮಾಡಿ ಉಪಚಾರ ಪಡಿಸಿಕೊಂಡು ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು  ಉಪಚಾರ ಫಲಿಸದೇ ಇಂದು ದಿನಾಂಕ 20-04-2017 ರಂದು ರಾತ್ರಿ 20-30 ಘಂಟೆಗೆ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದು  ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ನುಗ್ಗಿಕೇರಿ ಗ್ರಾಮದ  ಮೃತ ಸಂತೋಷ ತಂದೆ ಹನಮಂತಪ್ಪ ಅಂಗಡಿ ವಯಾ-22 ವರ್ಷ ಇವನಿಗೆ ಕಾಮಾಲೆ ರೋಗವಿದ್ದು ಹಾಗೂ ಹಮೇಶಾ ಸರಾಯಿ ಕುಡಿಯುತ್ತಾ ಮಾನಸಿಕವಾಗಿ ದುರ್ಬಲಗೊಂಡು ಅದೇ ಮಾನಸಿಕ ಅಸ್ಥಿತಿಯಲ್ಲಿ  ನುಗ್ಗಿಕೇರಿ ಗ್ರಾಮದ ಬಸನಗೌಡ ಪಾಟೀಲ ಇವರ ಶೆಡ್ಡಿನ ಜಂತಿಗೆ ಸೀರೆಯಿಂದ ತನ್ನಷ್ಟಕ್ಕೆ ತಾನೇ ಊರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಹ ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ತಂದೆ ಹನುಂತಪ್ಪಾ ಪಾಟೀಲ ಫಿಯಾಱಧಿ ನೀಡಿದ್ದು ಈ  ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 18/2017 ಕಲಂ 174 ಸಿ.ಆರ್.ಪಿ  ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ