ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, April 5, 2017

CRIME INCIDENTS 05-04-2017

ದಿನಾಂಕ 05/04/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಾರಿಹಾಳ ಗ್ರಾಮದ ರಾಮನಗರದಲ್ಲಿರುವ ರೇಣುಕಾ ಹರಿಜನ ಇವರ ಮಗಳಾದ ಗೀತಾ ಹರಿಜನ ವಯಾ. 18 ವರ್ಷ ಇವಳು ಮನೆಯಲ್ಲಿ ಕೆಲಸಕ್ಕೆ ಹೋಗಿ ಬರುತ್ತೇನೆ ಅಂತ ಹೋದವಳು, ಮರಳಿ ಮನೆಗೆ ಬಾರದೇ, ಇಲ್ಲಿಯವರೆಗೆ ಎಲ್ಲ ಕಡೆಗೆ ಹುಡುಕಾಡಿದರೂ ಸಿಗದೇ ಕಾಣೆಯಾಗಿರುತ್ತಾಳೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 69/2017 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಕ್ಕಲ್ ಗ್ರಾಮದ ಗೋಣೀ ಬಸವಣ್ಣ ದೇವರ ಗುಡಿ ಹತ್ತೀರ ಆರೋಪಿತರಾಧ 1]ಮಂಜುನಾಥ ನಾಗಪ್ಪ ಬಾಳಪ್ಪನವರ & ತಾಯಪ್ಪ ನಾಗಪ್ಪ ಬಾಲಪ್ಪನವರ ಇವರು ಕೂಡಿಕೊಂಡು ವಿನಾಃಕಾರಣ ಪಿರ್ಯಾದಿಯ ಮನೆಯ ಮೇಲೆ ಕಲ್ಲುಗಳನ್ನು ಒಗೆದಿದ್ದಕ್ಕೆ ಕೇಳಿದ ಪಿರ್ಯಾದಿಗೆ ಲೇ ಅವಾಚ್ಯ ಶಬ್ದಗಳಿಂದ ದಾಡುತ್ತಾ ಕೈಯಿಂದಾ ಹೊಡಿಬಡಿ ಮಾಡುತ್ತಿರುವಾಗ ಬಿಡಿಸಿಕೊಳ್ಳಲು ಇವರು ಕೂಡಿಕೊಂಡು ಕೈಯಿಂದಾ ಹೊಡಿಬಡಿ ಮಾಡಿ ಊರಾಗ ಇದ್ದು ಹೆಂಗ  ಬಾಳೆ ಮಾಡತಿರಿ ಮಾಡ್ರಿ ನೋಡಕೋತಿವಿ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ114/2017 ಕಲಂ 323.324.427.504.506.34 ಐಪಿಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಕ್ಕಲ್ ಗ್ರಾಮದ ಗೋಣಿ ಬಸವೇಶ್ವರ ಗುಡಿ ಹತ್ತಿರ   ಆರೋಪಿ ನಂ. 1 ] ಬಸಪ್ಪ ಫಕ್ಕಿರಪ್ಪ ಸಿದ್ದಪ್ಪನವರ ಇವನು ತಮ್ಮ ಮನೆಯ ಹಂಚಿನ ಮೇಲೆ ಯಾರೋ ಕಲ್ಲು ಒಗೆದಿದ್ದಕ್ಕೆ  ಪ್ರೇಮವ್ವ ಇವರ  ಮಕ್ಕಳಿಗೆ ಹಲ್ಕಟ್ ಬೈದಾಡಿದ್ದಕ್ಕೆ ಕೇಳಲು ಹೋದ ಮತ್ತು ಅವಳ ಮಕ್ಕಳಿಗೆ 1]ಬಸಪ್ಪ ಫಕ್ಕಿರಪ್ಪ ಸಿದ್ದಪ್ಪನವರ 2] ಅಶೋಕ  ಫಕ್ಕಿರಪ್ಪ ಸಿದ್ದಪ್ಪನವರ 3] ಫಕ್ಕಿರಪ್ಪ ಬಸವಣ್ಣೆಪ್ಪ ಸಿದ್ದಪ್ಪನವರ 4] ಬಸವಣ್ಣೆವ್ವ ಕೋಂ. ಫಕ್ಕಿರಪ್ಪ ಸಿದ್ದಪ್ಪನವರ 5] ಸಾವಕ್ಕ ಕೋಂ. ಬಸಪ್ಪ ಸಿದ್ದಪ್ಪನವರ 6] ಲಕ್ಷ್ಮಿ ಕೋಂ. ಅಶೋಕ ಸಿದ್ದಪ್ಪನವರ ಇವರೆಲ್ಲರೂ  ಕೂಡಿ ಸಂಗನಮತ ಮಾಡಿಕೊಂಡು  ಬಂದು ಮಕ್ಕಳಿಗೆ ಹಲ್ಕಟ್ ಬೈದಾಡಿ,ಕೈಯಿಂದ ಹೊಡಿಬಡಿ ಮಾಡಿದ್ದಲ್ಲದೇ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 117/2017 ಕಲಂ 506.504.143.149.323.147. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತಳಾದ ಶಾಂತವ್ವಾ ಮುಕ್ಕಿ ರಾತ್ರಿ ತನಗಿದ್ದ ಎಚ್.ಐ.ವಿ ಖಾಯಿಲೆಯಿಂದ 4-5 ವರ್ಷಗಳಿಂದ ಬಳಲುತ್ತಿದ್ದು ಅವಳಿಗೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ತೋರಿಸುತ್ತಾ ಬಂದಿದ್ದು ಆದರೂ ಅವಳು ತನಗಿದ್ದ ಖಾಯಿಲೆಯಿಂದ ತೊಂದರೆಯಾಗುತ್ತಿದ್ದು ಇದ್ದು ಎನೂ ಪ್ರಯೋಜನ ಅನ್ನುತ್ತಿದ್ದವಳಿಗೆ ಬುದ್ದಿ ಹೇಳಿ ತೋರಿಸುತ್ತಾ ಬಂದಿದ್ದು, ಇರುತ್ತದೆ. ಆದರೂ ಅವಳು 2-3 ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುವದರಿಂದ ಅವಳಿಗೆ ಉಪಚಾರ ಮಾಡಿ ಮಲಗಿಸಿದಾಗ ತನಗಿದ್ದ ತೊಂದರೆಯಿಂದ ಮನೆಯಲ್ಲಿ ಎಲ್ಲರೂ ಮಲಗಿದಾಗ ಮೈಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಸುಡುವಾಗ ಬೆಂಕಿ ಆರಿಸಿ 108 ಅಂಬುಲೆನ್ಸ್ ದಲ್ಲಿ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲುಮಾಡಿದ್ದು ಉಪಚಾರದಿಂದ ಗುಣವಾಗದೆ ಈ ದಿನ ಮಧ್ಯಾಹ್ನ 2-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 25/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.