ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, April 7, 2017

CRIME INCIDENTS 07-04-2017

ದಿನಾಂಕ 07/04/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಸವದತ್ತಿ ರಸ್ತೆ ಅಮ್ಮಿನಭಾವಿ ಗ್ರಾಮದ ಹಿಂದುಸ್ಥಾನ ಎಂಟರ ಪ್ರೈಜಸ್ ಹತ್ತಿರ ರಸ್ತೆ ಮೇಲೆ ಕೆಎ 25 ಈಕ್ಯೂ 6571 ನೇದ್ದರ ಚಾಲಕ ಮೃತ ಶಂಕ್ರಯ್ಯ ಪಟದಯ್ಯ ಹೀರೆಮಠ ವಯಾಃ 62ವರ್ಷ ಜಾತಿಃಹಿಂದೂ ಜಂಗಮ ಉದ್ಯೋಗಃಒಕ್ಕಲುತನ ಸಾಃಶಿರೂರ ತಾಃನವಲಗುಂದ  ಇವನು ತನ್ನ ಮೋಟರ್ ಸೈಕಲನ್ನು ಧಾರವಾಡ ಕಡೆಯಿಂದ ಸವದತ್ತಿ ಕಡೆಗೆ  ಅರಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಮೇಲೆ ಮೋಟರ್ ಸೈಕಲ ಸ್ಕಿಡ ಮಾಡಿ ಕೆಡವಿ ರಸ್ತೆ ಪಕ್ಕದ ಗುಟದ ಕಲ್ಲಿಗೆ ಡಿಕ್ಕಿ ಪಡಿಸಿ ಅಪಘಾತ  ಮಾಡಿ ಅಪಘಾತದಲ್ಲಿ ತನಗೆ ತೀವೃ ಗಾಯ ಪಡಿಸಿ ಕೊಂಡು  ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡ , ತತ್ವದರ್ಶ ಆಸ್ಪತ್ರೆ ಹುಬ್ಬಳ್ಳಿ ಹಾಗೂ ಕೀಮ್ಸ ಆಸ್ಪತ್ರೆ ಹುಬ್ಬಳ್ಳಿಗಳಲ್ಲಿ ಉಪಚಾರಕ್ಕೆ ದಾಖಲಾಗಿ ಕೀಮ್ಸ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ ಮೃತಪಟ್ಟಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 68/2017 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಶಿಗ್ಗಿಗಟ್ಟಿ ಗ್ರಾಮದ  ಮೃತ ಮಂಜುನಾಥ ತಂ. ಉಳವಪ್ಪ  ಮಾಯ್ಕಾರ  ವಯಾ  38 ವರ್ಷ ಸಾ: ಶೀಗಿಗಟ್ಟಿ ಇವನು ಕುಡಿಯುವ ಚಟದವನು ಇದ್ದು ತಮ್ಮ ಜಮೀನ ಮೇಲೆ ಬೆಳೆ ಸಾಲ  ಅಂತಾ  ರೂ  1,43,000/-  ಮುತ್ತಗಿ ಗ್ರಾಮೀಣ ಬ್ಯಾಂಕದಲ್ಲಿ ಮತ್ತು ಕೃಷಿಪತ್ತಿನ ಬ್ಯಾಂಕದಲ್ಲಿ ಸಾಲ ಮಾಡಿದ್ದು  ಆ ಸಾಲವನ್ನು ಹೇಗೆ ಹರಿಯುವದು ಅಂತಾ ಚಿಂತೆ ಮಾಡುತ್ತಾ  ಇದ್ದವನಿಗೆ ಬುದ್ದಿ ಮಾತು ಹೇಳಿದರೂ ಕೇಳದೇ ಹೆಂಡತಿ ಮಕ್ಕಳು ಜಾತ್ರೆಗೆ ಅಂತಾ ತವರು ಮನೆಯಲ್ಲಿ ಇರುವಾಗ ಯಾರೂ ಇಲ್ಲದ ವೇಳೆ ಮಾಡಿದ ಸಾಲದ ಬಾಧೇಯಿಂದ ತನ್ನ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ದನ ಕಟ್ಟುವ  ಹಕ್ಕಿಯಲ್ಲಿ ಜಂತಿಗೆ ಹಗ್ಗ ಕಟ್ಟಿ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಈ ಬಗ್ಗೆ ಯಾರ ಮೇಲೆಯೂ ಯಾವುದೇ ಸಂಶಯ  ಇರುವದಿಲ್ಲ  ಅಂತಾ ಮೃತನ ಹೆಂಡತಿ ಶಾಂತವ್ವಾ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 26/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಟದೂರ ಗ್ರಾಮದ ಸುಲೊಚನಾ ಕನ್ನಮ್ಮನವರ ಇವರ ಮನೆಯಿಂದ ಮಗಳಾದ ಕವಿತಾ ತಂದೆ ಮುತ್ತಪ್ಪ ಕನ್ನಮ್ಮನವರ, ಇವಳು ಧಾರವಾಡದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕಾರ್ಯಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದವಳು, ಅಲ್ಲಿಗೆ ಹೋಗದೇ ಬೇರೆ ಎಲ್ಲಿಯೋ ಹೋಗಿದ್ದು, ಅವಳನ್ನು ಆರೋಪಿತನಾದ ಮುಸ್ತಾಕ ಅಲ್ಲಾಭಕ್ಷ ಪಿರಜಾದೆ, ಸಾ: ಬೆಟದೂರ ಇವನು ಈ ಹಿಂದೆ ಚುಡಾಯಿಸುತ್ತಿದ್ದು ಅವನೇ ತನ್ನ ಮಗಳನ್ನು ತನ್ನ ಯಾವುದೋ ಉದ್ದೇಶ ಈಡೇರಿಸಿಕೊಳ್ಳುವ ಸಲುವಾಗಿ ಅಪಹರಣ ಮಾಡಿಕೊಂಡು ಹೋಗಿರಬಹುದು ಸಂಶಯ ವ್ಯಕ್ತಪಡಿಸಿದ್ದು  ಫಿಯಾಱದಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 45/2017 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.