ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, April 11, 2017

CRIME INCIDENTS 11-04-2017

ದಿನಾಂಕ 11/04/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ನವಗಲಗುಂದ ಪೊಲೀಸ್ ಠಾಣಾವ್ಯಾಪ್ತಿಯ: ಕುಮಾರಕೊಪ್ಪಾ ಗ್ರಾಮದ ಮಾಡಿದ ಸಾವಕ್ಕಾ ನಿಂಬಣ್ಣವರ ಇವರ  ಮಗಳಾದ ಲಕ್ಷ್ಮೀ ತಂದೆ ಕಲ್ಲಪ್ಪ ನಿಂಬಣ್ಣವರ ವಯಾ 17 ವರ್ಷ ಸಾ!! ಕುಮಾರಗೊಪ್ಪ ಇವಳಿಗೆ ಯಾರೋ ಉದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನ41/2017 ಕಲಂ 363 ನೇದ್ದರಲ್ಲಿ ಮನುಷ್ಯ  ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು. ಇರುತ್ತದೆ.

2 ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕುಸುಗಲ ಬ್ಯಾಹಟ್ಟಿ ರಸ್ತೆಯ ಮೇಲೆ ಕುಡಿಯುವ ಕೆರೆ ಹತ್ತಿರ, ಆರೋಪಿ ಗಂಗಾಧರ ಬಡಿಗೇರ ಸಾ: ಕುಸುಗಲ ತಾ: ಹುಬ್ಬಳ್ಳಿ ಇತನು ಮೋಟಾರ ಸೈಕಲ ನಂ: ಕೆ.ಎ-27/ಜೆ-1659 ನೇದನ್ನು ಕುಸುಗಲ ಕಡೆಯಿಂದ ಬ್ಯಾಹಟ್ಟಿ ಕಡೆಗೆ ಅತೀ ವೇಗದಿಂದ ಆಲಕ್ಸತನದಿಂದ ನಡೆಸುಕೊಂಡು ಹೋಗಿ, ರಸ್ತೆ ಬದಿಗೆ ನಡೆದುಕೊಂಡು ಹೋಗುತ್ತಿದ್ದ ಮಲ್ಲವ್ವಾ ಬದ್ದ್ನಿಕಾಯಿ ಇವರಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಭಾರಿ ಗಾಯಪಡಿಸಿ, ಘಟಣೆ ಸುದ್ದಿಯನ್ನು ತಿಳಿಸದೇ ಮೋಟಾರ ಸೈಕಲ ಸಮೇತ ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 74/2017 ಕಲಂ 279.338.ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣನ್ನು ದಾಖಲಿಸದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಎನ್.ಎಚ್-4 ರೋಡ ಬೆಳ್ಳಿಗಟ್ಟಿ ಗ್ರಾಮದ ಹತ್ತಿರ ಆರೇಂಜ ಟ್ರಾವೆಲ್ಸ್ ಬಸ್ ನಂ: ಎ.ಆರ್ 02 / 6185 ನೇದ್ದರ ಚಾಲಕ ಗಫಾರಮೀಯಾ ತಂದೆ ಫರೀದಮೀಯಾ ಸಾ: ತ್ರಿಪುರಾಂತ ತಾ: ಬಸವಕಲ್ಯಾಣ, ಜಿ: ಬೀದರ ಇವನು ಸದರ ಬಸ್ಸನ್ನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮುಂದೆ ಹೊರಟಿದ್ದ ಪಿರ್ಯಾದಿಯು ಚಲಾಯಿಸುತ್ತಿದ್ದ ಟ್ಯಾಂಕರ ಲಾರಿ ನಂ: ಕೆಎ 41 / 5220 ನೇದ್ದರ ಹಿಂಭಾಗಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ತನಗೆ ಸಾದಾ ವ, ಭಾರೀ ಗಾಯಪೆಟ್ಟುಗಳಾಗುವಂತೆ ಮಾಡಿಕೊಂಡು, ಇನ್ನುಳಿದ ಪ್ರಯಾಣಿಕರಿಗೆ ಸಾದಾ ಗಾಯಪೆಟ್ಟುಪಡಿಸಿ  ಟ್ಯಾಂಕರ ಲಾರಿಗೆ ಹಾಗೂ ತಾನು ಚಲಾಯಿಸುತ್ತಿದ್ದ ಬಸ್ಸಿಗೆ ಜಕಂಗೊಳ್ಳುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ  ಗುನ್ನಾನಂ 46/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಗರಗ-ಧಾರವಾಡ ರಸ್ತೆಯ ಮೇಲೆ ನಮಾಜ ಗಟ್ಟಿ ಹತ್ತಿರ ಕೆ.ಎಸ್.ಆರ್.ಟಿ.ಸಿ. ಬಸ್ ನಂ.ಕೆ.ಎ.42 ಎಫ.1476 ನೇದ್ದರ ಚಾಲಕನಾದ ಶಿವಲಿಂಗಪ್ಪಾ ಮಠಗುಡ್ಡಲಿ ಹಾಗೂ ಈರಪ್ಪಾ ದಂಡಿದುಗಾಱಿ ಇವರು  ತನ್ನ ವಾಹನವನ್ನು ಅತೀವೇಗವಾಗಿ ನಿರ್ಲಕ್ಷತನದಿಂದಾ ಗರಗ ಕಡೆಯಿಂದ ಧಾರವಾಡ ಕಡೆಗೆ ನಡೆಯಿಸಿಕೊಂಡು ಬಂದು ಹಾಗೂ ಮಿನಿ ಗೂಡ್ಸ 407 ಲಾರಿ ನಂ.ಕೆ.ಎ.25/ಬಿ/3742 ನೇದ್ದಕ್ಕದೆ ತನ್ನ ವಾಹನವನ್ನು ಧಾರವಾಡ ಕಡೆಯಿಂದಾ ಗರಗ ಕಡೆಗೆ ಅತಿವೇಗವಾಗಿ ನಿಷ್ಕಾಳಜಿತನದಿಂದ  ಚಾಲಕರಿಬ್ಬರು ನಡೆಸಿಕೊಂಡು ಬಂದು ಪರಸ್ಪರ ಒಬ್ಬರಿಗೊಬ್ಬರು ತಮ್ಮ ತಮ್ಮ ಗಾಡಿಗಳನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿದ ಇದರಲ್ಲಿಯ ಬಸ್ಸನಲ್ಲಿ ಇದ್ದ  ಅಲ್ಲಾಭಕ್ಷ ದೊಡ್ಡಮನಿ ಹಾಗೂ ಅದರಲ್ಲಿದ್ದ ಇನ್ನೂ02 ಇಬ್ಬರಿಗೆ ಭಾರಿ ಸ್ವರೂಪದ ಗೆ ಸಾದಾ ಸ್ವರೂಪದ ಗಾಯ ಪಡಿಸಿದ್ದು ಇರುತ್ತದೆ  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 52/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸದ್ದು ಇರುತ್ತದೆ.

5. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಸವದತ್ತಿ ರಸ್ತೆ ಅಮ್ಮಿನಬಾವಿ ಗ್ರಾಮದ ಬಸ ನಿಲ್ದಾಣದ ಪೋರ್ಡ ಕಾರ ನಂ ಕೆಎ-05-ಎಂಎಲ್-1616 ನೇದ್ದರ ಚಾಲಕನಾದ ಗುರುಪ್ಪಾ ಚಿಕ್ಕುಂಬಿ ಇತನು ತನ್ನ ಕಾರನ್ನು ಧಾರವಾಡ ಕಡೆಯಿಂದ ಸವದತ್ತಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಾರನ ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಎಡಸೈಡಿನಲ್ಲಿ ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ರಸ್ತೆ ಎಡಸೈಡಿನಲ್ಲಿ ಹೋಗುತ್ತಿದ್ದ ಮಲ್ಲಿಕಾರ್ಜುನಸ್ವಾಮಿ @ ಮಲ್ಲಯ್ಯಾ ತಂದೆ ಚನ್ನಯ್ಯಾ ಹಿರೇಮಠ ಇವರ ಸಿಡಿ ಡಿಲಕ್ಸ್ ಮೋಟರ್ ಸೈಕಲ್ ನಂ ಕೆಎ-24-ಆರ್-2179 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಇವರಿಗೆ ಬಾರೀ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 71/2017 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.