ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, April 12, 2017

CRIME INCIDENTS 12-04-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 12/04/2017 ರಂದು ವರದಿಯಾದ ಪ್ರಕರಣಗಳು
1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ಗದಗ ಹೆಬ್ಬಳ್ಳಿ ಗ್ರಾಮದ ಬೊಲೆರೋ ಟೆಂಪ್ರವರಿ ರೆಜಿಸ್ಟ್ರೆನ್ ನಂಬರ್ KA-34/TC 11 ನೆದ್ದರ ಚಾಲಕನು ಗದಗ ಹುಬ್ಬಳ್ಳಿ ರಸ್ತೆಯ ಅಣ್ಣಿಗೇರಿ ಹದ್ದು ದೇಸಾಯಿ ರವರ ಹತ್ತಿ ಮಿಲ್ಲಿನ ಹತ್ತಿರ ತಾನು ಚಲಾಯಿಸುತ್ತಿದ್ದ ವಾಹನವನ್ನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದೆ ಹೊರಟ ಇನ್ನೊಂದು ವಾಹನವನ್ನು ಓವರ್ ಟೇಫ್ ಮಾಡಿಕೊಂಡು ರಸ್ತೆಯ ಬಲ ಸೈಡಿನಲ್ಲಿ ತನ್ನ ವಾಹನವನ್ನು ಚಲಾಯಿಸಿ ರಸ್ತೆಯ ತನ್ನ ಸೈಡಿನಲ್ಲಿ ಇದ್ದ ಬಸವರಾಜ ಬಾರಕೇರ ಇತನು ಚಲಾಯಿಸುತ್ತಿದ್ದ ಟಾಟಾ 709 ಗೂಡ್ಸ ವಾಹನ ಸಂಖ್ಯೆ KA-22/9415 ನೇದ್ದಕ್ಕೆ ತನ್ನ ವಾಹನವನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ಎರಡೂ ವಾಹನಗಳು ಜಖಂ ಆಗುವಂತೆ ಮಾಡಿ ಬೊಲೆರೋ ವಾಹನದಲ್ಲಿ ಇದ್ದ 1.ಸಾಜೀಜ ಶಹಮ್ಮದಿನ್ ಹಾಗೂ ಇನ್ನೂ 02 ಜನರು ಇವರಿಗೆ  ಸಾದಾ ವ ಬಾರೀ ಗಾಯ ಮಾಡಿಕೊಂಡು ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 52/2017 ಗುನ್ನಾನಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2.ಗರಗ ಪೊಲೀಸ್ ಠಾಣಾ ವ್ಯಾಪ್ತಿ: ಗುನ್ನಾನಂ 53/2017 ಹಾಗೂ 54/2017 ಕಲಂ107 ಸಿ.ಆರ್.ಪಿ ಸಿ ನೇದ್ದರಲ್ಲಿ ಮುಂಜಾಗೃತ ಕ್ರಮಗಾಗಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಧಾರವಾಡ ಕಲಘಟಗಿ ರಸ್ತೆ ಕಣವಿಹೊನ್ನಾಪೂರ ಗ್ರಾಮದ ಅವಲಕ್ಕಿ ಪ್ಯಾಕ್ಟರಿ ಮುಂದೆ ರಸ್ತೆ ಮೇಲೆ ಸ್ಪೇಸರ ಇಂಡಿಯಾ ಕಂಪನಿ ಜೋಡಳ್ಳಿಯ  ಬಸ್ ನಂ ಕೆಎ-25-ಡಿ-0158 ನೇದ್ದರ ಚಾಲಕನು ತನ್ನ ಬಸನ್ನು ಧಾರವಾಡ ಕಡೆಯಿಂದ ಜೋಡಳ್ಳಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಬಸ್ಸಿನ ವೇಗ ನಿಯಂತ್ರಣ ಮಾಡಲಾಗದೇ ಜೋಡಳ್ಳಿ ಕಡೆಯಿಂದ ಧಾರವಾಡ ಕಡೆಗೆ ರಸ್ತೆ ಎಡಸೈಡಿನಲ್ಲಿ ಬರುತ್ತಿದ್ದ ಮೋಟರ್ ಸೈಕಲ್ ನಂ ಕೆಎ-25-ಈವಾಯ್-5003 ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಮೋಟರ್ ಸೈಕಲ ಚಾಲಕ ಸಂಗಮೇಶ ಹನಮಂತಪ್ಪ ಹಡಪದ ವಯಾ-21 ವರ್ಷ ಸಾ: ಜಿ ಬಸವನಕೊಪ್ಪ ಇವನಿಗೆ ಸಾದಾ ವ ಬಾರೀ ಗಾಯಪಡಿಸಿದ್ದಲ್ಲದೇ ಮೋಟರ್ ಸೈಕಲ್ ಹಿಂದೆ ಕುಳಿತ  ಮಂಜುನಾಥ ತಂದೆ ಬಸಪ್ಪ ಅರಳಿಹೊಂಡ ವಯಾ-25 ವರ್ಷ ಸಾ: ಜಿ ಬಸವನಕೊಪ್ಪ ಇವನ ತಲೆಗೆ ಬಾರೀ ಗಾಯಪಡಿಸಿ ಸ್ಥಳದಲ್ಲಿಯೇ ಮೃತಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 72/2017 ಕಲಂ 279.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
4.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ:  ಮುಂಜಾಗೃತ ಕ್ರಮಗಾಗಿ ಗುನ್ನಾನಂ 78/2017 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
5. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಹುಬ್ಬಳ್ಳಿ ಧಾರವಾಢ ಬೈಪಾಸ ರಸ್ತೆ ರಮ್ಯಾರೆಸಿಡೆನ್ಸಿ ಹೋಟೆಲ ಹತ್ತಿರ ಲಾರಿ ನಂ ಎಂಎಚ್ 12 ಎಪ್ ಜಡ್ 3534 ನೇದ್ದರ ಚಾಲಕ ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗವಾಗಿ ಅಜಾಗರು ಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ಕೊಂಡು ಬಂದು ಲಾರಿಯ ವೇಗ ನಿಯಂತ್ರಣ ಮಾಡಲಾಗದೆ ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ರಸ್ತೆ ಎಡ ಸೈಡಿನಲ್ಲಿ ಬರುತಿದ್ದ ಲಾರಿ ನಂ ಕೆಎ 02 ಎಸಿ 2789 ನೇದ್ದಕ್ಕೆ ಡಿಕ್ಕಿ ಪಡಿಸಿ ನಂತರ ಅಪಘಾತ ಪಡಿಸಿದ ಲಾರಿ ನಂ ಎಂಎಚ್ 12 ಎಪ್ ಜಡ್ 3534 ನೇದ್ದರ ಚಾಲಕ  ಲಾರಿಯನ್ನು ಹಿಂದೆಕ್ಕೆ ತೆಗೆದು ಕೊಳ್ಳುವಾಗ ನಿಷ್ಕಾಜಿತನದಿಂದ ಚಲಾಯಿಸಿ ಧಾರವಾಡ ಕಡೆಯಿಂದ ಬಂದು ಅಪಘಾತವಾದ ನಂತರ  ಅಪಘಾತ ಸ್ಥಳದಿಂದ ಸ್ವಲ್ಪ ದೂರ ರಸ್ತೆ ಎಡ ಸೈಡಿನಲ್ಲಿ ನಿಲ್ಲಿಸಿದ ಕಾರ ನಂ ಕೆಎ 63 ಎಂ 0092 ನೇದ್ದಕ್ಕೆ ಡಿಕ್ಕಿ ಪಡಿಸಿ ನಂತರ ಈ ಕಾರು  ಇದರ ಹಿಂದೆ ನಿಂತ ಕಾರ ನಂ ಕೆಎ 49 ಎಂ 4518 ನೇದ್ದಕ್ಕೆ ಡಿಕ್ಕಿಮಾಡಿ  ಸದರಿ ಕಾರು ರಸ್ತೆಯ ಗೂಟದ ಕಲ್ಲಿಗೆ ಡಿಕ್ಕಿ ಆಗುವಂತೆ ಮಾಡಿ ಅಪಘಾತ ಪಡಿಸಿದ್ದು ಅಪಘಾತದಲ್ಲಿ ಲಾರಿಯಲ್ಲಿದ್ದ ಲಾರಿ ಚಾಲಕನಾದ ಶಂಕ್ರಪ್ಪ ತಂದೆ ಈರಬದ್ರಪ್ಪ ಕಡಹಳ್ಳಿ  ಸಾ:ಕಾಮನಹಳ್ಳಿ ತಾಃಶಿಗ್ಗಾಂವ ಹಾಗೂ ಲಾರಿಯಲ್ಲಿದ್ದ 2) ಶಾಂತವ್ವ ಕೋಂ ರವಿ ಗಾಣಗೇರ ಸಾಃಹುಬ್ಬಳ್ಳಿ ಇವರಿಗೆ ಸಾದಾ ಸ್ವರೂಪದ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 73/2017 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
6.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 78/2017 ಕಲಂ 107 ಸಉ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
7. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬಿ ಹೂಲಿಕಟ್ಟಿ ಗ್ರಾಮದ ಹಿರೇಮಠ ಇವರ  ಜಮೀನು ಸರ್ವೆ ನಂ 97/1 ನೇದ್ದರಲ್ಲಿ ಬೆಳೆದ ಮಾವಿನ ಗಿಡಗಳಲ್ಲಿಯ ಮಾವಿನ ಕಾಯಿಗಳನ್ನು ಅ..ಕಿ..45,000/- ಕಿಮ್ಮತ್ತಿನೇದವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 133/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

8. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಕುಂಬಾರ ಗಣವಿ ಗ್ರಾಮದ  ಮೃತನಾದ ವಿಶ್ವನಾಥ ತಂದೆ ಮಲ್ಲಪ್ಪಾ ಪಾಟೀಲ, ವಯಾ 23 ಜಾತಿ ಹಿಂದೂ ಲಿಂಗವಂತ ವೃತ್ತಿ ಒಕ್ಕಲುತನ ಸಾ ಃ ಕಂಬಾರಗಣವಿ ಗ್ರಾಮ ತಾ ಃ ಧಾರವಾಡ ಇವನು ಸುಮಾರು 3 ವರ್ಷಗಳಿಂದ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನ ಹೊಲದಲ್ಲಿ ದನ ಕಟ್ಟುವ  ಶಡ್ಡಿನಲ್ಲಿ ವಿಪರೀತ ಸರಾಯಿ ಕುಡಿದು ಸರಾಯಿ ಕುಡಿದ ನಶೆಯಲ್ಲಿ ತನ್ನಷ್ಟಕ್ಕೆ ತಾನೇ ಯಾವುದೋ ವಿಷಕಾರಕ ಎಣ್ಣೆ ಸೇವನೆ ಮಾಡಿ ಉಪಚಾರ ಕುರಿತು ಜಿಲ್ಲಾ ಆಸ್ಪತ್ರೆ ಧಾರವಾಡಕ್ಕೆ ದಾಖಲಾಗಿ ಅದೇ ದಿವಸ ಹೆಚ್ಚಿನ ಉಪಚಾರ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಉಪಚಾರ ಫಲಿಸದೇ ದಿನಾಂಕಃ 12-04-2017 ರಂದು ಮರಣ ಹೊಂದಿರುತ್ತಾನೆ ಅವನ ಮರಣದಲ್ಲಿ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತಾ ತಂಗಿವ್ವ  ಫಿಯಾಱದಿನ ನೀಡಿದ್ದು ಇರುತ್ತದೆ  ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಯುಡಿನಂ 03/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.