ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, April 13, 2017

CRIME INCIDENTS 13-04-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 13/04/2017 ರಂದು ವರದಿಯಾದ ಪ್ರಕರಣಗಳು
1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ  ಅಕ್ಕಮಹಾದೇವಿ ಸರ್ಕಲದಲ್ಲಿ ಹತ್ತಿರ ಆರೋಪಿರಾದ 1 ಹೊವಪ್ಪಾ ತಳವಾರ 2.ಭರತ ಕಾಳೆ  ಇವರು ಯಾವುದೇ ಪಾಸು ವ ಪರವಾಣಿಗೆ ಇಲ್ಲದೇ ಅಕ್ರಮವಾಗಿ ಹೈವರ್ಡ್ಸ ವಿಸ್ಕಿ 90 ಎಮ್ಎಲ್ ದ ಒಟ್ಟು 96 ಟೆಟ್ರಾ ಪಾಕೀಟಗಳು ಅ ಕಿ 2496 ರೂ ಕಿಮ್ಮತ್ತಿನವುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ತಾಬಾ ತೆಗೆದುಕೊಂಡು ಹೋರಟಾಗ ಮಾಲು ಸಹಿತ ಸಿಕ್ಕಿದಲ್ಲದೇ ಅಕ್ರಮವಾಗಿ ಪರವಾಣಿಗೆ ಇಲ್ಲದೇ ಮಾರಾಟ ಮಾಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 44/2017 ಕಲಂ ಅಬಕಾರಿ ಕಾಯ್ದೆ 32.34.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 52/2017,53/2017 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕುಸುಗಲ್ ರಸ್ತೆಯ ಸಿದ್ದಾರೂಢ ಮಠದ ಎದುರಿಗೆ ಇರುವ ಒಂದು ಮನೆಗೆ ತನ್ನ ಪರಿಚಯದ ಕಿರಣ ಇತನ ಜೊತೆಗೆ ಹೋದಾಗ ಅಲ್ಲಿ   ಆರೋಪಿತರಾದ 1.ಕಿರಣ ದೊಡ್ಡಮನಿ 2.ಮದನ ಬಡಗೇರ 3.ದುಂಡಪ್ಪಾ ದೊಡ್ಡಮನಿ 4.ಅಮಜದ  ಅಲಿ ಮನಸೂಮದಾರ 5.ಸೈಯ್ಯದ ಮೀರಜನ್ನವರ ಇವರೆಲ್ಲರೂ ಕೊಡಿಕೊಂಡು ಪರಶುರಾಮ ದೊಡ್ಸಮನಿ ಇತನಿಗೆ ಪರಿಚಯದವರಾದ ನನ್ನ ತಂಗಿಗೆ ಏನು ಮಾಡಿದೆ ಅಂತಾ ವಿಚಾರಿಸಿದಂತೆ ಮಾಡಿ ನಂತರ ಅದೇ ವಿಷಯಕ್ಕಾಗಿ ತಮ್ಮ ತಮ್ಮಲ್ಲಿ  ತಂಟೆ ಮಾಡಿಕೊಂಡಿದ್ದಲ್ಲದೇ ವಿವಸ್ತ್ರಗೊಳಿಸಿ ಬೆತ್ತಗಳಿಂದ ಮೈಮೇಲೆ ಸಿಕ್ಕ ಸಿಕ್ಕಲ್ಲಿ ಹೊಡೆದು ಗಾಯಗೊಳಿಸಿದ್ದಲ್ಲದೇ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಸ್ಥಳದಲ್ಲಿದ್ದ ಸಲಿಕೆಯಿಂದ ತಲೆಗೆ ಹೊಡೆದು ಗಾಯಪಡಿಸಿದ್ದು, ತಪ್ಪಿಸಿಕೊಂಡ ಕೈಕಾಲುಗಳನ್ನು ಕಟ್ಟಿ ತಂಟೆ ಮಾಡಿದ ಮನೆಯಲ್ಲಿಯೇ ಕೂಡಿ ಹಾಕಿ ನಂತರ ದಿನಾಂಕ: 03-02-2017 ರಂದು ನಸುಕಿನ 5-00 ಗಂಟೆಗೆ ಅಲ್ಲಿಂದ ಕರೆ ತಂದು ಹಳೇ ಬಸ್ಟ್ಯಾಂಡ ಹತ್ತಿರ ಬಿಟ್ಟು ಹೋಗಿದ್ದು. ಪಿರ್ಯಾದಿಯು ಉಪಚಾರ ಕುರಿತು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಉಪಚಾರ ಫಲಿಸದೇ ದಿನಾಂಕ: 07-02-2017 ರಂದು ರಾತ್ರಿ 9-20 ಗಂಟೆಗೆ ಕಿಮ್ಸ ಆಸ್ಪತ್ರೆಯಲ್ಲಿ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 79/2017 ಕಲಂ 143.147.324.342.307.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
4 ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:  ಉಪ್ಪಿನ ಬೇಟಗೇರಿ ಗ್ರಾಮದ ಮೃತ ಮಹಮ್ಮದ ಹನಿಫ್ ತಂದೆ ಅಬ್ದುಲವಹಾಬ.ಲಾಲ್ಮಿಯಾ.ವಯಾ-46 ವರ್ಷ.ಸಾ/ಉಪ್ಪಿನಬೆಟಗೇರಿ ಇತನಿಗೆ ಒಂದು ವರ್ಷದಿಂದ ಹೊಟ್ಟೆನೋವು ಬಾಧೇ ಬರುತ್ತಿದ್ದು ಅದಕ್ಕಾಗಿ ಅಲ್ಲಲ್ಲಿ ತೋರಿಸಿ ಗೌಂಟಿ ಔಷಧಿ ತೆಗೆದುಕೊಂಡರು ಆರಾಮ ಆಗದಕ್ಕೆ ಮಾನಸಿಕ ಮಾಡಿಕೊಂಡಿದ್ದು ಈ ದಿವಸ ದಿನಾಂಕ:13-04-2017 ರಂದು ಮುಂಜಾನೆ-09-00 ಗಂಟೆಗೆ ಹೊಟ್ಟೆ ನೋವಿನ ಬಾಧೇ ತಾಳಲಾರದೆ ತನ್ನಷ್ಟಕ್ಕೆ ತಾನೇ ಜೊಳದಲ್ಲಿಡುವ ಔಷಧಿಯ ಗುಳಿಗೆಯನ್ನು ಸೇವಿಸಿದ್ದು ಅವನಿಗೆ ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡದಲ್ಲಿ ತೋರಿಸಿ ಹೆಚ್ಚಿನ ಉಪಚಾರ ಕುರಿತು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೊಗುತ್ತಿದ್ದಾಗ ಮಾರ್ಗ ಮದ್ಯದಲ್ಲಿ ಕಿಮ್ಸ ಸಮೀಪ ಮುಂಜಾನೆ-10-00 ಗಂಟೆಗೆ ಮೃತ ಪಟ್ಟಿದ್ದು ಸದರಿ ಮೃತನ ಮೇಲೆ ಬೇರೆ ಏನು ಸಂಶಯ ವಗೈರೆ ಇರುವದಿಲ್ಲಾಂತಾ  ಮೃತನ ಮಗನು   ಅನಿಷ ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 15/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
5. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಕಿವೆದೆಬೈಲ ಗ್ರಾಮದ ಇದರಲ್ಲಿಯ  ಆರೋಪಿತನಾದ  ಪರಶುರಾಮ ತಂದೆ ಬಾಬು ಗಣೇಶ ಅಡಿಕೆಹೊಸೂರ ಸಾ|| ತೇರಗಾಂವ ಹಾಲಿ|| ಕಿವುಡೆಬೈಲ ತಾ||ಜಿ|| ದಾರವಾಡ ಇತನು ತನ್ನ ಮನೆಯಲ್ಲಿ ಯಾವುದೆ ಪಾಸ ವ ಪರ್ಮಿಟ ಇಲ್ಲದೆ ಒಂದು ಮಜಲ್ ಬಂದೂಕ( ಮದ್ದು ತುಂಬುವ) ನ್ನುಅನದೀಕೃತವಾಗಿ ತನ್ನ ತಾಬಾದಲ್ಲಿ ಇಟ್ಟುಕೊಂಡು ಸಿಕ್ಕಿದ್ದ ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 37/2017 ಕಲಂ  ಆಮ್ಸ  ಆಕ್ಟ 1959   ಸಹ ಕಲಂ 25 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.