ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, April 15, 2017

CRIME INCIDENTS 14-04-2017

ದಿನಾಂಕ 14-04-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1.ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕಃ 14-04-2017 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಆಪಾದಿತನಾದ ಈರಣ್ಣಾ ತಂದೆ ರಾಣಪ್ಪಾ ಲೋಠ್ಯಾನಿ, ವಯಾ 30 ಜಾತಿ ಹಿಂದೂ ಮರಾಠಾ ಉದ್ಯೋಗ ಕಾರ ಚಾಲಕ ಸಾ ಃ ಕಕ್ಕೇರಿ ಗ್ರಾಮ ತಾ ಃ ಖಾನಾಪೂರ ಜಿಲ್ಲಾ ಬೆಳಗಾವಿ ಇವನು ಅಳ್ನಾವರದ ಹೊಸ ಬಸ್ ನಿಲ್ಧಾಣದ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತುಕೊಂಡು ತನ್ನ ಸ್ವಂತ ಲಾಭಕ್ಕಾಗಿ ಯಾವುದೇ ಪಾಸ್ ವ ಪರಮಿಟ್ ಇಲ್ಲದೇ ಒಂದು ಗೊಬ್ಬರದ ಚೀಲದಲ್ಲಿ ಸುಮಾರು 2544/- ರೂಪಾಯಿ ಕಿಮ್ಮತ್ತಿನವುಗಳಾದ 180 ಎಂ.ಎಲ್.ದ ಒಟ್ಟು 48 ಹೈವರ್ಡ್ಸ ಚಿಯರ್ಸ್ ವಿಸ್ಕಿ ತುಂಬಿದ ಟೆಟ್ರಾ ಪಾಕೇಟುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಅನಧೀಕೃತವಾಗಿ ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಇರುತ್ತದೆ. ಈ ಕುರಿತು ಅಳ್ನಾವರ್ ಪೊಲೀಸ್ ಠಾಣೆ ಗುನ್ನಾ ನಂ. 38/2017 KARNATAKA EXCISE ACT, 1965 (U/s-32,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
2.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 13-04-2017 ರಂದು ರಾತ್ರಿ 22-45 ಘಂಟೆಗೆ ಲಾರಿ ನಂಬರ್ KA-25/C 2020 ನೇದ್ದರ ಚಾಲಕ ಗುಡೂಸಾಬ ನದಾಫ ಇತನು ತನ್ನ ಲಾರಿಯನ್ನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ವಾಹನದ ವೇಗವನ್ನು ನಿಯಂತ್ರಣ ಮಾಡದೇ ಅಣ್ಣಿಗೇರಿ ಠಾಣಾ ಹದ್ದಿ ಸವಳಹಳ್ಳದ ಬ್ರಿಡ್ಜ ಮೇಲಿನಿಂದ ಲಾರಿಯನ್ನು ಕೆಳಗಿನ ಹಳ್ಳದಲ್ಲಿ ಪಲ್ಟಿ ಮಾಡಿ ಕೆಡವಿ ಅಪಘಾತ ಪಡಿಸಿ ಲಾರಿ ಜಖಂ ಆಗುವಂತೆ ಮಾಡಿ ಅದರಲ್ಲಿದ್ದ ತನಗೆ ಹಾಗು ಪಿರ್ಯಾದಿದಾರನಿಗೆ ಸಾದಾ ವ ಭಾರೀ ಪ್ರಮಾಣದ ಗಾಯ ಪಡಿಸಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣಾ ಗುನ್ನಾ ನಂ. 56/2017 ಕಲಂ IPC 1860 (U/s-279,337,338) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.