ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, April 21, 2017

CRIME INCIDENTS 21-04-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 21/04/2017 ರಂದು ವರದಿಯಾದ ಪ್ರಕರಣಗಳು
1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶೀ ಗ್ರಾಮದ ಬಸ್ ಸ್ಟ್ಯಾಂಡ ಹತ್ತಿರ ಆರೋಪಿತನಾದ ಬಸಲಿಂಗಪ್ಪಾ ಧಾರವಾಡ ಇತನು ಸಾರ್ವಜನಿಕ ರಸ್ತೆ ಮೇಲೆ ಅವಾಚ್ಯ ಶಬ್ದಗಳಿಂದ ಬೈದಾಡಿ ನೋಡೊಕೋತೇನಿ, ನನ್ನ ಯಾರಿಗೂ ಏನು ಮಾಡಿಕೊಳ್ಳಲಿಕ್ಕೆ ಆಗುವುದಿಲ್ಲ, ಅಂತಾ ಹೋಗಿ ಬರುವ ಜನರಿಗೆ ಒದರಾಡುವುದು, ಚೀರಾಡುವುದು ಮಾಡುತ್ತಾ ಹೊಡೆಯುತ್ತೇನೆ, ಬಡೆಯುತ್ತೇನೆ ಅಂತಾ ಅವರ ಮೈಮೇಲೆ ಏರಿ ಹೋಗುವುದು ಮಾಡುತ್ತಿದ್ದು ಸದರಿಯವನಿಗೆ ಹಿಗೇಯೇ ಬಿಟ್ಟಲ್ಲಿ ಯಾರದಾದರೂ ಮೇಲೆ ಎರಗಿ ಹೊಡೆ ಬಡೆ ಮಾಡಿ ರಕ್ತ ಪಾತ ಮಾಡಿ ಸಾರ್ವಜನಿಕ ಶಾಂತತ ಭಂಗವನ್ನುಂಟು ಮಾಡುವುದಲ್ಲದೇ ಯಾವುದಾದರೂ ಸಂಜ್ಞೆಯ ಅಪರಾಧವೆಸಗಿ   ಘೋರ ಸ್ವರೂಪದ ಗುನ್ನೆ ಮಾಡುವ ಸಾಧ್ಯತೆಗಳು ಇದ್ದುದ್ದರಿಂದ ಸದರಿಯವನ ಮೇಲೆ ಗುನ್ನಾನಂ 60/2017 ಕಲಂ 110(ಇ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕುಸುಗಲ್ಲ ಗ್ರಾಮದ ಶ್ರೀಮತಿ ಇಂದ್ರವ್ವ ಕೊಂ ಅಡಿವೆಪ್ಪ ದೇವನ್ನವರ ಸಾ!! ಕುಸುಗಲ್ಲ ಇವರ ಮಗಳಾದ ಶ್ರೀಮತಿ ಮೇಘಾ ಕೊಂ ಹನಮಂತಪ್ಪ ದೊಡಮನಿ ವಯಾ 20 ವರ್ಡ ಸಾ!! ಗುಡಿಸಾಗರ ತಾ!! ನವಲಗುಂದ ಇತಳು ಮನೆಯಿಂದ ಯಾರಿಗೂ ಹೇಳದೇ ಕೇಳದೇ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 94/2017 ಕಲಂ ಮಹಿಳೆ ಕಾಣೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ನಾಗರಹಳ್ಳಿ ಗ್ರಾಮದ  ಮೃತನಾದ ಶರಣಪ್ಪ ಬಸಪ್ಪ ಬಸಾಪೂರ , ವಯಾ 35 ವರ್ಷ ಈತನು ನವಲಗುಂದ ಸ್ಟೆ ಬ್ಯಾಂಕಿನಲ್ಲಿ  ತನ್ನ ಜಮೀನದ ಮೇಲೆ ಬೆಳೆ ಸಾಲ ಅಂತಾ ಸಾಲವನ್ನು ಪಡೆದುಕೊಂಡಿದ್ದು ಇರುತ್ತದೆ ಈ ಬಾರಿ ಮಳೆಯು ಸರಿಯಾಗಿ ಆಗದೇ ಪೀಕು ಸರಿಯಾಗಿ ಬರದೇ ಇರುವ ಬಗ್ಗೆ ಹಾಗೂ ಬ್ಯಾಂಕಿನ ಸಾಲವನ್ನು ಹೇಗೆ ತೀರಿಸುವುದು ಅಂತಾ ಮಾನಸೀಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ದಿನಾಂಕ 19-04-2017 ರಂದು ರಾತ್ರಿ 22-30 ಘಂಟೆಗೆ ನಾಗರಹಳ್ಳಿ ಗ್ರಾಮದ  ತನ್ನ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದು ಅವನನ್ನು ಉಪಚಾರಕ್ಕೆ ಅಂತಾ ನವಲಗುಂದ ಸರಕಾರಿ ಆಸ್ಪತ್ರೆಗೆ  ದಾಖಲ್ ಮಾಡಿ ಉಪಚಾರ ಪಡಿಸಿಕೊಂಡು ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು  ಉಪಚಾರ ಫಲಿಸದೇ ಇಂದು ದಿನಾಂಕ 20-04-2017 ರಂದು ರಾತ್ರಿ 20-30 ಘಂಟೆಗೆ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದು  ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ನುಗ್ಗಿಕೇರಿ ಗ್ರಾಮದ  ಮೃತ ಸಂತೋಷ ತಂದೆ ಹನಮಂತಪ್ಪ ಅಂಗಡಿ ವಯಾ-22 ವರ್ಷ ಇವನಿಗೆ ಕಾಮಾಲೆ ರೋಗವಿದ್ದು ಹಾಗೂ ಹಮೇಶಾ ಸರಾಯಿ ಕುಡಿಯುತ್ತಾ ಮಾನಸಿಕವಾಗಿ ದುರ್ಬಲಗೊಂಡು ಅದೇ ಮಾನಸಿಕ ಅಸ್ಥಿತಿಯಲ್ಲಿ  ನುಗ್ಗಿಕೇರಿ ಗ್ರಾಮದ ಬಸನಗೌಡ ಪಾಟೀಲ ಇವರ ಶೆಡ್ಡಿನ ಜಂತಿಗೆ ಸೀರೆಯಿಂದ ತನ್ನಷ್ಟಕ್ಕೆ ತಾನೇ ಊರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಹ ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ತಂದೆ ಹನುಂತಪ್ಪಾ ಪಾಟೀಲ ಫಿಯಾಱಧಿ ನೀಡಿದ್ದು ಈ  ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 18/2017 ಕಲಂ 174 ಸಿ.ಆರ್.ಪಿ  ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ