ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, June 25, 2017

CRIME INCIDENTS 25-06-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 25/06/2017 ರಂದು ವರದಿಯಾದ ಪ್ರಕರಣಗಳು

1 ಧಾರವಾಡ ಗ್ರಾಮೀಣ ಪೊಲೀಸ ಠಾಣಾ:ವ್ಯಾಪ್ತಿಯ: ಗೋವಿನಕೊಪ್ಪ ಗ್ರಾಮದ  ಗೌಸುಸಾವ ತಂದೆ ಫೀರಸಾಬ ಮಾರಡಗಿ  ವಯಾ 55 ವರ್ಷ  ಸಾ; ಗೋವನಕೊಪ್ಪ ಈತನಿಗೆ ಸುಮಾರು 02 ತಿಂಗಳ ಹಿಂದೆ ಪಂಚಾಯ್ತಿ ವತಿಯಿಂದ ವಾಟರ್ ಮನ್ ಕೆಲಸ ಬಿಡಿಸಿದ್ದಕ್ಕೆ ಮನಸ್ಸಿಗೆ ಹಚ್ಚಿಕೊಂಡು ಶರಾಯಿ ಕುಡಿದ ನಿಶೆಯಲ್ಲಿ ಈ ದಿವಸ ದಿನಾಂಕ; 25-06-2017 ರಂಧು ಮುಂಝಾನೆ ತನ್ನ ವಾಸದ ಮನೆಯಲ್ಲಿಯ ಅಡುಗೆ ಕೋಣೆಯಲ್ಲಿ ಬೆಲಗಿಗೆ ನೂಲಿನ ಹಗ್ಗದಿಂದ ಕುತ್ತಿಗಿಗೆ ಉರುಲು ಹಾಕಿಕೊಂಡು ಸತ್ತಿದ್ದು ಅದೆ, ವಿನಃ ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ಮಗ ಶರೀಫ ಮುಂಡರಗಿ ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 33/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

Saturday, June 24, 2017

CRIME INCIDENTS 24-06-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 24/06/2017 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ : ಅಮ್ಮಿನಬಾವಿ ಗ್ರಾಮದ ಹನುಂತಪ್ಪ ನಾಯಕರ ಇವನು ದುರ್ಗಾ ಬಾರದಲ್ಲಿ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡಿರುತ್ತಾನೆ. ಆರೋಪಿತರಾದ 1.ಮುರಗೇಶ ಗಡಾದ 2.ಈಶ್ವರ ದೇವರಮನಿ 3.ಫಕ್ಕಿರ ಗದಗ ಮತ್ತು 4.ಹನುಮಂತ ಬಾಣಗಿ  ಇವರೆಲ್ಲರೂ  ಇವನೂಂದಿಗೆ  ತಂಟೆ ತಕರಾರು ಮಾಡುತ್ತಾ ಬಂದಿದ್ದು  ಅಮ್ಮಿನಬಾವಿ ಗ್ರಾಮದ ಶ್ರಾವಣಿ ದಾಬಾದಲ್ಲಿ ಊಟ ಮಾಡಲು ಹೋದಾಗ ಅಲ್ಲಿಯೇ ಇದ್ದ ಆರೋಪಿತರೆಲ್ಲರೂ ಅದೇ ಸಿಟ್ಟನ್ನು ಇಟ್ಟುಕೊಂಡು  ತಂಟೆ ತೆಗೆದು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಮತ್ತು ನಿಮ್ಮ ಬಾರ ಮಾಲಿಕಂದು ವಸೂಲಿ ಬಾಳ ಐತಿ ಅಂತಾ  ಅವಾಚ್ಯವಾಗಿ ಬೈಯ್ದಾಡಿ ಕೈಯಿಂದ ಹೊಡಿ ಬಡಿ ಮಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 130/2017 ಕಲಂ 506, 504,323, ಸಹ ಕಲಂ 34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
 
2.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 70/2017 ಕಲಂ 107 ಸಿ ಆರ್  ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ  ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾನಂ 127/17,128/17 & 129/17 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ಗರಗ ಪೊಲೀಸ್ ಠಾಣಾ ವ್ಯಾಪ್ತಿ: ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 90/2017   ಕಲಂ 107 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

Friday, June 23, 2017

CRIME INCIDENTS 23-06-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 23/06/2017 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹುಲಗಿನಕಟ್ಟಿ ಗ್ರಾಮದ  ಶ್ರೀದೇವಿ ಇವರ ವಾಸಿಸುವ ಮನೆಯ ಹಿತ್ತಿಲದಲ್ಲಿ ಈ ಹಿಂದೆ ಆರೋಪಿತರಾದ  1.ಅನೀಲ್ ಪಾಟೀಲ ಹಾಗೂ ಇನ್ನೂ 03 ಜನರು ಕೊಡಿಕೊಂಡು 14 ಎಕರೆ ಜಮೀನದಲ್ಲಿ 12 ಎಕರೆ ಜಮೀನನ್ನು ಖರೀದಿ ಹಿಡಿದು ಉಳಿದ 2 ಎಕರೆ ಜಮೀನನ್ನು ಪಿರ್ಯಾಧಿಯ ಮನೆಯವರಿಗೆ ಉಳುಮೆ ಮಾಡಲು ಬಿಟ್ಟುಕೊಡದೆ & ಯಾರ ಹಿರಿಯರ ಮಾತಿಗೂ ಬೆಲೆ ಕೊಡದೆ ತಾವೆ ಉಳುಮೆ ಮಾಡಿಕೊಂಡು ಬಂದಿದ್ದರಿಂದ ಪಿರ್ಯಾದಿಯ ಗಂಡನಾದ ಅಜಿತಗೌಡ ತಂದೆ ಅನಂತಗೌಡ ಪಾಟೀಲ 42 ವರ್ಷ ಸಾ..ಹುಲಗಿನಕಟ್ಟಿ ಇವನು ಸದರ 2 ಎಕರೆ ಜಮೀನನ್ನು ಆರೋಪಿತರು ಬಿಟ್ಟುಕೊಡದೆ ಇದ್ದುದಕ್ಕೆ ಮಾನಸಿಕ ಮಾಡಿಕೊಂಡು ಯಾವುದೋ ಕ್ರಿಮಿನಾಶಕ ಔಷದ ಸೇವನೆ ಮಾಡಿ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ದಾಖಲಾದ ಕಾಲಕ್ಕೆ ಉಪಚಾರ ಹೊಂದುವ ಕಾಲಕ್ಕೆ   ದಿ..23-06-2017 ರಂದು ಬೆಳಗಿನ 05-55 ಗಂಟೆಯ ಸುಮಾರಿಗೆ ಮರಣೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 231/2017 ಕಲಂ 306 34.  ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.
2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ನಾಗನೂರ ಗ್ರಾಮದ  ಮೃತ ದೇವಿಕಾ ತಂದೆ ರಮೇಶ ಮೆಣಸಗಿ ವಯಾ 1 ವರ್ಷ 4 ತಿಂಗಳು ಸಾ|| ನಾಗನೂರ ಇವಳು ಆಡುತ್ತಾ ತಮ್ಮ ಮನೆಯ ಮುಂದಿನ ನೀರಿನ ಕಲ್ಲಿನ ಡೋಣಿಯಲ್ಲಿ ಬಿದ್ದು ನೀರು ಕಡಿದು ತ್ರಾಸ ಮಾಡಿಕೊಳ್ಳುವಾಗ ಅವಳನ್ನು ಅವರ ತಾಯಿ ನೋಡಿ ನೀರಿನಿಂದ ಹೊರಗೆ ತೆಗೆದು ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಹೋಗಿ ದಾಖಲ್ ಮಾಡಿದವಳು ಉಪಚಾರದಿಂದ ಗುಣ ಹೊಂದದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣಿಯಲ್ಲಿ ಗುನ್ನಾನಂ ಯುಡಿನಂ 37/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಧಾರವಾಡ ಗ್ರಾಮೀ ಪೊಲೀಸ್ ಠಾಣಾ ವ್ಯಾಪ್ತಿಯ: ಪ್ರಭೂನಗರ ಹೊನ್ನಾಪೂರ ಗ್ರಾಮದಲ್ಲಿ ಆರೋಪಿತನಾದ ಪ್ರಕಾಶ ಕಲಾಜಿ ಇವರು ಗ್ರಾಮ ಪಂಚಾಯತಿ ಹಾಗೂ ಇತರೇ ಸರಕಾರಿ ಇಲಾಖೆಯಿಂದ  ಯಾವುದೇ ಪುರ್ವಾನುಮತಿ ಪಡೆಯದೇ ಮತ್ತು ಯಾವುದೇ ಮುನ್ನಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಿಷ್ಕಾಳಜೀತನದಿಂದ ತನ್ನ ಮನೆಯ ಹಿಂದೆ ಸುಮಾರು 08 ಪೂಟ ಅಗಲದ ಮಣ್ಣಿನ ಹುಂಡಿಯನ್ನು ತೆಗೆದು ಅದರಲ್ಲಿ ನೀರು ನಿಲ್ಲಿಸಿ ಅದೇ ನೀರು ಉಪಯೋಗಿಸಿ ತನ್ನ ಮನೆಯ ಕಾಮಗಾರಿಯನ್ನು ಮಾಡುತ್ತಿದ್ದಾಗ ದಿನಾಂಕ:27-04-2017 ರಂದು ಸಾಯಂಕಾಲ 0500 ಗಂಟೆ ಸುಮಾರಿಗೆ ಪಿರ್ಯಾದಿದಾರನ ಮಗಳಾದ ಸೌಜನ್ಯ ತಂದೆ ಪ್ರಶಾಂತ ಬಡಿಗೇರ ವಯಾ-3 ½ ವರ್ಷ ಹುಂಡಿಯಲ್ಲಿ ಬಿದ್ದು ಮೃತಪಡುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 126/2017 ಕಲಂ 304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.
4. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಮೊರಬ ಗ್ರಾಮದ  ಆರೋಪಿತನಾದ ಮಂಜುನಾಥ ಸಗರದ ಸಾ|| ಮೊರಬ ಪಶು ಆಸ್ಪತ್ರೆ ಮೊರಬ ಕ್ಕೆ ಹೋಗಿ ಅಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ರಾಜಪ್ಪ ಮೂಲಿಮನಿ ಇವರ ಜೊತೆಗೆ ತಂಟೆ ತೆಗೆದು ಕೈಯಿಂದ ಅಲ್ಲೆಗೆ ಇಳಿದ ಸಂಧರ್ಭದಲ್ಲಿ ಕರ್ತವ್ಯದಲ್ಲಿದ್ದ  ಶಶಿಕಾಂತ ಓಣಿಕಾರಿ ಅವರ ಮೇಲೆ ಸಹ ಕೈಯಿಂದ ಅಲ್ಲೆ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 84/2017 ಕಲಂ 323.353.504 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
5. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ  ಗ್ರಾಮದ ಬುಡೇಸಾಬ ತನ್ನಂದ ಇವರ HONDA ACTIVE MOTOR CYCLE NO KA-25 X 4915 ಚೆಸ್ಸಿ ನಂ - ME4JF088205287 ಇಂಜಿನ್ ನಂ- JF08E838411  ಅಃಕಿ 20,000 ಯಾರೋ ಕಳ್ಳರೂ   ಕಳವು ಮಾಡಿಕೊಂಡ ಹೋಗಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 89/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

Thursday, June 22, 2017

CRIME INCIDENTS 22-06-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 22/06/2017 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 22-06-2017 ರಂದು ಮುಂಜಾನೆ 8-30 ಗಂಟೆಯ ಸುಮಾರಿಗೆ ಪಿರ್ಯಾಧಿ ಅರುಣ ಕುಂಬಾರ ಹಾಗೂ ಪಿರ್ಯಾಧಿಯ ಹೆಂಡತಿ ರಾಜೇಶ್ವರಿ ವ ಗಾಯಾಳು ಇವರು ತಮ್ಮ ಜಾಗೆಯಲ್ಲಿ ಕೆಲಸ ಮಾಡುತ್ತಿದ್ದಾಗ ಈ ಪ್ರಕರಣದಲ್ಲಿಯ ಆರೋಪಿತರಾದ 1.ಎಮ್.ಆರ್.ಕುಂಬಾರ, 2.ಎಚ್.ಎಮ್.ಕುಂಬಾರ, 3.ನಿಮಾಱಲಾ ಕುಂಬಾರ, 4. ಎಸ್.ಎಮ್.ಕುಂಬಾರ ಹಾಗೂ 5.ಆರ್.ಎಮ್.ಕುಂಬಾರ ಇವರೆಲ್ಲರೂ ಬೇಕಾಯ್ದೇಶಿರ ಮಂಡಳಿಯಾಗಿ ಗುಂಪುಕಟ್ಟಿಕೊಂಡು ಬಂದು ನಮ್ಮ ಜಾಗೆಯಲ್ಲಿ ಅತೀ ಕ್ರಮಣ ಪ್ರವೇಶ ಮಾಡಿ ನೀವು ಈಲ್ಲಿ ಕಂಪೌಂಡ ಕಟ್ಟುವ ಹಾಗೆ ಇಲ್ಲ ಕಟ್ಟಲು ನಾವೂ ಬಿಡುವುದಿಲ್ಲ ಅಂತಾ ಬೈದಾಡಿ ಪಿರ್ಯಾಧಿಯ ಹೆಂಡತಿಗೆ ಎ4 ನೇದವನು ಕಲ್ಲಿನಿಂದ ಹಲ್ಲು ಮುರಿಯುವ ಹಾಗೆ ಹೊಡೆದು ಭಾರಿ ಗಾಯ ಪಡಿಸಿದ್ದು ಬಿಡಿಸಿಕೊಳ್ಳಲು ಹೋದ ಪಿರ್ಯಾಧಿಗೂ ಸಹ ಕೈಯಿಂದ ಹೊಡಿಬಡಿ ಮಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 83/2017 ಕಲಂ IPC 1860 (U/s-506,504,143,148,149,147,326,323,447) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 21-06-2017 ರಂದು 21-00 ಗಂಟೆಗೆ ಕುಂಕೂರ ಗ್ರಾಮದ ಪಿರ್ಯಾದಿ ಲಿಂಗಭಟ್ಟ ಜೋಶಿ ಇವರ ಮನೆಯಲ್ಲಿ ಆರೋಪಿತರಾದ 1) ಪ್ರಕಾಶಭಟ್ಟ ಕೃಷ್ಣಭಟ್ಟ ಜೋಶಿ, 2) ಮಹೇಶಭಟ್ಟ ಕೃಷ್ಣಭಟ್ಟ ಜೋಶಿ. ಸಾ: ಇಬ್ಬರೂ ಕುಂಕೂರ, ತಾ: ಕುಂದಗೋಳ ಇವರು ಮನೆಯ ಹಾಗೂ ಹೊಲದ ಹಿಸ್ಸೆ ಸಲುವಾಗಿ ಪಿರ್ಯಾದಿ ಮನೆಯ ಒಳಗೆ ಅತೀಕ್ರಮ ಪ್ರವೇಶ ಮಾಡಿ ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಕೈಯಿಂದ ಹೊಡೆ ಬಡೆ ಮಾಡಿ ಬಿಡಿಸಲು ಹೋದ ಪಿರ್ಯಾದಿ ಹೆಂಡತಿಗೆ ಕೈಯಿಂದ ಹೊಡೆ ಬಡೆ ಮಾಡಿದ್ದಲ್ಲದೇ ಅವರಿಬ್ಬರಿಗೂ ಜೀವದ ಬೆಧರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 86/2017 ಕಲಂ IPC 1860 (U/s-323,341,448,504,506,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 20-06-2017 ರಂದು 14-00 ಗಂಟೆಗೆ ಪಿರ್ಯಾದಿ ರುದ್ರಪ್ಪ ಬಡವಣ್ಣವರ ಇತನ ಮೋಟಾರ ಸೈಕಲ್ ನಂ ಕೆಎ25-ಇಎಚ-5438 ನೇದ್ದರ ಮೇಲೆ ತನ್ನ ಹೆಂಡತಿಗೆ ಕರೆದುಕೊಂಡು ಕಿತ್ತೂರ ದಿಂದಾ ವರವನಾಗಲಾವಿ ಗ್ರಾಮಕ್ಕೆ ರಾಷ್ಟ್ರಿಯ ಹೇದ್ದಾರಿ ನಂ 4 ಬೆಳಗಾವಿ ಧಾರವಾಡ ರಸ್ತೆಯ ಮೇಲೆ ಹೋಗುವಾಗ ಮುಲ್ಲಾ ದಾಬಾ ದಾಟಿ ಸ್ವಲ್ಪು ಮುಂದೆ ಎದುರುಗಡೆಯಿಂದಾ ಒಂದು ಕಂಟೆನರ್ ಲಾರಿ ನಂ ಎನ್ ಎಲ್ 01-ಜಿ-4059  ನೇದ್ದರ ಚಾಲಕನು ತನ್ನ ಲಾರಿಯನ್ನು ರಾಂಗ್ ಸೈಡ ದಿಂದಾ ಅತೀ ವೇಗವಾಗಿ ಮತ್ತು ನಿಷ್ಕಾಳಜೀತನದಿಂದಾ ನಡೆಯಿಸಿಕೊಂಡು ಬಂದು ಪಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಪಿರ್ಯಾದಿಯ ಹೆಂಡತಿ ಸುಮಿತ್ರಾ ಇವಳ ಕಾಲುಗಳಿಗೆ ಭಾರಿ ಘಾಯಪಡಿಸಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 88/2017 ಕಲಂ 279,339 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ-22-06-2017 ರಂದು ಮುಂಜಾನೆ 07-00 ಗಂಟೆಯ ಸುಮಾರಿಗೆ ಪಿರ್ಯಾದಿ ಬಾಭತ್ ಸೋಲಾರಗೊಪ್ಪ ಗ್ರಾಮದ ಹದ್ದಿ ಜಮೀನು ಸರ್ವೆ ನಂ 154 ರಲ್ಲಿ ಆರೋಪಿತರಾದ 1.ಬಸಪ್ಪ ಜಿನ್ನೂರ, 2.ಈರಪ್ಪಾ ಜಿನ್ನೂರ, 3.ಬುಡಪ್ಪ ಜಿನ್ನೂರ, 4.ಸಿದ್ದಪ್ಪ ಜಿನ್ನೂರ, 5.ಬಸವರಾಜ ಜಿನ್ನೂರ, 6.ನಾಗಪ್ಪಾ ಜಿನ್ನೂರ, 7.ಮಂಜುನಾಥ ಜಿನ್ನೂರ, 8.ಸದಾಶೀವ ಜಿನ್ನೂರ ಹಾಗೂ 8 ಜನರು ಇವರೆಲ್ಲರೂ ಕೂಡಿಕೊಂಡು ಅತೀಕ್ರಮ ಪ್ರವೇಶ ಮಾಡಿ ಬಿತ್ತನೆ ಮಾಡುತ್ತಿರುವಾಗ ಪಿರ್ಯಾದಿ ಹಾಗು ಅವನ ಕಡೆಯ ಜನರು ನಮ್ಮ ಜಮೀನದಲ್ಲಿ ಯಾಕೆ ಬಿತ್ತನೆ ಮಾಡುತ್ತಿದ್ದಿರಿ ಅಂತಾ ಕೇಳದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಮ್ಮ ಜಮೀನು ಎಲ್ಲಿ ಐತಿ ಅಂತಾ ಬೈದಾಡುತ್ತಾ ಆರೋಪಿ ನಂ 2 & 8 ನೇದವರು ಈರಪ್ಪ ಮಲ್ಲಪ್ಪ ಗೋವಿಂದನವರ ಇವನಿಗೆ ಬಡಿಗೆಗಳಿಂದಾ ಹೊಡಿಬಡಿ ಮಾಡುತ್ತಿರುವಾಗ ಬಿಡಿಸಿಕೊಳ್ಳಲು ಬಂದ ಪಿರ್ಯಾಧಿ ಹಾಗು ಅವರ ಕಡೆಯ ಜನರಿಗೆ ಉಳಿದ ಆರೋಪಿತರೆಲ್ಲರೂ ಕೈಯಿಂದಾ ಹೊಡಿಬಡಿ ಮಾಡಿ ಕಾಲುಗಳಿಂದಾ ಒದ್ದು ಗಾಯಪಡಿಸಿದ್ದು, ಹಾಗು ಬೀಬಿಜಾನ ಇವಳಿಗೆ ಸುಂಕದ ಇವಳಿಗೆ ಆರೋಪಿ ನಂ 11 ರಿಂದ 14 ನೇದವರು ಕೈಯಿಂದಾ ಹೊಡಿಬಡಿ ಮಾಡಿದ್ದಲ್ಲದೆ ಇನ್ನೊಮ್ಮೆ ಈ ಜಮೀನದಲ್ಲಿ ಕಾಲು ಇಟ್ಟರೆ ನಿಮ್ಮನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 230/2017 ಕಲಂ IPC 1860 (U/s-143,147,148,447,323,324,504,506,149) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

Tuesday, June 20, 2017

CRIME INCIDENTS 20-06-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 20/06/2017 ರಂದು ವರದಿಯಾದ ಪ್ರಕರಣಗಳು

 1.ಅಳ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯ: ಚಂದ್ರಗಿರಿ ಗ್ರಾಮದ ಕರೆಮ್ಮ ದೇವಸ್ಥಾನದಲ್ಲಿ ಗ್ರಾಮ ಸಭೆಯನ್ನು ಕರೆಯಲಾಗಿದ್ದು ಸಾರ್ವಜನಿಕರು ಮತ್ತು ಅದ್ಯಕ್ಷರು ಹಾಗೂ ಸರ್ವ ಸದಸ್ಯರು ಎಲ್ಲರೂ ಕೂಡಿದ್ದರು.  ಗ್ರಾಮ ಸಭೆ ಪ್ರಾರಂಭಕ್ಕಿಂತ 10 ನಿಮಿಷ ಮೊದಲು ಗ್ರಾಮ ಪಂಚಾಯತ ಸದಸ್ಯರಾದ ಮೇಲೆ  ಆರೋಪಿತನಾದ 1.ಪರಪ್ಪ ನಾಯಕ ಇತನು  ನನ್ನನ್ನು ಮನೆ ಉತಾರ ಕೊಡು ಅಂತಾ ಕೇಳಿದಾಗ ಪಿ.ಡಿ.ಓ., ರವರು ರಜೆ ಇದ್ದಾರೆ ಅಂತಾ ನಾನು ತಿಳಿಸಿದಾಗ ಸದರಿ ಅವಾಚ್ಯ ಶಬ್ದಗಳಿಂದ ಬೈದಾಡಿ  ಒಂದು ವಾರ ಆಯಿತು ಏಕೆ ಸಹಿ ಮಾಡಿಸಿಲ್ಲಾ ಅಂತಾ ನನ್ನ ಕಾಲು ಹಿಡಿದು ಎಳೆದು ನೆಲಕ್ಕೆ ಕೆಡವಿ ನನ್ನ ಕಿರು ಬೆರಳನ್ನು ಕಚ್ಚಿ ಗಂಬೀರ ಗಾಯಗೊಳಿಸಿದ್ದು ಅಲ್ಲದೇ ನನ್ನ ಕುತ್ತಿಗೆಯನ್ನು ಜೋರಾಗಿ ಹಿಸುಕಿ ಕೊಲೆ ಮಾಡಲು ಪ್ರಯತ್ನ ಮಾಡುತ್ತಿದ್ದಾಗ ಅಲ್ಲಿಯೇ ಇದ್ದಂತಹ ನಮ್ಮ ಸಿಬ್ಬಂದಿಗಳಾದ ವಿಜಯ ಹಾಗು ಭೀಮಸಿ ವಾಜಂತ್ರಿ ಹಾಗೂ ಸದಸ್ಯರಾದ ಶ್ರೀ ಬಿ. ಐ. ದೊಡಮನಿ, ಇವರು ಆತನ ಕೈಯಿಂದ ನನ್ನನ್ನು ಬಿಡಿಸಿ ಆತನನ್ನು ಹೊರಗೆ ಎಳೆದುಕೊಂಡು ಹೋಗಿ ಸಮಾಧಾನಪಡಿಸಿದ್ದು  ಈ ಕುರಿತು ಅಳ್ನಾವರ ಪೊಲೀಸ ಠಾಣೆಯಲ್ಲಿ ಗುನ್ನಾನಂ 68/2017 ಕಲಂ 323.332.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 84/2017 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3.  ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದುಮ್ಮವಾಡ ಗ್ರಾಮದ ಮೃತ ಕರೆಪ್ಪ ತಂದೆ ಯಲ್ಲಪ್ಪ ಮಾರತಾಂಡಪನವರ ವಯಾ 50 ವರ್ಷ ಸಾ: ದುಮ್ಮವಾಡ ಈತನು ಕುಡಿಯುವ ಚಟದವನಿದ್ದು ತನ್ನ ಹೆಂಡತಿ ಮತ್ತು ಮನೆಯ ಜನರು ಕುಡಿಯಬೇಡ ಅಂತ ಎಷ್ಟೇ ಬುದ್ದಿ ಹೇಳಿದರೂ ಕೇಳದೇ ಇದ್ದವನು ದಿನಾಂಕ: 19/06/2017 ರಂದು 2.40 ಗಂಟೆ ಸುಮಾರಿಗೆ ದುಮ್ಮವಾಡ ಗ್ರಾಮದ ನೀರಲಕಟ್ಟಿಯವರ ಮನೆಯ ಮುಂದಿನ ರಸ್ತೆಯ ಪಕ್ಕ ಗಟಾರದಲ್ಲಿ ಕುಡಿದ ನಿಶೆಯಲ್ಲಿ ಜೋಲಿಹೊಡೆಯುತ್ತ ಬಂದು ಆಕಸ್ಮಾತಾಗಿ ಬಿದ್ದು ತಲೆಗೆ ಒಳಪೆಟ್ಟು ಹಚ್ಚಿಕೊಂಡು ತ್ರಾಸ್ ಮಾಡಿಕೊಳ್ಳುವಾಗ ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ತಂದು ದಾಖಲು ಮಾಡಿದವನು ಉಪಚಾರದಿಂದ ಗುಣಹೊಂದದೇ ದಿನಾಂಕ: 20/06/2017  ರಂದು ಮುಂಜಾನೆ ಮರಣದಲ್ಲಿ ಬೇರೆ ಯಾವ ಮತ್ತು ಯಾರ ಮೇಲೆಯೂ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮೃತನ ಹೆಂಡತಿ  ಸರಸ್ವತಿ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 36/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ತಾವರಗೇರಿ ಗ್ರಾಮದ  ಬಸವರಾಜ ಶಿವಪ್ಪ ಜಿನ್ನೂರ ಇವರ ಹೊಲದಲ್ಲಿರುವ ಮನೆಯ ಸಮೀಪ ಫಿರ್ಯಾದಿಯು ಯಲ್ಲವ್ವ ಜಿನ್ನೂರ ಇವರ ಜಮೀನು ಲಾವಣಿ ತರೀಖ ಸಿಟ್ಟಿನಿಂದ ಇದರಲ್ಲಿಯ ಆರೋಪಿತರಾದ 1] ಚನ್ನಪ್ಪ ಚನ್ನಬಸಪ್ಪ ಜಿನ್ನೂರ 2] ಬಸವಂತಪ್ಪ ಚನ್ನಪ್ಪ ಜಿನ್ನೂರ ಇವರು ಕೈಯಲ್ಲಿ ಕೊಡ್ಲಿ, ಕುಡುಗೋಲು ಹಿಡಿದುಕೊಂಡು ಬಂದು ಹಲ್ಕಟ್ ಬೈದಾಡುತ್ತಾ ಕೊಡ್ಲಿಯಿಂದ ಪಿರ್ಯಾದಿ ತಲೆಗೆ, ಎರಡು ಕಾಲಿಗೆ ಹೊಡೆದಿದ್ದಲ್ಲದೇ ಬಿಡಿಸಲು ಬಂದ ತಮ್ಮನಾದ  ,ಮಂಜುನಾಥ ಶಿವಪ್ಪ ಜಿನ್ನೂರ ಇವನಿಗೂ ಕೊಡ್ಲಿಯಿಂದ ಎಡಗಾಲು ಮೊಣಕಾಲ ಕೆಳಗೆ ಹೊಡೆದು ಗಾಯಪಡಿಸಿದ್ದಲ್ಲದೇ ಕುಡುಗೋಲು ತೋರಿಸಿ ನಿಮ್ಮನ್ನು ನೋಡುತ್ತೇನೆ ಅಂತಾ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕಲಘಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 228/2017 ಕಲಂ 324.326.504.506.34. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕೊಟಗೊಂಡಹುಣಸಿ ಹದ್ದಿಯ ಕುಂದಗೋಳ ಕ್ರಾಸ್ ಹತ್ತಿರ ಆರೋಪಿತನಾದ ಶಂಕ್ರಯ್ಯಾ ಗಂಗಯ್ಯಾ ಹಿರೇಮಠ ಸಾ!! ಅಗಡಿ ಇತನು ತನ್ನ ಪಾಯ್ದೆಗೋಸ್ಕರ ಒಂದು ರೂಪಾಯಿಗೆ 80 ರೂಪಾಯಿಗಳನ್ನು ಸಾರ್ವಜನಿಕರಿಗೆ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆಗಳಾಧಾರದ ಮೇಲಿಂದ ಓ.ಸಿ ಎಂಬ ಜೂಜಾಟವನ್ನು ಆಡಿಸುತ್ತಿದ್ದಾಗ ಸದರಿಯವನ ತಾಬಾದಲ್ಲಿಂದ ಒಟ್ಟು ರೋಖ ರಕ್ಕಂ 625 ರೂಪಾಯಿಗಳು, ಒಂದು ಬಾಲ್ ಪೆನ್, ಒಂದು ಓ.ಸಿ ಅಂಕಿ ಸಂಖ್ಯೆ ಬರೆದ ಬಿಳಿ ಹಾಳೆ ಸಹಿತ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 141/2017 ಕಲಂ 78 (3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಉಪ್ಪಿನಬೆಟಗೇರಿ ಗ್ರಾಮದ ಬಸ್ಸಸ್ಟ್ಯಾಂಡ ಹತ್ತಿರ ರಸ್ತೇಯ  ಆರೋಪಿತರಾದ 1.ಸಲೀಂ ದೊಡ್ಡವಾಡ 2.ಯುವರಾಜ ಕಲಾಲ ಇವರಿಬ್ಬರೂ ತಮ್ಮ ತಮ್ಮ ಫಾಯ್ಸೆಗೋಸ್ಕರ ಕಲ್ಯಾಣಿ ಮಾರ್ಕೆಟದ ಅಂಕಿ ಸಂಖ್ಯೆಗಳ ಆಧಾರದ ಮೇಲೆ 1 ರೂಪಾಯಿಗೆ 80 ರೂಪಾಯಿಗಳನ್ನು ಕೊಡುವದಾಗಿ ಜನರಿಗೆ ಹೇಳುತ್ತಾ ಓ.ಸಿ. ಅಂಬುವ ಜೂಜಾಟವನ್ನು ಆಡಿಸುತ್ತಾ ಅಂಕಿ ಸಂಖ್ಯೆಗಳನ್ನು ಬರೆದುಕೊಡುತ್ತಾ ಬರೆದುಕೊಳ್ಳುತ್ತಾ ಹಣವನ್ನು ತೆಗೆದುಕೊಳ್ಳುತ್ತಿದ್ದಾಗ ಒಬ್ಬನು ಓಡಿ ಹೋಗಿ ಒಬ್ಬನು ಸಿಕ್ಕಿದ್ದು ಅವನಿಂದ ರೂ 410-00 ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗು ನ್ನಾನಂ 87/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.