ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, June 1, 2017

CRIME INCIDENTS 01-06-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ.01-06-2017 ರಂದು ವರದಿಯಾದ ಪ್ರಕರಣಗಳು
1) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 01/06/2017 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ನಮೂದಿಸಿದ ಎದುರುಗಾರ ಬಾಜು ಮನೆಯ ಅರ್ಜಿದಾರ ಬಿ.ಬಿ.ಮಂಟೂರರೊಂದಿಗೆ   ಹಾಗೂ ಅವರ ಮನೆಯ ಜನರೊಂದಿಗೆ ಮನೆಯ ಪಕ್ಕದ ಜಾಗೆಯ ತಂಟೆಯ ಸಂಬಂಧ ವೈಮನಸ್ಸು ಹೊಂದಿದ್ದು ಇದೆ ಕಾರಣದಿಂದ ಅರ್ಜಿದಾರ ಹಾಗೂ ಅವರ ಮನೆಯ ಜನರೊಂದಿಗೆ ತಂಟೆ ಮಾಡುತ್ತಾ ಬಂದಿದ್ದಲ್ಲದೆ ಇನ್ನು ಮುಂದೆಯೂ ಸಹ ಇದೆ ಕಾರಣ ಮುಂದೆ ಮಾಡಿ ಅರ್ಜಿದಾರರೊಂದಿಗೆ ತಂಟೆ ತೆಗೆದು ಅವರ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗೆ ದಕ್ಕೆಯನ್ನುಂಟು ಮಾಡಿ ಶಾಂತತಾ ಭಂಗ ಪಡಿಸುವರು ಹೇಳಲು ಬಾರದ್ದರಿಂದ ಎದುರುಗಾರ 1) ರುದ್ರಪ್ಪಾ ಕಟ್ಟಿಕಾರ, 2)ಶಿವಪ್ಪ ಕಟ್ಟಿಕಾರ, 3)ಬೀರಪ್ಪ ಕಟ್ಟಿಕಾರ, 4)ಮುದಕಪ್ಪ ಕಟ್ಟಿಕಾರ, 5)ರಾಚಪ್ಪ ಕಟ್ಟಿಕಾರ, 6)ಮಂಜಪ್ಪ ಕಟ್ಟಿಕಾರ 7)ಮಹಾದೇವ ಕಟ್ಟಿಕಾರ,  8)ನಾಗಪ್ಪ ಕಟ್ಟಿಕಾರ, 9)ಬಸವ್ವ ಕಟ್ಟಿಕಾರ,  10)ಗಂಗವ್ವ ಕಟ್ಟಿಕಾರ, 11)ತಿಪ್ಪವ್ವಾ ಕಟ್ಟಿಕಾರ,  12)ಮಲ್ಲವ್ವ ಕಟ್ಟಿಕಾರ  ರವರ ಮೇಲೆ ಕಲಂ 107,ರೆ/ವಿ151 ಸಿ ಆರ್ ಪಿ ಸಿ ಪ್ರಕಾರ ಕ್ರಮ ಕೈಗೊಂಡು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 72/2017 ನೇದ್ದರಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.


2) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 01-06-2017 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ಅರ್ಜಿದಾರ ಬಿ.ಬಿ.ಮಂಟೂರ ಹಾಗೂ ಅವರ ಮನೆಯ ಜನರೊಂದಿಗೆ ಮನೆಯ ಪಕ್ಕದ ಜಾಗೆಯ ತಂಟೆಯ ಸಂಬಂಧ ಮತ್ತು ಮನೆಯ ಅಂಗಳದ ಕಸ ಹೊಡೆಯುವ ಸಂಬಂಧ ವೈ ಮನಸ್ಸು ಹೊಂದಿದ್ದು ಇದೆ ಕಾರಣದಿಂದ ಅರ್ಜಿದಾರ ಹಾಗೂ ಅವರ ಮನೆಯ ಜನರೊಂದಿಗೆ ತಂಟೆ ಮಾಡುತ್ತ ಬಂದಿದ್ದಲ್ಲದೆ ಇನ್ನೂ ಮುಂದೆಯೂ ಸಹ ಇದೆ ಕಾರಣ ಮುಂದೆ ಮಾಡಿ ಅರ್ಜಿದಾರರೊಂದಿಗೆ ತಂಟೆ ತೆಗೆದು ಅವರ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗೆ ದಕ್ಕೆಯನ್ನುಂಟುಮಾಡಿ ಸಾರ್ವಜನಿಕ ಶಾಂತತಾ ಭಂಗಪಡಿಸುವರು ಹೇಳಲು ಬಾರದ್ದರಿಂದ ಸದರಿಯವರ ಮೇಲೆ ಕಲಂ 107 ರೆ/ವಿ 151 ಸಿ ಆರ್ ಪಿ ಸಿ ಪ್ರಕಾರ ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 73/2017 ನೇದ್ದರಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.