ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, June 11, 2017

CRIME INCIDENTS 11-06-2017

ದಿನಾಂಕ 11/06/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 10-06-2017 ರಂದು 17-10 ಘಂಟೆಗೆ ಆರೋಪಿ ಶಂಕ್ರಪ್ಪ ಬಿನ್ನಾಳ ಇತನು ತನ್ನ ಮೋಟರ ಸೈಕಲ ನಂಬರ KA-25/ES--8800 ನೇದ್ದನ್ನು ಅಣ್ಣಿಗೇರಿ ಕಡೆಯಿಂದ ಭದ್ರಾಪುರ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ತನ್ನ ಬಲಸೈಡಿಗೆ ಹೋದವನೇ, ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಹೊರಟಿದ್ದ ಕಾರ ನಂಬರ KA-20/M-9911 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಎರಡೂ ವಾಹನಗಳನ್ನು ಜಖಂಗೊಳಿಸಿ ಮೋಟರ ಸೈಕಲ ಚಾಲಕ ಹಾಗೂ ತನ್ನ ಮೋಟರ ಸೈಕಲ ಹಿಂದೆ ಕುಳಿತಿದ್ದ ಭಿಮಪ್ಪ ತಂದೆ ತಿಪ್ಪಣ್ಣ ತೋಟಕಾರ ಇವರಿಗೆ ಸಾಧಾ ವ ಭಾರಿ ಗಾಯ ಪಡಿಸಿದ ಅಪರಾಧ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 87/2017 ಕಲಂ 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


2.ಗರಗ ಪೊಲೀಸ್ ಠಾಣಾ ವ್ಯಾಪ್ತಿ: ಕೋಟಬಾಗಿ-ಉಪ್ಪಿನಬೆಟಗೇರಿ ರಸ್ತೆಯ ಮೇಲೆ ನಿಂಗನಗೌಡಾ ಪಾಟೀಲರವರ ಹೊಲದ ಹತ್ತಿರ ದಿನಾಂಕಃ 10-06-2017 ರಂದು 23-30 ಅವರ್ಸಕ್ಕೆ ಆರೋಪಿತನಾದ ಎ1, [ಮೃತ] ಮಂಜುನಾಥ ತಂದೆ ನಾಗಪ್ಪಾ ಇಂಚಲ. ಸಾಃ ಕಲ್ಲೂರ ಇತನು ತನ್ನ ಬಾಬತ್ತ ಮೋಟಾರ ಸೈಕಲ ನಂಬರಃ ಕೆಎಃ25/ಇಯು/1047 ನೇದ್ದನ್ನು ಕೋಟಬಾಗಿ ಕಡೆಯಿಂದಾ ಕಲ್ಲೂರ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಹೋಗಿ ರಸ್ತೆಯ ಮೇಲೆ ನಿಂತ ನಂಬರ ಇರದ ಹಳೆಯ ಟ್ರ್ಯಾಕ್ಟರದ ಟ್ರೇಲರಗೆ ಹಿಂದೆ ಮೋಟಾರ ಸೈಕಲ ಢಿಕ್ಕಿ ಮಾಡಿ ಅಪಘಾತಪಡಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಲ್ಲದೆ ಆರೋಪಿತನಾದ ಎ2, ಈರನಗೌಡಾ ತಂದೆ ಗುಲ್ಲನಗೌಡಾ ರಾಚನಗೌಡ್ರ. ಸಾಃ ಕಲ್ಲೆ ಇತನು ತನ್ನ ಬಾಬತ್ತ ನಂಬರ ಇರದ ಹಳೆಯ ಟ್ರ್ಯಾಕ್ಟರ ವ ಟ್ರೇಲರನ್ನು ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ರಸ್ತೆ ನಡುವೆ ನಿಲ್ಲಿಸಿ ಅದಕ್ಕೆ ಯಾವುದೆ ಸುರಕ್ಷತೆಯ ಸೂಚನಾ ಫಲಕಗಳನ್ನು ಹಚ್ಚದೆ ರಿಪ್ಲೇಕ್ಟರ ವ ಬೆಂಕಿ, ಕಲ್ಲುಗಳನ್ನು ಹಾಕದೆ ನಿರ್ಲಕ್ಷತೆಯನ್ನು ತೋರಿಸಿ ಅಪಘಾತಕ್ಕೆ ಕಾರಣಿ ಭೂತನಾದ ಅಪರಾಧ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 84/2017 ಕಲಂ IPC 1860 (U/s-279,283,304(A)) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.