ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, June 18, 2017

CRIME INCIDENTS 18-06-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 18/06/2017 ರಂದು ವರದಿಯಾದ ಪ್ರಕರಣಗಳು

1.ಗರಗ ಪೊಲೀಸ ಠಾಣಾ ವ್ಯಾಪ್ತಿಯ: ತಡಕೋಡ-ಕಿತ್ತೂರ ರಸ್ತೆಯ ಮೇಲೆ ಸಂಪಗಾವಿಯವರ ಹೊಲದ ಹತ್ತಿರ ದಿನಾಂಕಃ 18-06-2017 ರಂದು 15-30 ಅವರ್ಸಕ್ಕೆ ಪ್ಯಾಸೆಂಜರ ಟಿಂಪೋ ನಂಬರಃ ಕೆಎಃ22/8192 ನೇದ್ದರ ಚಾಲಕನು ತನ್ನ ಟಿಂಪೋವನ್ನು ಮಾದನಭಾವಿ ಕಡೆಯಿಂದಾ ಕಿತ್ತೂರ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಹೋಗಿ ತನ್ನ ಎದುರಿಗೆ ಬರುತ್ತಿದ್ದ ಮೋಟಾರ ಸೈಕಲ ನಂಬರಃ ಕೆಎಃ25/ಇಎಚ್/8770 ನೇದ್ದಕ್ಕೆ ಢಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ ಸೈಕಲ ಸವಾರ ಪ್ರದೀಪ ತಂದೆ ರಾವಸಾಹೇಬ ಪಾಟೀಲನಿಗೆ ಸ್ಥಳದಲ್ಲಿಯೇ ಮರಣಪಡಿಸಿ ಠಾಣೆಗೆ ಸುದ್ದಿ ತಿಳಿಸದೆ ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 86/2017 ಕಲಂ 279.304(ಎ) ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.