ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, July 25, 2017

CRIME INCIDENTS 25-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 25/07/2017 ರಂದು ವರದಿಯಾದ ಪ್ರಕರಣಗಳು

1 ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಕಲಘಟಗಿ ರಸ್ತೆ ನುಗ್ಗಿಕೇರಿ ಗ್ರಾಮದ ಸಮೀಪ ರಸ್ತೆಯ ಲಾರಿ ನಂ ಕೆಎ-25-ಸಿ-5713 ನೇದರ ಚಾಲಕನು ತನ್ನ ಟಿಪ್ಪರ ಲಾರಿಯನ್ನು ಧಾರವಾಡ ಕಡೆಯಿಂದ ಕಲಘಟಗಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಲಘಟಗಿ ಕಡೆಯಿಂದ ಧಾರವಾಡ ಕಡೆಗೆ ರಸ್ತೆ ಎಡಸೈಡಿನಲ್ಲಿ ಬರುತ್ತಿದ್ದ  ಆನಂದ ಜೋಶಿ ಇವರ ವಿ.ಆರ್.ಎಲ್  ಕಂಪನಿಯ ಲಾರಿ ನಂ ಕೆಎ-25-ಎ-5953 ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ತನಗೆ ಹಾಗೂ ತನ್ನ ಲಾರಿಯಲ್ಲಿದ್ದ ದೊಡ್ಡಪ್ಪ ಬಸಪ್ಪ ತೊಲಗಿ ಇವನಿಗೆ ಸಾದಾ ವ ಬಾರೀ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 153/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
 
2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಅಜಂನಬಾವಿ ಗ್ರಾಮದ  ನೀಲವ್ವ ಪಾಯಣ್ಣವರ ಇವರ ಮನೆ ಮುಂದೆ ಇದರಲ್ಲಿ ಆರೋಪಿತರಾದ 1) ಭರಮವ್ವ ಕೋಂ ರಾಮಣ್ಣ ಅಡಿವೆಪ್ಪನವರ ಸಾ: ಕುಂದಗೋಳ 2) ಮಲ್ಲಪ್ಪ ಮಹಾದೇವಪ್ಪ ಬಾರಕೇರ. ಸಾ: ಕುಬಿಹಾಳ, ಹಾಲಿ ವಸ್ತಿ ಲಕ್ಷ್ಮೇಶ್ವರ, 3) ಶಾಂತವ್ವ ಕೋಂ ರಾಮಣ್ಣ ಹುಲಗೂರ. ಸಾ: ಕುಂದಗೋಳ 4) ಸುನಂದವ್ವ ಕೋಂ ಫಕ್ಕೀರಪ್ಪ ಪೂಜಾರ. ಸಾ: ಕುಂದಗೋಳ 5) ಬಸಪ್ಪ ಮಹಾದೇವಪ್ಪ ಬಾರಕೇರ. ಸಾ: ಕುಬಿಹಾಳ, ಹಾಲಿ: ನೂಲ್ವಿ 6) ನೀಲವ್ವ ಕೋಂ ಬಸಪ್ಪ ಬಾರಕೇರ. ಸಾ: ಕುಬಿಹಾಳ, ಹಾಲಿ: ನೂಲ್ವಿ 7) ಯಮನಪ್ಪ ಸೋಮಪ್ಪ ಪಾಯಕ್ಕನವರ ಸಾ: ಕುಂದಗೋಳ 8) ಟೋಪಣ್ಣ ರಾಮಣ್ಣ ಹುಲಗೂರ. ಸಾ: ಕುಂದಗೋಳ 9) ರಾಜೇಶ್ವರಿ ಕೋಂ ಯಮನಪ್ಪ ಪಾಯಕ್ಕನವರ ಸಾ: ಕುಂದಗೋಳ 10) ಹನಮಂತಪ್ಪ ಮಹಾದೇವಪ್ಪ ಬಾರಕೇರ. ಸಾ: ಕುಬಿಹಾಳ ಇವರೇಲ್ಲರೂ ಗೈರ ಕಾಯ್ದೇಶಿರ ಮಂಡಳಿಯಾಗಿ ಸಂಗನಮತ ಮಾಡಿಕೊಂಡು ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಗಂಡನಿಗೆ ಕೋರ್ಟಿನಲ್ಲಿ ಸಾಕ್ಷಿ ಹೇಳಿದ್ದಕ್ಕೆ ಅವಾಚ್ಯ ಬೈಯ್ದಾಡಿ, ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 116/2017 ಕಲಂ 143.147.504.506.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Monday, July 24, 2017

CRIME INCIDENTS 24-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 24/07/2017 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ : ಹುಬ್ಬಳ್ಳಿ ಗದದ ರಸ್ತೆಯ ಬಂಢಿವಾಡ ಕ್ರಾಸ್ ಹತ್ತಿರ ಆರೋಪಿನಾದ ಯಲ್ಲಪ್ಪಾ ಬನ್ನಿಗಿಡದ ಇತನು  ಕಳವು ಮಾಡುವ ಇರಾಧೆಯಿಂದ ರಸ್ತೆಗೆ ಹೊಂದಿಕೊಂಡಿರುವ ಅಂಗಡಿಯ ಸಂಧಿಯಲ್ಲಿ ಅವಿತು ಕುಳಿತಿಕೊಂಡಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 175/2017 ಕಲಂ 109 ಸಿ.ಆರ್.ಪಿ. ಸಿ. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ : ಹುಬ್ಬಳ್ಳಿ ಗ್ರಾಮದ  ಮೃತ ಮಹಾಂತೇಶ ಭೀಮರಾವ ಕೊರ್ವಿ ವಯಾಃ 35 ವರ್ಷ ಸಾಃ ಕರೋಷಿ ಹಾಲಿ ಎಕ್ಸಂಬಾ  ಇವನು ತನ್ನ ಹೆಂಡ್ತಿ ಮಕ್ಕಳು ತನನ್ನು ಬಿಟ್ಟು ತವರು ಮನೆಗೆ ಹೋದ್ದಕ್ಕೆ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೆ ಅಂಚಟಗೇರಿ ಗ್ರಾಮ ಹದ್ದಿ ಅಲ್ತಾಫ ಹಳ್ಳೂರ ಇವರ ಮಾವಿನ ತೋಟದಲ್ಲಿಯ ಮಾವೀನ ಮರಕ್ಕೆ ಉರ್ಲು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು ವಿನಃ ಸದರಿಯವನ ಮರಣದಲ್ಲಿ ಬೇರೆ ಯಾವದೆ ಸಂಶಯ ಇರುವದಿಲ್ಲಾ ಅಂತಾ  ಫಿಯಾಱದಿ ನೀಡಿದ್ದು ಈ ಕುರಿತು ಹುಬ್ಬಳ್ಳೀ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 30/2017 u/s 174 ಸಿ.ಆರ್.ಪಿ. ಸಿ. ನೇದ್ದರಲ್ಲಿ ಪ್ರಕರಣನ್ನು ದಾಖಲಿಸಿದ್ದು ಇರುತ್ತದೆ.
 
3.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮಾದನಬಾವಿ ಗ್ರಾಮದ ಮೃತಃ ವೀರಭದ್ರಯ್ಯ ತಂದೆ ದೊಡ್ಡಯ್ಯ ಚರಂತಿಮಠ . ವಯಾಃ 38 ವರ್ಷ. ಸಾಃ ಮುರಕಿಭಾವಿ . ತಾಃ ಬೈಲಹೊಂಗಲ. ಹಾಲಿ ಮಾದನಭಾವಿ. ತಾಃ ಧಾರವಾಡ ಇವನು ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಅದರಿಂದ ಅವನಿಗೆ ಹೊಟ್ಟೆ ನೋವು ಬರುತ್ತಿದ್ದು, ಈ ದಿವಸ ದಿಃ 24/07/2017 ರಂದು ಬೆಳಗಿನ 08-00 ಗಂಟೆಯಿಂದ 10.00 ಗಂಟೆ ನಡುವಿನ ಅವಧಿಯಲ್ಲಿ ತನಗಿದ್ದ ಹೊಟ್ಟೆ ನೋವಿನ ಬಾದೆಯನ್ನು ತಡೆಯಲಾರದೇ ಮನೆಯಲ್ಲಿ ಯಾರೂ ಇಲ್ಲದೆ ವೇಳೆಯಲ್ಲಿ ತನ್ನಷ್ಟಕ್ಕೆ ತಾನೆ ಅಡಗಿ ಮನೆಯ ಬೆಲಗಿಗೆ ಹಗ್ಗವನ್ನು ಕಟ್ಟಿಕೊಂಡು ನೇಣು ಹಾಕಿಕೊಂಡು ಮೃತ ಪಟ್ಟಿದ್ದು ಅದೆ. ಅಂತಾ ಮೃತನ ಹೆಂಡತಿ ನೇತ್ರಾವತಿ  ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 32/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, July 23, 2017

CRIME INCIDENTS 23-07-2017

ದಿನಾಂಕ. 23-07-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯ ಕೇರಿಓಣಿಯಲ್ಲಿ ದಿನಾಂಕ. 23-07-2017 ರಂದು ಪಿರ್ಯಾದಿ ಶೋಭಾ ನವಲಗುಂದ    ಇವಳ ಮಾವ ಗಾಯಾಳು ಅಮೃತಪ್ಪ ಇವರ ಹಾಗು ಆರೋಪಿತ ಕಮಲವ್ವ ನಿಂಗಪ್ಪ ನವಲಗುಂದ, ಗೀರಿಶ ನಿಂಗಪ್ಪ ನವಲಗುಂದ, ರಾಘವೇಂದ್ರ ನಿಂಗಪ್ಪ ನವಲಗುಂದ  ಇವರ ನಡುವೆ ಜಮೀನ ಪಾಲ ವಾಟ್ನಿಯ ಸಂಬಂದ ತಂಟೆ ತಕರಾರು ಇದ್ದು ಅಲ್ಲದೇ ಪಿರ್ಯಾದಿ ಮಾವನು ಆರೋಪಿತರಿಗೆ ಓಣಿಯಲ್ಲಿ ದೈನಂದಿನ ಬಾಳ್ವೆ ಮಾಡುವ ಬಗ್ಗೆ ಬುದ್ದಿ ಮಾತು ಹೇಳಿದ್ದಕ್ಕೆ ಆರೋಪಿತರು ಪಿಯಾದಿಯ ಮೇಲೆ ದ್ವೆ ಇಟ್ಟುಕೊಂಡು ಅದೇ ಉದ್ದೆದಿಂದ ದಿನಾಂಕ 22-07-20117 ರಂದು ಮದ್ಯಾಹ್ನ 14-00 ಘಂಟೆಗೆ ಆರೋಪಿತರು ಪಿರ್ಯಾದಿ ಮಾವನೊಂದಿಗೆ ತಂಟೆ ತೆಗೆದು ಅವನನ್ನು ಅಡ್ಡಗಟ್ಟಿ ತರುಬಿ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡಿ ಪಿರ್ಯಾದಿ ಅತ್ತೆಗೆ ಆರೋಫಿತರು ಕೈಯಿಂದ ಹೊಡೆದು ಅವಳ ಸೀರೆಯನ್ನು ನಡು ರಸ್ತೆಯಲ್ಲಿ ಹಿಡಿದು ಎಳೆದಾಡಿ ಮಾನಂಬಂಗ ಪಡಿಸಿ ಜೀವದ ಬೆದರಿಕೆ ಹಾಕಿದ್ದು  ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 103/2017 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2) ಧಾರವಾಡ ಗ್ರಾಮೀಣ ಪೊಲಿಸ್ ಠಾಣಾವ್ಯಾಪ್ತಿಯಲ್ಲಿ ಈಗ ಸುಮಾರು 05-06 ವರ್ಷಗಳಿಂದ ಪಿರ್ಯಾದಿದಾರಳು ಯಲ್ಲವ್ವ ಅಲ್ಲಿಗೇರಿ ಇವಳ ಗಂಡ ಆರೋಪಿತ ಹನುಂತಪ್ಪ  ಅಲ್ಲಿಗೇರಿ ಪಿರ್ಯಾದಿಯ ಮೇಲೆ ವಿನಾ ಕಾರಣ ಸಂಶಯ ಮಾಡುತ್ತಾ ಅವಾಚ್ಯವಾಗಿ ಬೈಯ್ದಾಡಿ ಮನೆಯಲ್ಲಿದ್ದ ಊದುಗೊಳ್ಳಿ ತೆಗೆದುಕೊಂಡು ಹೊಡಿ ಬಡಿ ಮಾಡುತ್ತಿರುವಾಗ ಜಗಳ ಬಿಡಿಸಲು ಬಂದ ಪಿರ್ಯಾದಿಯ ಮಗ ಬಸವರಾಜನಿಗೆ ಮನೆಯ ಮುಂದೆ ಇದ್ದ ಕಲ್ಲನ್ನು ತೆಗೆದುಕೊಂಡು ತಲೆಗೆ ಹೊಡೆದು ಭಾರೀ ರಕ್ತ ಗಾಯ ಮಾಡಿ ಇಬ್ಬರನ್ನು ಮನೆಯಿಂದ ಹೊರಗೆ ಹಾಕಿ ಮನೆಗೆ ಬಂದರೆ ಜೀವಂತ ಬಿಡುವದಿಲ್ಲ ಅಂತಾ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 151/2017 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಜಾವೂರ ಗ್ರಾಮದಲ್ಲಿ ಸುಧಾ ಶಿವಾನಂದ ಅಮ್ಮಿನಬಾವಿ  ಇವಳು ತನಗೆ ಬರುತ್ತಿದ್ದ ಮುಟ್ಟಿನ ನೋವಿನ ತ್ರಾಸಿನಿಂದ  ನೋವು ತಡೆಯಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು   ದಿನಾಂಕ 21-07-2017 ರಂದು ರಾತ್ರಿ  10-00 ಗಂಟೆಯಿಂದ  ದಿನಾಂಕ 22-07-2017 ರಂದು ಬೇಳಿಗ್ಗೆ 06-00 ಗಂಟೆಯ ಯ ನಡುವಿನ ಅವಧಿಯಲ್ಲಿ  ತನಗೆ ಇದ್ದ ಮುಟ್ಟು ಬಂದಾಗ ಆಗುವ  ಹೊಟ್ಟೆ ನೋವು ತಾಳಲಾರದೆ ತನ್ನಷ್ಟಕ್ಕೆ ತಾನೇ ದನಕ್ಕೆ ಹಚ್ಚುವ ಉಣ್ಣೆ ನಿವಾರಕ ಎಣ್ಣೆಯನ್ನು ಸೆವನೆ ಮಾಡಿದ್ದು ಉಪಚಾರಕ್ಕೆಂದು ಧಾರವಾಡ ಎಸ್ ಡಿ ಎಮ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಉಪಚಾರ ಫಲೀಸದೆ ದಿನಾಂಕ 22-07-2017 ರಂದು ಸಾಯಂಕಾಲ 04-40 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಅದೆ. ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಅಂತಾ ವರದಿಗಾರನು ವರದಿಯಲ್ಲಿ ನಮೂದಿಸಿದ್ದು  ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದುಇರುತ್ತದೆ.


Saturday, July 22, 2017

CRIME INCIDENTS 22-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 22/07/2017 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: : ಹಿರೇಹೊನ್ನಿಹಳ್ಳಿ ಮೃತ ಶಿವಲಿಂಗಪ್ಪ ತಂದೆ ಬಸವಣೆಪ್ಪ ಜಮ್ಮಿಹಾಳ ವಯಾ 52 ವರ್ಷ ಸಾ: ಹಿರೇಹೊನ್ನಿಹಳ್ಳಿ ಇವನು ಕುಡಿವ ಚಟದವನಿದ್ದು ಮತ್ತು ಆಗಾಗ ಹೊಟ್ಟೆ ನೋವಿನ ತೊಂದರೆ ಬಳಲುತ್ತಿದ್ದು ಕಲಘಟಗಿ ಪಾಟೀಲ್ ದವಾಖಾನೆಯಲ್ಲಿ ತೋರಿಸಿದಾಗ ಅವರು ಕುಡಿಯುವದನ್ನು ಬಿಡು ಅದರಿಂದ ತೊಂದರೆ ಇದೆ ಅಂತಾ ಹೇಳಿದರೂ ಕೇಳದೇ ಮೃತನ ಹೆಂಡತಿ ಮಗ ಹಾಗೂ ಮನಯ ಜನರು ಬುದ್ದಿ ಹೇಳಿದರೂ ಕೇಳದೇ ಕುಡಿಯುತ್ತಾ ಇದ್ದವನು ದಿನಾಂಕ: 22/07/2017 ರ ಮುಂಜಾನೆ 00.30 ಗಂಟೆ ಸುಮಾರಿಗೆ ತನಗಿದ್ದ ಹೊಟ್ಟೆ ನೋವಿನ ತೊಂದರೆಯಿಂದ ತನ್ನ ಜೀವನದಲ್ಲಿ ಜುಗುಪ್ಸೆಹೊಂದಿ ತಮ್ಮ ಮನೆಯ ಹಿತ್ತಿಲಿನ ಕೋಣೆಯ ಜಂತಿಗೆ ಹಗ್ಗದ ಸಹಾಯದಿಂದ ತಾನಾಗಿಯೇ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಅವನ ಸಾವಿನಲ್ಲಿ ಯಾರ ಮೇಲೆ ಯಾವದೇ ಸಂಶಯ ವಗೈರೆ ಇರುವುದಿಲ್ಲಾ ಅಂತ ಮೃತನ ಹೆಂಡತಿ  ದ್ಯಾಮವ್ವ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 41/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ :ಮಂಗಳಗಟ್ಟಿ ಗ್ರಾಮದ  ಶ್ರೀಮತಿ ಮಂಗಲಾ ಕೋಂ.ಬಸಯ್ಯ.ಹಿರೇಮಠ ವಯಾ-22 ವರ್ಷ. ಸಾಃಮಂಗಳಗಟ್ಟಿ ಇವಳು ದಿನಾಂಕ:06-06-2017 ರಂದು ಮುಂಜಾನೆ-06-30 ಗಂಟೆಯಿಂದ 07-30 ಗಂಟೆಯ ನಡುವಿನ ಅವಧಿಯಲ್ಲಿ ಮಂಗಳಗಟ್ಟಿ ಗ್ರಾಮದ ತನ್ನ ಮನೆಯಿಂದ ಯಾರಿಗೂ ಹೇಳದೇ ಕೇಳದೆ ಹೋದವಳು ಇಲ್ಲಿಯವರೆಗೆ ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 102/2017 ಕಲಂ ಮಹಿಳೆ ಕಾಣೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ .

3 .ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರ ಗ್ರಾಮದ  ಮೃತನಾದ ಹನಮಂತ ತಂದೆ ಸುಂಕಪ್ಪಾ ವಡ್ಡರ, ವಯಾ 40 ವರ್ಷ ಜಾತಿ ಹಿಂದೂ ವಡ್ಡರ ಉದ್ಯೋಗ ಕೂಲಿ ಕೆಲಸ ಸಾ ಃ ಅಳ್ನಾವರ ಮಾನಕಾಪೂರ ತಾ ಃ ಧಾರವಾಡ ಇವನು ಈಗ ಸುಮಾರು 5-6 ವರ್ಷಗಳಿಂದ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಈ ಬಗ್ಗೆ ಸರಾಯಿ ಕುಡಿಯಬೇಡ ಅಂತಾ ಮೇಲಿಂದ ಮೇಲೆ ಹೇಳಿದರೂ ಕೇಳದೇ ಮೃತನು ದಿನಾಂಕಃ 21-07-2017 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕಃ 22-07-2017 ರ ಬೆಳಗಿನ 07-00 ಗಂಟೆಯ ನಡುವಿನ ಅವಧಿಯಲ್ಲಿ ವಿಪರೀತ ಸರಾಯಿ ಕುಡಿದು ಹಳಿಯಾಳ ಅಳ್ನಾವರ ರಸ್ತೆಯ ಪಕ್ಕದಲ್ಲಿ ಅಳ್ನಾವರದ ಪುಂಡಲಿಕ ಮೇಸ್ತ್ರಿ ಗ್ಯಾರೇಜ ಸಮೀಪ ಮರಣ ಹೊಂದಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವದಿಲ್ಲ ಅಂತಾ ಪರಶುರಾಮ ವಡ್ಡರ ಫಿಯಾಱಧಿ ನೀಡಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಯುಡಿನಂ 07/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
 
4. 1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಗುನ್ನಾನಂ 168/17 169/2017,170/2017.171/2017  ಮುಂಜಾಗೃತ ಕ್ರಮವಾಗಿ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Thursday, July 20, 2017

CRIME INCIDENTS 20-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 20/07/2017 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಬೋಗುರ ಗ್ರಾಮದ  ಪುಡಂಲಿಕಪ್ಪಾ ಕುರಿತು ಇವರ ಮೋಟಾರ ಸೈಕಲ್ ನಂಬರ್ ಕೆ ಎ 25 ಇ ವಾಯ್ 4474 ನೆದ್ದನ್ನು ಬೋಗುರ ಗ್ರಾಮದ ಕಟ್ಟಿ ಹಳ್ಳದ ರಸ್ತೆಯ ಹೊಲದ ಮುಂದೆ ನಿಲ್ಲಿಸಿದ್ದನ್ನು ಬೆಳಗಿನ 04 ಗಂಟೆ ಮಧ್ಯದ  ಅವದಿಯಲ್ಲಿ ಯಾರೋ ಕಳ್ಳರು ಮೋಟರ್ ಸೈಕಲ್ ನ್ನು  ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 101/2017 ಕಲಂ 379 ಐಪಿಸಿ ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ ಶಹರದ ಹೊರವಲಯದಲ್ಲಿರುವ ಗಂಗಾಯಿಯವರ ಪೆಟ್ರೋಲ್ ಬಂಕ್ ಹತ್ತಿರ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಸಮೀಪ ಇರುವ ಹೊಲಕ್ಕೆ ಇದರಲ್ಲಿ ಪಿರ್ಯಾದಿಯ ಮಗಳಾದ ಭಾರತೀ @ ಭಾರತವ್ವ ಕೋಂ ಹೂವಾಜಿ ಕಲಾಲ, ವಯಾ: 40 ವರ್ಷ ಸಾ: ಯಲ್ಲಮ್ಮನಗುಡಿ ಓಣಿ ಕುಂದಗೋಳ ಹಾಲಿ: ಎಸ್.ಎಮ್.ಕೃಷ್ಣಾನಗರ ಗಬ್ಬೂರ ತಾ: ಹುಬ್ಬಳ್ಳಿ ಇವಳನ್ನು ಆರೋಪಿತನಾದ ಇಮಾಮಹುಸೇನ ಮೌಲಾಸಾಬ ಕಳ್ಳೀಮನಿ, ಸಾ: ಕುಂದಗೋಳ ಈತನು 20,000/-ರೂ ಹಣ ಪಡೆಯುವ ಉದ್ದೇಶದಿಂದ ಕರೆದುಕೊಂಡು ಹೋಗಿ, ಅವಳೊಂದಿಗೆ ದೈಹಿಕ ಸಂಪರ್ಕ ಹೊಂದಿ ಅವಳ ಮೇಲೆ ಲೈಂಗಿಕ ಹಲ್ಲೆ ಮಾಡಿ, ಅವಳು ಧರಿಸಿದ್ದ ಪತ್ತಲದ ಸೆರಗಿನಿಂದ ಅವಳ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ಸದರಿ ಮೃತಳ ಬಳಿ ಇದ್ದ 80,000/-ರೂ ರೋಖಹಣದ ಚೀಲ ಹಾಗೂ ಒಂದು ಮೊಬೈಲ ಹ್ಯಾಂಡಸಟ್ಟನ್ನು ತೆಗೆದುಕೊಂಡು ಹೋಗಿ, ಮೊಬೈಲ ಮತ್ತು ಹಣ ಹಾಕಿದ್ದ ಖಾಲಿಚೀಲವನ್ನು ರಸ್ತೆಯ ಪಕ್ಕದಲ್ಲಿರುವ ತೆಗ್ಗಿನಲ್ಲಿ ಒಗೆದು ರೋಖಹಣ 80,000/-ರೂ ಗಳನ್ನು ತೆಗೆದುಕೊಂಡು ಹೋಗಿದ್ದು ಇರುತ್ತದೆ  ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 113/2017 ಕಲಂ 302.376.404 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಸೋಲಾರಗೊಪ್ಪ ಯಾರೋ ಎರಡು ಜನ ಆರೋಪಿತರು ಸೋಲಾರಗೊಪ್ಪ ಗ್ರಾಮದ ನಾಗಪ್ಪ ಕೊಣ್ಣಣ ವರ  ಇವರ ವಾಸಿಸುವ ಮನೆಯ ಹಿತ್ತಿಲು ಬಾಗಿಲದ ಚಿಲಕವನ್ನು ಹಾರಿಸಿ ಒಳಹೊಕ್ಕು ಪಡಸಾಲಿಯಲ್ಲಿಟ್ಟಿದ್ದ ಟ್ರೇಜರಿಯ ಬಾಗಿಲು ತೆಗೆದು ಅದರಲ್ಲಿದ್ದ ಲಾಕರ್ ದ ಕೀಲಿ ತೆಗೆದುಕೊಂಡು ಲಾಕರ್ ತೆಗೆದು ಅಲ್ಲರಲ್ಲಿಟ್ಟಿದ್ದ 1]2 ತೊಲೆ ಬಂಗಾರ ನೆಕ್ಲೆಸ್ ಅ..ಕಿ..40000/- 2]1 ತೊಲೆ ಬಂಗಾರದ ಬೋರಮಳ ಸರಾ ಅ..ಕಿ..20,000/- 3] ಎರಡುವರೆ ತೊಲೆ ಜುಮಕಿ ಬೆಂಡವಾಲೆ  ಸೆಟ್ ಗಳು ಅ..ಕಿ..50,000/- 4]ಅರ್ಧ ತೊಲೆ ಕಿವಯಲ್ಲಿಯ ರಿಂಗ್ ಗಳು ಅ..ಕಿ..10.000/- ಹಾಗು 5]11,000/- ರೂ ನಗದನ್ನು ಒಟ್ಟು 1,31,000/- ರೂ ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 245/2017 ಕಲಂ 457.380 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

4. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಬಸಾಪುರ ಗ್ರಾಮದ  ತನ್ನ ಮಗಳಾದ ಮುನ್ನಿ @ ಮಂಜುಲಾ ಕೊಂ ಪುಂಡಲೀಕ ಚವ್ಹಾಣ ವಯಾ: 30 ವರ್ಷ ಸಾ: ಬಸಾಪೂರ ತಾ: ಕುಂದಗೋಳ ಇವಳು ದಿನಾಂಕ: 16-07-2017 ರಂದು ರಾತ್ರಿ 1045 ಗಂಟೆಗೆ ತನಗೆ ತಲೆನೋವು ಬಂದಿದ್ದರಿಂದ ತನ್ನ ಮನೆಯಲ್ಲಿ ಚಹಾ ಮಾಡಿಕೊಳ್ಳುವ ಸಲುವಾಗಿ ಒಲೆಯನ್ನು ಹಚ್ಚಿ ಅಲ್ಲೇ ಕುಳಿತು ಸಕ್ಕರಿ ಡಬ್ಬ ತೆಗೆದುಕೊಳ್ಳುತ್ತಿರುವಾಗ ಅಕಸ್ಮಾತ್ ಬೆಂಕಿಯು ಅವಳು ತೊಟ್ಟಿದ್ದ ಪತ್ತಲಕ್ಕೆ ಹತ್ತಿ ಪುಟವಾಗಿ ಮೈ ಕೈ ಆವರಸಿ ಸುಟ್ಟ ಗಾಯಾಗಳಾಗಿದ್ದು ಅವಳಿಗೆ ಉಪಚಾರ ಕುರಿತು ಕುಂದಗೋಳ ಸರಕಾರಿ ಆಸ್ಪತ್ರೆಗೆ ದಾಖಲ ಮಾಡಿದ್ದು  ಅಲ್ಲಿಂದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಂಟ್ಟಿದ್ದು ನಾವು ಅವಳಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲ ಮಾಡಿದ್ದು ಅಲ್ಲಿ ಉಪಚಾರ ಹೊಂದುತ್ತಿದ್ದಾಗ ಉಪಚಾರ ಫಲಿಸದೇ ನಿನ್ನೆ ದಿನಾಂಕ: 19-07-2017 ರಂದು ರಾತ್ರಿ 8:30 ಗಂಟೆಗ ಮೃತಪಟ್ಟಿದ್ದು ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ಸಲಾಂ ಹುಕ್ಕೇರಿ ಫಿಯಾಱಧಿ ನೀಡಿದ್ದು ಈ ಕುರಿತು  ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 20/2017 ಕಲಂ 174 ಸಿ.ಆರ್. ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.