ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, July 2, 2017

CRIME INCIDENTS 02-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ02/07/2017 ರಂದು ವರದಿಯಾದ ಪ್ರಕರಣಗಳು

1 ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ  ಗ್ರಾಮದ ಮಹ್ಮದಸಾಬ ದಲಾಯತ್ ಅಣ್ಣಿಗೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ ಅಂತಾ 3 ವರ್ಷಗಳಿಂದ ಕಾಂಟ್ರಾಕ್ಟ ಕೆಲಸ ಮಾಡುತ್ತಿದ್ದು ಇತನಿಗೆ ಪುರಸಭೆ ಅದ್ಯಕ್ಷ ಮತ್ತು ಚೀಪ ಆಫೀಸರ್ ಮತ್ತು ಸದಶ್ಯರು ಇದುದ್, ಹಾಗೂ 1.ಮುತ್ತು ದ್ಯಾವಣ್ಣವರ ಹಾಗೂ ಇನ್ನೂ 06 ಜನರು ಕೊಡಿಕೊಂಡು  ಇಲ್ಲಿಯವರೆಗೂ ಸದರಿಯವನಿಗೆ ಸಂಬಂಳವನ್ನು ಕೊಡದೇ ಅವನಿಗೆ ಹೇಳದೇ ಕೇಳದೇ ಕೆಲಸದಿಂದ ತೆಗೆದು ಹಾಕಿ ನೀನು ಇನ್ನು ಕೆಲಸಕ್ಕೆ ಬರಬೇಡ ಅಂತಾ ಹೇಳಿದ್ದು ಅಲ್ಲದೇ ನೀನು ದುಡ್ಡು ಕೊಡು ನಿನ್ನನ್ನು ಕೆಲಸದಿಂದ ತೆಗೆದು ಹಾಕದಂತೆ ನೋಡಿಕೊಳ್ಳುತ್ತೆನೆ ಅಂತಾ ಪ್ರೆರೆಪಿಸಿದ್ದಕ್ಕೆ ಮಾನಸಿಕ ಮಾಡಕೊಂಡು ತನ್ನಷ್ಟಕ್ಕೆ ತಾನೇ ತನ್ನ ಮನೆಯಲ್ಲಿ ಯಾವುದೋ ವಿಷ ಎಣ್ಣೆಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 97/2017 ಕಲಂ 309, 109, 149 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮಂಟೂರ ಗ್ರಾಮದ ಜನತಾ ಪ್ಲಾಟದ ಗಂಗಪ್ಪ ಇಜಾರದ ರವರ ಮನೆಯ ಹತ್ತಿರದ ರಸ್ತೆ ಮೇಲೆ ಆರೋಪಿತನಾದ ಮಾಬೂಸಾಬ ಚಂದುಸಾಬ ದಂಡಿನ ಸಾ!! ಬಂಢಿವಾಡ ಇತನು ನೀರಿನ ಟ್ಯಾಂಕರ್ ಲಾರಿ ನಂಬರ ಕೆಎ-14/0307 ನೇದ್ದನ್ನು ಬಹಳ ಜೋರಿನಿಂದ ನಿರ್ಲಕ್ಷತನದಿಂದ ರಿವರ್ಸ ತೆಗೆದುಕೊಳ್ಳುತ್ತಿದ್ದಾಗ ವಾಹನದ ಹಿಂದೆ ನಿಂತುಕೊಂಡಿದ್ದ ದಾವಲಸಾಬ ಹರಕುಣೆಇ ಇವರ ಅಳಿಯ ಮಹ್ಮದ ಅಬ್ಜಲ್ ಅಲ್ಲಾಭಕ್ಷ ಮುಲ್ಲಾ ವಯಾ 06 ವರ್ಷ ಸಾ!! ಮಂಟೂರ ಇತನಿಗೆ ಗಮನಿಸದೇ ನಡೆಯಿಸಿ ಆತನ ಮೇಲೆ ಹಾಯಿಸಿ ಡಿಕ್ಕಿ ಮಾಡಿ ಅಪಗಾತಪಡಿಸಿ ಬಾರಿ ಗಾಯಪಡಿಸಿ ಮರಣಪಡಿಸಿ ಘಟನೆಯ ಸಂಗತಿಯನ್ನು ತಿಳಿಸದೇ ಗಾಡಿಯನ್ನು ಹಾಗೇ ನಡೆಯಿಸಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 150/2017 ಕಲಂ 279, 304(ಎ) ವಾಹನ ಕಾಯ್ದೆ 134,187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.