ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, July 9, 2017

CRIME INCIDENTS 09-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 09/07/2017 ರಂದು ವರದಿಯಾದ ಪ್ರಕರಣಗಳು

1 ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕವಲಗೇರಿ ಗ್ರಾಮದ ಬಸ್ಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲ  ಆರೋಪಿತರಾದ 1.ಬಾಬುಸಾಬ ಚಂದನಮಟ್ಟಿ ಹಾಗೂ ಇನ್ನೂ 12 ಜನರು ಕೊಡಿಕೊಂಡು ತಮ್ಮ ತಮ್ಮ ಸ್ವಂತ ಪಾಯ್ದೆಗೋಸ್ಕರ  ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಜೂಜಾಟವನ್ನು ಆಡುತ್ತಿದ್ದಾಗ  ಸಿಕ್ಕಿದ್ದು ಅವರಿಂದ ರೂ 7.400-00 ರೂಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 143/2017 ಕಲಂ 87 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
 
2.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಿರೆಹೊನ್ನಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಹತ್ತೀರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಚೆನ್ನಪ್ಪ ಮಹಾದೇವಪ್ಪ ಜಮ್ಮಿಹಾಳ 70 ವರ್ಷ ಸಾ..ಹಿರೆಹೊನ್ನಳ್ಳಿ ಇವನು ತನ್ನ ಬಳಿ ಯಾವುದೆ ಪಾಸು ವ ಪರ್ಮೀಟ ಇಲ್ಲದೆ ಅನಧಿಕೃತವಾಗಿ  ಒಟ್ಟು 2900/- ರೂ ಕಿಮ್ಮತ್ತಿನ 1]Bagpiper whiskey 180 ML 15 tetra pockets 2]Original choice whisky 180 ML 10 Tetra pockets 3]Old tavern whisky 180 ML 16 Tetra pockets ರೂ 2.900-00 ಮೌಲ್ಯದ ವಸ್ತುಗಳನ್ನು ವಶಪಸಿಕೊಂಡಿದ್ದು ಈ ಕುರಿತು ಕಲಘಟಿಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 239/2017 ಕಲಂ ಅಬಕಾರಿ ಕಾಯ್ದೆ 32.34 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.
 
3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ಹಿರೇಹೊನ್ನಳ್ಳಿ ಗ್ರಾಮದ ದೂಳಿಕೋಪ್ಪಕ್ಕೆ ಹೋಗುವ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇದರಲ್ಲಿ ಆರೋಪಿತನಾದ  ಚನ್ನಬಸಪ್ಪ ಶಿವಪ್ಪ ರೇವಡಿಹಾಳ 46 ವರ್ಷ ಸಾ: ಹಿರೆಹೋನ್ನಳ್ಳಿ ಇತನು  ತನ್ನ ಸ್ವಂತ ಪಾಯ್ದೆ ಗೋಸ್ಕರ ಯಾವುದೇ ಪಾಸು ವ ಪರ್ಮಿಟ್ ಇಲ್ಲದೇ ಅನದೀಕೃತವಾಗಿ 90 ಎಮ್.ಎಲ್ ದ 90 ಓರಿಜೀನಲ್ ಚಾಚ್ಸ್ ವೀಕ್ಸಿ ಟೆಟ್ರಾ ಪಾಕೇಟುಗಳು ಅವುಗಳ ಅಕಿ; 2530/- ರೂ ಗಳ ಕಿಮ್ಮತಿನವುಗಳನ್ನು ಒಂದು ರಟ್ಟಿನ ಬಾಕ್ಸ್ ದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ರೊಖ ರಕಂ 155/- ರೂ ಹಾಗೂ ಮಾಲ  ಸಮೇತ  ಸಿಕ್ಕಿದ್ದು ಈ ಕುರಿತು ಈ ಕುರಿತು ಕಲಘಟಿಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 240/2017 ಕಲಂ ಅಬಕಾರಿ ಕಾಯ್ದೆ 32.34 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕಟ್ನೂರ ಗ್ರಾಮದ ಮೃತ  ಶ್ರೀಮತಿ ಹೇಮಾವತಿ ಕೋಂ ಭರಮರಡ್ಡಿ ಶಿರಗುಪ್ಪಿ ವಯಾ. 35 ವರ್ಷ ಸಾ. ಕಟ್ನೂರ ಇವಳು ತನ್ನ ಗಂಡ ಎರಡು ತಿಂಗಳಿಂದ ಪೋಟಗಿ ಹಣವನ್ನು ಕೊಡಲಿಲ್ಲವಾದ್ದರಿಂದ ಜೀವನ ನಡೆಸುವುದು ಹೇಗೆ ಅಂತ ಮಾನಸಿಕ  ಮಾಡಿಕೊಂಡು, ಮನೆಯಲ್ಲಿ ತನ್ನಷ್ಟಕ್ಕೆ ತಾನೇ ಉಟ್ಟ ಸೀರೆಗೆ ಬೆಂಕಿ ಹಚ್ಚಿಕೊಂಡು, ಸುಟ್ಟ ಗಾಯಗಳಾಗಿ, ಉಪಚಾರ ಕುರಿತು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ, ಉಪಚಾರ ಫಲಿಸದೇ ದಿನಾಂಕ: 08-07-2017 ರಂದು ರಾತ್ರಿ 9-00 ಗಂಟೆಗೆ ಮೃತಪಟ್ಟಿದ್ದು  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 26/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.