ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, July 13, 2017

CRIME INCIDENTS 13-07-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 13/07/2017 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ ಗ್ರಾಮದ ಹತ್ತಿರ ಆರೋಪಿತರಾದ ರಾಯಸಾಬ ಕತ್ರಘಡ 2.ಆನಂದ ಕಲಾಲ 3 ಆನಂದ ಚನ್ನಪ್ಪಾ ಕಲಾಲ ಇವರು  ತಮ್ಮ ಸ್ವಂತ ಫಾಯಿದೆಗೋಸ್ಕರ ಯಾವುದೆ ಪಾಸ್ ವ ಪರ್ಮಿಟ್ ಇಲ್ಲದೆ 239 ಓರಿಜಿನಲ್ ಚಾಯ್ಸ ವಿಸ್ಕಿ ತುಂಬಿದ 90 ಎಮ್ ಎಲ್ ದ ಟೆಟ್ರಾ ಪಾಕೇಟ್ ಗಳ ಸಮೇತ ಮಾರಾಟ ಮಾಡಲು ಹೋಗುತ್ತಿದ್ದಾಗ  ಸಿಕ್ಕಿದ್ದು ಇರುತ್ತದೆ ಈ ಕುರಿತು ನವಲಗುಂದ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 90/2017 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹಾರೋಬೆಳವಡಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ  ಆರೋಪಿತರಾದ 1.ಮಂಜುನಾಥ ಹೊಸಮನಿ 2.ಕಲ್ಲಪ್ಪಾ ಹುಲ್ಲಣ್ಣವರ  ಇವರು ತನ್ನ ಸ್ವಂತ ಪಾಯ್ದೆಗೋಸ್ಕರ  01 ರೂಪಾಯಿಗೆ 80 ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಸಾರ್ವಜನಿಕರಿಗೆ ಕೊಡುತ್ತೇನೆ ಅಂತಾ ಹೇಳಿ ಹಣ ಇಸಿದುಕೊಂಡು  ಕಲ್ಯಾಣಿ ಮಟಕಾ ಜೂಜಾಟವನ್ನು ಆಡುಸುತ್ತಿದ್ದಾಗ ಸಿಕ್ಕಿದ್ದು  ಅವರಿಂದ ರೂ 1.190 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್  ಠಾಣೆಯಲ್ಲಿ ಗುನ್ನಾನಂ 145/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಯರಿಕೊಪ್ಪ ಗ್ರಾಮದ ಹೈವೆ ಪಕ್ಕದಲ್ಲಿರುವ ವಡಾಪೋನ ಹಾಗೂ ಏರಟೇಲ ಟಾವರದಲ್ಲಿನ ಸುಮಾರು 20,000 ರೂ ಕಿಮ್ಮತ್ತಿನ ಅಮರರಾಜ ಕಂಪನಿಯ ಒಟ್ಟು 24 ಬ್ಯಾಟರಿಗಳು 2VC ವೋಲ್ಟೇಜನವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 146/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಗದಗ ರಸ್ತೆ ಮೇಲೆ ಶಿರಗುಪ್ಪಿ ಹತ್ತಿರ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-26-ಎಫ್-670 ನೇದ್ದರ ಚಾಲಕನು ತನ್ನ ಬಸ್ ನ್ನು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ರಸ್ತೆಯ ಎಡಗಡೆ ಸೈಡ ಹಿಡಿದು ಹೊರಟಿದ್ದ ಪಿರ್ಯಾದಿಯ ಮೋಟರ ಸೈಕಲ್ ನಂ. ಕೆಎ-63-ಇ-1071 ನೇದ್ದನ್ನು ಓವರಟೇಕ್ ಮಾಡಿ, ಯಾವುದೇ ಸಿಗ್ನಲ್ ವಗೈರೆ ತೋರಿಸದೇ, ತಕ್ಷಣ ಬ್ರೇಕ್ ಹಾಕಿ ಬಸ್ ನ ಹಿಂದಿನ ಎಡಭಾಗ ಇವರ ಪಿರ್ಯಾದಿಯ ಮೋಟರ ಸೈಕಲನ ಬಲಗಡೆ ಹ್ಯಾಂಡಲ್ ಗೆ ಡಿಕ್ಕಿ ಆಗುವಂತೆ ಮಾಡಿ, ಅಪಘಾತಪಡಿಸಿ, ಪಿರ್ಯಾದಿ ಸೊಹೇಲ್ ಕುತ್ಬುದ್ದಿನ ಶಿವಳ್ಳಿ ಇವನಿಗೆ ತೀವ್ರ ಗಾಯಪಡಿಸಿ ಮತ್ತು ಮೋಟರ ಸೈಕಲ್ ಹಿಂಬದಿ ಸವಾರ ಉಮೇರಅಹ್ಮದ ಅಬ್ದುಲ್ಲಾ ಬ್ಯಾಳಿ ಇವನಿಗೆ ಸಾದಾ ಗಾಯಪಡಿಸಿ, ಅಪಘಾತದ ವಿಷಯವನ್ನು ಠಾಣೆಗೆ ತಿಳಿಸದೇ ಹಾಗೇ ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 159/2017 ಕಲಂ 279.337.338.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

5.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ  ಗುನ್ನಾನಂ 84/2017 ಕಲಂ 107 ನೇದ್ದರಲ್ಲ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ ಶಹರದ ಅಂಬೇಡ್ಕರ ನಗರ ಬಸವರಾಜ ದೊಡ್ಡಮನಿ ಇವರ ಮನೆಯಲ್ಲಿಂದ ಕಾಣೆಯಾದ ಸುಮಿತ್ರಾ ಕೋಂ ಬಸವರಾಜ ದೊಡ್ಡಮನಿ. ವಯಾ: 28 ವರ್ಷ, ಇವಳು ಊರಲ್ಲಿ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು ಇದೂವರೆಗೂ ಪರ್ತ ಮನೆಗೆ ಬಾರದೇ ಎಲ್ಲಿಯೋ ಕಾಣೆಯಾಗಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 111/2017 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

7. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಕೊಂಡಿಕೊಪ್ಪ ಗ್ರಾಮದ ಹನುಮಪ್ಪಾ ಪೂಜಾರ 4 ಜನರಿಗೆ ಸುಮಾರು 6 ವರ್ಷಗಳ ಹಿಂದೆಯೇ ಮಾರಾಟ ಮಾಡುವ ಕಾಲಕ್ಕೆ ಇದರಲ್ಲಿಯ ಇವರ  ಸಾಕ್ಷಿ ಅಂತಾ ಸಹಿ ಹಾಕಿದ್ದು ಆರೋಪಿತನಾದ  ಬಸವತಂಪ್ಪಾ   ತೋಪ್ಪಣ್ಣವರ ಕೊಂಡಿಕೊಪ್ಪ ಗ್ರಾಮದ ಪಿರ್ಯಾದಿಯ ಮನೆಯ ಮುಂದೆ ಬಂದು ನಾವು ಮಾರಾಟ ಮಾಡಿದ ಜಮೀನದ ಹಣ ನಮಗೆ ಇನ್ನೂ ಮುಟ್ಟಿರುವುದಿಲ್ಲಾ ನೀವು ನಡುವೆ ರೊಕ್ಕ ತಿಂದು ಸಾಕ್ಷಿಯಾಗಿ ಸಹಿ ಮಾಡಿದ್ದಿರಿ ಅಂತಾ ಅವ್ಯಾಚ್ಯ ಶಬ್ದಗಳಿಂದ ಬೈದಾಡುತ್ತಿದ್ದಾಗ ಯಾಕೇ ಬೈದಾಡುತ್ತಿರಿ ಅಂತಾ ಪಿರ್ಯಾದಿಯ ಹೆಂಡತಿ ಕೇಳಲು ಅವಳಿಗೆ ಬಕೇಟದಿಂದ ಮುಖಕ್ಕೆ ಹೊಡೆದು ದುಖಾಪಾತ ಪಡಿಸಿ, ಬಡಿಸಲು ಅಂತಾ ಬಂದ ಪಿರ್ಯಾದಿಗೂ ಸಹಿತ ಕೈಯಿಂದ ಹೊಡಿ ಬಡಿ ಮಾಡಿ ಅವ್ಯಾಚ್ಯ ಬೈದಾಡಿ ಜೀವಧ ಧಮಕಿ ಹಾಕಿದ್ದು ಇರುತ್ತದೆ  ಈ  ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 102/2017 ಕಲಂ 323.324.504.506.ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.