ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, July 16, 2017

CRIME INCIDENTS 16-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 16/07/2017 ರಂದು ವರದಿಯಾದ ಪ್ರಕರಣಗಳು

 1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ನವಲಗುಂದ ರಸ್ತೆ ಮೇಲೆ ಕುಸುಗಲ್ಲ ಗ್ರಾಮದ ಡಾಬಾಡ ಹತ್ತಿರ ಆರೋಪಿತನಾದ ಮಂಜುನಾಥ ಹುಲಗಪ್ಪ ಮಾದರ ಸಾ!! ಚಳ್ಳಮಟ್ಟಿ ಇತನು ಲಾರಿ ನಂಬರ ಕೆಎ-03/ಸಿ-3610 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ನವಲಗುಂದ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಗಾಡಿ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಎಡ ಬದಿಗೆ ಎಡ ಹೋಳು ಮಗ್ಗಲಾಗಿ ಕೆಡವಿ ಅಪಗಾತಪಡಿಸಿ ಲಾರಿಯಲ್ಲಿದ್ದ ಪಿರ್ಯಾಧಿ ಅಡಿವೆಪ್ಪ ನಿಂಗಪ್ಪ ನಾಯ್ಕನೂರ ಸಾ!! ಬೋಗಾನೂರ ತಾ!! ನವಲಗುಂದ, ಹಾಗೂ ವಾಹನದಲ್ಲಿದ್ದ ಫಕ್ಕೀರಪ್ಪ ಹುಲಗಪ್ಪ ಹರಿಜನ ಸಾ!! ಚಳ್ಳಮಟ್ಟಿ, ಸಂಜೀವ ಮಂಜುನಾಥ ಮಾದರ ಸಾ!! ಚಳ್ಳಮಟ್ಟಿ, ಕನಕಪ್ಪ ಬಸಪ್ಪ ಮಾದರ ಸಾ!! ಚಳ್ಳಮಟ್ಟಿ, ರಾಮಪ್ಪ ಬಸವಣ್ಣೆಪ್ಪ ನಡಟ್ಟಿ ಸಾ!! ಚನ್ನಾಪೂರ, ಶಿವಪ್ಪ ನಿಂಗಪ್ಪ ನಡೂರ ಸಾ!! ಚನ್ನಾಪೂರ ಇವರುಗಳಿಗೆ ಸಾಧಾ ವ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 161/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಬ್ಯಾಹಟ್ಟಿ ಗ್ರಾಮದ ಅಂಬೇಡ್ಕರ ನಗರದಲ್ಲಿರುವ ಹನ್ನಮವ್ಚ ನಂದಿಬಿಸ್ತಿನವರ ಇವರ ಆಸ್ತಿ ನಂ. 1518 ನೇದ್ದನ್ನು ಅಂಬೇಡ್ಕರ ಭವನಕ್ಕೆ ಬಿಟ್ಟುಕೊಡಬೇಕೆಂದು, ಪಿರ್ಯಾದಿ ಹಾಗೂ ಆರೋಪಿತರ ನಡುವೆ ಮನಸ್ಸತಾಪದ ಕಾರಣ ಬ್ಯಾಹಟ್ಟಿ ಗ್ರಾಮದ ಅಂಬೇಡ್ಕರ ನಗರದಲ್ಲಿರುವ ಪಿರ್ಯಾದಿಯ ಬಾಬತ್ತ ಆಸ್ತಿ ನಂ. 1518 ನೇದ್ದರಲ್ಲಿ ಆರೋಪಿರಾದ  1] ಚಿದಾನಂದ ಈಶ್ವರಪ್ಪ ಮೂಲಿಮನಿ 2] ರೇಣುಕಾ ಕೋಂ ವಿರುಪಾಕ್ಷಪ್ಪ ಕಲ್ಲಮ್ಮನವರ 3] ಸೋಮಪ್ಪ ಲಕ್ಷ್ಮಪ್ಪ ದಂಡಿನ 4] ಅನಸವ್ವ ಕೋಂ ಆನಂದ ಕಾಳಿ 5] ಬಸವ್ವ ತಂದೆ ಗೋವಿಂದಪ್ಪ ಪಾತ್ರದ 6] ಸಂಜು ಫಕ್ಕಿರಪ್ಪ ಮೇಲಿನಮನಿ 7] ಮಂಜುನಾಥ ಮುತ್ತಪ್ಪ ಅಳಗವಾಡಿ 8] ಮಹಾಂತೇಶ ಮುತ್ತಪ್ಪ ಅಳಗವಾಡಿ 9] ಗಿರಿಜವ್ವ ಕೋಂ ದ್ಯಾಮಣ್ಣ ಕಾಳಿ 10] ಪ್ರೇಮವ್ವ ಕೋಂ ನೀಲಪ್ಪ ಮೂಲಿಮನಿ 11] ಭರಮವ್ವ ಕೋಂ ಫಕ್ಕಿರಪ್ಪ ಗುಡಿಮನಿ ಸಾ. ಎಲ್ಲರೂ ಬ್ಯಾಹಟ್ಟಿ ಅಂಬೇಡ್ಕರ ನಗರ ಎಲ್ಲರೂ ಕೂಡಿಕೊಂಡು, ಗೈರ ಕಾಯ್ದೆಶೀರ ಮಂಡಳಿಯಾಗಿ, ತಮ್ಮ ಸಮಾನ ಉದ್ದೇಶ ಸಾಧಿಸುವ ಸಲುವಾಗಿ, ಪಿರ್ಯಾದಿ ಹಾಗೂ ಸಾಕ್ಷಿದಾರರು ಮನೆಯ ಬುನಾದಿ ತೆಗೆಯುವಾಗ, ನೇದ್ದು ಖುಲ್ಲಾ ಜಾಗೆಯಲ್ಲಿ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿ ಹಾಗೂ ಸಾಕ್ಷಿದಾರರಿಗೆ ಅವಾಚ್ಯ ಬೈದಾಡಿ, ಕಪಾಳಕ್ಕೆ ಹೊಡೆದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 162/2017  ಕಲಂ 506.504.143.147.149.447.323.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.