ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, August 19, 2017

CRIME INCIDENTS 19-08-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 19/08/2017 ರಂದು ವರದಿಯಾದ ಪ್ರಕರಣಗಳು

1 ಅಣ್ಣಿಗೇರಿ  ಪೊಲೀಸ್ ಠಾಣಾ ವ್ಯಾಪ್ತಿಯ: ಬಲ್ಲರವಾಡ ಗ್ರಾಮದ ಮಾರುತೇಶ್ವರ ಯುವಕ ಮಂಡಳಕ್ಕೆ ಹಾಕಿದ ಚಾವಿಯ ಮೇಲೆ ಇನ್ನೊಂದು ಚಾವಿಯನ್ನು ಹಾಕಿದ್ದಕ್ಕೆ  ಹನುಮರೆಡ್ಡಿ ಇನಾಮತಿ  ಇವರಿಗೆ ತಂಟೆ ಮಾಡಿದ್ದು ಈ ಬಗ್ಗೆ ಕೋರ್ಟನಿಂದ ನೋಟಿಸ್ ಸದರಿಯವರಿಗೆ ನೋಟಿಸನ್ನು ಕಳುಹಿಸಿದ್ದು ಇದ್ದು ಇದೇ ವಿಷಯವಾಗಿ ಎಲ್ಲ ಆರೋಪಿರವಾದ 1.ಮಹಾದೇವಪ್ಪ ಶಾನವಾಡ ಹಾಗೂ ಇನ್ನೂ  24 ಜನರು ಕೊಡಿಕೊಂಡು ಪಿರ್ಯಾದಿಗೆ ತರುಬಿ ಲೇ ಅವಾಚ್ಯ  ಬೈದಾಡಿ ನಮ್ಮ ಮೇಲೆ ಕೋಟಱಗೆ ಹೋಗಿರುತ್ತಿ ಅಂತಾ ಬಾಯಿಗೆ ಬಂದಂತೆ ಎಲ್ಲರೂ ಕೂಡಿಕೊಂಡು ಕೈಯಿಂದ ಹೊಡಿ ಬಡಿ ಮಾಡಿ ಜೀವಧ ಬಬೆಧರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ:113/2017 ಕಲಂ 143.147.323.341.504.506.149 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಯರಿಕೊಪ್ಪ ಗ್ರಾಮದ ಸಮೀಪ ಜೋಗೆಲ್ಲಾಪೂರ ಬ್ರೀಡ್ಜ್ ಹತ್ತಿರ ಮೋಟರ್ ಸೈಕಲ್ ನಂ ಕೆಎ-25-ಈಎಕ್ಸ್-5503 ನೇದರ ಚಾಲಕನು ತನ್ನ ಮೋಟರ್ ಸೈಕಲನ್ನು ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಮೋಟರ್ ಸೈಕಲ ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಮೇಲೆ ಕೆಡವಿ  ತನಗೆ ಹಾಗೂ ಮೋಟರ್ ಸೈಕಲ ಹಿಂದೆ ಕುಳಿತ ಮಂಜುನಾಥ ಚಾಕಲಂಬಿ ಇವರಿಗೆ ಗಾಯಪಡಿಸಿದ್ದಲ್ಲದೇ 108 ಅಂಬುಲೈನ್ಸದಲ್ಲಿ ಉಪಚಾರಕ್ಕೆ ಅಂತಾ ಧಾರವಾಡಕ್ಕೆ ಬರುತ್ತಿರುವಾಗ ಮಾರ್ಗ ಮದ್ಯದಲ್ಲಿಯೇ ಮೃತಪಟ್ಟದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣಯಲ್ಲಿ ಗುನ್ನಾನಂ 174/2017 ಕಲಂ 279.337.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಂಡಲಗಟ್ಟಿ ಗ್ರಾಮದಲ್ಲಿ ಮೃತನು ಲಾರಿ ಡ್ರೈವರ ಕೆಲಸ ಮಾಡುತ್ತಿದ್ದು ಊರಲ್ಲಿ ಇರದೇ ಊರಿಗೆ  1-2 ಸಲ ಬಂದು ಹೋಗಿ ಮಾಡುತ್ತಾ ತಾನು ದುಡಿದ ಹಣ ಹಾಳು ಮಾಡಿಕೊಂಡು ತನ್ನ ಜೀವನದಲ್ಲಿ ಬೇಸರಗೊಂಡು  ಯಾವುದೋ ವಿಷವನ್ನು ಸೇವನೆ ಮಾಡಿ ಬೆಂಡಲಗಟ್ಟಿ ಗ್ರಾಮದ ತನ್ನ ಅಕ್ಕ ಬಾಯಕ್ಕನ ಮನೆಗೆ ಹೋಗಿ ತ್ರಾಸ ಮಾಡಿಕೊಳ್ಳುವಾಗ ಮನೆಯ ಜನರು ಹಾಗೂ ಕೂಡಿದ ಜನರು 108 ಅಂಬ್ಯುಲೇನ್ಸದಲ್ಲಿ ಕಿಮ್ಸ್ ಆಸ್ಪತ್ರೆ  ಹುಬ್ಬಳ್ಳಿಗೆ ಹೋಗಿ ದಾಖಲ್ಮಾಡಿದವನು ಉಪಚಾರ ಫಲಿಸದೇ ದಿ: 18-08-2017 ರಂದು  ಗಂಟೆಗೆ ಮೃತಪಟ್ಟಿದ್ದು ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ  ಪೊಲೀಸ್ ಠಾಣೆಯಲ್ಲಿ ಯುಡಿನಂ 49/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

Friday, August 18, 2017

CRIME INCIDENTS 18-08-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 18-08-2017 ರಂದು ವರದಿಯಾದ ಪ್ರಕರಣಗಳು

1)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 08-09-2017 ರಂದು ಆರೋಪಿತರು ವಿಶ್ವನಾಥ ರಾಯನಗೌಡ ಪಾಟೀಲ, ರಾಯನಗೌಡ ೆಸ್.ಪಾಟೀಲ, ಗೀತಾ ರಾಯನಗೌಡ ಪಾಟೀಲ, ವಿಜಯಲಕ್ಷ್ಮಿ ಆಂಜನೇಯ,   ಆಂಜನೇಯ ಎಂ. ಇವರೆಲ್ಲರೂ ಪಿರ್ಯಾದಿ ಪಕ್ಕಿರಪ್ಪ ಪಾಟೀಲ್ ಇವನಿಗೆ ಮೋಸ ಮಾಡುವ ಉದ್ದೇಶದಿಂದ ಸಂಚು ರೂಪಿಸಿ ಕಲಘಟಗಿ ಶಹರದ ಪಾಟೀಲ ಡೆವಲಾಪರ್ಸ ಕಛೇರಿಯಲ್ಲಿ ಪಿರ್ಯಾದಿ ಕಡೆಯಿಂದ ರೋಖ ಹಣ 6.00.000/-ರೂಗಳನ್ನು ಆರ್ ಟಿಜಿಎಸ್ ಮುಖಾಂತರ ಪಡೆದುಕೊಂಡು ಹಣಕ್ಕೆ ಪ್ರತಿ ತಿಂಗಳು 50.000/- ರೂಗಳನ್ನು ಬಡ್ಡಿ ಹಣ ನೀಡುವದಾಗಿ ಹೇಳಿ ನಂಬಿಕೆ ಹುಟ್ಟಿಸಿ ಹಣವನ್ನು ಮರಳಿ ನೀಡದೇ ಪಿರ್ಯಾದಿದಾರನಿಗೆ ಮೋಸ ವ ನಂಬಿಕೆ ದ್ರೋಹ ಮಾಡಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರದಿರುತ್ತದೆ.

2)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 15-05-2017 ರಂದು ವೇಳೆ ಮಿಶ್ರಿಕೋಟಿ ಗ್ರಾಮದ ಪಿರ್ಯಾದಿ ಮನೆಯಿಂದ ಇತನ ಹೆಂಡತಿ ಶೈಲಾ ಕೋಂ. ಈಶ್ವರ ಕುರಾಡಿ, 25 ವರ್ಷ ಸಾ: ಮಿಶ್ರಿಕೋಟಿ ಇವಳಿಗೆ ಆರೋಪಿ ಹಾಜಿಸಾಬ @ ಹಾಜಿಮಲ್ಲಿಂಗ್ ತಂದೆ ಇಮಾಮಸಾಬ ದಡಾಕಿ ಸಾ: ಮಿಶ್ರಿಕೋಟಿ ಇತನು ಯಾವುದೋ ಉದ್ದೇಶಕ್ಕೆ ಅಪಹರಣ ಮಾಡಿಕೊಂಡು ಹೋಗಿದ್ದಾನೆ ಎಂದು ದೂರು ಇರುವುದರಿಂದ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರದಿರುತ್ತದೆ.

3)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 14-02-2012 ಮತ್ತು 09-10-2012 ರಂದು ತಾವರಗೇರಿ ಗ್ರಾಮದಲ್ಲಿ ಮಹಾರಾಷ್ಟ ರಾಜ್ಯದ ಪುಣೆ ಶಹರದ ಸಮೃದ್ದಿ ಜೀವನ ಪುಡ್ಸ ಇಂಡಿಯಾ ನಿಯಮಿತ ಸಂಸ್ಥೆಯಲ್ಲಿ ಫಿರ್ಯಾದಿ ಶಿವಾನಂದ ಶಂಕರಪ್ಪ ಕಾಮದೆನು ಇತನು ತೊಡಗಿಸಿದ  ರೂ 18000/- ಮತ್ತು ಸದರಿ ಕ್ಯಾಸ್ ಸರ್ಟಿಫಿಕೇಟ್ ಕರಾರುಗಳ ಅನ್ವಯ ಪ್ರತಿ ತಿಂಗಳ ರೂ. 500/- ದಂತೆ ಕಂತಿನ ಹಣವನ್ನು ಜಮಾ ಮಾಡಿಸಿಕೊಂಡು ಅವಧಿ ಪೂರ್ಣಗೊಂಡ ನಂತರ ಫಿ:ದಿಗೆ  ರೂ.69450  ಮತ್ತು ಅದರಂತೆ ಪ್ರಾಸಪರ್ಟಿ ಅಗ್ರೋ ಇಂಡಿಯಾ ಲಿ: ಸಂಸ್ಥೆಯಲ್ಲಿ ತೊಡಗಿಸಿದ ರೂ 10,000/-  ಗಳನ್ನು ಅವಧಿ ನಂತರ ರೂ. 50,000/- ಗಳನ್ನು ಫಿರ್ಯಾದಿಗೆ  ಒಟ್ಟು 1,19,450/- ರೂಗಳನ್ನು ಕೊಡದೇ ಆರೋಪಿ ಸೆ ನಂ. 1 ರಿಂದ 16 ನೇದವರು ಮಿಲಾಪಿಯಾಗಿ ಮೋಸ ವ ನಂಬಿಕೆ ದ್ರೋಹವೆಸಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರದಿರುತ್ತದೆ.

4)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಮೃತ ತಿಪ್ಪಣ್ಣ ತಂದೆ ಬಸಪ್ಪ ಚಬ್ಬಿ ವಯಾ; 55 ವರ್ಷ ಸಾ: ಹುಲ್ಲಂಬಿ ಈತನು ತುಮರಿಕೊಪ್ಪದ ಓವಸರ್ಿಸ್ ಬ್ಯಾಂಕದಲ್ಲಿ ಬೆಳೆ ಸಾಲ 74,967/-ರೂ ಹಾಗೂ ಮನೆ ಕಟ್ಟಿಸಲು ಮತ್ತು ಯಂತ್ರೋಪಕರಣ ಖರೀದಿಸಲು 1,43,973/-ರೂ  ಸಾಲ ಮಾಡಿದ್ದು, ಹಾಗೂ ಒಂದು ವರ್ಷದ ಹಿಂದೆ ತನ್ನ 2 ಆಕಳುಗಳು ಹಾವು ಕಡಿದು ಮೃತಪಟ್ಟಿದ್ದರಿಂದ ಲುಕ್ಸಾನ್ ಆಗಿ ಮಾಡಿದ ಸಾಲವು ಹರಿಯದೇ ಇರುವುದರಿಂದ ಮಳೆ ಬೆಳೆ ಸರಿಯಾಗಿ ಬಾರದ್ದರಿಂದ ಸಾಲ ಹಾಗೇ ಉಳಿಯಿತು ಅಂತಾ ಚಿಂತೆ ಮಾಡುತ್ತ ಇದ್ದವನು ದಿನಾಂಕ: 18/08/2017 ರಂದು ಮುಂಜಾನೆ 11.00 ಗಂಟೆಯ ಸುಮಾರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಮುಂಚಿ ಬಾಗಿಲ ಹಾಕಿಕೊಂಡು ಮೈ ಮೇಲೆ ಮನೆಯಲ್ಲಿದ್ದ ಸೀಮೆ ಎಣ್ಣೆಯನ್ನು ಸುರುವಿಕೊಂಡು ಕಡ್ಡಿ ಕೊರೆದುಕೊಂಡು ಬೆಂಕಿ ಹಚ್ಚಿಕೊಂಡು ಸುಟ್ಟ ಗಾಯದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ಯಾರ ಮೇಲೆಯೂ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತ ಮೃತನ ಹೆಂಡತಿ ವರದಿ ಕೊಟ್ಟಿದ್ದರನ್ವಯ, ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

Thursday, August 17, 2017

CRIME INCIDENTS 17-08-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 16/08/2017 ರಂದು ವರದಿಯಾದ ಪ್ರಕರಣಗಳು

1 ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಿಮ್ಮಾಪೂರ  ಗ್ರಾಮದ ಬಸ್ಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತರಾದ 1.ಸದಾನಂದ ಕುಂಬಾರ 2.ಮಲ್ಲಿಕಾಜುಱನ ಹರಿಜನ 3.ಮಂಜುನಾಥ ಶಿರೂರ 4.ಬಸಪ್ಪಾ ಕಮ್ಮಾರ  ಇವರೆಲ್ಲರೂ ತಮ್ಮ ಸ್ವಂತ ಪಾಯ್ದೆಗೋಸ್ಕರ  ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಜೂಜಾಟವನ್ನು ಆಡುತ್ತಿದ್ದಾಗ  ಸಿಕ್ಕಿದ್ದು ಅವರಿಂದ ರೂ 2130-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 171/2017 ಕಲಂ 87 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಿರೇಹೊನ್ನಳ್ಳಿ ಗ್ರಾಮದ ರಾಧಾ ಸ್ವಾಮಿ ಸತ್ಸಂಗ ಬಿಯಾಸ್ ಪ್ರವಚನ ಕೊಠಡಿಯಲ್ಲಿ ಯಾರೋ ಕಳ್ಳರು ಬಾಗಿಲ ಹತ್ತಿರದ ಚಾವಿಯಿಂದ  ಕೀಲಿ ತೆರೆದು ಒಳಪ್ರವೇಶ ಮಾಡಿ ಪ್ರವಚನಕ್ಕೆ ಅಳವಡಿಸಿದ ಒಂದು ಅಂಪ್ಲಿಪೈರ್, ಮೈಕ್, ಪೆನಡ್ರೈವ್ವ ಮೈಕ್ ಸ್ಟಾಂಡ  ಇವುಗಳ ಒಟ್ಟು ಅಕಿ 24.000/- ರೂಗಳ ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 269/2017 ಕಲಂ 454.457.380 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಜಾಂಗ್ರತ ಕ್ರಮವಾಗಿ 107 ಸಿ.ಆರ್ ಪಿ ಸಿ ನೇದ್ದರಲ್ಲಿ ಗುನ್ನಾನಂ 54/2017, 55/2017 ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

4. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮುಜಾಂಗ್ರತ ಕ್ರಮವಾಗಿ 107 ಸಿ.ಆರ್ ಪಿ ಸಿ ನೇದ್ದರಲ್ಲಿ ಗುನ್ನಾನಂ 112/2017, 113/2017, 114/2017, 115/2017  ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

Wednesday, August 16, 2017

CRIME INCIDENTS 16-08-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 16-08-2017 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಮುಂಡಗೋಡ ರಸ್ತೆಯ ಮೇಲೆ ಕಲಘಟಗಿ ಕ್ರಾಸ್ ಹತ್ತೀರ ಟ್ರ್ಯಾಕ್ಟರ ನಂ KA-25-T-4762 ನೇದ್ದರ ಚಾಲಕ ಫಕ್ಕೀರಪ್ಪ ಬಸಪ್ಪ ವಡ್ಡರ, ದಯಾನಂದ ಬೈಲಪ್ಪ ಹಡಪದ ಇವರು ನೆಡೆಸಿಕೊಂಡು ಹೊರಟ ಮೋಟಾರ್ ಸೈಕಲ್ ನಂ KA-25-GU-9854 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ್ ಸೈಕಲದ ಸವಾರರಿಗೆ ಸ್ಥಳದಲ್ಲಿಯೇ ಮರಣಪಡಿಸಿ ನಿಯತ್ರಣ ತಪ್ಪಿ ಕೃಷ್ಣಾವಡ್ಡರ ಇವರಿಗೂ  ಸಹಾ ಡಿಕ್ಕಿ ಮಾಡಿ ಅಪಘಾತಪಡಿಸಿ ಬಲಗಾಲಿಗೆ ಭಾರಿ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 266/2017 ಕಲಂ 279.337.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ಗಂಬ್ಯಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆಸ್ತಿ ನಂ 204, ಇವುಗಳ ಹಳೆ ಆಸ್ತಿ ನಂ 263, 190 ಇದರಲ್ಲಿದ್ದ ಕೆಂಪು ಹಂಚಿನ ಮನೆ ವ ಹಿತ್ತಲು, ಹಾಗು ದುಮ್ಮವಾಡ ಗ್ರಾಮದ ಸರಹದ್ದಿಯಲ್ಲಿ ಬರುವ ಶೇತ್ಕಿ ಜಮೀನು ಸರ್ವೆ  ನಂ 22/1 ಕ್ಷೇತ್ರ 03- ಎಕರೆ 27 ಗುಂಟೆ ನೇದವುಗಳನ್ನು  ಆರೋಪಿತರಾದ 1.ರಾಮಣ್ಣ ತಗಡಿನಮನಿ ಹಾಗೂ ಇನ್ನೂ 12 ಜನರು ಕೂಡಿಕೊಂಡು ಅಜುಱನ ತಗಡಿನಮನಿ ಇತನಿಗೆ  ಯಾವುದೆ ಮಾಹಿತಿ ವ ಒಪ್ಪಿಗೆ ಇಲ್ಲದೆ ಹಕ್ಕನ್ನು ಎತ್ತಿ ಹಾಕುವ ದುರುದ್ದೇಶದಿದೂಂದಿಗೆ ಮಿಲಾಪಿಯಾಗಿ ಖೊಟ್ಟಿ ಸಹಿ ಮಾಡಿಸಿ ಹಾಗು ಖೊಟ್ಟಿ ದಾಖಲಾತಿಗಳನ್ನು ಸೃಷ್ಠೀಸಿ ತಮ್ಮ ಹೆಸರುಗಳನ್ನು ದಾಖಲಿಸಿಕೊಂಡದ್ದು ಇರುತ್ತದೆ ಈ ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 267/2017 ಕಲಂ 466.420.471.464. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಶಹರದ ಹರ್ಷಾ ಎಂಟರಟೇನ್ ಮೆಂಟ್ ಆಫಿಸದಲ್ಲಿ ಆರೋಪಿತರತರಾದ 1] ಸತ್ಯಭೊಧ @ ಹರ್ಷಾ ತಂದೆ ಶ್ರಿನಿವಾಸ ಖಾಸ್ನಿಸ್ & ಇವನ ಸಹೋದರರಾದ 2] ಸಂಜೀವ ಶ್ರಿನಿವಾಸ ಖಾಸ್ನಿಸ್ 3]ಶ್ರಿಕಾಂತ ತಂದೆ ಶ್ರಿನಿವಾಸ ಖಾಸ್ನಿಸ್ ಇವರು ಹರ್ಷಾ ಎಂಟರಟೇನ್ ಮೆಂಟ್  ಆಫಿಸ ಚಾಲು ಮಾಡಿ ಸಾರ್ವಜನಿಕರಿಗೆ ಹಣವನ್ನು ದ್ವಿಗುಣ ಮಾಡಿಕೊಡುತ್ತೆವೆ ಅಂತಾ ಹೇಳಿ ಜನರಿಗೆ ನಂಬಿಸಿ ಸ್ವಲ್ಪ ಭಾಗಶಃ ಹಣವನ್ನು ನೀಡಿ ಬಹಳಷ್ಟು ಹಣ ಸಂಗ್ರಹವಾದ ನಂತರ ಜನರಿಗೆ ತಾನು ಮಾತು ಕೊಟ್ಟಂತೆ ಹಣ ನೀಡದೆ ಸಾರ್ವಜನಿಕರು ಕೊಟ್ಟ ಹಣವನ್ನು ದುರುಪಯೊಪಡಿಸಿಕೊಂಡು ನಂಬಿಕೆ ದ್ರೊಹ ಮಾಡಿ ಪಿರ್ಯಾದಿ ಇಟ್ಟ ಸುಮಾರು 8,50,000/- ರೂ ಹಣವನ್ನು ಮೋಸ ಮಾಡಿದ್ದು, ಇದಲ್ಲದೆ ಇನ್ನು ಅನೇಕ ನೂರಾರು ಜನರಿಂದ ಕೋಟ್ಯಾಂತರ ಹಣವನ್ನು ಇಸಿದುಕೊಂಡು ಕಲಘಟಗಿ ವಿವಧೋದ್ದೆಶ ಸೌಹಾರ್ದ ಸಹಕಾರಿ ನಿಯಮಿತ ಕಲಘಟಗಿಯ ಚೆಕ್ ನೀಡಿ ಮೋಸ ಮಾಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ  ಗುನ್ನಾನಂ 268/2017 ಕಲಂ 419.420.34. ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಗ್ರಾಮದ ಮೃತ ಚನ್ನಪ್ಪ ಯಲ್ಲಪ್ಪ ಯಮನೂರು ವಯಾ-43 ವೆರ್ಷ ಸಾ!! ಅಣ್ಣಿಗೇರಿ ತಾ!! ನವಲಗುಂದ ಈತನು ಅಲ್ಲಲ್ಲಿ ಕೈಗಡ ಸಾಲವನ್ನು ಮಾಡಿದ್ದು ಅಲ್ಲದೇ ಇದರಲ್ಲಿಯ ಪಿರ್ಯಾದಿ ಮಹಿಳಾ ಸಂಘದಲ್ಲಿ ಸಾಲ ಮಾಡಿ ಲಾವಣಿ ತರೀಕ ಹೊಲವನ್ನು ಮಾಡಿದ್ದು ಮಳೆ ಬಾರದೇ ಬೆಳೆಯು ಬಾರದೇ ಇದ್ದುದರಿಂದ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಅಂತಾ ಪಿರ್ಯಾಧಿ ನೀಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 12/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, August 15, 2017

CRIME INCIDENTS 15-08-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 15/08/2017 ರಂದು ವರದಿಯಾದ ಪ್ರಕರಣಗಳು

1 ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಗರಗ ಎಸ್ ಎಲ್ ಎನ್ ಫ್ಯಾಕ್ಟರಿ ಹತ್ತಿರ  ಮಲ್ಲಪ್ಪ ಜೈನರ  ವಯಾಃ 38 ವರ್ಷ. ಸಾಃ ತಡಕೋಡ ಇವನು ತಾನು ನಡೆಸುತ್ತಿದ್ದ ಮೋಟಾರ ಸೈಕಲ್ ನಂಬರಃ KA25/ET/1280 ನೇದ್ದನ್ನು ಧಾರವಾಡ ಕಡೆಯಿಂದ ಗರಗ ಕಡೆಗೆ ಅತೀವೇಗ ವ ನಿಸ್ಕಾಳಜಿತನದಿಂದ ಮತ್ತು ಮಾನವೀಯ ಪ್ರಾಣಕ್ಕೆ ಅಪಾಯಕರ ರೀತಿಯಲ್ಲಿ ನಡೆಸಿಕೊಂಡು ಬಂದು ಗರಗ ಎಸ್.ಎಲ್.ಎನ್. ಪ್ಯಾಕ್ಟರಿಯ ಹತ್ತಿರ ತನ್ನಷ್ಟಕ್ಕೆ ತಾನೆ ಸ್ಕಿಡ್ ಮಾಡಿ ಕೆಡವಿ ಅಪಘಾತ ಪಡಿಸಿ ತನ್ನ ತಲೆಗೆ ಬಾರಿ ಗಾಯಪಡಿಸಿಕೊಂಡು  ಸ್ಥಳದಲ್ಲಿಯೇ ಮರಣಹೊಂದಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 111/2017 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ :ಕಲ್ಲೂರ ಗ್ರಾಮದ ಮೃತ  ಬಸಪ್ಪ.ತಂದೆ ಬೈಲಪ್ಪ.ಹಡಪದ.ವಯಾ-32 ವರ್ಷ ಇತನಿಗೆ ಎರಡ್ಮೂರ ತಿಂಗಳಿಂದಾ ಮಾನಸಿಕ ಅಸ್ತವ್ಯಸ್ತನಾಗಿ ಅವನಿಗೆ ಧಾರವಾಡ ಮಾನಸಿಕ ಆಸ್ಪತ್ರೆಯಲ್ಲಿ ತೋರಿಸಿ ಉಪಚಾರ ಪಡಿಸಿದರೂ ಆರಾಮವಾಗದೇ ಇದ್ದುದ್ದರಿಂದ ಈ ದಿವಸ ದಿನಾಂಕ:15-08-2017 ರಂದು ಮುಂಜಾನೆ-08-00 ರಿಂದ 9-00 ಗಂಟೆಯ ನಡುವಿನ ಅವಧಿಯಲ್ಲಿ ತನಗಿದ್ದ ಮಾನಸಿಕ ಕಾಯಿಲೆಯಿಂದ ತನ್ನ ತೊಟದಲ್ಲಿಯ ಮಾವಿನಗಿಡಕ್ಕೆ ಹಗ್ಗವನ್ನು ಕಟ್ಟಿಕೊಂಡು ತನ್ನಷ್ಟಕ್ಕೆ ತಾನೇ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 35/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.