ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, September 21, 2017

CRIME INCIDENTS 21-09-2017

ದಿನಾಂಕ 21-09-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನರೇಂದ್ರ ಗ್ರಾಮದ ಮಂಗಳಗಟ್ಟಿ ರಸ್ತೆ  ಹತ್ತಿರ ಆರೋಪಿನಾದ ಮುಕ್ತಮಸಾಬ ನಧಾಫ ಇವನು ಸರಕಾರದಿಂದ ಮದ್ಯದ ಟೆಟ್ರಾ ಪಾಕೀಟಗಳನ್ನು ಸಾಗಾಟ ವ ಮಾರಾಟ ಮಾಡಲು ಯಾವುದೇ ಪರವಾಣಿಗೆ ಪಡೆಯದೇ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ ಒಂದು ಗೊಬ್ಬರ  ಚೀಲದಲ್ಲಿ ಒಟ್ಟು 48 ಬ್ಯಾಗಪೈಪರ ಡಿಲಕ್ಸ ವಿಸ್ಕಿ ತುಂಬಿದ 180 ಎಂ.ಎಲ್ ಅಳತೆಯ ಮದ್ಯದ ಟೆಟ್ರಾ ಪಾಕೀಟಗಳು ಅ:ಕಿ: 3977/- ನೇದ್ದವುಗಳನ್ನು ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು ಮಾರಾಟ  ಮಾಡುತ್ತಿರುವಾಗ ಸಿಕ್ಕಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 208/2017 ಕಲಂ 32.34 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮಲ್ಲಿಗವಾಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹತ್ತಿರ  ಸಾರ್ವಜನಿಕ ರಸ್ತೆ ಮೇಲೆ ಇದರಲ್ಲಿ ಆರೋಪಿತನಾದ ಶಿವಾನಂದ ದೇವಪ್ಪಾ ತೋಟದ ಸಾಃ ಮಲ್ಲಿಗವಾಡ ಇತನು ಹೋಗಿ ಬರುವ ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಬೈದಾಡುತ್ತಿರುವಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 221/2017 ಕಲಂ 110(ಇ)(ಜಿ) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ .

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಪಟ್ಟಣದ ಚಾವಡಿ ಕ್ರಾಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಮಂಜುನಾಥ ಅಕಂಡಪ್ಪ ಬಡಿಗೇರ ವಯಾ 36 ವರ್ಷ , 2) ಪ್ರಮೋಧ ಜ್ಯೋತಿಭಾ ಕಡ್ಲಾಸ್ಕರ ಸಾ: ಇಬ್ಬರೂ ಕಲಘಟಗಿ ಇವರು ತಮ್ಮ ತಮ್ಮ ಸ್ವಂತಪಾಯ್ದೆಗೋಸ್ಕರ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿಸಂಖ್ಯೆಗಳ ಚೀಟಿ ಬರೆದುಕೊಡುತ್ತಾ ಕಲ್ಯಾಣಿ ಮಟಕಾ ಅನ್ನುವ ಓ ಸಿ ಜೂಜಾಟ ಆಡಿಸುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 2090 ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 323/2017 ಕಲಂ 78(3) ನೇದ್ದರಲ್ಲಿ ಪ್ರಕರವನ್ನು ದಾಖಲಿಸಿದ್ದು ಇರುತ್ತದೆ.Tuesday, September 19, 2017

CRIME INCIDENTS 19-09-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 19-09-2017 ರಂದು ವರದಿಯಾದ ಪ್ರಕರಣಗಳು

1)ಗುಡಗೇರಿ ಪೊಲೀಸ್ ಠಾಣಾ ಹದ್ದೀ ಪೈಕಿ ಹನುಮನಹಳ್ಳಿ ಗ್ರಾಮ ದಾಟಿ ಸುಮಾರು 1 ವರೆ ಕಿ.ಮೀ ಅಂತರದಲ್ಲಿ ನೀರಲಗಿ ಕಡೆಗೆ ಕೂಬಿಹಾಳ ಎಂಬುವವರ ಮಾವಿನ ತೋಟದ ಹತ್ತಿರ ಈ ದಿವಸ ದಿನಾಂಕಃ 19-09-2017 ರಂದು ಮುಂಜಾನೆ 08-30 ಗಂಟೆಗೆ ನೀರಲಗಿಯಿಂದ ಇಂಗಳಗಿಗೆ ಹೊರಟ ಪಿರ್ಯಾಧಿಯ ಚಿಕ್ಕಪ್ಪನ ಮಗ ಶಂಕ್ರಪ್ಪ ಸಿದ್ದಪ್ಪ ಗಾಣಿಗೇರ ಹಾಗೂ ಅವರ ಮಗ ಮಂಜುನಾಥನು ಇದ್ದ ಮೋಟರ್ ಸೈಕಲ್ ನಂಃ ಕೆಎ-27 ಇಎಚ್ 5920 ನೇದ್ದಕ್ಕೆ ಇಂಗಳಗಿ ಕಡೆಯಿಂದ ನೀರಲಗಿ ಕಡೆ ಬರುತ್ತಿರುವ ಟಾಟಾ ಸುಮೋ ನಂ ಕೆಎ-25 ಎನ್ 6332 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ಜೋರಿನಿಂದ ವ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಢಿಕ್ಕಿಪಡಿಸಿ ಅವರಿಬ್ಬರಿಗೂ ಸಾಧಾ ವ ಭಾರೀ ಘಾಯಪಡಿಸಿದ್ದು ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2)ಗರಗ ಪೊಲೀಸ್ ಠಾಣಾವ್ಯಾಪ್ತಿಯ ಮುಗಳಿ ಗ್ರಾಮದಲ್ಲಿ  ದಿನಾಂಕಃ 19/092017 ರಂದು 13.15 ಘಂಟೆ ಸುಮಾರಿಗೆ ಆರೋಪಿತರು ಮಂಜುನಾಥ ಬಸಪ್ಪ ಸಿದ್ದಬಾನವ, ನಾಗರಾಜ ಪುಂಡಲಿಕ ಸಿದ್ದಬಾನವರ, ಮಹಾಂತೇಶ ಸುಭಾಷ ಘಾಮಣ್ಣವರ, ಮಕ್ತುಮಸಾಬ ಎಫ್.ನದಾಫ್ ಇವರುಗಳು ಮುಗಳಿ ಗ್ರಾಮದ ವಿಠ್ಠಲ್ ದೇವರ ಗುಡಿಯ ಮುಂದೆ ಸಾರ್ವಜನಿಕ  ಸ್ಥಳದಲ್ಲಿ ತಮ್ಮ ತಮ್ಮ ಪಾಯ್ದೇಗೊಸ್ಕರ್ ಇಸ್ಪೀಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹಾರ ಅಂಬುವ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ಒಟ್ಟು ರೂ.1450-00 ವಶಪಡಿಸಿಕೊಂಡು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3)ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಿನಾಂಕ 19-09-2017 ರಂದು 1225 ಗಂಟೆಗೆ ಕಣವಿಹೊನ್ನಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಧಾರವಾಡ ಕಲಘಟಗಿ ರಸ್ತೆ ಮೇಲೆ ಆರೋಪಿತ ಈಶ್ವರ ಯಾದವಾಡ   ಇತನು ಸರಕಾರದಿಂದ ಮದ್ಯದ ಟೆಟ್ರಾ ಪಾಕೀಟಗಳನ್ನು ಸಾಗಾಟ ವ ಮಾರಾಟ ಮಾಡಲು ಯಾವುದೇ ಪರವಾಣಿಗೆ ಪಡೆಯದೇ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ ಒಂದು ಹಸಿರು ಕಲರಿನ ಕೈ ಚೀಲದಲ್ಲಿ ಒಟ್ಟು 60 ಹೈವರ್ಡ್ಸ ಚಿಯರ್ಸ್ ವಿಸ್ಕಿ ತುಂಬಿದ 90 ಎಂ.ಎಲ್ ಅಳತೆಯ ಮದ್ಯದ ಟೆಟ್ರಾ ಪಾಕೀಟಗಳು ಅ:ಕಿ: 1691/- ನೇದ್ದವುಗಳನ್ನು ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು ರಸ್ತೆಯಲ್ಲಿ ಹೋಗಿ ಬರುವ ವಾಹನಗಳ ಚಾಲಕರುಗಳಿಗೆ ಮಾರಾಟ ಮಾಡುತ್ತಿರುವಾಗ ಸಿಕ್ಕದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 18/09/2017 ರಂದು ಮದ್ಯಾಹ್ನ 03-30 ರಿಂದ 04-00 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತರಾದ ಕಮಲವ್ವಾ ದಾನಪ್ಪಗೌಡ್ರ, ರತ್ನವ್ವಾ ನಾಗರಹಳ್ಳಿ,ಸಾಃಸುಳ್ಳ ಪಾರವ್ವಾ ಸರಕಾರ ಸಾಃ ಸುಳ್ಳ ಹಾಗೂ 8-10 ಜನರು ಕೂಡಿ ಪಿರ್ಯಾದಿಗೆ ಲೇ ನಮ್ಮ ಮ್ಯಾಗ್ ಕೇಸ್ ಮಾಡಿಯಾ ಅಂತಾ  ಹೊಲದಲ್ಲಿ ಕಬ್ಬಿನ ಬೆಳೆ ನಾಶ ಮಾಡಿದ್ದಲ್ಲದೆ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

CRIME INCIDENTS 18-09-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 18-09-2017 ರಂದು ದಾಖಲಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 18-09-2017 ರಂದು 1725 ಗಂಟೆಗೆ NH-04  ಹೆದ್ದಾರಿ ಸಾಯಿ ಅರಣ್ಯ ದಾಬಾ ಹತ್ತಿರ ರಸ್ತೆ ಮೇಲೆ ಆರೋಪಿತ ಬಸವರಾಜ ಕವಳಿಕಾಯಿ
ಸಾ: ಬೇಲೂರು ಇತನು ಮದ್ಯದ ಟೆಟ್ರಾ ಪಾಕೀಟಗಳನ್ನು ಸಾಗಾಟ ವ ಮಾರಾಟ ಮಾಡಲು ಯಾವುದೇ ಪರವಾಣಿಗೆ ಪಡೆಯದೇ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ ಒಂದು ಗುಟಕಾ ಕೈ ಚೀಲದಲ್ಲಿ ಒಟ್ಟು 24 ಓಲ್ಡ್ ಟಾವರನ  ವಿಸ್ಕಿ ತುಂಬಿದ 180 ಎಂ.ಎಲ್ ಅಳತೆಯ ಮದ್ಯದ ಟೆಟ್ರಾ ಪಾಕೀಟಗಳು, 24 ಹೈವರ್ಡ್ಸ ಚಿಯರ್ಸ್ ವಿಸ್ಕಿ ತುಂಬಿದ 90 ಎಂ.ಎಲ್ ಅಳತೆಯ ಮದ್ಯದ ಟೆಟ್ರಾ ಪಾಕೀಟಗಳು  ಒಟ್ಟು 2322-00 ಗಳಷ್ಟು ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವಾಗ ಸಿಕ್ಕಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 18-09-2017 ರಂದು ಪ್ರಭು ನಗರ, ಹೊನ್ನಾಪೂರ  ಗ್ರಾಮದ ಪ್ರಭುದೇವರ ಗುಡಿಯ ಹತ್ತಿರ ರಸ್ತೆ ಮೇಲೆ ಆರೋಪಿತ ಹರಿಹರ ಬಾರಿಮನಿ
ಸಾ: ಹೊನ್ನಾಪೂರ ಯಾವುದೇ ಪರವಾಣಿಗೆ ಪಡೆಯದೇ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ ಒಂದು ಗುಟಕಾ ಕೈ ಚೀಲದಲ್ಲಿ ಒಟ್ಟು 48 ಹೈವರ್ಡ್ಸ ಚಿಯರ್ಸ್ ವಿಸ್ಕಿ ತುಂಬಿದ 90 ಎಂ.ಎಲ್ ಅಳತೆಯ ಮದ್ಯದ ಟೆಟ್ರಾ ಪಾಕೀಟಗಳು  ಒಟ್ಟು 1351-00 ಗಳಷ್ಟು ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವಾಗ ಸಿಕ್ಕಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.Sunday, September 17, 2017

CRIME INCIDENTS 17-09-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 17-09-2017 ರಂದು ವರದಿಯಾದ ಪ್ರಕರಣಗಳು

ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕಃ 16-09-2017 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕಃ 17-09-2017 ರ ಬೆಳಗಿನ 08-00 ಗಂಟೆಯ ನಡುವಿನ ಅವಧಿಯಲ್ಲಿ ಅಳ್ನಾವರದ ಇಂದಿರಾ ನಗರದಲ್ಲಿರುವ  ನೇತಾಜಿ ತುಕಾರಾಮ ಪಾಟೀಲ  ಇತನ ಮನೆಯಲ್ಲಿಟ್ಟಿರುವ 1]  L.E.D. 32" Intex T V ಅಂದಾಜು ಕಿಮ್ಮತ್ತು - 4500/- ರೂ. 2]  ಎರಡು ಜೊತೆ ಬೆಳ್ಳಿಯ ಕಾಲಗೆಜ್ಜೆಗಳು ಇದರ ತೂಕ ಸುಮಾರು 10 ತೊಲೆಗಳಷ್ಟು ಅ:ಕಿಃ 3000/- ರೂ. ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ನಾವು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಮುಂದಿನ ಬಾಗಿಲದ ಚೀಲಕದ ಕೊಂಡಿ ಮುರಿದು ಒಳಗೆ ಹೋಗಿ ಮನೆಯಲ್ಲಿಯ ಮೇಲ್ಕಂಡ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ .  ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 16-09-2017 ರಂದು 15-00 ಗಂಟೆ ಸುಮಾರಕ್ಕೆ ಹುಬ್ಬಳ್ಳಿ ಲಕ್ಷ್ಮೇಶ್ವರ ರಸ್ತೆ ಮೇಲೆ ನೂಲ್ವೀ ಗ್ರಾಮದ ಹೆಗ್ಗೇರಿ ಓಣಿ ಸಮೀಪ ಯಾವುದೋ ಒಂದು ವಾಹನವನ್ನು ಅದರ ಚಾಲಕನು ಕುಂದಗೋಳ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ರಸ್ತೆ ಬದಿಗೆ ಇದ್ದ ಪಿರ್ಯಾಧಿ ಮಗ ಖಾಜಾಮೀರ ಮಕ್ತುಮಸಾಬ ನಾಯ್ಕರ ವಯಾ 8 ವರ್ಷ ಸಾ!! ನೂಲ್ವೀ ಇತನಿಗೆ ಡಿಕ್ಕಿ ಮಾಡಿ ಅಪಗಾತಪಡಿಸಿ ಸದರಿಯವನು ತತ್ವದರ್ಶಿ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಪಚಾರ ಹೊಂದುತ್ತಿದ್ದಾಗ ಈ ದಿವಸ ದಿನಾಂಕ: 17-09-2017 ರಂದು ಮುಂಜಾನೆ 09-00 ಗಂಟೆಗೆ ಮರಣ ಹೊಂದುವಂತೆ ಮಾಡಿ ಘಟನೆಯ ಸಂಗತಿಯನ್ನು ಠಾಣೆಗೆ ತಿಳಿಸದೇ ಗಾಡಿಯನ್ನು ಹಾಗೇ ನಡೆಯಿಸಿಕೊಂಡು ಹೋಗಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಹಳ್ಳದ ಓಣಿ ಯ ಬಸುರಾಜ ತಂದೆ ಕೃಷ್ನಾಜಿ ಬಾರಕೇರ ವಯಾ:24 ವರ್ಷ ಸಾ:ಹಳ್ಳದ ಓಣಿ ನವಲಗುಂದ ಇತನು ನವಲಗುಂದದ ರಾಣಿ ಚೆನ್ನಮ್ಮ ಹಾಸ್ಟೇಲನಲ್ಲಿ ಈ ದಿವಸ ದಿ:17-09-2017 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಕಂಪೌಂಡ ಪಕ್ಕದಲ್ಲಿ ಬೆಳೆದಿದ್ದ ಕಂಟಿಗಳನ್ನು ಕಡಿದು ಅವುಗಳನ್ನು ಹೊರಗಡೆ ಎಸೆಯುತ್ತಿದ್ದಾಗ ಕಂಪೌಂಡ ಪಕ್ಕದಲ್ಲಿದ್ದ ಟಿ ಸಿ ಗೆ ಬಡೆದು ಒಮ್ಮೇಲೆ ಕರೆಂಟ ಶಾಕ್ ಹೊಡೆದು ಅಸ್ತವ್ಯಸ್ತನಾಗಿದ್ದು ಉಪಚಾರಕ್ಕೆ ಅಂತಾ ನವಲಗುಂದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಹೋದಾಗ ಮಧ್ಯಾಹ್ನ 13-16 ಗಂಟೆಯ ಸುಮಾರಿಗೆ ಮೃತ ಪಟ್ಟಿರುತ್ತಾನೆ.  ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ವನಹಳ್ಳಿ ಗ್ರಾಮದಲ್ಲಿ ಮೃತ  ನಾಗರಾಜ @ ನಾಗಪ್ಪ ತಂದೆ ಈರಪ್ಪ ದೇಸಾಯಿ ವಯಾ 25 ವರ್ಷ ಜಾತಿ ಹಿಂದು ಲಿಂಗವಂತ ಉದ್ಯೋಗ ಶೇತ್ಕಿ ಕೆಲಸ ಸಾ:ವನಹಳ್ಳಿ ಇತನಿಗೆ ಕಳೆದ 15 ವರ್ಷಗಳಿಂದ ಪೀಡ್ಸ ಖಾಯಿಲೆಯು ಬರುತ್ತಿದ್ದು, ಈ ಬಗ್ಗೆ ಖಾಸಗಿ ವೈದ್ಯೆರ ಬಳಿ ಉಪಚಾರವನ್ನು ಕೂಡಿಸಿದರು ಸಹಿತಾ ಸದರಿಯವನಿಗೆ ಇದ್ದ ಪೀಡ್ಸ ಖಾಯಿಲೆಯು ಕಡಿಮೆಯಾಗದೆ ಇದ್ದಾಗ ಅದನ್ನೆ ಮಾನಸಿಕ ಮಾಡಿಕೊಂಡು ದಿನಾಂಕ 22-08-2017 ರಂದು ಯಾವೂದು ವಿಷಕಾರಕ ಎಣ್ಣಿಯನ್ನು ಸೇವಿಸಿ ಉಪಚಾರ ಕುರಿತು ಕಿಮ್ಸ ಆಸ್ಪತ್ರೆಗೆ ಧಾಕಲಾಗಿ ಉಪಚಾರವನ್ನು ಹೊಂದಿ ಗುಣಮುಖವಾಗಿ ನಂತರ ಡಿಸ್ಚಾರ್ಜ ಆಗಿ ವೈದ್ಯೆರು ನೀಡಿದ ಗುಳೆಗೆಗಳನ್ನು ಸೇವಿಸುತ್ತಾ ಬಂದಿದ್ದು ಈ ದಿವಸ ದಿನಾಂಕ 17-09-2017 ರಂದು ಬೆಳಗಿನ 0830 ಗಂಟೆಯ ಸುಮಾರಿಗೆ ತನ್ನ ಮನೆಯಲ್ಲಿ ಪೀಡ್ಸ ಬಂದು ತ್ರಾಸ ಮಾಡಿಕೊಳ್ಳುತ್ತಿದ್ದಾಗ ಉಪಚಾರ ಕುರಿತು ಹುಬ್ಬಳ್ಳಿ ಕಿಮ್ಸಕ್ಕೆ ಕರೆದುಕೊಂಡು ಹೋಗಿ ಕಿಮ್ಸ ಆಸ್ಪತ್ರೆಯ ಒಳಗೆ ವಯ್ಯುವಷ್ಟರಲ್ಲಿ 0930 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ, ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

CRIME INCIDENTS 16-09-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 16-09-2017 ರಂದು ವರದಿಯಾದ ಪ್ರಕರಣಗಳು

1)ಗುಡಗೇರಿ ಪೊಲೀಸ್ ಠಾಣಾ ಹದ್ದೀ ಪೈಕಿ ಯರೇಬೂದಿಹಾಳ ಗ್ರಾಮದ ಗ್ರಾಮ ಪಂಚಾಯತಿ ಹತ್ತಿರ ಈ ದಿವಸ ದಿನಾಂಕಃ16/09/2017 ರಂದು 1115 ಗಂಟೆಗೆ ದಾಳಿ ಮಾಡಿದ ಕಾಲಕ್ಕೆ ಇದರಲ್ಲಿಯ ಆಪಾದಿತನು ರಾಮಪ್ಪ ಮೇಗೂಂಡಿ ಸಾ:ಕುಂದಗೊಳ ಇತನು  ಓ,ಸಿ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕ ಅಪರಾಧ. ಈ ದಾಳಿ ಕಾಲಕ್ಕೆ ಆಪಾದಿತನಿಂದ 1] ರೋಖ ರಕಂ 240/- ರೂಗಳು, 2] ಒಂದು ಓಸಿ ಅಂಕಿ ಬರೆದ ಚೀಟಿ , ಒಂದು ಬಾಲ್ ಪೆನ್ನು  ನೇದ್ದವುಗಳನ್ನು ಜಪ್ತ ಮಾಡಿದ್ದು ಇರುತ್ತದೆ.

2)ಗುಡಗೇರಿ ಪೊಲೀಸ್ ಠಾಣಾ ಹದ್ದೀ ಪೈಕಿ ಯರೇಬೂದಿಹಾಳ ಗ್ರಾಮದ ಗ್ರಾಮ ಪಂಚಾಯತಿ ಹತ್ತಿರ ಈ ದಿವಸ ದಿನಾಂಕಃ16/09/2017 ರಂದು 1115 ಗಂಟೆಗೆ ದಾಳಿ ಮಾಡಿದ ಕಾಲಕ್ಕೆ ಇದರಲ್ಲಿಯ ಆಪಾದಿತನು ಚನ್ನಪ್ಪ ಹುಬ್ಬಳ್ಳಿ  ಸಾ:ಕುಂದಗೊಳ ಇತನು  ಓ,ಸಿ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕ ಅಪರಾಧ. ಈ ದಾಳಿ ಕಾಲಕ್ಕೆ ಆಪಾದಿತನಿಂದ 1] ರೋಖ ರಕಂ 80/- ರೂಗಳು, 2] ಒಂದು ಓಸಿ ಅಂಕಿ ಬರೆದ ಚೀಟಿ , ಒಂದು ಬಾಲ್ ಪೆನ್ನು  ನೇದ್ದವುಗಳನ್ನು ಜಪ್ತ ಮಾಡಿದ್ದು ಇರುತ್ತದೆ.


3)ಗರಗ ಪೊಲೀಸ ಠಾಣೆ ಹದ್ದಿ ಪೈಕಿ ಮಂಗಳಗಟ್ಟಿ ಗ್ರಾಮದ ಬಸ್ಸಸ್ಟ್ಯಾಂಡ ಹತ್ತಿರ ರಸ್ತೆಯ ಮೇಲೆ ದಿನಾಂಕಃ 16-09-2017 ರಂದು 17-00 ಅವರ್ಸಕ್ಕೆ ನಮೂದ ಮಾಡಿದ ಆರೋಪಿತನಾದಃ ಅಪ್ಪಾಸಾಬ ತಂದೆ ನಬೀಸಾಬ ನದಾಫ. ಸಾಃ ಮಂಗಳಗಟ್ಟಿ ಇವನು ತನ್ನ ಫಾಯಿದೇಗೋಸ್ಕರ ಯಾವುದೇ ಅಧಿಕೃತ ಸಾಗಾಟ ಮಾಡುವ ಲೈಸನ್ಸ ವ ಪಾಸ ವ ಪರ್ಮಿಟ ಇಲ್ಲದೆ ಒಂದು ಬಣ್ಣದ ಪಟ್ಟಾ ಪಟ್ಟಿ ಕೈ ಚೀಲದಲ್ಲಿ ಒಟ್ಟು 48 ಓಲ್ಡ ಟಾವರೇನ್ ವಿಸ್ಕಿ ತುಂಬಿದ 180 ಎಮ್. ಎಲ್. ಟೆಟ್ರಾ ಪಾಕೇಟಗಳನ್ನು [ಒಟ್ಟು ಅಃಕಿಃ 3840/-ರೂ] ಸಾಗಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

Friday, September 15, 2017

CRIME INCIDENTS 15-09-2017

ದಿನಾಂಕ.15-09-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 15-09-2017 ರಂದು 1125 ಗಂಟೆಗೆ ನರೇಂದ್ರ ಗ್ರಾಮದ ತೆರದ ಬೈಲ ಹತ್ತಿರ ಆರೋಪಿತ ವಾಸುದೇವ ಕೋಲಾಪೂರ ತನ್ನ ಸ್ವಂತ ಪಾಯ್ದೆಗೋಸ್ಕರ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ ಯಾವುದೇ ಪಾಸು ವ ಪರ್ಮಿಟ ಪಡೆಯದೇ ಒಂದು ಗುಟಕಾ ಕೈ ಚೀಲದಲ್ಲಿ ಒಟ್ಟು 96  ಹೈವರ್ಡ್ಸ ಚಿಯರ್ಸ ವಿಸ್ಕಿ ತುಂಬಿದ 90 ಎಂ.ಎಲ್ ಅಳತೆಯ ಸರಾಯಿ ಟೆಟ್ರಾ ಪಾಕೀಟಗಳು ಅ:ಕಿ: 2701/- ನೇದವುಗಳನ್ನು ಅಕ್ರಮವಾಗಿ ತಂದು ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವಾಗ ಸಿಕ್ಕಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಕುಂದಗೋಳ ಪೊಲೀಸ್ ಠಾಣಾವ್ತಾಪ್ತಿಯಲ್ಲಿ ದಿನಾಂಕ: 15-09-2017 ರಂದು 0940 ಗಂಟೆಗೆ ರಾಮನಕೊಪ್ಪ ಹೈಸ್ಕೂಲ್ ಹತ್ತಿರ ಇದರಲ್ಲಿ ಆರೋಪಿತನಾದ ಯಲ್ಲಪ್ಪ ಬಸಪ್ಪ ಉಮಚಗಿ. ಸಾ: ರಾಮನಕೊಪ್ಪ, ತಾ: ಕುಂದಗೋಳ ಈತನು ಸರಾಯಿ ಟೆಟ್ರಾ ಪಾಕೀಟಗಳನ್ನು ಅ.ಕಿ 1302-00 ಗಳಷ್ಟು ತನ್ನ ಫಾಯ್ದೆಗೋಸ್ಕರ ಅನಧೀಕೃತವಾಗಿ ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೇ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವಾಗ ಸಿಕ್ಕಿದ್ದು ಈ ಕುರಿತು ಕುಂದಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಿನಾಂಕ: 15-09-2017 ರಂದು ಮುಂಜಾನೆ 08-30 ಗಂಟೆಗೆ ಕಂಪ್ಲಿಕೊಪ್ಪ ಗ್ರಾಮದ ಸರಕಾರಿ ಕನ್ನಡ ಶಾಲೆಯ ಹತ್ತಿರದ ಸಾರ್ವಜನಿಕ ಬಯಲು ಜಾಗೆಯಲ್ಲಿ ಇದರಲ್ಲಿ ನಮೂರ ಮಾದಿದ ಆರೋಪಿತರಾದ 1) ದೇವೆಂದ್ರಪ್ಪ ಬಸವಂತಪ್ಪ ಬಸ್ತಿ ಸಾ!! ವರೂರ ಹಾಲಿ!! ಕಂಪ್ಲಿಕೊಪ್ಪ 2) ನಿಸ್ಸಾರಅಹ್ಮದ ಇಮಾಮಸಾಬ ಬೆಟಗೇರಿ ಸಾ!! ಹಳೆಹುಬ್ಬಳ್ಳಿ 3) ವಿನಾಯಕ ಚಂದ್ರಶೇಖರ ಬಂಢಾರಿ ಸಾ!! ಹಳೆಹುಬ್ಬಳ್ಳಿ 4) ಚನ್ನಬಸಪ್ಪ ಶೇಖಪ್ಪ ಉಳವನಗೌಡ ಸಾ!! ವರೂರ 5) ಪರಶುರಾಮ ರಾಮು ಗೋಕಾಕ ಸಾ!! ಹುಬ್ಬಳ್ಳಿ 6) ಮಂಜುನಾಥ ಸತ್ತೆಪ್ಪ ಕೋಟಿ ಸಾ!! ಛಬ್ಬಿ 7) ಗಬ್ಬರ ಸಾ!! ಹುಬ್ಬಳ್ಳಿ 8) ಬಸಣ್ಣ ಬಿಜಾಪೂರ ಸಾ!! ಹುಬ್ಬಳ್ಳಿ ಇವರುಗಳು ತಮ್ಮ ತಮ್ಮ ಪಾಯ್ದೆಗೋಸ್ಕರ ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಆ.ನಂ. 1 ರಿಂದ 6 ನೇದವರು ಸಿಕ್ಕಿದ್ದು. ಸದರಿಯವರ ತಾಬಾದಲ್ಲಿಂದ ಒಟ್ಟು ರೋಖ ರಕ್ಕಂ 1650 ರೂ ಹಾಗೂ 52 ಇಸ್ಪೀಟ್ ಎಲೆಗಳು ಸಿಕ್ಕಿದ್ದಲ್ಲದೇ, ಆ.ನಂ. 7 ಮತ್ತು 8 ನೇದವರು ಓಡಿ ಹೋದ ಅಪರಾಧ.

ಗುಡಗೇರಿ ಪೊಲೀಸ್ ಠಾಣಾ ಹದ್ದೀ ಪೈಕಿ ಯರೇಬೂದಿಹಾಳ ಗ್ರಾಮದಲ್ಲಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ನಿನ್ನೇ ದಿವಸ ದಿನಾಂಕಃ 14/09/2017 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಇದರಲ್ಲಿ ಪರಮೇಶ್ವರ ಬಸವೆಣ್ಣಪ್ಪ ಕರಡಗಿ, ಮ್ರತುಂಜಯ ಬಸಪ್ಪ ಕನೋಜಿ  ಇವರು ಬೇರೆದವರ ಬಂಗಾರದ ಸಾಲದ ಬಗ್ಗೆ ಇದರಲ್ಲಿಯ ಫಿರ್ಯಾದಿಯೊಂದಿಗೆ ತಂಟೇ ತೆಗೆದು ಅವರಿಗೆ ಅವಾಚ್ಯ ಶಬ್ಧಗಳಿಂದ ಬೈದಾಡಿ ಅವರ ಎದೆ ಮೇಲಿನ ಅಂಗಿ ಹಿಡಿದು ಎಳೆದಾಡುವುದಲ್ಲದೇ ಅವರು ಬಸ್ಸು ಹತ್ತಿ ಹೊರಟಾಗ ಬಸ್ಸಿನಲ್ಲಿ ಹತ್ತಿ ಅವರಿಗೆ ಹೋಗದಂತೆ ಅಡ್ಡಗಟ್ಟಿ ತರುಬಿ ಅವರಿಗೆ ಜೀವದ ಧಮಕೀ ಹಾಕಿ ಅವರನ್ನು ಬಸ್ಸಿನಿಂದ ಕೆಳಗೆ ಎಳೆದೊಯ್ಯಲು ಪ್ರಯತ್ತಿಸಿದ ಅಪರಾದ.


ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-12-09-2017 ರಂದು 20-45 ಗಂಟೆಯ ಸುಮಾರಿಗೆ ಕಲಘಟಗಿ ಹಳಿಯಾಳ ರಸ್ತೆಯ ಮೇಲೆ ಕೂಡಲಗಿ ಗ್ರಾಮದ ಸಮೀಪ ಗೂಡ್ಸ ಲಾರಿ ನಂ KA-25-B-0061 ನೇದ್ದರ ಚಾಲಕನು ಲಾರಿಯಲ್ಲಿ ಸೀಮೆಂಟ್ ಲೋಡ್ ಮಾಡಿಕೊಂಡು ಹುಬ್ಬಳ್ಳಿಯಿಂದಾ ಕಲಘಟಗಿ ಮಾರ್ಗವಾಗಿ ಹಳಿಯಾಳಕ್ಕೆ ಹೋಗುವಾಗ ಕೂಡಲಗಿ ಗ್ರಾಮದ ಸಮೀಪ ಅತೀ ಜೋರಿನಿಂದಾ ಹಾಗು ನಿಷ್ಕಾಳಜಿತನದಿಂದ ನೆಡೆಸಿಕೊಂಡು ಹೋಗಿ ವೇಗದ ನಿಯಂತ್ರಣ ಮಾಡಲಾಗದೆ ರಸ್ತೆಯ ಎಡಬದಿ ಇರುವ ಗಿಡಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಲಾರಿಯನ್ನು ಪಲ್ಟಿ ಮಾಡಿ ಕೆಡವಿ ಲಾರಿಯನ್ನು ಲುಕ್ಷಾಣಪಡಿಸಿದ ಅಪರಾಧ.

Thursday, September 14, 2017

CRIME INCIDENTS 14-09-2017ದಿನಾಂಕ 14-09-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ-ರಾಮನಕೊಪ್ಪ ರಸ್ತೆಯ ಮೇಲೆ ಯಲಿವಾಳ ಕ್ರಾಸ ಹತ್ತಿರ ಆರೋಪಿತನಾದ ಗೋವಿಂದಪ್ಪ ಭೀಮಪ್ಪ ದೊಡ್ಡಮನಿ. ಸಾ: ಕಮಡೊಳ್ಳಿ, ತಾ: ಕುಂದಗೋಳ ಈತನು ಅನಧೀಕೃತವಾಗಿ ಯಾವುದೇ ಪಾಸ್ ವ ಪರ್ಮಿಟ ಇಲ್ಲದೇ ಓಲ್ಡ್ ಟಾವರನ ವಿಸ್ಕಿ ತುಂಬಿದ 180 ಎಂ.ಎಲ್  ಅಳತೆಯ ಸರಾಯಿ ಟೆಟ್ರಾ ರೂ 1439-00 ಗಳನ್ನು ಮೌಲ್ಯದ ಪಾಕೀಟಗಳನ್ನು  ಸಿಕ್ಕಿದ್ದು  ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 143/2017 ಕಲಂ 32.34 ಅಬಕಾರಿ ಕಾಯ್ದೆ ಪ್ರರಕಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಕವಲಗೇರಿ ರಸ್ತೆ ಪಕ್ಕದ ಹಳ್ಳದ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿನ ಆರೋಪಿತರಾದ 1 .ಕಲ್ಲಪ್ಪಾ ಮದ್ದೆಣ್ಣವರ  ಹಾಗೂ ಇನ್ನೂ 06 ಜನರು ಇವರು ತಮ್ಮ ತಮ್ಮ ಪಾಯಿದೆಗೋಸ್ಕರ ಇಸ್ಪೇಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬುವ ಜೂಜಾಟವನ್ನು ಆಡುವಾಗ ಸಿಕ್ಕಿದ್ದು ಅವರಿಂದ ರೂ 3200-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 198/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದುಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅಮ್ಮಿನಬಾವಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ರಸ್ತೆ ಮೇಲೆ ಆರೋಪಿತರಾದ 1.ಬಸವರಾಜ ಭಂಜತ್ರಿ 2.ಹನುಮಂತಪ್ಪಾ ಭಜಂತ್ರಿ ಇವರು ತಮ್ಮ ಸ್ವಂತ ಪಾಯ್ದೆಗೋಸ್ಕರ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ ಯಾವುದೇ ಪಾಸು ವ ಪರ್ಮಿಟ ಪಡೆಯದೇ ಒಂದು ಬಿಳಿ ಗೊಬ್ಬರ ಚೀಲದಲ್ಲಿ ಒಟ್ಟು 96 ಓಲ್ಡ್ ಟಾವರನ ವಿಸ್ಕಿ ತುಂಬಿದ 180 ಎಂ.ಎಲ್  ಅಳತೆಯ ಸರಾಯಿ ಟೆಟ್ರಾ ಪಾಕೀಟಗಳು ಅ:ಕಿ: 5971/- ನೇದವುಗಳನ್ನು ಅಕ್ರಮವಾಗಿ ತಂದು ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವಾಗ ಆರೋಪಿ ನಂ 01 ನೇದವನು ಸಿಕ್ಕಿದ್ದು ಅರೋಪಿ ನಂ 02 ನೇದವನು ಪರಾರಿಯಾಗಿ ಓಡಿ ಹೋಗಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 199/2017 ಕಲಂ 32.34 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, September 13, 2017

CRIME INCIDENTS 13-09-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 13-09-2017 ರಂದು ವರದಿಯಾದ ಪ್ರಕರಣಗಳು

1)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 13/09/2017 ರಂದು ಮುಂಜಾನೆ 11.30 ಗಂಟೆಯ ಸುಮಾರಿಗೆ ಮೃತ ಸುಭಾಸ ತಂದೆ ವಿರುಪಾಕ್ಷಪ್ಪ ಹುಲಿಕಟ್ಟಿ ವಯಾ 50 ವರ್ಷ, ಸಾ: ಅರಳಿಹೊಂಡ ಈತನು ತನ್ನ ಹೊದಲ್ಲಿ ಆಳುಗಳೊಂದಿಗೆ ಸೋಯಾಬಿನ್ ಕಟಾವು ಕೆಲಸ ಮಾಡುತ್ತಿದ್ದಾಗ ಅವನ ಬಲಗಾಲ ಮೊಳಕಾಲ ಕೆಳಗೆ ಯಾವುದೋ ಒಂದು ವಿಷಪೂರಿತ ಹಾವು  ಬಲಗಾಲ ಮೊಳಕಾಲ ಕೆಳಗೆ ಕಚ್ಚಿ ತ್ರಾಸ್ ಮಾಡಿಕೊಳ್ಳುವಾಗ ಉಪಚಾರಕ್ಕೆ ಎಂದು ಮುಕ್ಕಲ್ ಸರಕಾರಿ ದವಾಖಾನೆಗೆ ತೋರಿಸಿ ಅಲ್ಲಿಂದ ಕಲಘಟಗಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಧ್ಯಾಹ್ನ 02.00 ಗಂಟೆಯ ಸುಮಾರಿಗೆ ದವಾಖಾನೆಯ ಒಳಗಿನ ರಸ್ತೆಯ ಮೇಲೆ ಮೃತಪಟ್ಟಿದ್ದು ಅವನ ಮರಣದಲ್ಲಿ ಬೇರೆ ಯಾವುದೇ ಯಾರ ಮೇಲೆ ಸಂಶಯ ವಗೈರೆ ಇರುವುದಿಲ್ಲಾ ಅಂತ ಮೃತನ ಹೆಂಡತಿ ವರದಿ ಕೊಟ್ಟಿದ್ದರನ್ವಯ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

2)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 13-09-2017 ರಂದು ಬೆಳಗಿನ 0100 ಗಂಟೆಯ ಸುಮಾರಿಗೆ ಟಾಟಾ 709 ಗೋಡ್ಸ ಗಾಡಿ ನಂಬರ ಎಮ್ ಎಚ್ 09 /ಸಿ ಎ 6588 ನೇದ್ದನ್ನು ಸದರ ಚಾಲಕ ಜಾಪರ ತಂದೆ ಸಿಕಂದರ ಪಟೀಲ ಸಾ: ಹಿರೆಕೊಡಿ ಇತನು ತಾರಿಹಾಳ ಬ್ರಿಡ್ಜ ಕಡೆಯಿಂದ ಧಾರವಾಡ ಕಡೆಗೆ ಎನ್ ಎಚ್ 4 ರಸ್ತೆಯ ಮೇಲೆ ಅತಿ ಜೋರಿನಿಂದ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು  ನಿಯಂತ್ರಣ ಮಾಡಲಾಗದೆ ಪಲ್ಟಿ ಮಾಡಿ ಕೆಡವಿ ಗೊಡ್ಸ ಗಾಡಿಯನ್ನು ಜಖಂ ಗೊಳಿಸಿದ್ದು ಅಲ್ಲದೆ ಅದರಲ್ಲಿದ್ದ ಸಾಮಾನುಗಳಿಗೊ ಜಖಂ ಗೊಳಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

3)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 13-09-2017ರಂದು 11-00 ಗಂಟೆ ಸುಮಾರಿಗೆ  ಕಲಘಟಗಿ ಶಹರದ 12 ಎತ್ತಿನ ಮಠದ  ಎದುರಿಗೆ ಇರುವ ಮನೆಯ ಹತ್ತಿರ ಎದುರುಗಾರರಾದ 1] ಸಿದ್ದಾರೂಢ ತಂದೆ ಬಸವರಾಜ ಮುರಳಿ, 27 ವರ್ಷ ಜಾತಿ  ಹಿಂದೂ ಲಿಂಗಾಯತ ಉದ್ಯೊ ಡ್ರೈವರ ಸಾ: ಹಾರೋಗೇರಿ  2] ಶಂಕ್ರಪ್ಪ ಕಲ್ಲಪ್ಪ ಹುಲಗೂರ, 28 ವರ್ಷ ಜಾತಿ ಹಿಂದೂ  ಗಾಣಿಗೇರ, ಉದ್ಯೊ ಶೇತ್ಕಿ ಕೆಲಸ ಸಾ: ಹಾರೋಗೇರಿ ಇವರು ಸಂಶಯಾಸ್ಪದವಾಗಿ ತಿರುಗಾಡುತ್ತಾ, ತಮ್ಮ ತಮ್ಮ ಇರುವಿಕೆಯನ್ನು ಮರೆಮಾಚುವ ಮತ್ತು ಸಂಜ್ಞೆಯ ಅಪರಾಧವನ್ನು ಮಾಡಲು  ಹೊಂಚು ಹಾಕುತ್ತಿದ್ದಾಗ ಸಿಕ್ಕಿದ್ದು ಇವನ ಮೇಲೆ ಸೂಕ್ತ ಕ್ರಮ ಕೈಗೊಂಡಿದ್ದು ಇರುತ್ತದೆ.

Tuesday, September 12, 2017

CRIME INCIDENTS 12-09-2017ದಿನಾಂಕ 12-09-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ಗರಗ ಪೊಲೀಸ ಠಾಣಾವ್ಯಾಪ್ತಿಯ: ಕೋಟೂರ ಗ್ರಾಮದಲ್ಲಿರುವ ಹೊಸಮನಿಯವರ ಕಿರಾಣೆ ಅಂಗಡಿ ಹತ್ತಿರ ರಸ್ತೆಯ ಹತ್ತಿರ ಆರೋಪಿತರಾದ1.ಜಗ್ಲಿಸಾಬ ಮುಲ್ಲಾಣ್ಣವರ 2.ಇಮಾಮಸಾಬ  ಅಮ್ಮಿಗಡ 3.ರಾಜೇಸಾಬ ಅಮ್ಮಿನಗಡ 4.ಆಸೀಫ ಅಮ್ಮಿನಗಡ ಇವೆರೆಲ್ಲರೂ ಹಳೆಯ ದ್ವೇಷ ಇಟ್ಟುಕೊಂಡು [ಮೃತ] ಬಸವರಾಜ ತಂದೆ ಶಿವಪ್ಪಾ ಪದ್ನೇಶಿ ಇತನ ಸಂಗಡ ತಂಟೆ ತೆಗೆದು ಹಲ್ಕಟ ಬೈದಾಡಿ ಕೈಯಿಂದಾ ಹೊಡೆದು ಕಾಲಿನಿಂದಾ ಒದ್ದು ಜಂಗ್ಲಿಸಾಬನು ಚೂರಿಯಿಂದಾ ಹೊಡೆದು ಎಲ್ಲರೂ ಕೂಡಿಕೊಂಡು ಕೊಲೆ ಮಾಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 144/2017 ಕಲಂ 302.324.504.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನೂಲ್ವೀ ಗ್ರಾಮದ ದ್ಯಾಮವ್ವಳ ಗುಡಿ ಬಾಜುಕ್ಕಿನ ಸಾರ್ವಜನಿಕ ಜಾಗೆಯಲ್ಲಿ ಇದರಲ್ಲಿ ಆರೋಪಿತರಾದ 1) ಸಂಜು ಪರಶುರಾಮ ರಜಪುತ 2) ಮಹ್ಮದಸಾಬ ಹಸನಸಾಬ ಕುರಹಟ್ಟಿ 3) ಸಿದ್ದಾರೂಢ ಬಸಲಿಂಗಪ್ಪ ಅಂಗಡಿ 4) ಮಂಜುನಾಥ ಬಸವಣ್ಣೆಪ್ಪ ಅಂಗಡಿ 5) ಶಿವು ಗಂಗಪ್ಪ ಪರಸನ್ನವರ 6) ಮಂಜು ಫಕ್ಕೀರಪ್ಪ ಇಂಗಳಹಳ್ಳಿ ಇವರುಗಳು ತಮ್ಮ ಪಾಯ್ದೆಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು, ಆ.ನಂ. 4,5,6 ನೇದವರು ಓಡಿ ಹೋಗಿದ್ದು. ಸದರಿಯವರ ಒಟ್ಟು ರೋಖ ರಕ್ಕಂ 2200/- ರೂ, 52 ಇಸ್ಪೀಟ್ ಎಲೆಗಳು, ಎರಡು ಮೋಬೈಲ್ ಸಹಿತ ವಶಪಡಿಸಿಕೊಂಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 212/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯನೂಲ್ವೀ ಗ್ರಾಮದ ಕನ್ನಡ ಶಾಲೆಯ ಹತ್ತಿರದ ಸಾರ್ವಜನಿಕ ಬಯಲು ಜಾಗೆಯಲ್ಲಿ ಇದರಲ್ಲಿಯ ಆರೋಪಿತರಾದ 1) ಮಂಜುನಾಥ ಯಲ್ಲಪ್ಪ ಪಾಟೀಲ 2) ಯಲ್ಲಪ್ಪ ಬಸಪ್ಪ ಬಿಲ್ಲಾರ 3) ಶಂಕ್ರಯ್ಯಾ ಚನ್ನಬಸಯ್ಯಾ ವಸ್ತ್ರದ 4) ಹಸನಸಾಬ ಮೌಲಾಸಾಬ ಬ್ಯಾಹಟ್ಟಿ 5) ಮಹಾಂತೇಶ ರಾಮಪ್ಪ ಹೊಳೆಯಮ್ಮನವರ 6) ರವಿ ಮಲ್ಲಪ್ಪ ಗಣಾಚಾರಿ 7) ದೊಡ್ಡೇಶ ಪರ್ವತಗೌಡ ಹಿರೆಗೌಡ್ರ 8) ಬಸನಗೌಡ ಪರ್ವತಗೌಡ ಮಂಚಪ್ಪನವರ ಇವರುಗಳು ತಮ್ಮ ಪಾಯ್ದೆಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಆ.ನಂ. 1,2,3,4 ನೇದವರು ಸಿಕ್ಕಿದ್ದು, ಆ.ನಂ. 5,6,7,8 ನೇದವರು ಓಡಿ ಹೋಗಿದ್ದು. ಸದರಿಯವರ ತಾಬಾದಲ್ಲಿಂದ ಒಟ್ಟು 2300/- ರೂಪಾಯಿಗಳು, 52 ಇಸ್ಪೀಟ್ ಎಲೆಗಳು, ಒಂದು ಲಾವಾ ಮೋಬೈಲ್ ಪೋನ್ ಸಹಿತ ಸಿಕ್ಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 213/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.