ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, September 2, 2017

CRIME INCIDENTS 02-09-2017ದಿನಾಂಕ 02-09-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಟದೂರ ಗ್ರಾಮದ ಬಸವಣ್ಣ ದೇವರ ದೇವಸ್ಥಾನದ ಹತ್ತಿರ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1.ಹುನುಮಂತಪ್ಪಾ ತಿರಲಕೊಪ್ಪ ಹಾಗೂ  ಇನ್ನೂ 12 ಜನರು ತಮ್ಮ ತಮ್ಮ ಫಾಯ್ದೆಗೋಸ್ಕರ ಇಸ್ಪೀಟ ಎಲೆಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 2030-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 132/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟದೂರ ಗ್ರಾಮದ ಗ್ರಾಮ ಪಂಚಾಯತಿ ಹತ್ತಿರ ಖುಲ್ಲಾ ಜಾಗೆಯಲ್ಲಿ ಇದರಲ್ಲಿ ಆರೋಪಿತರಾದ1.ಶಿವಾನಂ ಕಜಱಗಿ ಹಾಗೂ ಇನ್ನೂ 21 ಜನರು  ತಮ್ಮ ತಮ್ಮ ಫಾಯ್ದೆಗೋಸ್ಕರ ಇಸ್ಪೀಟ ಎಲೆಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 5985-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕುಂದಗೊಳ ಫೊಲೀಸ್ ಠಾಣೆಯಲ್ಲಿ ಗುನ್ನಾನಂ 133/2017 ಕಲಂ 87 ನೇದ್ದರಲ್ಲಿಕ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ :ಕಮಡೊಳ್ಳಿ ಗ್ರಾಮದ ವಡಗೇರಿ ಓಣಿಯಲ್ಲಿರುವ ಮಹಮ್ಮದ ಸಾಬ ಪತ್ತೆನ್ನವರ ಇವರ ಮನೆಯ ಮುಂದೆ ರಸ್ತೆಯ ಮೇಲೆ ಆರೋಪಿತರಾದ 1) ಲಾಲಸಾಬ @ ತಬರೇಜ ತಂದೆ ಬಾಬುಲಾಲ ಹುಲಗೂರ, 2) ಬಾಬುಲಾಲ ರಾಜೇಸಾಬ ಹುಲಗೂರ, ಸಾ: ಇಬ್ಬರೂ ಕಮಡೊಳ್ಳಿ ಇವರು ಪಿರ್ಯಾದಿ ಹಾಗೂ ಅವನ ತಮ್ಮನೊಂದಿಗೆ ವಿನಾಕಾರಣ ಅವಾಚ್ಯವಾಗಿ ಬೈದಾಡಿ, ಎದೆಯ ಮೇಲಿನ ಅಂಗಿಯನ್ನು ಹಿಡಿದು ಕೈಯಿಂದ ಹೊಡೆ ಬಡೆ ಮಾಡಿ, ಅವರ ತಮ್ಮನನ್ನು ಕೊಲೆ ಮಾಡುವ ಉದ್ದೇಶದಿಂದ ಕಟ್ಟಿಗೆಯ ಒನಕೆಯಿಂದ ತಲೆಗೆ ಹೊಡೆದು ರಕ್ತಗಾಯಪೆಟ್ಟುಗಳಾಗುವಂತೆ ಮಾಡಿ ಕೊಲೆಗೆ ಪ್ರಯತ್ನಿಸಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 134/2017 ಕಲಂ 323.341.307.504.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಕೊಟಬಾಗಿ ಗ್ರಾಮದ ನಿಂಗಪ್ಪಾ ಕುಂಬಾರ ಇವರ  ಮಗಳಾದ ದೀಪಾ ತಂದೆ ನಿಂಗಪ್ಪ.ಕುಂಬಾರ.ವಯಾ-21ವರ್ಷ.ಸಾ:ಕೊಟಬಾಗಿ.ತಾ:ಧಾರವಾಡ ಇವಳು ಕೊಟಬಾಗಿ ಗ್ರಾಮದ ಮನೆಯಿಂದ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನೆಬಿಟ್ಟು ಹೋಗಿದ್ದು ಇಲ್ಲಿಯವರೆಗೆ ಹುಡಿಕಾಡಿದರೂ ಸಿಗದೇ ಕಾಣೆಯಾಗಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 139/2017 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮರೇವಾಡ ಗ್ರಾಮದ ಸರಕಾರಿ ಮಡ್ಡಿಯಲ್ಲಿ  ರಸೋಲ ಸಾಬ ಶೇಖ  ಇವರ ಕುರಿಗಳನ್ನು ಸುಮಾರು 9500/- ರೂ ಕಿಮ್ಮತ್ತಿನ 02 ವರ್ಷದ ಹೊಂತಮರಿಯನ್ನು ಗಿಡಗಂಟೆಗಳಲ್ಲಿ ಮೇಯಿಸುತ್ತಿರುವಾಗ ಹೊಂತಮರಿಯನ್ನು ಕಳವು ಆರೋಪಿತನಾದ ಉಳವಪ್ಪಾ ಗರಗದ  ಇತನು ಮಾಡಿಕೊಂಡು ಹೆಗಲ ಮೇಲೆ ಹೊತ್ತುಕೊಂಡು ಪರಾರಿಯಾಗಿ ಓಡಿ ಹೋಗಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುನ್ನಾನಂ 188/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಇಟ್ಟಿಗಟ್ಟಿ ಗ್ರಾಮದ ಹೈವೆ ಪಕ್ಕದಲ್ಲಿರುವ ರಾಮಪ್ಪ ಹುಗ್ಗೇಣ್ಣವರ ಇವರ  ಮನೆಯ ಮುಂದೆ ನಿಲ್ಲಿಸಿದ HF Delux ಮೋಟರ್ ಸೈಕಲ ಟೆಂಪರರಿ ನಂ KA63/TA001980/2016-17 ಎಂಜಿನ ನಂ HA11EJGGM09966 ಚೆಸ್ಸಿ ನಂ MBLHA11ATGGM10566 ಅ:ಕಿ:10,000/- ನೇದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 189/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.