ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, September 4, 2017

CRIME INCIDENTS 04-09-2017

ದಿನಾಂಕ.04-09-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು


1) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-04-09-2017 ರಂದು 12-00 ಗಂಟೆಗೆ ಇದರಲ್ಲಿಯ ಪಿರ್ಯಾದಿ ಮೆಹಬೂಬಸಾಬ ತಂದೆ ರಾಜೇಸಾಬ ಹಾದಿಮನಿ ಸಾ..ಮಿಶ್ರಿಕೋಟಿ ತನ್ನ ಹೆಂಡತಿಯಾದ ಸೈನಾಜಬಿ ಕೋಂ ಮೆಹಬೂಬಸಾಬ ಹಾದಿಮನಿ 35 ವರ್ಷ ಸಾ..ಮಿಶ್ರಿಕೋಟಿ ಇವಳು ದಿನಾಂಕ-28-08-2017 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ಮನೆಯಿಂದಾ ಧಾರವಾಡಕ್ಕೆ ಹೋಗಿ ದುಡಿದ ಹಣವನ್ನು ಇಸಿದುಕೊಂಡು ಬರುವದಾಗಿ ಹೇಳಿ ಹೋದವಳು ಈವರೆಗೂ ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಾಗಿದ್ದು ಇರುತ್ತದೆ.