ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, September 8, 2017

CRIME INCIDENTS 08-09-2017ದಿನಾಂಕ 08-09-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ-ಧಾರವಾಡ  ಬೈಪಾಸ ರಸ್ತೆ ಇಟ್ಟಿಗಟ್ಟಿ ಗ್ರಾಮದ ಹತ್ತಿರ ಹೊಂಡಾ ಬ್ರಿಯೋ ಕಾರ ನಂ  KA-25-MB-7566  ನೇದರ ಚಾಲಕನು ತನ್ನ ಕಾರನ್ನು ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡಗೆ ಅತಿಜೋರಿನಿಂದ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಾರನ ವೇಗ ನಿಯಂತ್ರಣ ಮಾಡಲಾಗದೇ ತನ್ನ ಮುಂದೆ ಅದೇ ಮಾರ್ಗವಾಗಿ ಹೋಗುತ್ತಿದ್ದ ಕಾರ ನಂ MH-14-DN-9442  ನೇದಕ್ಕೆ ಹಿಂದೆ ಡಿಕ್ಕಿಪಡಿಸಿ ಕಾರನ್ನು ಜಖಂಗೊಳಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 191/2017 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ತಲಱಘಟ್ವ ಗ್ರಾಮದ ಮೃತ  ಮಂಜುನಾಥ ಹೂಗಾರ ಇತನು ಮಲಪ್ರಭಾ ಗ್ರಾಮೀಣ ಬ್ಯಾಂಕಿನಲ್ಲಿ 1 ಲಕ್ಷ್ 50 ಸಾವಿರ ಹಾಗೂ ಅಲ್ಲಲ್ಲಿ ಕೈಗಡ ಅಂತಾ ಸುಮಾರು 4 ಲಕ್ಷ ರೂಗಳನ್ನು ಬೆಳೆಗಾಗಿ ಸಾಲ ಮಾಡಿದ್ದರಿಂದ ಅದನ್ನು ಹೇಗೆ ತೀರಿಸಬೇಕು ಅಂತ ಮನಸ್ಸಿಗೆ ಹಚ್ಚಿಕೊಂಡು ಅದೇ ಮಾನಸೀಕತೆಯಿಂದ ದಿನಾಂಕಃ 07/09/2017 ರ ಸಾಯಂಕಾಲ 7-00 ಗಂಟೆಯಿಂದ 8-30 ಗಂಟೆ ನಡುವಿನ ಅವಧಿಯಲ್ಲಿ ಹರಕುಣಿ ದಾರಿಯಲ್ಲಿರುವ ನಮ್ಮ ಹೊಲದಲ್ಲಿ ಯಾವುದೋ ಒಂದು ವಿಷಕಾರಕ ಎಣ್ಣೆಯನ್ನು ಕುಡಿದಿದ್ದು ಅವನಿಗೆ ಉಪಚಾರಕ್ಕೆ ಅಂತಾ ಕುಂದಗೋಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾಗ ಅಲ್ಲಿ ಅವನಿಗೆ ಉಪಚರಿಸಿದ ವೈದ್ಯಾಧಿಕಾರಿಗಳು ಮರಣ ಹೊಂದಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 14/2017 ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ತಡಕೋಡ ಗ್ರಾಮದ ಮೃತಃ ವೀರಭದ್ರಪ್ಪ ತಂದೆ ಸಿದ್ದಪ್ಪ ಉಳ್ಳಾಗಡ್ಡಿ. ವಯಾಃ 23 ವರ್ಷ. ಸಾಃ ತಡಕೋಡ. ಇವನು ತನಗಿದ್ದ ಬೆನ್ನು ನೋವು ಮತ್ತು ಕಾಲುಗಳ ನೋವಿನ ಬಾದೆ ತಾಳಲಾರದೇ ತನ್ನ ಜೀವನದಲ್ಲಿ ಜೀಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೆ , ದಿನಾಂಕಃ 08/09/2017 ರಂದು ಮುಂಜಾನೆ 09.00 ಗಂಟೆಯಿಂದ ಮದ್ಯಾಹ್ನ್ 01.00 ಗಂಟೆ ನಡುವಿನ ಅವಧಿಯಲ್ಲಿ ತನ್ನ ಮನೆಯ ಪಡಸಾಲಿನಲ್ಲಿರುವ ಕಟ್ಟಿಗೆಯ ಬೆಲಗಿಗೆ ಒಂದು ಹಗ್ಗದ ಸಹಾಯದಿಂದ ತನ್ನಷ್ಟಕ್ಕೆ ತಾನೆ ಉರುಲು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ವಿನಾಃ ಸದರಿಯವನ ಸಾವಿನಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತನ ಹೆಂಡತಿ ಮಂಜುಳಾ ಫಿಯಾಧಱ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 40/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಗ್ರಾಮದ ಮೃತ ರವಿ ತಂದೆ ರೂಪ್ಲೆಪ್ಪ ಲಮಾಣಿ ವಯಾ 32 ವರ್ಷ ಸಾ|| ಮಾಚಾಪೂರ ತಾಂಡಾ ಇವನು ಕುಡಿಯುವ ಚಟದವನು ಇದ್ದು ಕುಡಿದ ಅಮಲಿನಲ್ಲಿ ವಿನಾ ಕಾರಣ ಅವನ ಹೆಂಡತಿ ಸಂಗಡ ತಂಟೆ ತಕರಾರು ಮಾಡುತ್ತಾ ಬಂದವನು ತನಗಿದ್ದ ಮಾನಸಿಕ ತೊಂದರೆಯಿಂದ ತನ್ನ ಜೀವನದಲ್ಲಿ ಬೆಸರಗೊಂಡು ಮನೆಯಲ್ಲಿ ಯಾರು ಇಲ್ಲದ ವೇಳೆ ತಾನಾಗಿಯೇ ಪತ್ತಲ ಸಹಾಯದಿಂದ ಮನೆಯ ಜಂತಿಗೆ ಪತ್ತಲ ಕಟ್ಟಿ ಕುತ್ತಿಗೆಗೆ ಉರಲು ಹಾಕಿಕೊಂಡು ಅಟ್ಟದ ಮೇಲಿಂದ ಕೆಳಗೆ ಹಾರಿ ಮೃತಪಟ್ಟಿದ್ದು ಅವನ ಮರಣದಲ್ಲಿ ಬೇರೆ ಯಾವ ಮತ್ತು ಯಾರ ಮೇಲೆಯು ಸಂಶಯ ಇರುವದಿಲ್ಲಾ ಅಂತಾ ಮೃತನ ಹೆಂಡತಿ ಫಿಯಾಱಧೀ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 53/2017 ಕಲಂ  174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ವರೂರ ಹದ್ದಿಯ ಜಗದೀಶ ಡಾಬಾದ ಹಿಂದಿನ ಖುಲ್ಲಾ ಜಾಗೆಯಲ್ಲಿ ಯಾರೋ ಆರೋಪಿತರು ಪಿರ್ಯಾಧಿ ದೇವಪ್ಪ ಬಸಪ್ಪ ತೆಳಗಿನಮನಿ ಸಾ!! ವರೂರ ಇವರ ಒಟ್ಟು 10 ಕುರಿಗಳು, ಲಕ್ಷ್ಮಣ ಸಿದ್ದಪ್ಪ ರಾಣಿಕಿ ಸಾ!! ಹುಕ್ಕೇರಿ ಇವರ ಒಟ್ಟು 5 ಕುರಿಗಳು, ಬರಮಪ್ಪ ಡಾಕಪ್ಪ ತೆಳಗಿನಮನಿ ಸಾ!! ವರೂ ಇವರ ಒಟ್ಟು 10 ಕುರಿಗಳು, ಬಸವರಾಜ ಪಂಚಾಕ್ಷರಿ ಕುರನಾಳ ಸಾ!! ಸಂಗೆದೇವರಕೊಪ್ಪ ತಾ!! ಕಲಘಟಗಿ ಇವರ ಒಟ್ಟು 5 ಕುರಿಗಳು ಇವೇಲ್ಲವುಗಳ ಒಟ್ಟು ಅ!!ಕಿ!! 1,80,000 ರೂಪಾಯಿ ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 379 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ