ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, September 9, 2017

CRIME INCIDENTS 09-09-2017

ದಿನಾಂಕ 09-09-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ಣಾವರದ ಎ,ಪಿ,ಎಮ್,ಸಿ ಹತ್ತಿರ ಇರುವ ಅಳ್ನಾವರ ಧಾರವಾಡ ರಸ್ತೆಯ ಮೇಲೆ ಗೂಡ್ಸ ವಾಹನ ನಂ, ಜಿ,ಎ 08 ವಿ 0113 ನೇದ್ದರ ಚಾಲಕನಾದ ಮೊಹಮ್ಮದ ಶಪಿ ತಂದೆ ಬಾಬುಮಿಯಾ ಶೇಖ ಸಾ: ಗೋವಾ ಕಾರೇವಾಡ ತನ್ನ ಗೂಡ್ಸ ವಾಹನದಲ್ಲಿ ಅಳ್ಣಾವರದ ಇಸ್ಮಾಯಿಲ್ ಅಮೀರಅಹ್ಮಜಾ ಬೇಪಾರಿ & ಇಬ್ರಾಹಿಂ ತಂದೆ ಹಬೀಬ ಬೇಪಾರಿ & ಶಂಶುದ್ದೀನ ಲಾಲಾ ಬೇಪಾರಿ ಸಾ; ಗೋವಾ ಕಾರೇಬಾನ ರವರ ಸಹಾಯುದಿಂದ ದನಗಳ ಮಾಂಸವನ್ನು ಯಾವುದೇ ಪ್ರಾಧಿಕಾರದಿಂದ ಪರವಾಣೀಗೆ ಪಡೆಯದೇ , ಪಾಸ್ ವ ಪರಮಿಟ್ ಇಲ್ಲದೇ ದನಗಳ ಮಾಂಸವನ್ನು ಸಾಗಾಟ ಮಾಡುತ್ತಿದ್ದಾಗ,  ಗೂಡ್ಸ ವಾಹನದ ಚಾಲಕನಾದ ಮೊಹಮ್ಮದ ಶಪೀ ತಂದೆ ಬಾಬಾಮಿಯಾ ಶೇಖ ಸಾ: ವಾಸ್ಕೋ ಕಾರೇವಾಡಾ ಅವನು ಸಿಕ್ಕಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 104/2017 ಕಲಂ KARNTAKA PREVENTION OF COW SLANGHTER & CATTLE PREVENTION ACT-1964 (U/s-8,5); PREVENTION OF CRUELTY TO ANIMALS ACT, 1960 (U/s-11); IPC 1860 (U/s-429,34) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ.

2.  ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಶಹರದ ವಿದ್ಯಾನಗರದಲ್ಲೀರುವ  ಚಂದ್ರಶೇಖರ ಕೋಟೋರ ಇವರ ಮನೆಯಲ್ಲಿ ಇರುವ ಕಟ್ಟಿಗೆಯ ಕಪಾಟಿನಲ್ಲಿ ಇದ್ದ 1) ಒಂದು ಜೊತೆ ಹಳೆಯ ಬಂಗಾರದ ಮತ್ತು ವಜ್ರದ ಓಲೆಗಳು ಅಕಿ 40,000/- 2) ಒಂದು ಜೊತೆ ಬಂಗಾರದ ಪಾಟ್ಲಿಗಳು ಕೈಯಲ್ಲಿ ಹಾಕಿಕೊಳ್ಳುವವು 5 ತೊಲೆ ಇದ್ದವುಗಳು ಹಳೆಯವು ಅಕಿ 50,000/- ಇವುಗಳನ್ನು ಯಾರೋ ಕಳ್ಳರು ಕಪಾಟಿನ ಕೀಲಿಯನ್ನು ಮೀಟಿ ಮುರಿದು ತೆಗೆದು ಕಳ್ಳತನ ಮಾಡಿಕೊಂಡು ಹೋಗಿದ್ದ ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 123/2017 ಕಲಂ454.380 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಯರಗುಪ್ಪಿ ಗ್ರಾಮದ  ಆರೋಪಿತರಾದ 1.ಸಿದ್ದಪ್ಪ ಪಕ್ಕೀರಪ್ಪ ಮಂಟೂರ,ಹಾಗೂ ಇನ್ನೂ 04 ಜನರು ಕೊಡಿಕೊಂಡು  ಫಿಯಾಱಧಿ ರತ್ನವ್ವಾ ಮಂಟೂರ ಸಾ: ಯರಗುಪ್ಪಿ ಈತನು ಕಳೆದ 7 ವರ್ಷದ ಹಿಂದೆ ಮದುವೆಯಾಗಿದ್ದು, ನಂತರ 3 ವರ್ಷದವರೆಗೆ ಚನ್ನಾಗಿ ನೋಡಿಕೊಂಡಿದ್ದು, ಪಿರ್ಯಾದಿಗೆ ಜನಿಸಿದ್ದ ಗಂಡು ಮಗು ತೀರಿಕೊಂಡಿದ್ದರಿಂದ, ಸದರ ಆರೋಪಿತರು ತಮಗೆ ಗಂಡು ಮಗು ಬೇಕಾಗಿದೆ ತಾವು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇವೆ ಅಂತಾ ಕಳೆದ 4 ವರ್ಷದಿಂದ ಪಿರ್ಯಾದಿಗೆ ಮಾನಸೀಕ ಹಾಗೂ ದೈಹಿಕ ಕಿರುಕುಳ ಕೊಡುತ್ತಾ ಬಂದಿದ್ದಲ್ಲದೇ, ಒಪ್ಪಿಗೆಯನ್ನು ಪಡೆಯದೇ 2ನೇ ಮದುವೆಯನ್ನು ಮಾಡಿಸಿ, ಪಿರ್ಯಾದಿಯ ವೈವಾಹಿಕ ಜೀವನಕ್ಕೆ ತೊಂದರೆಯುಂಟು ಮಾಡಿದ್ದಲ್ಲದೇ, ಪಿರ್ಯಾದಿಗೆ ಮಾನಸೀಕ ಹಾಗೂ ದೈಹಿಕ ಕಿರಕುಳ ನೀಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 140/2017 ಕಲಂ 498 ಎ 494.34 ಐಪಿಸಿ ನೇದ್ದರಲ್ಲಿ ಪ್ರಕನವ್ನನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕುಸುಗಲ್ಲ ಗ್ರಾಮದ ಹನಮಂತಪ್ಪ ಭೀಮಪ್ಪ ತೋಟದ ವಯಾಃ 54 ವರ್ಷ ಉದ್ಯೋಗ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಡಿಗೆ ಮಾಡುವ ಕೆಲಸ ಸಾಃ ಕುಸುಗಲ್ಲ ಇತನು ಹೊಟ್ಟೆ ನೋವಿನ ಜೌಷಧ ಡಬ್ಬಿ ಎಂದು ತಿಳಿದು ಆಕಸ್ಮಾತಾಗಿ ಹತ್ತಿ ಬೆಳೆಗೆ ಹೊಡೆಯುವ ಕ್ರೀಮಿನಾಷಕ ಎಣ್ಣೆಯನ್ನು ಕುಡಿದು ತ್ರಾಸ ಮಾಡಿಕೊಂಡು ಉಪಚಾರಕ್ಕೆಂದು ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ತಂದು ದಾಖಲಿಸಿದ್ದು ನಂತರ ದಿನಾಂಕ 06/09/2017 ರಂದು ಹೆಚ್ಚಿನ ಉಪಚಾಕ್ಕೆಂದು ಸಿಟಿ ಕ್ಲಿನಿಕ್ ಆಸ್ಪತ್ರೆಗೆ ತಂದು ದಾಖಲಿಸಿದ್ದು ಅದೆ. ಇಂದು ದಿನಾಂಕ 09/09/2017 ರಂದು ಮುಂಜಾನೆ 5-45 ಗಂಟೆಗೆ ಉಪಚಾರ ಫಲಿಸದೆ ಮೃತಪಟ್ಟಿರುತ್ತಾನೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 39/2017 ಕಲಂ 174 ಸಿ.ಆರ್.ಪಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ