ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, September 10, 2017

CRIME INCIDENTS 10-09-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 10-09-2017 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-22/ಎಪ್-1773 ನೇದ್ದರ ಚಾಲಕ ಸುಭಾಸ್ ಮುದಕಪ್ಪ ಮುದೇನೂರ ಈತನು ತನ್ನ ವಾಹನವನ್ನು ಹಂಚಿನಾಳ ಕಡೆಯಿಂದ ಅಳಗವಾಡಿ ಕಡೆಗೆ ಅತೀ ಜೋರಿನಿಂದ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಹೋಗಿ ಹೆಬ್ಬಾಳ ಕ್ರಾಸ್ ಹತ್ತಿರ ರೋಡ್ ಹಂಪ್ಸ್ ಒಮ್ಮಿಲೆ ದಾಟಿಸಿದ್ದರಿಂದ ತುರ್ತು ಕಿಡಕಿಯ ಲಾಕ್ ಓಪನ್ ಆಗಿದ್ದರಿಂದ ಕಿಡಕಿಯ ಹತ್ತಿರ ಕುಳಿತಿದ್ದ ಪಿರ್ಯಾದಿಯ ಮಗನಿಗೆ ಬಸ್ಸಿನಿಂದ ಕೆಳಗೆ ಬೀಳುವಂತೆ ಮಾಡಿ ಭಾರೀ ಗಾಯ ಪಡಿಸಿದ ಅಪರಾಧ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 110/2017 ಕಲಂ 279,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ಆರೋಪಿ ಮುದಕಪ್ಪ ವೆಂಕೆಬಾ ಇತನು ದಿನಾಂಕ:-10-09-2017 ರಂದು ಸಮಯ ಮಧ್ಯರಾತ್ರಿ 01-30 ಗಂಟೆಯ ಸುಮಾರಿಗೆ  ತಾನು ಚಲಾಯಿಸುತ್ತಿದ್ದ ಲಾರಿ ನಂ ಎಪಿ-21/ಟಿಯು-4065 ನೇದ್ದನ್ನು ಹುಬ್ಬಳ್ಳಿಯಿಂದ ಹೆಬಸೂರ ಕರ್ಲವಾಡ ಮಾರ್ಗವಾಗಿ ನವಲಗುಂದ ಕಡೆಗೆ ಬರುತ್ತಿದ್ದಾಗ ಅರೆಕುರಹಟ್ಟಿ -ಯಮನೂರ ಮಾರ್ಗ ಮಧ್ಯದಲ್ಲಿ  ಸದರ ವಾಹನದ ಚಾಲಕನು ಅತಿಜೋರಿನಿಂದ ನಿಷ್ಕಾಳಜಿತನದಿಂದ  ವಾಹನವನ್ನು ನಡೆಯಿಸಿಕೊಂಡು ಬಂದು ವೇಗದ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಮಾಡಿ ಜಖಂಗೊಳಿಸಿದ  ಅಪರಾಧ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 111/2017 ಕಲಂ 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ಆರೋಪಿತರಾದ ಹರೀಶ ನಾರಾಯಣರೆಡ್ಡಿ ಕಲಱವಾಡ ಮತ್ತು ಇನ್ನೋಬ್ಬ್ ಇವರಿಬ್ಬ್ ರೂ ಮೋಟರ್ ಸೈಕಲ್ ನಂ ಕೆಎ-25 ಇಎ-0122 ನೇದ್ದನ್ನು  ಪಿರ್ಯಾದಿ ಎಸ್. ಎಚ್. ಬೆಣ್ಣಿ ಇವರು ಚಲಾಯಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ  ಬಸ್ ನಂ ಕೆಎ-42 ಎಫ್-973 ನೇದ್ದರ ಮುಂದೆ ರಸ್ತೆಯ ಮಧ್ಯದಲ್ಲಿ ಚಲಾಯಿಸುತ್ತಿರುವಾಗ ಪಿರ್ಯಾದಿಯು ಹಾರನ್ ಹಾಕಿದ್ದು ಸರಿಯದೆ ಇದ್ದಾಗ ಮತ್ತೆ ಮೂರು ನಾಲ್ಕು ಬಾರಿ ಹಾರನ್ ಹಾಕಿದರೂ ಸರಿಯದೆ ಸದರಿ ಪಿರ್ಯಾದಿಯು ಚಲಾಯಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ  ಬಸ್ಸನ್ನು   ಅಡ್ಡಗಟ್ಟಿ ತರುಬಿ ಪಿರ್ಯಾದಿಗೆ ಆರೋಪಿತರಿಬ್ಬರೂ ಕೈಯಿಂದ ಹಾಗೂ ಕಲ್ಲಿನಿಂದ ಹೊಡಿ-ಬಡಿ ಮಾಡಿ  ಪಿರ್ಯಾದಿಯ ಸರಕಾರಿ ಕೆಲಸಕ್ಕೆ ಅಡೆತಡೆ ಮಾಡಿ ಅವಾಚ್ಯ ಬೈದಾಡಿ ಇನ್ನೊಂದು ಸಲ ಈ ರೋಟಿಗೆ ಬಂದರೆ ನಿಮ್ಮನ್ನು ಬಿಡುವುದಿಲ್ಲ ಅಂತಾ ಜೀವದ ಧಮಕಿ ಹಾಕಿದ ಅಪರಾಧ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 112/2017 ಕಲಂ IPC 1860 (U/s-341,323,324,353,504,506,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 05-09-2017 ರಂದು ಆರೋಪಿ ಗಿರಿಯಪ್ಪ ಕುಂಬಾರ ಇತನು ತಾನು ಚಲಾಯಿಸುತ್ತಿದ್ದ ಬಜಾಜ ಎಮ್.80 ಮೋಟರ್ ಸೈಕಲ್ ನಂಬರ್ ಕೆಎ-37/ಇ 2163 ನೇದ್ದನ್ನು ರಾಷ್ಟ್ರಿಯ ಹೆದ್ದಾರಿ 63 ಗದಗ ಹುಬ್ಬಳ್ಳಿ ರಸ್ತೆಯ ಆರೇರ ಬ್ರಿಡ್ಜ ಹತ್ತಿರ ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿ ವೇಗ ನಿಯಂತ್ರಣ ಮಾಡದೇ ಸ್ಕಿಡ್ ಮಾಡಿ ಕೆಡವಿ ಅಪಘಾತ ಪಡಿಸಿ ತನಗೆ ಭಾರೀ ಪ್ರಮಾಣದ ಗಾಯವನ್ನು ಮಾಡಿಕೊಂಡು ಉಪಚಾರ ಫಲಿಸದೇ ದಿನಾಂಕ 10-09-2017 ರಂದು 13-00 ಘಂಟೆಗೆ ಮರಣ ಹೊಂದಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 124-2017 ಕಲಂ 279 304 (ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

5.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 10-09-2017 ರಂದು 0845 ಗಂಟೆ ಸುಮಾರಿಗೆ ನುಗ್ಗಿಕೇರಿ ಗ್ರಾಮದ ಕೆರೆಯ ದಂಡೆಯ ಮೇಲೆ ಅರೋಪಿರಾದ ಹನಮಂತಗೌಡ ಪಾಟೀಲ, ಮಹಮ್ಮದ ಶರೀಫ ಕಿರಸಾಲ,  ಹೈದರಲಿ ಬಲ್ಲಬಟ್ಟಿ  ಮತ್ತು ಮಂಜುನಾಥ ಹೊಸಮನಿ ಇವರೆಲ್ಲರೂ ತಮ್ಮ ಸ್ವಂತ ಪಾಯ್ದೆಗೋಸ್ಕರ ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 4200 & ಇಸ್ಪೀಟ ಏಲೆಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 193-2017 ಕಲಂ 87 ಕೆ.ಪಿ.ಅ್ಯ್ ಕ್ಟ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
6. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 10-09-2017 ರಂದು 1130 ಗಂಟೆಗೆ ಪುಣಾ ಬೆಂಗಳೂರ ರಸ್ತೆ ನರೇಂದ್ರ ಕ್ರಾಸ ಹತ್ತಿರ ಆರೋಪಿ ಶಂಕ್ರಪ್ಪ ಕಲ್ಲೇದ  ಇತನು ತನ್ನ ಸ್ವಂತ ಪಾಯ್ದೆಗೋಸ್ಕರ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ ಯಾವುದೇ ಪಾಸು ವ ಪರ್ಮಿಟ ಪಡೆಯದೇ ಒಂದು ಕೆಂಪು ಕಲರಿನ ಕೈ ಚೀಲದಲ್ಲಿ ಒಟ್ಟು 06 ಓಲ್ಡ್ ಟಾವರನ ವಿಸ್ಕಿ ತುಂಬಿದ 180 ಎಂ.ಎಲ್  ಅಳತೆಯ ಸರಾಯಿ ಟೆಟ್ರಾ ಪಾಕೀಟಗಳು ಅ:ಕಿ: 412/- ಹಾಗೂ ಒಟ್ಟು 64 ಹೈವರ್ಡ್ಸ ಚಿಯರ್ಸ್ ವಿಸ್ಕಿ ತುಂಬಿದ 90 ಎಂ.ಎಲ್ ಅಳತೆಯ ಸರಾಯಿ ಟೆಟ್ರಾ ಪಾಕೀಟಗಳು ಅ:ಕಿ: 1801/-ನೇದವುಗಳನ್ನು ಅಕ್ರಮವಾಗಿ ತಂದು ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವಾಗ ಸಿಕ್ಕ ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 194-2017 ಕಲಂ KARNATAKA EXCISE ACT, 1965 (U/s-32,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


7. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 09-09-2017 ರಂದು 1930 ಗಂಟೆ ಸುಮಾರಿಗೆ ಧಾರವಾಡ ಅಳ್ನಾವರ ರಸ್ತೆ ಮ್ಯಾಂಗೋ ಮೂಡ್ಸ ಹತ್ತಿರ  ನಮುದು ಮಾಡಿದ ಕಾರ ನಂ ಕೆಎ-25-ಎಂ.ಎ-9020 ನೇದರ ಚಾಲಕನು ತನ್ನ ಕಾರನ್ನು ಅಳ್ನಾವರ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಾರನ ವೇಗ ನಿಯಂತ್ರಣ ಮಾಡಲಾಗದೇ  ಧಾರವಾಡ ಕಡೆಯಿಂದ ಅಳ್ನಾವರ ಕಡೆಗೆ ರಸ್ತೆ ಎಡಸೈಡಿನಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರ ಮೋಟರ್ ಸೈಕಲ್ ನಂ ಕೆಎ-25-ವಾಯ್-1868 ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಪಿರ್ಯಾದಿ ಬಸಪ್ಪ ಹಿರೀಮಠ ಹಾಗೂ ಮೋಟರ್ ಸೈಕಲ ಚಾಲಕ ನಾಗಪ್ಪ ಮೈಲಾರಪ್ಪ ಕುರಗುಂದ ಇವನಿಗೆ ಬಾರೀ ಗಾಯಪಡಿಸಿ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದ ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 195-2017 ಕಲಂ INDIAN MOTOR VEHICLES ACT, 1988 (U/s-134,187); IPC 1860 (U/s-338,279)
ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

8. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 09-09-2017 ರಂದು ರಾತ್ರಿ 8-00 ಗಂಟೆಗೆ ಅಂಚಟಗೇರಿ ಗ್ರಾಮದ, ಬುಡನಾಳ ನರ್ಸರಿ ಹತ್ತಿರ, ಹುಬ್ಬಳ್ಳಿ ಕಾರವಾರ ರಸ್ತೆ ಮೇಲೆ, ಆರೋಪಿ ನಂ. 1 ಮೋಟರ ಸೈಕಲ್ ನಂ. ಕೆಎ-25-ಇ.ಎಸ್-1414 ನೇದ್ದರ ಸವಾರನು ತನ್ನ ಮೋಟರ ಸೈಕಲ್ ನ್ನು ಕಲಘಟಗಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಆರೋಪಿ ನಂ. 2 ಮೋಟರ ಸೈಕಲ್ ನಂ. ಕೆಎ-17-ಇ.ಇ-4760 ನೇದ್ದರ ಸವಾರನು ಮೋಟರ ಸೈಕಲನ್ನು ಹುಬ್ಬಳ್ಳಿ ಕಡೆಯಿಂದ ಕಲಘಟಗಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪರಸ್ಪರ ಡಿಕ್ಕಿ ಮಾಡಿಕೊಂಡು ಅಪಘಾತಪಡಿಸಿಕೊಂಡು, ಮೋಟರ ಸೈಕಲ್ ನಂ. ಕೆಎ-17-ಇ.ಇ-4760 ಸವಾರ ಮಂಜುನಾಥ ರತ್ನಪ್ಪ ಲಮಾಣಿ ಸಾ. ಶಿಗ್ಗಟ್ಟಿ ತಾಂಡಾ ತಾ. ಕಲಘಟಗಿ ಇವನು ತೀವ್ರ ಗಾಯಪಡಿಸಿಕೊಂಡು, ಹಿಂಬದಿ ಸವಾರ ಸುರೇಶ ರತ್ನಪ್ಪ ಲಮಾಣಿ ಸಾ. ಶಿಗ್ಗಟ್ಟಿ ತಾಂಡಾ ತಾ. ಕಲಘಟಗಿ ಇವನಿಗೆ ತೀವ್ರ ಗಾಯಪಡಿಸಿ ಮತ್ತು ಮೋಟರ ಸೈಕಲ್ ನಂ. ಕೆಎ-25-ಇ.ಎಸ್-1414 ನೇದ್ದರ ಸವಾರ ಸಿಕಂದರ ಬಸೀರಅಹ್ಮದ ಶಿಗ್ಗಾವಿ ಸಾ. ಕಾರಡಗಿ ತಾ. ಸವಣೂರ ತಾನೂ ತೀವ್ರ ಗಾಯಪಡಿಸಿಕೊಂಡು, ಮೋಟರ ಸೈಕಲ್ ಹಿಂಬದಿ ಸವಾರ ಸುಲೇಮಾನ ಆಜಾದ ಪಟೇಲ್ ಸಾ. ಕಾರಡಗಿ ತಾ. ಸವಣೂರ ಇವನಿಗೆ ತೀವ್ರ ಗಾಯಪಡಿಸಿ, ಮಂಜುನಾಥ ರತ್ನಪ್ಪ ಲಮಾಣಿ ಸಾ. ಶಿಗ್ಗಟ್ಟಿ ತಾಂಡಾ ತಾ. ಕಲಘಟಗಿ ಮತ್ತು ಸಿಕಂದರ ಬಸೀರಅಹ್ಮದ ಶಿಗ್ಗಾವಿ ಸಾ. ಸವಣೂರ ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಕುರಿತು ದಾಖಲಾಗಿ, ಉಪಚಾರ ಫಲಿಸದೇ ಕಿಮ್ಸ್ ಆಸ್ಪತ್ರೆಯಲ್ಲಿ ಮರಣಪಡಿಸಿಕೊಂಡ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 209-2017 ಕಲಂ IPC 1860 (U/s-279,337,338,304(A))ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.


9. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ:09-09-2017 ರಂದು ಮದ್ಯಾಹ್ನ 14-00 ಗಂಟೆಗೆ ಕಲಗಟಗಿ ತಾಲೂಕಿನ ಗಳಗಿಹುಲಕೊಪ್ಪ ಗ್ರಾಮದ ಅರಿಗೇರಿ ಓಣಿಯಲ್ಲಿ ನಮೂದ ಯಾರೋ ಆರೋಪಿತರು ಪಿರ್ಯಾದಿದಾರಳ ಗಂಡ ಸಂಗಯ್ಯ ಈತನು ತನ್ನ ಎದುರು ಮನೆಯ ಕಾವೇರಿ ಇವಳಿಗೆ ಮೈ ಕೈ ಮುಟ್ಟಿ ಬಲತ್ಕಾರ ಮಾಡಿರುತ್ತಾನೆ ಅಂತಾ ಅವನಿಗೆ ಮನೆಯ ಮುಂದಿನ ಫೊನ ಕಂಬಕ್ಕೆ ಕಟ್ಟಿ ಹಾಕಿ ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಜೀವದ ಬೆದರಿಕೆ ಹಾಕಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 318-2017 ಕಲಂ IPC 1860 (U/s-323,341,504,506) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.