ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, September 12, 2017

CRIME INCIDENTS 12-09-2017ದಿನಾಂಕ 12-09-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ಗರಗ ಪೊಲೀಸ ಠಾಣಾವ್ಯಾಪ್ತಿಯ: ಕೋಟೂರ ಗ್ರಾಮದಲ್ಲಿರುವ ಹೊಸಮನಿಯವರ ಕಿರಾಣೆ ಅಂಗಡಿ ಹತ್ತಿರ ರಸ್ತೆಯ ಹತ್ತಿರ ಆರೋಪಿತರಾದ1.ಜಗ್ಲಿಸಾಬ ಮುಲ್ಲಾಣ್ಣವರ 2.ಇಮಾಮಸಾಬ  ಅಮ್ಮಿಗಡ 3.ರಾಜೇಸಾಬ ಅಮ್ಮಿನಗಡ 4.ಆಸೀಫ ಅಮ್ಮಿನಗಡ ಇವೆರೆಲ್ಲರೂ ಹಳೆಯ ದ್ವೇಷ ಇಟ್ಟುಕೊಂಡು [ಮೃತ] ಬಸವರಾಜ ತಂದೆ ಶಿವಪ್ಪಾ ಪದ್ನೇಶಿ ಇತನ ಸಂಗಡ ತಂಟೆ ತೆಗೆದು ಹಲ್ಕಟ ಬೈದಾಡಿ ಕೈಯಿಂದಾ ಹೊಡೆದು ಕಾಲಿನಿಂದಾ ಒದ್ದು ಜಂಗ್ಲಿಸಾಬನು ಚೂರಿಯಿಂದಾ ಹೊಡೆದು ಎಲ್ಲರೂ ಕೂಡಿಕೊಂಡು ಕೊಲೆ ಮಾಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 144/2017 ಕಲಂ 302.324.504.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನೂಲ್ವೀ ಗ್ರಾಮದ ದ್ಯಾಮವ್ವಳ ಗುಡಿ ಬಾಜುಕ್ಕಿನ ಸಾರ್ವಜನಿಕ ಜಾಗೆಯಲ್ಲಿ ಇದರಲ್ಲಿ ಆರೋಪಿತರಾದ 1) ಸಂಜು ಪರಶುರಾಮ ರಜಪುತ 2) ಮಹ್ಮದಸಾಬ ಹಸನಸಾಬ ಕುರಹಟ್ಟಿ 3) ಸಿದ್ದಾರೂಢ ಬಸಲಿಂಗಪ್ಪ ಅಂಗಡಿ 4) ಮಂಜುನಾಥ ಬಸವಣ್ಣೆಪ್ಪ ಅಂಗಡಿ 5) ಶಿವು ಗಂಗಪ್ಪ ಪರಸನ್ನವರ 6) ಮಂಜು ಫಕ್ಕೀರಪ್ಪ ಇಂಗಳಹಳ್ಳಿ ಇವರುಗಳು ತಮ್ಮ ಪಾಯ್ದೆಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು, ಆ.ನಂ. 4,5,6 ನೇದವರು ಓಡಿ ಹೋಗಿದ್ದು. ಸದರಿಯವರ ಒಟ್ಟು ರೋಖ ರಕ್ಕಂ 2200/- ರೂ, 52 ಇಸ್ಪೀಟ್ ಎಲೆಗಳು, ಎರಡು ಮೋಬೈಲ್ ಸಹಿತ ವಶಪಡಿಸಿಕೊಂಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 212/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯನೂಲ್ವೀ ಗ್ರಾಮದ ಕನ್ನಡ ಶಾಲೆಯ ಹತ್ತಿರದ ಸಾರ್ವಜನಿಕ ಬಯಲು ಜಾಗೆಯಲ್ಲಿ ಇದರಲ್ಲಿಯ ಆರೋಪಿತರಾದ 1) ಮಂಜುನಾಥ ಯಲ್ಲಪ್ಪ ಪಾಟೀಲ 2) ಯಲ್ಲಪ್ಪ ಬಸಪ್ಪ ಬಿಲ್ಲಾರ 3) ಶಂಕ್ರಯ್ಯಾ ಚನ್ನಬಸಯ್ಯಾ ವಸ್ತ್ರದ 4) ಹಸನಸಾಬ ಮೌಲಾಸಾಬ ಬ್ಯಾಹಟ್ಟಿ 5) ಮಹಾಂತೇಶ ರಾಮಪ್ಪ ಹೊಳೆಯಮ್ಮನವರ 6) ರವಿ ಮಲ್ಲಪ್ಪ ಗಣಾಚಾರಿ 7) ದೊಡ್ಡೇಶ ಪರ್ವತಗೌಡ ಹಿರೆಗೌಡ್ರ 8) ಬಸನಗೌಡ ಪರ್ವತಗೌಡ ಮಂಚಪ್ಪನವರ ಇವರುಗಳು ತಮ್ಮ ಪಾಯ್ದೆಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಆ.ನಂ. 1,2,3,4 ನೇದವರು ಸಿಕ್ಕಿದ್ದು, ಆ.ನಂ. 5,6,7,8 ನೇದವರು ಓಡಿ ಹೋಗಿದ್ದು. ಸದರಿಯವರ ತಾಬಾದಲ್ಲಿಂದ ಒಟ್ಟು 2300/- ರೂಪಾಯಿಗಳು, 52 ಇಸ್ಪೀಟ್ ಎಲೆಗಳು, ಒಂದು ಲಾವಾ ಮೋಬೈಲ್ ಪೋನ್ ಸಹಿತ ಸಿಕ್ಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 213/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.