ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, September 13, 2017

CRIME INCIDENTS 13-09-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 13-09-2017 ರಂದು ವರದಿಯಾದ ಪ್ರಕರಣಗಳು

1)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 13/09/2017 ರಂದು ಮುಂಜಾನೆ 11.30 ಗಂಟೆಯ ಸುಮಾರಿಗೆ ಮೃತ ಸುಭಾಸ ತಂದೆ ವಿರುಪಾಕ್ಷಪ್ಪ ಹುಲಿಕಟ್ಟಿ ವಯಾ 50 ವರ್ಷ, ಸಾ: ಅರಳಿಹೊಂಡ ಈತನು ತನ್ನ ಹೊದಲ್ಲಿ ಆಳುಗಳೊಂದಿಗೆ ಸೋಯಾಬಿನ್ ಕಟಾವು ಕೆಲಸ ಮಾಡುತ್ತಿದ್ದಾಗ ಅವನ ಬಲಗಾಲ ಮೊಳಕಾಲ ಕೆಳಗೆ ಯಾವುದೋ ಒಂದು ವಿಷಪೂರಿತ ಹಾವು  ಬಲಗಾಲ ಮೊಳಕಾಲ ಕೆಳಗೆ ಕಚ್ಚಿ ತ್ರಾಸ್ ಮಾಡಿಕೊಳ್ಳುವಾಗ ಉಪಚಾರಕ್ಕೆ ಎಂದು ಮುಕ್ಕಲ್ ಸರಕಾರಿ ದವಾಖಾನೆಗೆ ತೋರಿಸಿ ಅಲ್ಲಿಂದ ಕಲಘಟಗಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಧ್ಯಾಹ್ನ 02.00 ಗಂಟೆಯ ಸುಮಾರಿಗೆ ದವಾಖಾನೆಯ ಒಳಗಿನ ರಸ್ತೆಯ ಮೇಲೆ ಮೃತಪಟ್ಟಿದ್ದು ಅವನ ಮರಣದಲ್ಲಿ ಬೇರೆ ಯಾವುದೇ ಯಾರ ಮೇಲೆ ಸಂಶಯ ವಗೈರೆ ಇರುವುದಿಲ್ಲಾ ಅಂತ ಮೃತನ ಹೆಂಡತಿ ವರದಿ ಕೊಟ್ಟಿದ್ದರನ್ವಯ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

2)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 13-09-2017 ರಂದು ಬೆಳಗಿನ 0100 ಗಂಟೆಯ ಸುಮಾರಿಗೆ ಟಾಟಾ 709 ಗೋಡ್ಸ ಗಾಡಿ ನಂಬರ ಎಮ್ ಎಚ್ 09 /ಸಿ ಎ 6588 ನೇದ್ದನ್ನು ಸದರ ಚಾಲಕ ಜಾಪರ ತಂದೆ ಸಿಕಂದರ ಪಟೀಲ ಸಾ: ಹಿರೆಕೊಡಿ ಇತನು ತಾರಿಹಾಳ ಬ್ರಿಡ್ಜ ಕಡೆಯಿಂದ ಧಾರವಾಡ ಕಡೆಗೆ ಎನ್ ಎಚ್ 4 ರಸ್ತೆಯ ಮೇಲೆ ಅತಿ ಜೋರಿನಿಂದ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು  ನಿಯಂತ್ರಣ ಮಾಡಲಾಗದೆ ಪಲ್ಟಿ ಮಾಡಿ ಕೆಡವಿ ಗೊಡ್ಸ ಗಾಡಿಯನ್ನು ಜಖಂ ಗೊಳಿಸಿದ್ದು ಅಲ್ಲದೆ ಅದರಲ್ಲಿದ್ದ ಸಾಮಾನುಗಳಿಗೊ ಜಖಂ ಗೊಳಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

3)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 13-09-2017ರಂದು 11-00 ಗಂಟೆ ಸುಮಾರಿಗೆ  ಕಲಘಟಗಿ ಶಹರದ 12 ಎತ್ತಿನ ಮಠದ  ಎದುರಿಗೆ ಇರುವ ಮನೆಯ ಹತ್ತಿರ ಎದುರುಗಾರರಾದ 1] ಸಿದ್ದಾರೂಢ ತಂದೆ ಬಸವರಾಜ ಮುರಳಿ, 27 ವರ್ಷ ಜಾತಿ  ಹಿಂದೂ ಲಿಂಗಾಯತ ಉದ್ಯೊ ಡ್ರೈವರ ಸಾ: ಹಾರೋಗೇರಿ  2] ಶಂಕ್ರಪ್ಪ ಕಲ್ಲಪ್ಪ ಹುಲಗೂರ, 28 ವರ್ಷ ಜಾತಿ ಹಿಂದೂ  ಗಾಣಿಗೇರ, ಉದ್ಯೊ ಶೇತ್ಕಿ ಕೆಲಸ ಸಾ: ಹಾರೋಗೇರಿ ಇವರು ಸಂಶಯಾಸ್ಪದವಾಗಿ ತಿರುಗಾಡುತ್ತಾ, ತಮ್ಮ ತಮ್ಮ ಇರುವಿಕೆಯನ್ನು ಮರೆಮಾಚುವ ಮತ್ತು ಸಂಜ್ಞೆಯ ಅಪರಾಧವನ್ನು ಮಾಡಲು  ಹೊಂಚು ಹಾಕುತ್ತಿದ್ದಾಗ ಸಿಕ್ಕಿದ್ದು ಇವನ ಮೇಲೆ ಸೂಕ್ತ ಕ್ರಮ ಕೈಗೊಂಡಿದ್ದು ಇರುತ್ತದೆ.