ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, October 18, 2017

CRIME INCIDENTS 18-10-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 18-10-2017 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 18-10-2017 ರಂದು ಬೆಳಿಗ್ಗೆ 09-30 ಗಂಟೆ ಸುಮಾರಿಗೆ ಆರೋಪಿತನಾದ ಮುತ್ತು ಲಕ್ಷ್ಮಣ ಹರಿಜನ ಸಾ:ಉಮಚಗಿ ಇತನು ತನ್ನ ಹಿರೋ ಎಚ್.ಎಫ್ ಡೀಲಕ್ಷ ಮೋಟರ ಸೈಕಲ ನಂಬರ ಕೆಎ-25/ಈ.ವಾಯ್-4257 ನೇದ್ದನ್ನು ಉಮಚಗಿ ಕಡೆಯಿಂದ ನಲವಡಿ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ತನ್ನ ಬಲಸೈಡಿಗೆ ಬಂದು ನಲವಡಿ ಕಡೆಯಿಂದ ಉಮಚಗಿ ಕಡೆಗೆ ರಸ್ತೆಯ ಎಡಸೈಡಿಗೆ ಹೋಗುತ್ತಿದ್ದ ಮಾರುತಿ ಬೆಲೇನೋ ಕಾರ ನಂ ಕೆ-09/ಎಮ್.ಸಿ-9528 ನೇದ್ದಕ್ಕೆ ಡಿಕ್ಕಿ ಮಾಡಿ ಅಪಗಾತ ಪಡಿಸಿ ಮೋಟರ ಸೈಕಲ ಸವಾರನು ತನಗೆ ಹಾಗೂ ತನ್ನ ಮೋಟರ ಸೈಕಲ ಹಿಂದೆ ಕುಳಿತುಕೊಂಡಿದ್ದ ಸತೀಶ ಲಕ್ಷ್ಮಣ ಹರಿಜನ ಇವನಿಗೆ ಸಾಧಾ ಗಾಯ ಪಡಿಸಿಕೊಂಡ ಅಪರಾಧ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 136-2017 ಕಲಂ 279, 337 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 16/10/2017 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಅಂಚಟಗೇರಿ ಗ್ರಾಮದ ಪ್ಲಾಟ್ ಓಣಿಯಯಲ್ಲಿ ಇರುವ ರಾಯಪ್ಪಾ ನಾಗಪ್ಪಾ ಮಾದರ ಇವರ ಮನೆಯ ಮುಂದೆ ನಿಂತ ಇದರಲ್ಲಿಯ ಪಿರ್ಯಾದಿಯ ಮಗ ಸಮರ್ಥ ವಯಾಃ 3 ವರ್ಷ ಇತನಿಗೆ ಮೋಟರ ಸೈಕಲ್ ನಂಬರ KA-25/ER-8153  ನೇದ್ದರ ಚಾಲಕ  ವಿನಾಯಕ ಮಲ್ಲೇಶಪ್ಪ ಮನಕವಾಡ ಸಾಃ ಹುಬ್ಬಳ್ಳಿ ಟೀಪ್ಪುನಗರ ಇತನು  ಅಂಚಟಗೇರಿ ಗ್ರಾಮದ ಕಡೆಯಿಂದ ತಿಮ್ಮಸಾಗರ ಕಡೆಗೆ ಅತಿ ವೇಗ ವ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಢಿಕ್ಕಿ ಮಾಡಿ ಅಪಘಾತಪಡಿಸಿ ಭಾರಿ ಗಾಯಪಡಿಸಿದ ಅಪರಾಧ. ಈ ಕುರಿತು  ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 241-2017 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 17-10-2017 ರಂದು 1930 ಗಂಟೆಗೆ ಧಾರವಾಡ ನವಲಗುಂದ ರಸ್ತೆ ಶಿವಳ್ಳಿ ಗ್ರಾಮದ ಸಮೀಪ್ ಉಣಕಲ್ ಕ್ರಾಸ ಹತ್ತಿರ ಕಾರ ನಂ ಕೆಎ-24-ಎಂ-4926 ನೇದ್ದರ ಚಾಲಕ ಪ್ರಸನ್ನ ಪಟ್ಟಣಶೆಟ್ಟಿ ಇವನು ತನ್ನ ಕಾರನ್ನು ಧಾರವಾಡ ಕಡೆಯಿಂದ ನವಲಗುಂದ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು  ಕಾರನ ವೇಗ ನಿಯಂತ್ರಣ ಮಾಡಲಾಗದೇ ನವಲಗುಂದ ಕಡೆಯಿಂದ ಧಾರವಾಡ ಕಡೆಗೆ ರಸ್ತೆ ಎಡಸೈಡಿನಲ್ಲಿ ಬರುತ್ತಿದ್ದ ಮೋಟರ್ ಸೈಕಲ್ ನಂ ಕೆಎ-25-ಈಎ-8712 ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಮೋಟರ್ ಸೈಕಲ ಚಾಲಕ ಫಕ್ಕೀರಪ್ಪ ನಿಂಗಪ್ಪ ದುಪ್ಪಲಾಪೂರ ಹಾಗೂ ಮೋಟರ್ ಸೈಕಲ ಹಿಂಬದಿ ಸವಾರ ಕಲ್ಲಪ್ಪ ಫಕ್ಕೀರಪ್ಪ ಮುಶಲ್ಲನವರ ಇವರಿಗೆ ಸಾದಾ ವ ಬಾರೀ ಗಾಯಪಡಿಸಿದ ಅಪರಾಧ. ಈ ಕುರಿತು   ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 244-2017 ಕಲಂ 279,337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

Tuesday, October 17, 2017

CRIME INCIDENTS 17-10-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-10-2017 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಇಬ್ರಾಹಿಂಪೂರ ಗ್ರಾಮದ ಬಸ್ ನಿಲ್ದಾಣದ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತನಾದ ಹನುಮಪ್ಪ ತಳವಾರ ಇತನು ಅಂಕಿ ಸಂಖ್ಯೆಗಳ ಆಧಾರದ ಮೇಲೆ  1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಓ.ಸಿ. ಚೀಟಿ ಬರೆದುಕೊಡುತ್ತಾ  ಓ.ಸಿ. ಜೂಜಾಟದಲ್ಲಿ ತೊಡಗಿದ್ದಾಗ ಸಿಕ್ಕಿದ್ದು  ಅವನಿಂದ ರೂ 830-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 126/2017 ಕಲಂ 78(3) ಕೆ.ಪಿ.ಆಕ್ಟ್ ನೇದ್ದರ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ : ಅಗಡಿ ಕ್ರಾಸ್ ಹತ್ತಿರ ಆರೋಪಿನಾದ ರಾಮನಾಥ ಹಿರಾಲಾಲ್ ದೊಡ್ಡಮನಿ ಸಾಃ ಶಿರಶಿ ಇತನು ತಾನು ನಡೆಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸ ನಂಬರ ಕೆ.ಎ-42/ಎಫ್-1254 ನೇದ್ದನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ತನ್ನ ಮುಂದೆ ಹೊರಟ ಪಿರ್ಯಾದಿ ಮೋಟರ ಸೈಕಲ್ ನಂಬರ ಕೆ.ಎ-25/ಇ.ಆರ್-2659 ನೇದ್ದಕ್ಕೆ ಹಿಂದಿನೀದ ಢಿಕ್ಕಿ ಮಾಡಿ ಶ್ರೀನಿವಾಸ ಕರಡಿ ಇತನಿಗೆ ಹಾಗೂ ಮೊಟರ ಸೈಕಲ್ ಹಿಂದೆ ಕುಳಿತ  ಅನ್ನಪೂಣಱ ಇವರಿಗೂ ಸಾದಾ ವ ಭಾರಿ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 240/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Monday, October 16, 2017

CRIME INCIDENTS 16-10-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-10-2017 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪೂನಾ ಬೆಂಗಳೂರು ರಸ್ತೆ ಮೇಲೆ, ತಡಸ ಕ್ರಾಸ್ ಹತ್ತಿರ, ಗಣೇಶ ಡಾಬಾದ ಎದುರಿಗೆ ರಸ್ತೆಯ ಮೇಲೆ, ಆರೋಪಿ ಕಾರ ನಂ. ಜಿ.ಜೆ-15-ಸಿ.ಎಫ್-2760 ನೇದ್ದರ ಚಾಲಕ ಮೂರ್ತಿ @ ಮೂರ್ತಿಭಾಯಿ ಪಟೇಲ್ ತಂದೆ ಮೂಕಯ್ಯ @ ಮೂಕ್ಯಾಭಾಯಿ ಪಟೇಲ್ ಸಾ. ಸದಾಚಿಪಟ್ಟಿ ತಾ. ಉಸಿಲಂಪಟ್ಟಿ ಜಿ. ಮಧುರೈ ತಮಿಳುನಾಡು ಇವನು ಕಾರನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಕಾರ ನಿಯಂತ್ರಣ ತಪ್ಪಿ ರಸ್ತೆಯ ಎಡಗಡೆ ಸೈಡ ಇರುವ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಮಾಡಿ, ಕಾರನ್ನು ಪಲ್ಟಿ ಮಾಡಿ, ಕಾರನಲ್ಲಿದ್ದ ಸುನೀಲ್ ಶಂಕ್ರಪ್ಪ ಬೆಂಡಿಗೇರಿ ಸಾ. ಮಾವೂರ ತಾ. ಸವಣೂರ ಜಿ. ಹಾವೇರಿ ಇವನಿಗೆ ಎಡಗೈಗೆ ತೀವ್ರ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 239/2017 ಕಲಂ 279.338.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಗುಡಗೇರಿ ಗ್ರಾಮದ ಹತ್ತಿರ ಆರೋಪಿತನಾದ ಪ್ರಶಾಂತಗೌಡ ಹಿರೇಗೌಡ್ರ ಇತನು ಜನರಿಗೆ ಭಯ ಹುಟ್ಟುವ ರೀತಿಯಲ್ಲಿ ಚೀರಾಡುವುದು, ಬೈದಾಡುವುದು ಮಾಡುತ್ತಾ ಗ್ರಾಮದಲ್ಲಿ ಜನರಿಗೆ ಭಯವಾಗುವ ರೀತಿಯಲ್ಲಿ ವರ್ತಿಸುತ್ತಾ ತಿರುಗಾಡುತ್ತಿದ್ದು ಅವನಿಗೆ ಎಷ್ಟೇ ಬುದ್ಧಿವಾದ ಹೇಳಿದರೂ ಅವನು ಯಾರ ಮಾತನ್ನೂ ಕೇಳದವನು, ದುಷ್ಟನು, ಹುಂಬನು, ಅಂತಾ ಕಂಡು ಬಂದಿದ್ದರಿಂದ ಅಲ್ಲದೇ ಅವನು ಪದೇ ಪದೇ ಇದೇ ರೀತಿಯಲ್ಲಿ ಗ್ರಾಮದಲ್ಲಿ ಜನರಿಗೆ ಭಯವಾಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ತಿಳಿದು ಬಂದಿದ್ದರಿಂದ ಅವನು ಯಾವ ವೇಳೆಗೆ ಯಾರಿಗೆ ಯಾವ ಅನಾಹುತ ಮಾಡುತ್ತಾನೋ ಯಾರ ಆಸ್ತಿ ಪಾಸ್ತಿಗೆ ಲುಕ್ಷಾನು ಮಾಡುತ್ತಾನೋ ಅಂತಾ ಹೇಳಲು ಬಾರದ್ದರಿಂದ ಸದರಿಯವನ ಮೇಲೆ ಗುನ್ನಾನಂ 69/2017 ಕಲಂ; 110 ಇ & ಜಿ ಸಿ,ಆರ್,ಪಿ,ಸಿ ಪ್ರಕಾರ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ.

3.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ನಾವಳ್ಳಿ ಗ್ರಾಮದ ಆರೋಪಿತನಾದ ಮಂಜುನಾಥ ಶಿವರೆಡ್ಡಿ ಇತನು ಪಿರ್ಯಾದಿಯ ಮಗಳು ಲಕ್ಷಿ ಕೋಂ ವಿಠ್ಠಲರೆಡ್ಡಿ ಲಕ್ಷಾಣಿ ಇವಳಿಗೆ ಅನೈತಿಕ ಸಂಬಂದಕ್ಕೆ ಸಹಕಾರ ಮಾಡುವಂತೆ ಮಾನಸಿಕ ಹಿಂಸೆ ನೀಡುತ್ತಾ ಬಂದಿದ್ದು ಅಲ್ಲದೇ ದಿನಾಂಕ 07-09-2017 ರಂದು ಮದ್ಯಾಹ್ನ 03-30 ಗಂಟೆಗೆ ಆರೋಪಿತನು ಪಿರ್ಯಾದಿಯ ಮಗಳ ಮನೆಗೆ ಹೋಗಿ ತನ್ನ ಜೊತೆ ಅನೈತಿಕ ಸಂಬಂದಕ್ಕೆ ಸಹಕರಿಸುವಂತೆ ತಂಟೆ ಮಾಡಿದ್ದು ಇದರಿಂದ ಮನನೊಂದು ಬೇಸತ್ತು ಲಕ್ಷಿ ವಿಠ್ಠಲರೆಡ್ಡಿ ಲಕ್ಷಾಣಿ ಇವಳು ತನ್ನಷ್ಟಕ್ಕೆ ತಾನೇ ಮೈ ಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಸುಟ್ಟ ಗಾಯ ಮಡಿಕೊಂಡು ಉಪಚಾರಕ್ಕೆ ಅಂತಾ ದಾಖಲಿಸಿದರೂ ಉಪಚಾರ ಫಲಿಸದೇ  ಮೃತಪಟ್ಟಿದ್ದು ಕಾರಣ ಆರೋಪಿತನು ಮಗಳಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 134/2017 ಕಲಂ 306 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
Sunday, October 15, 2017

CRIME INCIDENTS 15-10-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:15-10-2017 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಛಬ್ಬಿ ಗ್ರಾಮದ ಹತ್ತಿರ ಆರೋಪಿತನಾದ ಆನಂದ ಶಾಂತಪ್ಪ ಹುಲ್ಲಂಬಿ ಸಾಃ ಛಬ್ಬಿ ಇವನು ಪಾಸ ವ ಪರ್ಮಿಟ ಇಲ್ಲದೆ ಅನಧಿಕೃತವಾಗಿ ಓರಿಜನಲ್ ಚಾಯ್ಸ್ ಡಿಲಕ್ಸ ವಿಸ್ಕಿ ತುಂಬಿದ 90 ಎಮ್.ಎಲ್ ದ ಟೇಟ್ರಾ ಪಾಕೇಟಗಳನ್ನು ಮಾರಾಟ ಮಾಡುತ್ತಿರುವಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 238/2017 ಕಲಂ 34 ಅಬಕಾರಿ ಕಾಯ್ದೆ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಸವದತ್ತಿ ರಸ್ತೆ ಅಮ್ಮಿನಬಾವಿ ಗ್ರಾಮದ ಸಮೀಪ ಹತ್ತಿರ ವಾಹನದ ಚಾಲಕನು ತನ್ನ ವಾಹನವನ್ನು ಧಾರವಾಡ ಕಡೆಯಿಂದ ಸವದತ್ತಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನದ ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಎಡಸೈಡಿನಲ್ಲಿ ಪಂಚರ ಆಗಿ ನಿಂತಿದ್ದ TATA ACE ನಂ KA-48-7508  ನೇದಕ್ಕೆ ಹಾಗೂ ಪಂಚರ ಆದ ಗಾಲಿಯನ್ನು  ಬಿಚ್ಚುತ್ತಿದ್ದ ಬಸವರಾಜ ತಾಯಿ ಯಲ್ಲವ್ವ ವಿಭೂತಿ ಹಾಗೂ ರಾಜೇಶ ತಂದೆ ಮಹಾದೇವಪ್ಪ ತಂಬಾಕು ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ TATA ACE ವಾಹನದಲ್ಲಿದ್ದ ಪಿರ್ಯಾದಿಗೆ ಹಾಗೂ ಬಸವರಾಜ ತಾಯಿ ಯಲ್ಲವ್ವ ವಿಭೂತಿ ಇವರಿಗೆ ಸಾದಾ ವ ಬಾರೀ ಗಾಯಪಡಿಸಿದ್ದಲ್ಲದೇ ರಾಜೇಶ ಮಹಾದೇವಪ್ಪ ತಂಬಾಕು ಇವನು ಮೃತಪಡುವಂತೆ ಮಾಡಿ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 242/2017 ಕಲಂ 279.337..338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.