ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, November 17, 2017

CRIME INCIDENTS 17-11-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 17-11-2017 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಕುಮಾರಗೊಪ್ಪ ಕ್ರಾಸ್ ನಲ್ಲಿ ಆರೋಪಿತನಾದ ಸುರೇಶ ಕುರಿ ಇತನು ಕಳ್ಳತನ ಮಾಡುವ ಉದ್ದೇಶದಿಂದ ಸಂಶಯಾಶ್ಪದ ರೀತಿಯಲ್ಲಿ ತಿರಗಾಡುತ್ತ ತನ್ನ ಇರುವಿಕೆಯನ್ನು ಮರೆಮಾಚಿ ಸಿಕ್ಕಾಗ ಸದರಿ ಸ್ಥಳದಲ್ಲಿ ಇದ್ದ ಬಗ್ಗೆ ಸರಿಯಾದ ಸಮರ್ಪಕ ಉತ್ತರಕೊಡದೇ ಸಿಕ್ಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 136/2017 ಕಲಂ ಕೆ.ಪಿ ಆಕ್ಟ 96 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬೀರವಳ್ಳಿ ಗ್ರಾಮದ ಯಲ್ಲಪ್ಪಾ ಕಲಘಟಗಿ ಇವರ  ಮನೆ ಮುಂದೆ ದಿ:13-11-2017 ರಂದು ಸಾಯಂಕಾಲ 4-00 ಗಂಟೆಗೆ  ಫಿರ್ಯಾದಿ ಯಲ್ಲಪ್ಪ ಕಲಘಟಗಿ ಇವರ ಮಗಳು ಗಂಗವ್ವ ಇವಳ ಜೊತೆ ಆದ ಜಗಳ ಬಗ್ಗೆ ಕೇಳಲು ಹೋದ ಅಳಿಯನಿಗೆ , ಮಗಳಿಗೆ ಹಾಗೂ ಇನ್ನೂ ಇಬ್ಬರಿಗೆ  ಆರೋಪಿರಾದ. 1] ಮಂಜಪ್ಪ ಕಲ್ಲಪ್ಪ ಮ್ಯಾಲಿನಮನಿ ಹಾಗೂ 5 ಜನರು ಸೇರಿ ಸಂಗನಮತ ಮಾಡಿಕೊಂಡು ಹಲ್ಕಟ್ ಬೈದಾಡಿದ್ದಲ್ಲದೇ  ಕೈಯಲ್ಲಿ ಬಡಿಗೆ, ಕಲ್ಲು ಹಿಡಿದುಕೊಂಡು ಬಂದು  ಹೊಡೆದು ಗಾಯಪಡಿಸಿ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 348/2017 ಕಲಂ 143.147.323.324.504.506.149.ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಇಂಗಹಳ್ಳಿ ಮೃತ ಮಂಜುಳಾ ಕೋಂ ಬಸವರಾಜ ದೋಣಿ ವಯಾಃ 29 ವರ್ಷ ಸಾಃ ಅಣ್ಣಿಗೇರಿ ಇವಳು ತನ್ನ ತವರೂ ಊರಾದ ಇಂಗಳಹಳ್ಳಿ ಗ್ರಾಮದ ಪಿರ್ಯಾದಿಯ ಮನೆಯಲ್ಲಿ ದಿನಾಂಕ 16/11/2017 ರಂದು ಮುಂಜಾನೆ 8-00 ಗಂಟೆ ಸುಮಾರಿಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಕರೆಂಟ್ ಹೋಗಿದ್ದರಿಂದ ವಲೆ ಪಕ್ಕದಲ್ಲಿ ಹಚ್ಚಿಯಿಟ್ಟ ಚಿಮ್ಮಣಿ ಆಕಸ್ಮಾತ ಉರುಳಿ ಬೆಂಕಿಹತ್ತಿ ಸುಟ್ಟ ಗಾಯವಾಗಿದ್ದರಿಂದ ಮಂಜುಳಾಗೆ ಉಪಚಾರಕ್ಕೆ 108 ಅಂಬುಲೇನ್ಸದಲ್ಲಿ ಕೂಡಿದ ಜನರೊಂದಿಗೆ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ತಂದು ದಾಖಲಿಸಿದ್ದು ಇಂದು ದಿನಾಂಕ 17/11/2017 ರಂದು ಮುಂಜಾನೆ 3-10 ಗಂಟೆಗೆ ಉಪಚಾರ ಫಲಿಸದೆ ಮಂಜುಳಾ ಮೃತಪಟ್ಟಿರುತ್ತಾಳೆ ವಿನಃ ಸದರಿ ನನ್ನ ಮಗಳ ಮರಣದಲ್ಲಿ ಬೇರೆ ಯಾವುದೇ ಸಂಶಯ ವಗೈರೆ ನನ್ನದಾಗಲ್ಲಿ ನಮ್ಮ ಮನೆಯವರದಾಗಲ್ಲಿ  ಇರುವದಿಲ್ಲಾ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 47/2017 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಸುಳ್ಳ ಗ್ರಾಮದ ದ್ಯಾಮ್ಕಣವರ ಓಣಿಯಲ್ಲಿರುವ ಕಲ್ಲಪ್ಪ ಹೂಗಾರ ಇವರ ಮನೆಯ ಮುಂದೆ ರಸ್ತೆ ಮೇಲೆ ಇದರಲ್ಲಿಯ ಆರೋಪಿತರಾದ ಮಲ್ಲಿಕಾಜುಱನ ಹೂಗಾರ ಹಾಗೂ ಇನ್ನೂ 04 ಜನರು ಕೊಡಿಕೊಂಡು ಗೈರ ಕಾಯ್ದೆಶೀರ ಮಂಡಳಿಯಾಗಿ ಹಿತ್ತಲ ಜಾಗೆಯ ತಂಟೆದ ಅವಾಚ್ಯ ಬೈದಾಡಿ ಕಬ್ಬಿನದ ರಾಡು ವ ಕಟ್ಟಿಗೆ  ಯಿಂದ ಹೊಡಿ ಬಡಿ ಮಾಡಿ ಅವಾಚ್ಯ ಬೈದಾಡಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 264/2017 ಕಲಂ 506.504.143.149.323.147.324 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Thursday, November 16, 2017

CRIME INCIDENTS 16-11-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 16-11-2017 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಕೊಡಿಕೊಪ್ಪ ಗ್ರಾಮದ ಹತ್ತಿರ ಕಾರ್ ನಂ KA-01/MA-3149 ನೇದ್ದರ ಚಾಲಕ ನಾಗರಾಜ ಹೆಬ್ಬಳ್ಳಿ ಇತನು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಅತಿ ಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ತನ್ನ ಬಲಸೈಡಿಗೆ ಬಂದು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ರಸ್ತೆಯ ಎಡಸೈಡಿಗೆ ಹೊರಟಿದ್ದ ಮೋಟಾರ ಸೈಕಲ್ KA-25/EK-1970 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಪಿರ್ಯಾದಿಗೆ ಮತ್ತು ಮೋಟಾರ ಸೈಕಲ್ ಹಿಂದೆ ಕುಳಿತ ರಾಘವೇಂದ್ರ ಓಲೆಕಾರ ಇವನಿಗೆ ಭಾರೀ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 143/2017 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, November 15, 2017

CRIME INCIDENTS 15-11-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 15-11-2017 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ಗ್ರಾಮದ ಬಸಪ್ಪ ಸಣ್ಣಕಾಳಪುರ ಇವರ ಮೋಟರ್ ಸೈಕಲ್ ನಂಬರ್ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ ಸೈಕಲ ನಂಬರ KA-25/EA-6442 ನೇದ್ದನ್ನು ಅಣ್ಣಿಗೇರಿ ಶಹರದ ಬಸ್ ನಿಲ್ದಾಣದ ಮುಂದೆ ಮನೋಹರ ಹೋಟೆಲ್ ಎದುರುಗಡೆ ರಸ್ತೆಯ ಪಕ್ಕ ಹ್ಯಾಂಡಲ್ ಲಾಫ್ ಮಾಡಿ ಇಟ್ಟಾಗ ಯಾರೋ ಕಳ್ಳರು ಅದರ ಲಾಕನ್ನು ಮುರಿದು ಮೋಟರ್ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 142/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಅರಳಿಹೊಂಡ ಗ್ರಾಮದ ಹತ್ತಿರ ಮನೆಯ ಮುಂದೆ ಅರಳಿಹೊಂಡ ಗ್ರಾಮದ RR NO AHBJ-23 ನೇದ್ದರ ಆರೋಪಿತರಾದ ಚೆನ್ನಯ್ಯಾ ಶಿವಯ್ಯ ಬುಕಟಗಾರ ಸಾ..ಅರಳಿಹೊಂಡ ಇವರು ಕಳೇದ ಸುಮಾರು ವರ್ಷದಿಂದ ಕೆಇಬಿ ವಿದ್ಯುತ್ ಬಿಲ್ ನ್ನು ತುಂಬದೆ ಇದ್ದುದರಿಂದ ಅದು ಸುಮಾರು 11,841/- ಆದ ಕಾರಣ ಬಾಕಿ ಕಟ್ಟಲು ಕೇಳಲು ಹೋದ ಸುಬ್ರಮಣ್ಯ ಜಯರಾಮ ಇವರಿಗೆ ಚೆನ್ನಯ್ಯಾ ಬುಕಟಗಾರ & ಅವನ ಜೊತೆ ಇದ್ದ ಇನ್ನೊಬ್ಬನು ಕೂಡಿಕೊಂಡು ಪಿರ್ಯಾದಿಯ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಬೈದಾಡಿ ಕೈಯಿಂದಾ ಹೊಡಿಬಡಿ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 347/2017 ಕಲಂ 323.353.504.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಸುಳ್ಳ ಗ್ರಾಮದ ಮಗಳಾದ ಶಕೀಲಾ ಕೋಂ ರಾಜೇಸಾಬ ಮುಲ್ಲಾನ್ನವರ ವಯಾಃ 36 ವರ್ಷ ಸಾಃ ಸುಳ್ಳ ಇವರು ತನ್ನ ಗಂಡ ರಾಜೇಸಾಬ ಅಲ್ಲಾಬಕ್ಷ ಮುಲ್ಲಾನ್ನವರ ಇವರು ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದರಿಂದ ಅದನ್ನು ಮನಸ್ಸಿಗೆ ಹಚ್ಚಿಕೊಂಡು ತನ್ನ ಇಬ್ಬರು ಮಕ್ಕಳನ್ನು ಹೇಗೆ ಸಾಕುವದು ಅಂತಾ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೆ ತನ್ನ ಮನೆಯಲ್ಲಿ ಇದ್ದ ಸೀಮೆ ಎಣ್ಣೆಯನ್ನು ಮೈ ಮೇಲೆ ಸುರವಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮ ಹತ್ಯೆ ಮಾಡಲು ಪ್ರಯತ್ನಿಸಿದಾಗ ಬೆಂಕಿ ಆರಿಸಲು ಬಂದ ಇವಳ ಗಂಡ ರಾಜೇಸಾಬನಿಗೂ ಕೂಡಾ ಬೆಂಕಿ ಹತ್ತಿದ್ದು ನಂತರ ಇವರ ಸಂಬಂದಿ ಹುಸೇನಸಾಬ ಇವರು 108 ಅಂಬುಲೇನ್ಸ ವಾಹನಕ್ಕೆ ಪೋನ್ ಮಾಡಿ ಕರೆಯಿಸಿ ಇವರನ್ನು ಉಪಚಾರಕ್ಕೆಂದು ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ತಂದು ದಾಖಲಿಸಿದ್ದು. ದಿನಾಂಕ 15/11/2017 ರಂದು ಮುಂಜಾನೆ 06-00 ಗಂಟೆ ಗೆ ಉಪಚಾರ ಫಲಿಸದೆ ಪಿರ್ಯಾದಿಯ ಮಗಳಾದ ಶಕೀಲಾ ಕೋಂ ರಾಜೇಸಾಬ ಮುಲ್ಲಾನ್ನವರ ವಯಾಃ 36 ವರ್ಷ ಸಾಃ ಸುಳ್ಳ ಇವರು ಮೃತಪಟ್ಟಿರುತ್ತಾರೆ ವಿನಃ ಸದರಿ ನನ್ನ ಮಗಳ ಮರಣದಲ್ಲಿ ನನ್ನದಾಗಲಿ ನಮ್ಮ ಮನೆಯವರದಾಗಲಿ ಬೇರೆ ಯಾವುದೆ ಸಂಶಯ ಇರುವದಿಲ್ಲಾ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 46/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುನ್ನಾ ನಂ. 265/2017, 266/2017   ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, November 14, 2017

CRIME INCIDENTS 14-11-2017
ಧಾರವಾಡ ಜಿಲ್ಲೆಯಲ್ಲಿ ದಿನಾಂಕ 14-11-2017 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಿಂಡಸಗೇರಿ  ಗ್ರಾಮದ ಚನ್ನಬಸಪ್ಪ ದಪ್ಪಲಣ್ಣವರ ಇವರ ಜಮೀನ ರಿ ಸ ನಂ 3 ಬ ನೇದ್ದರಲ್ಲಿ  ಆರೋಪಿತರಾದ 1.ಅಶೋಕ ಮುದಕ್ಕಣ್ಣವರ 2.ಮಂಜುನಾಥ ಮುದಕ್ಕಣ್ಣವರ ಇವರು ಪಿರ್ಯಾದಿ ನಮ್ಮ ಜಮೀನನ್ನು ಯಾರಿಗೇ ಹೇಳಿ ಕೇಳಿ ಬಿತ್ತನೆ ಮಾಡಿದ್ದಿರಿ ಅಂತಾ ಕೇಳಿದಕ್ಕೆ ಅವಾಚ್ವವಾಗಿ ಬೈದಾಡಿದ್ದಲ್ಲದೇ ಬಡಿಗೆಯಿಂದ  ಮೈ ಕೈ ಗೆ ಕಾಲಿಗೆ ಬೆನ್ನಿಗೆ ಹೊಡಿದ್ದಲ್ಲದೇ ಬಿಡಿಸಲು ಬಂದ ಪಿರ್ಯಾದಿ ಹೆಂಡತಿ ಶಾಂತವ್ವ ಇವರಿಗೆ ಬಡಿಗೆಯಿಂದ ಮೈ ಕೈಗೆ ಹೊಡೆದಿದಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 346/2017 ಕಲಂ 324.504.506.34.ಐಪಿಸಿ ನೇದ್ದರಲ್ಲಿ ಪ್ರಕರಣವನ್ನ ದಾಖಲಿಸಿದ್ದು ಇರುತ್ತದೆ.