ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, January 22, 2018

CRIME INCIDENTS 22-01-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:22-01-2018 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಯರಗುಪ್ಪಿ ಗ್ರಾಮದ ಕುತ್ಪುದ್ದೀನ ಬೆಳಗಲಿ ಇತನು ರೌಡಿ ಶಿಟರ್ ಇದ್ದು ಸದರಿಯವನ ಚಟುವಟಿಕೆಯ ಬಗ್ಗೆ ಯರಗುಪ್ಪಿ ಗ್ರಾಮದಲ್ಲಿ ಸಾರ್ವಜನಿಕರಿಗೆ ವಿಚಾರಿಸಿದ್ದು ಸದರಿಯವನು ಒಳ್ಳೆಯ ನಡತೆಯಿಂದ ಇರದೇ ಮುಂಬರುವ ದಿನಗಳಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಸಾಧ್ಯತೆಗಳು ಇರುವ ಬಗ್ಗೆ ಸ್ಥಾನಿಕ ಚೌಕಾಶಿಯಿಂದ ತಿಳಿದುಬಂದಿದ್ದು ಹಾಗೂ ಮುಂದಿನ ದಿನಗಳಲ್ಲಿ ಯಾವುದಾದರೂ ಘೋರ ಸ್ವರೂಪದ ಅಪರಾಧವೆಸಗಿ ಸಾರ್ವಜನಿಕ ಶಾಂತತಾ ಭಂಗಪಡಿಸುವ ಶಾಂತತೆ ಕಾಪಾಡುವ ದೃಷ್ಟಿಯಿಂದ ಸದರಿಯವನ ಮೇಲೆ ಮುಂಜಾಗೃತಾ ಕ್ರಮಗಾಗಿ ಗುನ್ನಾನಂ 15/2018 ಕಲಂ 107 ಸಿ.ಆರ.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
.
2..ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಯರಗುಪ್ಪಿ ಗ್ರಾಮದ ಅಬ್ದುಲ್ ಅಹ್ಮದ ಬೆಳಗಲಿ ಇತನು ರೌಡಿ ಶಿಟರ್ ಇದ್ದು ಸದರಿಯವನ ಚಟುವಟಿಕೆಯ ಬಗ್ಗೆ ಯರಗುಪ್ಪಿ ಗ್ರಾಮದಲ್ಲಿ ಸಾರ್ವಜನಿಕರಿಗೆ ವಿಚಾರಿಸಿದ್ದು ಸದರಿಯವನು ಒಳ್ಳೆಯ ನಡತೆಯಿಂದ ಇರದೇ ಮುಂಬರುವ ದಿನಗಳಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಸಾಧ್ಯತೆಗಳು ಇರುವ ಬಗ್ಗೆ ಸ್ಥಾನಿಕ ಚೌಕಾಶಿಯಿಂದ ತಿಳಿದುಬಂದಿದ್ದು ಹಾಗೂ ಮುಂದಿನ ದಿನಗಳಲ್ಲಿ ಯಾವುದಾದರೂ ಘೋರ ಸ್ವರೂಪದ ಅಪರಾಧವೆಸಗಿ ಸಾರ್ವಜನಿಕ ಶಾಂತತಾ ಭಂಗಪಡಿಸುವ ಶಾಂತತೆ ಕಾಪಾಡುವ ದೃಷ್ಟಿಯಿಂದ ಸದರಿಯವನ ಮೇಲೆ ಮುಂಜಾಗೃತಾ ಕ್ರಮಗಾಗಿ ಗುನ್ನಾನಂ 16/2018 ಕಲಂ 107 ಸಿ.ಆರ.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಹಿರೇನತಿಱ ಗ್ರಾಮದ ಮಹಮ್ಮದ ಸಾಬ ಇತನು ರೌಡಿ ಶಿಟರ್ ಇದ್ದು ಸದರಿಯವನ ಚಟುವಟಿಕೆಯ ಬಗ್ಗೆ ಹಿರೇನತಿಱ ಗ್ರಾಮದಲ್ಲಿ ಸಾರ್ವಜನಿಕರಿಗೆ ವಿಚಾರಿಸಿದ್ದು ಸದರಿಯವನು ಒಳ್ಳೆಯ ನಡತೆಯಿಂದ ಇರದೇ ಮುಂಬರುವ ದಿನಗಳಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಸಾಧ್ಯತೆಗಳು ಇರುವ ಬಗ್ಗೆ ಸ್ಥಾನಿಕ ಚೌಕಾಶಿಯಿಂದ ತಿಳಿದುಬಂದಿದ್ದು ಹಾಗೂ ಮುಂದಿನ ದಿನಗಳಲ್ಲಿ ಯಾವುದಾದರೂ ಘೋರ ಸ್ವರೂಪದ ಅಪರಾಧವೆಸಗಿ ಸಾರ್ವಜನಿಕ ಶಾಂತತಾ ಭಂಗಪಡಿಸುವ ಶಾಂತತೆ ಕಾಪಾಡುವ ದೃಷ್ಟಿಯಿಂದ ಸದರಿಯವನ ಮೇಲೆ ಮುಂಜಾಗೃತಾ ಕ್ರಮಗಾಗಿ ಗುನ್ನಾನಂ 17/2018 ಕಲಂ 107 ಸಿ.ಆರ.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಹಿರೇನತಿಱ ಗ್ರಾಮದ  ಅಲಿಸಾಬ ಪಠಾಣಾವರ  ಇತನು ರೌಡಿ ಶಿಟರ್ ಇದ್ದು ಸದರಿಯವನ ಚಟುವಟಿಕೆಯ ಬಗ್ಗೆ ಹಿರೇನತಿಱ ಗ್ರಾಮದಲ್ಲಿ ಸಾರ್ವಜನಿಕರಿಗೆ ವಿಚಾರಿಸಿದ್ದು ಸದರಿಯವನು ಒಳ್ಳೆಯ ನಡತೆಯಿಂದ ಇರದೇ ಮುಂಬರುವ ದಿನಗಳಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಸಾಧ್ಯತೆಗಳು ಇರುವ ಬಗ್ಗೆ ಸ್ಥಾನಿಕ ಚೌಕಾಶಿಯಿಂದ ತಿಳಿದುಬಂದಿದ್ದು ಹಾಗೂ ಮುಂದಿನ ದಿನಗಳಲ್ಲಿ ಯಾವುದಾದರೂ ಘೋರ ಸ್ವರೂಪದ ಅಪರಾಧವೆಸಗಿ ಸಾರ್ವಜನಿಕ ಶಾಂತತಾ ಭಂಗಪಡಿಸುವ ಶಾಂತತೆ ಕಾಪಾಡುವ ದೃಷ್ಟಿಯಿಂದ ಸದರಿಯವನ ಮೇಲೆ ಮುಂಜಾಗೃತಾ ಕ್ರಮಗಾಗಿ ಗುನ್ನಾನಂ 18/2018 ಕಲಂ 107 ಸಿ.ಆರ.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 10/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸದ್ದು ಇರುತ್ತದೆ.


Sunday, January 21, 2018

CRIME INCIDENTS 21-01-2018

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 21-01-2018 ರಂದು ವರದಿಯಾದ ಪ್ರಕರಣಗಳು

1.ಗರಗ ಪೊಲೀಸ್ ಠಾಣಾ ವ್ಯಾಪ್ತಿ: ಮೊಟಾರ ಸೈಕಲ ನಂ.ಕೆ.ಎ.24/ಆರ್/2966 ನೇದ್ದರ ಸವಾರ ಅರುಣಕುಮಾರ ಮಾರುತಿ ಮಡಿವಾಳರ ಇತನು ದಿನಾಂಕ:17-01-2018 ರಂದು ಮದ್ಯಾಹ್ನ-14-00 ಗಂಟೆ ಸುಮಾರಿಗೆ ತನ್ನ ಮೊಟಾರ ಸೈಕಲನ್ನು ಕಿತ್ತೂರ ಕಡೆಯಿಂದ ತಡಕೊಡ ಕಡೆಗೆ ಅತೀಜೊರಿನಿಂದ ವ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮಾಧನಬಾವಿ ಗ್ರಾಮದ ಹತ್ತೀರ ಇರುವ ಗಂಗನಗೌಡ.ಹೊಳೆಹಡಗಲಿ ಇವರ ಹೊಲದ ಮುಂದೆ ರಸ್ತೆಯ ಮೇಲೆ ಸ್ಕೀಡ್ ಮಾಡಿ ಅಪಘಾತ ಪಡಿಸಿಕೊಂಡು ತನಗೆ ಭಾರಿ ಸ್ವರೂಫದ ಗಾಯವನ್ನು ಪಡೆಸಿಕೊಂಡ ಅಪರಾಧ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 09/2018 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ-27-11-2017 ರಂದು ಮುಂಜಾನೆ 10-00 ಗಂಟೆಯಿಂದಾ ಸಂಜೆ 5-00 ಗಂಟೆಯ ನಡುವೆ ಕಲಘಟಗಿ ಶಹರದ ಭಾರತೀಯ ಸ್ಟೇಟ್ ಬ್ಯಾಂಕ ದಲ್ಲಿ ಆರೋಪಿ ಈಶ್ವರಪ್ಪ ತಂದೆ ನಿಂಗಪ್ಪ ತಿಗಡಿ ಸಾ..ಬಮ್ಮಿಗಟ್ಟಿ ಇವನು ಬಸವಣ್ಣೆಯ್ಯಾ ಹಿರೇಮಠ ಸಾ..ಹನಮಾಪೂರ ಇವನೊಂದಿಗೆ ಕೂಡಿಕೊಂಡು ಮೋಸ ಮಾಡುವ ಒಳಸಂಚು ರೂಪಿಸಿ   ಈ ಮೊದಲು 08-11-2017 ರಂದು ಕಲಘಟಗಿ ಶಹರದ ಕೆನರಾ ಬ್ಯಾಂಕಿನಲ್ಲಿ ಸುಮಾರು 3,00,000/- ರೂಗಳನ್ನು ಸಾಲವನ್ನು ಪಡೆದುಕೊಂಡು ನಂತರ ವಂಚಿಸುವ ಉದ್ದೇಶಕ್ಕಾಗಿ ಸುಳ್ಳು ದಾಖಲಾತಿಗಳನ್ನು ಸೃಷ್ಠೀಸಿ ಮ್ಯಾನೇಜರ್ ಕೆನರಾ ಬ್ಯಾಂಕ ಕಲಘಟಗಿ ಇವರ ಖೊಟ್ಟಿ ಸಹಿಯನ್ನು ಮಾಡಿ SBI ದಲ್ಲಿ ಕೊಟ್ಟು ಬೇರೆ ಬ್ಯಾಂಕಗಳಲ್ಲಿ ಯಾವುದೆ ಸಾಲ ಇರುವದಿಲ್ಲಾ ಅಂತಾ ಹೇಳಿ ನಂಬಿಸಿ ಅವರಿಂದಲೂ ಸಹಾ 3,90,000/- ರೂ ಗಳನ್ನು ಕೃಷಿ ಸಾಲ ಅಂತಾ ಪಡೆದುಕೊಂಡು ಮೋಸ ಮಾಡಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 15/2018 ಕಲಂ IPC 1860 (U/s-120B,465,467,468,420,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3 ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 21-12-21017 ರಂದು ಮದ್ಯಾಹ್ನ 1-30 ಗಂಟೆಯಿಂದ ಸಾಯಂಕಾಲ 04-00 ಗಂಟೆ ನಡುವಿನ ಅವಧಿಯಲ್ಲಿ ಕುರಡಿಕೇರಿ ಗ್ರಾಮದ ಪಿರ್ಯಾದಿ ಅಕ್ಕಮ್ಮ ತೋಟದ ಇವರ ಮನೆಯಿಂದ ಪಿರ್ಯಾದಿಯ ಮಗಳು ಅಶ್ವಿನಿ ತಂದೆ ಯಲ್ಲಪ್ಪ ತೋಟದ ವಯಾ.19 ವರ್ಷ ಸಾ. ಕುರಡಿಕೇರಿ ಇವಳು ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇಲ್ಲಿಯವರೆಗೆ ಎಲ್ಲ ಕಡೆಗಳಲ್ಲಿ ಹುಡುಕಾಡಿದ್ದರಲ್ಲಿ ಸದರಿಯುವಳು ಸಿಗದೇ ಕಾಣೆಯಾಗಿರುತ್ತಾಳೆ ಅಂತ ಪಿರ್ಯಾದಿ ಕೊಟ್ಟಿದ್ದು ಅದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 18/2018 ಕಲಂ IPC 1860 (U/s-00MP) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
Saturday, January 20, 2018

CRIME INCIDENTS 20-01-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:20-01-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬಿ ಗುಡಿಹಾಳ ಗ್ರಾಮದ ಸಕ್ಕುಬಾಯಿ ತಂದೆ  ರಾಮಪ್ಪ ಕೋಟಿ 24 ವರ್ಷ ಸಾ; ಬಿ ಗುಡಿಹಾಳ ಇವರು ದೇವಸ್ಥಾನಕ್ಕೆ ಹೋಗಿ ಬರುತ್ತೆನೆ ಅಂತಾ ಮನೆಯಲ್ಲಿ ಹೇಳಿ ಹೋದವಳು ಇಲ್ಲಿಯವರೆಗೂ ಮರಳಿ ಮನೆಗೆ ಬಂದಿರುವುದಿಲ್ಲಾ ಅವಳು ನೋಡಲು ಕೆಂಪು ಮೈ ಬಣ್ನ ಎತ್ತರ 5 ಪುಟ್ 2 ಇಂಚು ಇದ್ದು ನಿಟಾದ ಮುಗು ಹಣೆಯ ಮೇಲೆ ಹಚ್ಚೆ ಕಲೆ ಇದೆ ಅವಳು ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚುಡಿದಾರ ಹಾಕಿದ್ದು ಇರುತ್ತದೆ.ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 13/2018 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕಲಘಟಗಿ ಗ್ರಾಮದ  ಮೃತ ಫಕ್ಕಿರಪ್ಪ ಲಕ್ಷಪ್ಪ ಹರಿಜನ@ಮಾದರ ವಯಾ. 26 ವರ್ಷ ಸಾ. ಕರಡಿಕೊಪ್ಪ ಇವನು ತನ್ನ ಹೆಂಡತಿ ತನ್ನೊಂದಿಗೆ ಮುನಿಸಿಕೊಂಡು, ತವರು ಮನೆಗೆ ಹೋಗಿದ್ದು, ಮರಳಿ ಬಾರದೇ ಇದ್ದರಿಂದ ಮನಸಿಗೆ ಬೇಜಾರ ಮಾಡಿಕೊಂಡು, ಸಾರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು, ತನ್ನ ಮನೆಯಲ್ಲಿ ತನ್ನಷ್ಟಕ್ಕೆ ತಾನೇ ಮನಸಿಗೆ ಬೇಜಾರ ಮಾಡಿಕೊಂಡು, ಮನೆಯ ಪಡಸಾಲಿಯ ಎಳೆಗೆ ಹಗ್ಗದಿಂದ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಸದರಿಯವನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲಫಿಯಾಱಧಿ  ನೀಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 04/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

Friday, January 19, 2018

CRIME INCIDENTS 19-01-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:19-01-2018 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕುಬಿಹಾಳ ಗ್ರಾಮದ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಹತ್ತಿರ, ಅಭಿಷೇಕ ದೇವಣ್ಣ ಕುಬಿಹಾಳ, ವಯಾ: 7 ವರ್ಷ, ಸಾ: ಮಜ್ಜಿಗೇರಿ ತಾ: ಮುಂಡಗೋಡ, ಜಿ: ಉತ್ತರ ಕನ್ನಡ ಈತನಿಗೆ ಆರೋಪಿತನಾದ ಯಲ್ಲಪ್ಪ ಶಿವಪ್ಪ ಹುಲಗೇರಿ, ಸಾ: ಬೆಳಗಲಿ ತಾ: ಹುಬ್ಬಳ್ಳಿ ಈತನು ತನ್ನ ಬಜಾಜ ಪಲ್ಸರ ಮೋಟಾರ ಸೈಕಲ್ ನಂ: KA 25 / ER 2290 ನೇದ್ದನ್ನು ಕುಬಿಹಾಳ ಗ್ರಾಮದಿಂದ ತರ್ಲಘಟ್ಟ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿ, ಡಿಕ್ಕಿ ಮಾಡಿ ಅಪಘಾತಪಡಿಸಿ ಸಾದಾ ವ ಭಾರೀ ಗಾಯಪೆಟ್ಟುಗಳಾಗುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 14/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹುಲ್ಲಂಬಿ ಗ್ರಾಮದ ಮಂಜುಳಾ ಕೋಂ ಮಂಜುನಾಥ ದೊಡ್ಡಗೌಡ್ರ ವಯಾ 29 ಸಾ: ಹುಲ್ಲಂಬಿ ಇವರು ಹೊಟ್ಟೆನೋವಿನಿಂದ ಬಳಲುತ್ತಿದ್ದು ಅವರಿಗೆ ಉಪಚಾರಕ್ಕೆ  ಕಲಘಟಗಿ ಸರ್ಕಾರಿ ಆಸ್ಪತ್ರಗೆ ತೋರಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ತೋರಿಸಿ ಕಡಿಮೆ ಆಗದಿದ್ದಾಗ ಹುಬ್ಬಳ್ಳಿ ಶಂಕುತಲಾ ಆಸ್ಪತ್ರೆಯಲ್ಲಿ ಉಪಚಾರಕ್ಕೆ  ಧಾಖಲು ಮಾಡಿದಾಗ ಉಪಚಾರ ಪಲಿಸದೇ ಈ ದಿವಸ ದಿನಾಂಕ 19-01-2018 ರಂದು ಬೆಳ್ಳಿಗೆ 4-10 ಗಂಟೆ ಸುಮಾರಿಗೆ ಮರಣಹೊಂದಿದ್ದು ಅವಳ ಸಾವಿನಲ್ಲಿ ಬೇರಾವ ಸಂಶಯ  ಇರುವುದಿಲ್ಲಾ ಅಂತಾ ಮೃತಳ ತಾಯಿ ಫಿಯಾಱಧೀ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 07/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಗಂಬ್ಯಾಪೂರ ಗ್ರಾಮದ ಮುತ್ತಪ್ಪಾ ಹನುಮಸಾಗರ  ಇವರ ಮನೆಯ ಮುಂದೆ ಆರೋಪಿತರಾದ 1.ವೆಂಕಟೇಶ ಬಾಗಲಕೋಟಿ ಹಾಗೂ ಇನ್ನೂ 05 ಜನರು ಕೊಡಿಕಂಡು ಮನೆಯ ಜನರೊಂದಿಗೆ ಮೊದಲಿನಿಂದಲು  ವಿನಾ: ಕಾರಣ ತಂಟೆ ತಕರಾರು ಮಾಡುತ್ತಾ ಬಂದಿದ್ದಲ್ಲದೇ ಜಾತ್ರೆದಿವಸ ಫಿರ್ಯಾದಿ ತಾಯಿಯೊಂದಿಗೆ  ತಂಟೆ ಮಾಡಿದ್ದು ಇದೇ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ರಾತ್ರಿ ವೇಳೆಯಲ್ಲಿ ಫಿರ್ಯಾದಿ ತಾಯಿಯೊಂದಿಗೆ ತಂಟೆ ತೆಗದು ಅವಾಚ್ಯ ಬೈದಾಡಿ ಆರೋಪಿತರೆಲ್ಲರೂ ಕೂಡಿ ತಮ್ಮ ತಮ್ಮ ಕೈಯಿಂದ ಮೈ ಕೈಗೆ ಹೊಡೆದು ಓಳನೊವು ಪಡಿಸಿದ್ದಲ್ಲದೇ ಜೀವದ ಭೇದರಿಕೆ ಹಾಕಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 12/2018 ಕಲಂ 143.147.323.504.506.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Thursday, January 18, 2018

CRIME INCIDENTS 18-01-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-01-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ ಹುಬ್ಬಳ್ಳಿ ರಸ್ತೆ ಮೇಲೆ ನೂಲ್ವೀ ದನದ ಮಾರ್ಕೆಟ್ ಸಮೀಪದ ಪಂಪ್ ಹೌಸ್ ಹತ್ತಿರ ಮೋಟಾರ್ ಸೈಕಲ್ ನಂಬರ ಕೆಎ-27/ಎಸ್-5209 ನೇದ್ದನ್ನು ಅದರ ಸವಾರನಾದ ಶಂಕರ ನಾಗಪ್ಪ ಮಾಳಗಿಮನಿ ವಯಾ 39 ವರ್ಷ ಸಾ!! ಕುಂದಗೋಳ ಕುಂಬಾರ ಓಣಿ ಇತನು ಕುಂದಗೋಳ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಕೀಡ್ಡಾಗಿ ಕೆಡವಿ ಅಪಗಾತಪಡಿಸಿ ಭಾರಿ ಗಾಯಪಡಿಸಿಕೊಂಡು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಪಚಾರ ಹೊಂದುತ್ತಿದ್ಗಾಗ ಈ ದಿವಸ ದಿನಾಂಕ: 18-01-2018 ರಂದು ಬೆಳಗಿನ 06-30 ಗಂಟೆಗೆ ಉಪಚಾರಫಲಿಸದೇ ಮರಣ ಹೊಂದಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 14/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕೊಟಗೊಂಡಹುಣಸಿ ಗ್ರಾಮದ, ನಡುವಿನ ಓಣಿಯಲ್ಲಿರುವ ತಂಗಿವ್ವ ಅಂಚಿನಕಟ್ಟಿ  ಇವರ ಮನೆಯ ಮುಂದಿನ ಬಾಗಿಲದಲ್ಲಿ ಪಿರ್ಯಾದಿದಾರರು ತನ್ನ ತಮ್ಮನೊಂದಿಗೆ ಆಸ್ತಿಯವ ವಿಷಯವಾಗಿ ಮಾತನಾಡುತ್ತ ಕುಳಿತ್ತಿದ್ದಾಗ, ಆರೋಪಿತನಾದ  ಸಣ್ಣಯಲ್ಲಪ್ಪ@ರಾಜು ಸಿದ್ದಪ್ಪ ಅಂಚಿಕಟ್ಟಿ ಮತ್ತು ಪುತ್ರವ್ವ ಕೋಂ ಬಸವರಾಜ ತಳವಾರ ಇಬ್ಬರು  ಅವಾಚ್ಯ ಶಬ್ದಗಳಿಂದ ಬೈದಾಡುತ್ತಿದ್ದಾಗ, ಪಿರ್ಯಾದಿಯ ತಮ್ಮ ಯಲ್ಲಪ್ಪ ಪರಸಪ್ಪ ತಳವಾರ ಇವನು ಯಾಕ ಬೈತಿ ಅಂತ ಕೇಳಿದ್ದಕ್ಕೆ ಸಿಟ್ಟಾಗಿ, ಸಣ್ಣಯಲ್ಲಪ್ಪ@ರಾಜು ಅಂಚಿಕಟ್ಟಿ ಇವನು ಯಲ್ಲಪ್ಪ ತಳವಾರ ಇವನ ಮುಖಕ್ಕೆ ಕೈಯಿಂದ ಹೊಡೆದು, ಬ್ಲೇಡನಿಂದ ಬಲಗೈಗೆ ಹೊಡೆದು ರಕ್ತ ಗಾಯಪಡಿಸಿದ್ದು, ಜಗಳ ಬಿಡಿಸಲು ಬಂದ ವರಿಗೆ ಆರೋಪಿ ಸಣ್ಣಯಲ್ಲಪ್ಪ@ರಾಜು ತಳವಾರ, ಅವಳ ಬಲಗೈ ಹೆಬ್ಬೆರಳಿಗೆ ಬ್ಲೇಡನಿಂದ ಹೊಡೆದು ರಕ್ತಗಾಯಪಡಿಸಿ, ಪಿರ್ಯಾದಿ ತಮ್ಮ ಯಲ್ಲಪ್ಪ ಪರಸಪ್ಪ ತಳವಾರ ಇವರಿಗೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 15/2018 ಕಲಂ 323.324.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 189/2017 ನೇದ್ದರಲ್ಲಿ ದಸ್ತಗೀರಾಗಿ ನ್ಯಾಯಾಂಗ ಬಂದನದಲ್ಲಿದ್ದು ಅದೇ ನೆಪ ಮಾಡಿಕೊಂಡು ಧಾರವಾಡ ಹಳಿಯಾಳ ರಸ್ತೆ ಬಾಡ ಕ್ರಾಸದಲ್ಲಿ ರಸ್ತೆ ಮೇಲೆ  ನಿಂತು ಚಿರಾಡುತ್ತಾ ಒದರಾಡುತ್ತಾ ಕೈಯಲ್ಲಿ ಕಲ್ಲು ಹಿಡಿದು ಕೊಂಡು ರಸ್ತೆಯಲ್ಲಿ ಹಾಯ್ದುಹೋಗುವ ಸಾರ್ವಜನಿಕರಿಗೆ ಬೈದಾಡುತ್ತಾ ಹೆಣ್ಣು ಮಕ್ಕಳಿಗೆ ಅವಾಚ್ಯವಾಗಿ ಬೈಯುವ ಮಾತನಾಡುವ ಹಾಗು ಕಲ್ಲು ಒಗೆಯುವದು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವ  ಹಾಗೂ  ಯಾವುದಾದರೂ ಸಂಜ್ಞೆಯ ಅಪರಾಧಗಳನ್ನು ಮಾಡುವ  ಇರ್ಯಾದೆಯವನಿದ್ದುದ್ದರಿಂದ ಸದರಿಯವನಿಗೆ ಮೇಲೆ ಗುನ್ನಾನಂ 25/2018 ಕಲಂ 110(ಇ)(ಜಿ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 10/2018  ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ಗುಡ್ಡದಹೂಲಿಕಟ್ಟಿ ಗ್ರಾಮದ ಸಂತೋಷ ಗೋಂಜಿ ಇವರ ವಾಸದ ಮನೆಯಲ್ಲಿ ಮೃತ  ಶಿಲ್ಪಾ ಕೊಂ ಸಂತೋಷ ಗೋಂಜಿ ವಯಾ 30 ವರ್ಷ ಸಾ: ಗುಡ್ಡದಹೂಲಿಕಟ್ಟಿ ಇವಳು ತನಗಿರುವ ಹೊಟ್ಟೆನೋವಿನ ಬಾದೆಯನ್ನು ತಾಳಲಾರದೇ ತನ್ನಷ್ಟಕ್ಕೆ ತಾನೇ ಮಾನಸಿಕ ಮಾಡಿಕೊಂಡು ತನ್ನದೇ ಸೀರೆಯನ್ನು ಬೆಲಗಿಗೆ ಕಟ್ಟಿ ಕುತ್ತಿಗೆಗೆ ಉರುಲು ಹಾಕಿಕೊಂಡು ಸತ್ತಿರುತ್ತಾಳೆ ವಿನ: ಅವಳ ಮರಣದಲ್ಲಿ ಬೇರಾವ ಸಂಶಯವಿರುವದಿಲ್ಲ ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.