ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, January 3, 2018

CRIME INCIDENTS 03-01-2017



ಧಾರವಾಡ ಜಿಲ್ಲೆಯಲ್ಲಿ ದಿನಾಂಕ:03-01-2018 ರಂದು ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮತ್ತಿಗಟ್ಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಮಹಮ್ಮದ ರಫೀಕ ಇತನು ತನ್ನ ಪಾಯ್ದೇಗೋಸ್ಕರ 01 ರೂಪಾಯಿಗೆ 80 ರೂಪಾಯಿ ಅಂತಾ ಅನ್ನುತ್ತಾ ಓಸಿ ಎಂಬ ಜೂಜಾಟವನ್ನು ಆಡುತ್ತಿದ್ದಾಗ ದಾಳಿ ಮಾಡಿದ ಕಾಲಕ್ಕೆ ಸಿಕ್ಕಿದ್ದು ಅವನಿಂದ ರೂ.520 ರೂ ವಶಪಡಿಸಿಕೊಂಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 01/2018 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ರಾಮನಕೊಪ್ಪ ಗ್ರಾಮದ ಕಾಣೆಯಾದ ಸಿದ್ದಪ್ಪ ಯಲ್ಲಪ್ಪ ಪಡವಳ್ಳಿ. ವಯಾ: 32 ವರ್ಷ, ಈತನು ಊರಲ್ಲಿ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವನು ಇದೂವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಅಂತಾ ಕಾಣೆಯಾಗಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 03/2018 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮುಗದ ಗ್ರಾಮದ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ  ಆರೋಪಿತನಾದ ಈಶ್ವರ ಫಿಶೆ ಇತನು ತನ್ನ ಸ್ವಂತ ಪಾಯ್ದೆಗೋಸ್ಕರ 01 ರೂಪಾಯಿಗೆ 80 ರೂಪಾಯಿ ಕೊಡುತ್ತೇನ  ಅಂತಾ ಸಾರ್ವಜನಿಕರಿಗೆ ಹೇಳಿ ಹಣ ಇಸಿದುಕೊಂಡು ಅಂಕಿ ಸಂಖ್ಯೆಗಳ ಆಧಾರದ ಮೇಲೆ ಬಾಂಬೆ ಮಟಕಾ ಜೂಜಾಟವನ್ನು ಆಡಿಸುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 345-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 06/2018 ಕಲಂ 78(3) ನೇದ್ದರಲ್ಲಿ ಪ್ರಕರವನ್ನು ದಾಖಲಿಸಿದ್ದು ಇರುತ್ತದೆ.