ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, February 19, 2018

CRIME INCIDENTS 19-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:19-02-2018 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಶರೇವಾಡ-ಬೆಟದೂರ ಗ್ರಾಮಗಳ ನಡುವೆ ರಸ್ತೆಯ ಮೇಲೆ ಆರೋಪಿತನಾದ ಅಲ್ಲಾವುದ್ದೀನ ಮಹಬೂಬಸಾಬ ತಾಡಪತ್ರಿ, ಸಾ: ನ್ಯೂಆನಂದನಗರ ಹಳೇ ಹುಬ್ಬಳ್ಳಿ ಇವನು ರಿಕ್ಷಾ ನಂ: ಕೆಎ 25 / ಡಿ: 8662 ನೇದ್ದನ್ನು ಶರೇವಾಡ ಕಡೆಯಿಂದ ಬೆಟದೂರ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿ ತನ್ನ ಹತ್ತಿರ ಮುಂದಿನ ಸೀಟಿನಲ್ಲಿ ಕುಳಿತ ಅಬ್ದುಲಖಯೂಮ ತಂದೆ ಮಹ್ಮದಆಶೀಪ್ ತಾಡಪತ್ರಿ, ವಯಾ: 10 ವರ್ಷ, ಸಾ: ನ್ಯೂಆನಂದನಗರ ಹಳೇ ಹುಬ್ಬಳ್ಳಿ ಈತನು ಆಯತಪ್ಪಿ ಪುಟಿದು ಕೆಳಗೆ ಬೀಳುವಂತೆ ಮಾಡಿ ಹೊಟ್ಟೆಗೆ ಭಾರೀ ಒಳಪೆಟ್ಟಾಗುವಂತೆ ಹಾಗೂ ಮೈ ಕೈ ಗಳಿಗೆ ಸಣ್ಣ ಪುಟ್ಟ ಗಾಯಪೆಟ್ಟುಗಳಾಗುವಂತೆ ಮಾಡಿದ್ದು, ಸದರಿಯವನಿಗೆ ಹುಬ್ಬಳ್ಳಿಯ ಬಿಜಾಪೂರ ಆಸ್ಪತ್ರೆಯಲ್ಲಿ ಪ್ರಥಮೋಪಚಾರ ಮಾಡಿಸಿ, ಹೆಚ್ಚಿನ ಚಿಕಿತ್ಸೆ ಕುರಿತು ವಿವೇಕಾನಂದ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯೊಳಗೆ ಒಯ್ಯುವಷ್ಟರಲ್ಲಿ ಸಂಜೆ 5-00 ಗಂಟೆಗೆ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 49/2018 ಕಲಂ 279.304(ಏ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಟದೂರ ಗ್ರಾಮದ ರೌಡಿ ಅಕೀಲ ಭಜಂತ್ರಿ ಇತನು ರೌಡಿ ಶಿಟರ್ ಇದ್ದು ಸದರಿಯವನ ಚಟುವಟಿಕೆಯ ಬಗ್ಗೆ ಬೆಟದೂರ ಗ್ರಾಮದಲ್ಲಿ ಸಾರ್ವಜನಿಕರಿಗೆ ವಿಚಾರಿಸಿದ್ದು ಸದರಿಯವನು ಒಳ್ಳೆಯ ನಡತೆಯಿಂದ ಇರದೇ ಮುಂಬರುವ ದಿನಗಳಲ್ಲಿ ಹಾಗೂ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ  ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಸಾಧ್ಯತೆಗಳು ಇರುವ ಬಗ್ಗೆ ಸ್ಥಾನಿಕ ಚೌಕಾಶಿಯಿಂದ ತಿಳಿದುಬಂದಿದ್ದು ಸದರಿಯವನು ಯಾವುದಾದರೂ ಘೋರ ಸ್ವರೂಪದ ಅಪರಾಧವೆಸಗಿ ಸಾರ್ವಜನಿಕ ಶಾಂತತಾ ಭಂಗಪಡಿಸುವ ಬಗ್ಗೆ ನಮಗೆ ಮನವರಿಕೆಯಾಗಿದ್ದರಿಂದ ಶಾಂತತೆ ಕಾಪಾಡುವ ದೃಷ್ಟಿಯಿಂದ ಸದರಿಯವನ ಮೇಲೆ ಗುನ್ನಾನಂ 50/2018 ಕಲಂ 107 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಮನಸೂರ ಗ್ರಾಮದ ಹದ್ದಿನ ಗುಡ್ಡದ ಹತ್ತಿರ  ರಸ್ತೆ ಮೇಲೆ  ಲಾರಿ ನಂ MH 10 AW 7634  ನೇದ್ದರ ಚಾಲಕನಾದ ದಯಾನಂದ ತಂದೆ ಬಸಪ್ಪ ಕಾಂಬಳೆ ವಯಾಃ25ವರ್ಷ ಜಾತಿಃಹಿಂದೂ ಹರಿಜನ ಸಾಃಗಣೆಶ ನಗರ ಮುಚ್ಚಂಡಿ ತಾಃಜತ್ತ ಜಿಲ್ಲಾ ಸಾಂಗಲಿ ಇವನು ಲಾರಿಯನ್ನು ಧಾರವಾಡ  ಕಡೆಯಿಂದ ಹುಬ್ಬಳ್ಳಿ  ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿ ಲಾರಿಯನ್ನು ಎಡಹೋಳು ಮಗ್ಗಲಾಗಿ  ಪಲ್ಟಿ ಮಾಡಿ ಕೆಡವಿ ಲಾರಿಯನ್ನು ಜಖಂ ಗೊಳಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 56/2018 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4 ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಪಟ್ಟಣದಲ್ಲಿ ಹಾಗೂ ಕಂದ್ಲಿ  ಗ್ರಾಮದ 1] ನಿಂಗಯ್ಯ ಬಸಲಿಂಗಯ್ಯ ಪಟದಯ್ಯನವರ ಸಾ : ಮಡಕಿಹೊನ್ನಳ್ಳಿ ಈತನ ಮೇಲೆ ಕಲಘಟಗಿ ಠಾಣೆಯ ಗುನ್ನಾ ನಂಬರ 263/2016 ಕಲಂ 420 ಸಹ ಕಲಂ 34 ಐ.ಪಿ.ಸಿ ಮತ್ತು 244//2017 ಕಲಂ 143.147.148.302.201 ಸಹಕಲಂ 149  ಐ.ಪಿ.ಸಿ ನೇದ್ದು ಧಾಖಲಾಗಿದ್ದು ಇನ್ನೊಬ್ಬ ಎದುರುಗಾರ 2] ಕುಮಾರ ಗಂಗಯ್ಯ ತೇಗೂರಮಠ ಸಾ : ಬೆಂಡಿಗೇರಿ ಓಣಿ ಕಲಘಟಗಿ ಈತನ ಮೇಲೆ ಕಲಘಟಗಿ ಪೊಲೀಸ್ ಠಾಣೆಯ ಗುನ್ನಾ ನಂಬರ 244//2017 ಕಲಂ 143.147.148.302.201 ಸಹಕಲಂ 149  ಐ.ಪಿ.ಸಿ ನೇದ್ದವುಗಳು ಪ್ರಕರಣ ಧಾಖಲಾಗಿದ್ದು ಇನ್ನೂಬ್ಬ 3] ಧಾದಾಪೀರ ತಂದೆ ಶರೀಪಸಾಬ ಬೆಳೋಗಿ ಸಾ : ಬಸವೇಶ್ವರ ನಗರ ಕಲಘಟಗಿ ಈತನ ಮೇಲೆ ಕಲಘಟಗಿ ಠಾಣೆಯಲ್ಲಿ 244//2017 ಕಲಂ 143.147.148.302.201 ಸಹಕಲಂ 149  ಐ.ಪಿ.ಸಿ ನೇದ್ದು ದಾಖಲಾಗಿದ್ದು ಇನ್ನೂಬ್ಬ 4] ಹಾಲಪ್ಪ ತಂದೆ ರಾಮಣ್ಣ ಟೋಸೂರ ಸಾ ; ಕಂದ್ಲಿ ಈತನ ಮೇಲೆ ಕಲಘಟಗಿ ಠಾಣೆಯಲ್ಲಿ 14/2016 427.504.506 ಐ.ಪಿ.ಸಿ ಮತ್ತು 3 [1] ಎಸ್.ಸಿ.ಎಸ್.ಟಿ ಕಾಯ್ದೆ ನೇದ್ದು ಮತ್ತು 324/2016 307.ಸಹ ಕಲಂ 34 ಐ.ಪಿ.ಸಿ 25.27.ಆಮ್ಸರ್ ಕಾಯ್ದೆ 2 [1] 3 ಎಸ್.ಸಿ ಎಸ್.ಟಿ ಕಾಯ್ದೆ ನೇದ್ದು ದಾಖಲಾಗಿದ್ದು  ಸದರಿಯವರು ಅಪರಾದ ಎಸಗುವ ಪ್ರವೃತ್ತಿಯವರಿದ್ದು ಸದರಿಯವರಿಗೆ  ಹಾಗೇ ಬಿಟ್ಟಲ್ಲಿ ಇತಂಹದೇ ಪ್ರಕರಣಗಳನ್ನು ಮಾಡಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡುವುದಲ್ಲದೇ ಈ ಎಲ್ಲಾ  ಎದುರುಗಾರರು ಮುಂಬರುವ ವಿಧಾನಸಭಾ  ಚುನಾವಣೆ ಕಾಲಕ್ಕೆ ಯಾವುದಾದರು ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಗ್ರಾಮಗಳಲ್ಲಿಯ ಜನರೊಂದಿಗೆ ಹಾಗೂ ಸುತ್ತಮುತ್ತಲಿನ ಜನರೊಂದಿಗೆ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು  ಗ್ರಾಮಗಳಲ್ಲಿ ಹೆಚ್ಚಿನ ಅನಾಹುತ ಮಾಡುವುದಲ್ಲದೇ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಿ ಇನ್ನೂ ಘೋರ ಅಪರಾದಗಳು ಜರುಗುವ ಸಂಬವ ಇರುತ್ತದೆ ಎಂದು ತಿಳಿದು ಬಂದಿರುತ್ತದೆ ಆದ್ದರಿಂದ   ಸದರಿಯವರ  ಗುನ್ನಾನಂ 65/2018 ಕಲಂ  ಮುಂಜಾಗೃತಾ ಕ್ರಮವಾಗಿ 107 ಸಿ.ಆರ್.ಪಿ.ಸಿ ರೀತ್ಯಾ ಕ್ರಮ ಕೈಗೊಂಡಿದ್ದು ಇರುತ್ತದೆ.

Sunday, February 18, 2018

CRIME INCIDENTS 18-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-02-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:  ಯಮನೂರಿನಿಂದ ನವಲಗುಂದ ಕಡೆಗೆ ಮೋಟಾರ್ ಸೈಕಲ್ ನಂ ಕೆಎ25/ಇ ಹೆಚ್ -5243 ನೇದನ್ನು ಮೌನೇಶ ಕಮ್ಮಾರ ಇತನು ಅತೀ ಜೋರಿನಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನವಲಗುಂದದ ಕೆ ಇ ಬಿ ಗ್ರೀಡ್ ಮುಂದಿನ ರಸ್ತೆಯ ಮೇಲೆ ಸ್ಕೀಡ್ ಆಗಿ ಬಿದ್ದು ಅಸ್ವಸ್ಥಗೊಂಡು ಉಪಚಾರಕ್ಕೆ ಅಂತಾ ನವಲಗುಂದ ಸರಕಾರಿ ಆಸ್ಪತ್ರೆಗೆ ದಾಕಲಿಸಿದ್ದು ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ರಾತ್ರಿ 10-20 ಗಂಟೆಗೆ ಮೃತಪಟ್ಟಿದ್ದು  ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 13/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶಿ ಗ್ರಾಮದ ಕೆ.ಎಲ್.ಇ ಕಾಲೇಜ ಮುಂದೆ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಮೇಲೆ ಆರೋಪಿತನಾದ ಪಕ್ಕೀರಪ್ಪ ಹುತ್ತಪ್ಪ ನಾಗಶೆಟ್ಟಿ, ವಯಾ: 62 ವರ್ಷ ಸಾ: ಕಮಡೊಳ್ಳಿ ಇವನು ತನ್ನ ಮೋಟಾರ ಸೈಕಲ್ ನಂ: ಕೆಎ 63 / ಇ: 7353 ನೇದ್ದನ್ನು ಸಂಶಿ ಕಡೆಯಿಂದ ಶಿರೂರ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿ ವೇಗ ನಿಯಂತ್ರಣ ಮಾಡಲಾಗದೇ ಸ್ಕಿಡ್ ಮಾಡಿ ಕೆಡವಿ ತನಗೆ ತಲೆಗೆ ಭಾರೀ  ಮತ್ತು ಮೈ ಕೈ ಗಳಿಗೆ ಸಾದಾ ಗಾಯಪೆಟ್ಟುಗಳಾಗುವಂತೆ ಮಾಡಿದ್ದಲ್ಲದೇ ತನ್ನ ಮೋಟಾರ ಸೈಕಲ್ ಗೆ ಜಕಂ ಪಡಿಸಿದ್ದು ಇರುತ್ತದೆ ಈ  ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾಣಂ 48/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ವರೂರ ಗ್ರಾಮದ ಪ್ರಾಥಮಿಕ ಶಾಲೆಯ ಹತ್ತಿರ, ಪೂನಾ ಬೆಂಗಳೂರು ರಸ್ತೆಯ ಮೇಲೆ, ಯಾವುದೋ ಒಂದು ಕಾರ ಚಾಲಕನು ಕಾರನ್ನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ  ನಡೆಯಿಸಿಕೊಂಡು ಬಂದು, ಪ್ರಾಥಮಿಕ ಶಾಲೆಯ ಕಡೆಯಿಂದ ತಮ್ಮ ಮನೆಯ ಕಡೆಗೆ ಹೋಗುವ ಸಲುವಾಗಿ, ರಸ್ತೆಯನ್ನು ನಡೆಯುತ್ತ ದಾಟುತ್ತಿದ್ದ, ಯಶವಂತ ಗಂಗಪ್ಪ ಬಸ್ತಿ ವಯಾ. 58 ವರ್ಷ ಸಾ. ವರೂರ ಇವರಿಗೆ ಡಿಕ್ಕಿ ಮಾಡಿ, ಅಪಘಾತಪಡಿಸಿ ತಲೆಗೆ, ಎರಡು ಮೊಣಕಾಲ ಕೆಳಗೆ ಭಾರಿ ಗಾಯಪಡಿಸಿ, ಸ್ಥಳದಲ್ಲಿಯೇ ಮರಣಪಡಿಸಿ, ಕಾರನ್ನು ನಿಲ್ಲಿಸದೇ ಹಾಗೆಯೇ ನಡೆಯಿಸಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 69/2018 ಕಲಂ 279.304(ಎ) ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ತಾಲ್ಲೂಕಿನ ಎದುರುಗಾರರಾದ 1] ಶಂಕ್ರಪ್ಪ ಮುದಲಿಂಗಪ್ಪನವರ ಸಾ; ಸೂರಶೇಟ್ಟಿಕೊಪ್ಪ ಈತನ ಮೇಲೆ 123/2017 ಕಲಂ 324.376.448.504.506 ಐ.ಪಿ.ಸಿ 4.6 ಪಿ.ಎಸ್.ಎಸ್.ಓ ಕಾಯ್ದೆ ನೇದ್ದು ಧಾಖಲಾಗಿದ್ದು 2] ಬಸವರಾಜ ಹೊಸಮನಿ ಸಾ:ದೇವಿಕೊಪ್ಪ  ಈತನ ಮೇಲೆ 234/2017 ಕಲಂ 302.201.ಸಹ ಕಲಂ 34 ಐ.ಪಿ.ಸಿ ಮತ್ತು 3] ನಾಗಯ್ಯ ಹಿರೇಮಠ ಸಾ; ಗಳಗಿನಕಟ್ಟಿ ಈತನ ಮೇಲೆ 234/2017 ಕಲಂ 302.201.ಸಹ ಕಲಂ 34 ಐ.ಪಿ.ಸಿ ನೇದ್ದು ಪ್ರಕರಣ ಧಾಖಲಾಗಿದ್ದು ಸದರಿಯವರು ಅಪರಾದ ಎಸಗುವ ಪ್ರವೃತ್ತಿಯವರಿದ್ದು ಹಾಗೇ ಬಿಟ್ಟಲ್ಲಿ  ಇಂತಹಧೇ ಕೃತ್ಯ ವ್ಯಸಗಿ ಅಲ್ಲದೇ ಮುಂಬರುವ ವಿಧಾನಸಭೆ ಚುನಾವಣೆ ಕಾಲಕ್ಕೆ ಯಾವುದಾದರು ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಗ್ರಾಮಗಳಲ್ಲಿ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು  ಗ್ರಾಮದಲ್ಲಿ ಸಾರ್ವಜನಿಕ ಶಾಂತತಾ ಬಂಗ ಪಡಿಸುವುದಲ್ಲದೇ ಇನ್ನೂ ಹೆಚ್ಚಿನ ಘೋರ ಅಪರಾದ ಎಸಗುವ ಸಂಬವ ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಗುನ್ನಾನಂ 62/2018 ಕಲಂ 107 ಸಿ.ಆರ್.ಪಿ.ಸಿ ರೀತ್ಯಾ ಕ್ರಮ ಕೈಗೊಂಡಿದೆ

5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ತಾಲ್ಲೂಕಿನ 1] ಶಂಕ್ರಪ್ಪ ಮುದಲಿಂಗಪ್ಪನವರ ಸಾ; ಸೂರಶೇಟ್ಟಿಕೊಪ್ಪ ಈತನ ಮೇಲೆ 123/2017 ಕಲಂ 324.376.448.504.506 ಐ.ಪಿ.ಸಿ 4.6 ಪಿ.ಎಸ್.ಎಸ್.ಓ ಕಾಯ್ದೆ ನೇದ್ದು ಧಾಖಲಾಗಿದ್ದು 2] ಬಸವರಾಜ ಹೊಸಮನಿ ಸಾ:ದೇವಿಕೊಪ್ಪ  ಈತನ ಮೇಲೆ 234/2017 ಕಲಂ 302.201.ಸಹ ಕಲಂ 34 ಐ.ಪಿ.ಸಿ ಮತ್ತು 3] ನಾಗಯ್ಯ ಹಿರೇಮಠ ಸಾ; ಗಳಗಿನಕಟ್ಟಿ ಈತನ ಮೇಲೆ 234/2017 ಕಲಂ 302.201.ಸಹ ಕಲಂ 34 ಐ.ಪಿ.ಸಿ ನೇದ್ದು ಪ್ರಕರಣ ಧಾಖಲಾಗಿದ್ದು ಸದರಿಯವರು ಅಪರಾದ ಎಸಗುವ ಪ್ರವೃತ್ತಿಯವರಿದ್ದು ಹಾಗೇ ಬಿಟ್ಟಲ್ಲಿ  ಇಂತಹಧೇ ಕೃತ್ಯ ವ್ಯಸಗಿ ಅಲ್ಲದೇ ಮುಂಬರುವ ವಿಧಾನಸಭೆ ಚುನಾವಣೆ ಕಾಲಕ್ಕೆ ಯಾವುದಾದರು ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಗ್ರಾಮಗಳಲ್ಲಿ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು  ಗ್ರಾಮದಲ್ಲಿ ಸಾರ್ವಜನಿಕ ಶಾಂತತಾ ಬಂಗ ಪಡಿಸುವುದಲ್ಲದೇ ಇನ್ನೂ ಹೆಚ್ಚಿನ ಘೋರ ಅಪರಾದ ಎಸಗುವ ಸಂಬವ ಕಂಡು ಬಂದಿದ್ದರಿಂದ ಸದರಿಯವರ ಮೇಲೆ  ಗುನ್ನಾನಂ 63/2018 ಕಲಂ 107 ಸಿ.ಆರ್.ಪಿ.ಸಿ ರೀತ್ಯಾ ಕ್ರಮ ಕೈಗೂಂಡಿದ್ದು ಇರುತ್ತದೆ.

Saturday, February 17, 2018

CRIME INCIDENTS 17-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:17-02-2018 ರಂದು ವರದಿಯಾದ ಪ್ರಕರಣಗಳು

1.  ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಗ್ರಾಮದ 1.ಗಂಗಾಧರ ಹಾಳಕೇರಿ 2.ಭರತೇಶ ಜಾಣಗೇರ 3.ರಾಘವೇಂದ್ರ ಅರಸಂದಿ 4.ಮಹಾಬೂಬ ಸಾಬ ನವಲಗುಂದ  5.ದೇವಪ್ಪಾ ಇವರುಗಳು ರೌಡಿ ರಜಿಸ್ಟರ್ ಇರುವ ವ್ಯಕ್ತಿಗಳಾಗಿದ್ದು ಇರುತ್ತದೆ ಸದರೀಯವರು ಠಾಣೆಯ ಅನೇಕ ಪ್ರಕರಣಗಳಲ್ಲಿ ಆರೋಪಿತರು ಸಹಿತ ಆಗಿದ್ದು ಇವರು ಅಣ್ಣಿಗೇರಿ ಶಹರದಲ್ಲಿ ರೌಡಿ ವ್ಯಕ್ತಿತ್ವ ಹೊಂದಿರುವವರಾಗಿರುತ್ತಾರೆ ಅಲ್ಲದೇ ಮುಂಬರುವ ವಿಧಾನಸಬಾ ಚುನಾವಣೆಯ ಕಾಲಕ್ಕೆ ಯಾವುದಾದರು ನೆಪ ಮಾಡಿಕೊಂಡು ಶಹರದಲ್ಲಿ ಶಾಂತಿ ಕದಡುವ ಇರಾದೆಯವರು ಇರುತ್ತಾರೆ ಸದರೀ ವಿಧಾನಸಬಾ ಚುನಾವಣೆಯ ಸಮಯದಲ್ಲಿ ಯಾವ ವೇಳೆಯಲ್ಲಿ ತಂಟೆ ತಕರಾರು ಮಾಡಿ ಸಂಜ್ಞೆಯ ಅಪರಾಧ ಮಾಡುತ್ತಾರೋ ಎನ್ನುವ ಬಗ್ಗೆ ಹೇಳಲು ಬಾರದ್ದರಿಂದ ಹಾಗು ಶಹರದ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆ ಇರುವ ಬಗ್ಗೆ ನಮಗೆ ಮಾಹಿತಿ ತಿಳಿದು ಬಂದಿದ್ದರಿಂದ ಸದರೀಯವರ ಮೇಲೆ ಗುನ್ನಾನಂ 13/2018 ಕಲಂ 107 ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಇರುತ್ತದೆ

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಶಲವಡಿ ಗ್ರಾಮದ  ಬಸವರಾಜ ಕಲ್ಲಪ್ಪ ಯಲಬುರ್ಗಿ ವಯಾ: 32 ಸಾ:ಶೆಲವಡಿ ಈತನು ಹುಬ್ಬಳ್ಳಿಗೆ ಕೆಲಸಕ್ಕೆ ಹೋಗುತ್ತೇನೆ ಅಂತ ಹೋದವನು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು ಎಲ್ಲ ಕಡೆ ಹುಡಕಲಾಗಿ ಸಿಗದೇ ಇದ್ದರಿಂದ ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 12/2018  ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಕುಂದಗೋಳ ಗ್ರಾಮದ ಪಾಂಡುರಂಗ ಕನ್ನಕೂರ ಇತನು ರೌಡಿ ಶಿಟರ್ ಇದ್ದು ಸದರಿಯವನ ಚಟುವಟಿಕೆಯ ಬಗ್ಗೆ ಕುಂದಗೋಳ ಶಹರದ ಕಿಲ್ಲಾ ಓಣಿ ಶಿವಾಜಿನಗರದಲ್ಲಿ ಸಾರ್ವಜನಿಕರಿಗೆ ವಿಚಾರಿಸಿದ್ದು ಸದರಿಯವನು ಒಳ್ಳೆಯ ನಡತೆಯಿಂದ ಇರದೇ ಮುಂಬರುವ ದಿನಗಳಲ್ಲಿ ಹಾಗೂ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಹರದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಸಾಧ್ಯತೆಗಳು ಇರುವ ಬಗ್ಗೆ ಸ್ಥಾನಿಕ ಚೌಕಾಶಿಯಿಂದ ತಿಳಿದುಬಂದಿದ್ದು ಸದರಿಯವನು ಮೇಲೆ ಗುನ್ನಾನಂ 41/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ತಾಲ್ಲೂಕ ಹಳ್ಳಿಗಳಲ್ಲಿ 1] ಸಂತೋಷ ಅಗಡಿ ಈತನ ಮೇಲೆ ಠಾಣೆಯಲ್ಲಿ 107/2017 ಕಲಂ 363.376.ಐ.ಪಿ.ಸಿ ಮತ್ತು 4.6 ಪಿ.ಸಿ.ಎಸ್.ಓ ಕಾಯ್ದೆ ನೇದ್ದು 2] ಸಂಗಪ್ಪ ಶಿವರುದ್ರಪ್ಪ  ತಂಬೂರ  ಈತನ ಮೇಲೆ 107/2017 ಕಲಂ 363.376.ಐ.ಪಿ.ಸಿ ಮತ್ತು 4.6 ಪಿ.ಸಿ.ಎಸ್.ಓ ಕಾಯ್ದೆ ಮತ್ತು 3] ಯಲ್ಲಪ್ಪ ಶಂಕರ ಕನಕತ್ರಿ ಸಾ: ಸಂಗಮೇಶ್ವರ ಈತನ ಮೇಲೆ 122/2017 ಕಲಂ 324.504.ಸಹ ಕಲಂ 34 ಐ.ಪಿ.ಸಿ ಮತ್ತು 3 [1] ಎಸ್.ಸಿ.ಎಸ್.ಟಿ ಕಾಯ್ದೆ ನೇದ್ದು ಧಾಖಲಾಗಿದ್ದು ಇರುತ್ತದೆ. ಅಲ್ಲದೇ ಸದರಿಯವರಯ ಅಪರಾದ ಎಸಗುವ ಪ್ರವೃತ್ತಿಯವರಿದ್ದು ಮುಂಬರಯವ ದಿನಗಳಲ್ಲಿ ಯಾವುದಾರು ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ತಮ್ಮ ತಮ್ಮ ಗ್ರಾಮಗಳಲ್ಲಿ ಜನರೊಂದಗಿ ಕೃತ್ಯ ವೆಸಗಿ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಿ ಹೆಚ್ಚಿನ ಘೋರ ಅಪರಾದ ಎಸಗುವ ಸಂಬವ ಕಂಡು ಬಂದಿದ್ದರಿಂದ ಗುನ್ನಾನಂ 60/2018  ಮುಂಜಾಗ್ರತಾ ಕ್ರಮವಾಗಿ 107 ಸಿ.ಆರ್.ಪಿ.ಸಿ ರೀತ್ಯಾ ಕ್ರಮ ಕೈಗೊಂಡಿದೆ

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕೊಟಗುಣೆಸಿ ಗ್ರಾಮದ ಮಾರುತಿ ಸಂಗಣ್ಣವರ ಇತನು ಠಾಣೆಯ ರೌಡಿ ಶೀಟರ ಇದ್ದು ಸದರಿಯವನು ಯಾವವೇಳೆಯಲ್ಲಾದರೂ ಸಾರ್ವಜನಿಕ ಶಾಂತತಾ ಭಂಗಪಡಿಸಿ ಸಾರ್ವಜನಿಕ ಆಸ್ತಿ ಪಾಸ್ತಿ ವ ಪ್ರಾಣ ಹಾನಿ ಮಾಡುತ್ತಾನೆ ಎಂದು ಹೇಳಲಿಕ್ಕೆ ಬಾರದ್ದರಿಂದ ಸದರಿಯವ ಮೇಲೆ ಗುನ್ನಾನಂ 68/2018 ಕಲಂ  107 ಮುಂಜಾಗೃತ ಕ್ರಮ ಜರುಗಿಸಿದ್ದು ಇರುತ್ತದೆ.Friday, February 16, 2018

CRIME INCIDENTS 16-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-02-2018 ರಂದು ವರದಿಯಾದ ಪ್ರಕರಣಗಳು

1 ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಹಿರೆಬೂದಿಹಾಳ ಗ್ರಾಂದ  ಕಾಣೆಯಾದ ಉಮೇಶಗೌಡ ಕತ್ತೆಪಗೌಡ್ರ ಇತನು ತಮ್ಮ ಅಣ್ಣನು ತಮ್ಮ ಹತ್ತಿರ 100/- ರೂಗಳನ್ನು ಪಡೆದುಕೊಂಡು ಹುಬ್ಬಳ್ಳಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈ ವರೆಗೂ ಮರಳಿ ಮನೆಗೆ ಬಂದಿರುವುದಿಲ್ಲಾ ಅವರು ಮಾನಸೀಕ ಅಸ್ತವ್ಯಸ್ತರಾಗಿದ್ದು ಅವರು ಪದೇ ಪದೇ ಹೋಗಿ ಬಂದು ಮಾಡುತ್ತಿದ್ದುದರಿಂದ ಅವರನ್ನು ತಮ್ಮ ಸಂಬಂಧಿಕರ ಹಾಗೂ ಇತರೇ ಊರುಗಳಲ್ಲಿ ಹುಡುಕಾಡಿದರು ಅವರು ಸಿಗದೇ ಇದ್ದುದ್ದರಿಂದ ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 31/2018 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:  ಅರಳಿಕಟ್ಟಿ ಗ್ರಾಮದ 1.ಚನ್ನಬಸಪ್ಪಹೊಸಮನಿ 2.ಶರಣಪ್ಪಬೆಳಗಿರಿ ನಮ್ಮ ಠಾಣೆಯ ರೌಡಿ ಶೀಟರ ಇದ್ದು ಸದರಿಯವರು ರೌಡಿ ಮನೋಭಾವಣೆ ಉಳ್ಳವರಾಗಿದ್ದು ಸದರಿಯವರು ಯಾರ ಮಾತಿಗೂ ಬೆಲೆ ಕೊಡದೆ, ಭೂ ಅರಳಿಕಟ್ಟಿ ಗ್ರಾಮದಲ್ಲಿ ಸಾರ್ವಜನಿಕರ  ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ವ ಪ್ರಾಣ ಹಾನಿ ಮಾಡುವ ಸಂಭವ ಕಂಡು ಬಂದಿದ್ದರಿಂದ ಸದರಿ ಮೇಲೆ ಮುಂಜಾಗೃತಾ ಕ್ರಮವಾಗಿ  ಗುನ್ನಾನಂ 61/2018 ಕಲಂಃ 107 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಭಮ್ಮಸಮುದ್ರದ ಗ್ರಾಮದ  ರೌಡಿ ಶೀಟರ  ಇದ್ದ ಚನ್ನವಿರಯ್ಯ ಹಿರೇಮಠ 2.ಸಾಂಬಯ್ಯ ಕಾಶಿಮಠ ಇವರು ರೌಡಿ ಮನೋಭಾವಣೆ ಉಳ್ಳವರಾಗಿದ್ದು ರಾಜಕೀಯ ಪ್ರಭಾವದವರಿದ್ದು, ಸದರಿಯವರು ಯಾರ ಮಾತಿಗೂ ಬೆಲೆ ಕೊಡದೆ, ಬೊಮ್ಮಸಮುದ್ರ ಗ್ರಾಮದಲ್ಲಿಯ ಸಾರ್ವಜನಿಕರ ಶಾಂತತಾ ಭಂಗವನ್ನುಂಟು  ಮಾಡಿ ಸಾರ್ವಜನಿಕ ಆಸ್ತಿ ವ ಪ್ರಾಣ ಹಾನಿ ಮಾಡುವ ಸಂಭವ ಕಂಡು ಬಂದಿದ್ದರಿಂದ ಸದರಿ ಎದುರುಗಾರರ ಮೇಲೆ  ಗುನ್ನಾನಂ 62/2018 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಾರವಾರ ರಸ್ತೆ ಜುಂಜನ ಬೈಲ್ ಕ್ರಾಸ್ ಹತ್ತಿರ ರಸ್ತೆ ಮೇಲೆ ಮಾರುತಿ ಸ್ವಿಪ್ಟ ಡಿಜೈರ್ ಕಾರ ನಂ ಕೆಎ04/ ಎಮ್ಎಪ್ 7467 ನೇದ್ದನ್ನು  ಆರೋಪಿ ರಾಜಾರಾಜ ತಂದೆ ಕೊರಗಯ್ಯ ಶೆಟ್ಟಿ ವಯಾ 52 ವರ್ಷ ಸಾ:ಮಂದಾರ್ತಿ ಹಾಲಿ: ಹುಬ್ಬಳ್ಳಿ  ಈತನು ತಾನು ನಡೆಸುತ್ತಿದ್ದ ಕಾರನ್ನು ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿಜೋರು ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೇ ರಸ್ತೆ ಬದಿಯಲ್ಲಿ ಪಲ್ಟಿ ಮಾಡಿ ಕೆಡವಿ ಅಪಘಾತ ಪಡಿಸಿ ಕಾರನಲ್ಲಿದ್ದ ಶರಾವತಿ ಶೆಟ್ಟಿ , ಉದಯ ಶೆಟ್ಟಿ ಹಾಗೂ ಶ್ರವ್ಯಾ ಇವರಿಗೆ ಬಲವಾದ ಗಾಯಪಡಿಸಿದ್ದಲ್ಲದೇ ತಾನೂ ಭಾರಿ ಪ್ರಮಾಣದ ಗಾಯಪಡಿಸಿಕೊಂಡು ಉಪಚಾರಕ್ಕೆ ಧಾರವಾಡ ಎಸ್ ಡಿ ಎಮ್ ಆಸ್ಪತ್ರೆಗೆ ಸಾಗಿಸುವಾಗ ಮರಣಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 58/2018 ಕಲಂ 279.338.304 (ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಾರಿಹಾಳ ಗ್ರಾಮದ 1. ರುದ್ರಪ್ಪ ಇಟ್ಟಿಗಟ್ಟಿ 2.ಮಹೇಶ ಪೂಜಾರ ಇವರು ರೌಡಿ ಶೀಟರ ಇದ್ದು ಸದರಿಯವರು ಮೇಲೆ ಗುನ್ನಾ ನಂಬರ 73/2017 ಕಲಂ 143,147,148,323,324,448,427,504,506 ರೇ/ವು 149 ಐ,ಪಿ,ಸಿ ನೇದ್ದರಲ್ಲಿ ಆರೋಪಿತರಿದ್ದು ,ಸದರಿಯವರು ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಬಂದು ಯಾವ ವೇಳೆಯಲ್ಲಾದರು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ವ ಪ್ರಾಣ ಹಾನಿ ಮಾಡುವ ಸಂಭವ ಕಂಡುಬಂದಿದ್ದರಿಂದ ಹೊಡೆದಾಡಿ, ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ  ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುತ್ತಾರೆ ಅಂತ ಹೇಳಲಿಕ್ಕೆ ಬಾರದ್ದರಿಂದ ಎದುರುಗಾರರ ಮೇಲೆ ಗುನ್ನಾನಂ 63/2018 ಕಲಂ 107 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.