ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, March 17, 2018

CRIME INCIDENTS 17-03-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ 17-03-2018 ರಂದು ವರದಿಯಾದ ಪ್ರಕರಣಗಳು

1.ಗರಗ ಪೊಲೀಸ್ ಠಾಣಾ ವ್ಯಾ ಪ್ತಿ: ಹಂಗರಕಿ ಗ್ರಾಮದಲ್ಲಿ ಆರೋಪಿ ಸಿದ್ದಪ್ಪ ಬಡಿಗೇರಿ ಇತನಿಗೆ ಪಿರ್ಯಾದಿ ಪುಷ್ಪಾ ಕಿತ್ತೂರ ಇವರು ಕಿರಾಣಿ ಅಂಗಡಿ ಬಾಕಿ ಹಣ ಕೂಡು ಅಂತಾ ಕೇಳಿದಕ್ಕೆ ಆರೋಪಿತನು ಪಿರ್ಯಾದಿಯ ಅಂಗಡಿ ಮುಂದೆ ನಿಂತು  ಪಿರ್ಯಾದಿಗೆ ಅವಾಚ್ಯವಾಗಿ ಬೈದಾಢಿ ಕೈ ಯಿಂದಾ ಬಡಿಗೆಯಿಂದಾ ಹೊಡಿ ಬಡಿಮಾಡಿ ಜೀವದ ಧಮಕಿ ಹಾಕಿದ ಅಪರಾಧ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 54/2018 ಕಲಂ 323, 324, 504,506 ಐಪಿಸಿ ನೇದ್ದರಲ್ಲಿ  ಪ್ರಕರಣ ದಾಖಲಾಗಿದ್ದು ಇರುತ್ತದೆ.

Friday, March 16, 2018

CRIME INCIDENTS 16-03-2018

 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-03-2018 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 15-03-2018 ರಂದು 2200 ಗಂಟೆಗೆ ಜಿಗಳೂರ ಗ್ರಾಮದ ಪಿರ್ಯಾದಿ ರಾಜಶೇಖರ ಬಡಿಗೇರ ಇವರ ಮನೆಯ ಹಿತ್ತಲ ಜಾಗೆಯಲ್ಲಿ ಎಲ್ಲ ಆರೋಪಿತರಾದ ಪ್ರವೀಣಕುಮಾರ ಬಡಿಗೇರಿ ಮತ್ತು 7 ಜನರು ಗೈರ ಕಾಯ್ದೆಶೀರ ಮಂಡಳಿಯಾಗಿ ಗುಂಪುಗೂಡಿಕೊಂಡು ಒಟ್ಟಾಗಿ ಹಿತ್ತಲ ಜಾಗೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ, ಸದರ ಹಿತ್ತಲ ಜಾಗೆಯು ತಮ್ಮದು ಇರುತ್ತದೆ ಅಂತಾ ಪಿರ್ಯಾದಿಯೊಂದಿಗೆ ತಂಟೆ ತೆಗೆದು ಅವಾಚ್ಯ ಬೈದಾಡಿ, ಜೀವ ಬೆದರಿಕೆ ಹಾಕಿ, ಬಡಿಗೆಯಿಂದ ಹಾಗೂ ಕೈಯಿಂದ ಹೊಡೆ ಬಡೆ ಮಾಡಿ, ನೆಲಕ್ಕೆ ಕೆಡವಿ ಕಾಲಿನಿಂದ ಜಾಡಿಸಿ ಒದೆಯಹತ್ತಿದ್ದು ಬಿಡಿಸಲು ಹೋದ ಪಿರ್ಯಾದಿಯ ತಂದೆಗೆ, ತಂಗಿಗೆ, ಚಿಕ್ಕಮ್ಮನಿಗೆ ಹಾಗೂ ಚಿಕ್ಕಮ್ಮನ ಮಗನಿಗೂ ಸದರಿ ಆರೋಪಿತರು ಬಡಿಗೆಯಿಂದ ಹಾಗೂ ಕೈಯಿಂದ ಹೊಡೆ ಬಡೆ ಮಾಡಿ ದುಃಖಾಪತಪಡಿಸಿದ್ದಲ್ಲದೇ, ಪಿರ್ಯಾದಿ ಹಾಗೂ ಸಾಕ್ಷಿದಾರರಿಗೆ ಜೀವ ಬೆದರಿಕೆ ಹಾಕಿದ ಅಪರಾಧ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 68/2018 ಕಲಂ IPC 1860 (U/s-143,147,148,323,324,447,504,506,149) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಯಲ್ಲಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಮುಂಜಾಗ್ರತ ಕ್ರಮವಾಗಿ ಗುನ್ನಾ ನಂ. 37/2018, 38/2018, 39/2018 ಮತ್ತು 40/2018 ನೇದ್ದು ಪ್ರಕರಣಗಳನ್ನು ದಾಖಲಿಸಿದ್ದು ಇರುತ್ತದೆ.

Thursday, March 15, 2018

CRIME INCIDENTS 15-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:15-03-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನರಗುಂದ ರೋಡ ಗೊಬ್ಬರಗುಪ್ಪಿ ಗ್ರಾಮದ  ಹತ್ತಿರ ಆರೋಪಿತನಾದ ತಿಪ್ಪಣ್ಣ ಪೂಜಾರ ಇತನು ತನ್ನ ಪಾಯ್ದೆಗೊಸ್ಕರ ಪಾಸು ವ ಪರ್ಮಿಟ್ ಇಲ್ಲದೆ 48 ಹೈವರ್ಡ್ಸ ವಿಸ್ಕಿ 90 ಎಮ್ ಎಲ್ ಟೆಟ್ರಾ ಪ್ಯಾಕೇಟ್ಸ್ಗಗಳನ್ನು ಅ.ಕಿ.1440=00 ಎಲ್ಲಿಂದಲೊ ಅಕ್ರಮವಾಗಿ ತೆಗೆದುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ಗೂಡ್ಸ ರಿಕ್ಷಾ ನಂಬರ ಕೆಎ-29/7435 ನೇದ್ದರಲ್ಲಿ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿದ್ದು  ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 28/2018 ಕಲಂ 32.34 ಅಬಕಾರಿ ಕಾಯ್ದೆ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಆಯಟ್ಟಿ ಗ್ರಾಮದ ಬಸ ನಿಲ್ದಾಣದ ಹತ್ತಿರ  ಆರೋಪಿತನಾದ ರಾಜೇಸಾಬ ನಧಾಪ ಇತನು  ತನ್ನ ಸ್ವಂತ ಪಾಯಿದೆಗೊಸ್ಕರ ಪಾಸು ವ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ 91 ಹೈವರ್ಡಸ ವಿಸ್ಕಿ ತುಂಬಿದ 90 ಎಂ.ಎಲ್.ದ ಟೆಟ್ರಾ ಪ್ಯಾಕೇಟುಗಳು ಅ.ಕಿ. 2730=00 ಸರಾಯಿ ಪ್ಯಾಕೇಟುಗಳನ್ನು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 29/2018 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಧಾರವಾಡ ರಸ್ತೆ ಜೋಡಳ್ಳಿ ಕ್ರಾಸ್ ಹತ್ತಿರ ರಸ್ತೆದ ಆರೋಪಿತನಾದ ಬಸವರಾಜ ಬ್ಯಾಹಟ್ಟಿ ಇತನು ತಾನು ನಡೆಸುತ್ತಿದ್ದ ಮೊಟಾರ ಸೈಕಲ್ಲ ನಂ  KA25/ ET 3606 ನೇದ್ದನ್ನು ಜೋಡಳ್ಳಿ ಹುಲಿ ಅಜ್ಜನ ಮಠದ ಕಡೆಯಿಂದ ಜೋಡಳ್ಳಿ ಕ್ರಾಸ್ ಕಡೆಗೆ ಅತಿಜೋರು ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೇ ರಸ್ತೆ ಮೇಲೆ ಸ್ಕಿಡ್ ಮಾಡಿ ಕೆಡವಿ ಅಪಘಾತ ಪಡಿಸಿಕೊಂಡು ತಾನೇ ತಲೆಗೆ ಬಲವಾದಗಾಯಗೊಂಡು ಉಪಚಾರಕ್ಕೆ ಎಸ್ ಡಿ ಎಮ್ ಆಸ್ಪತ್ರೆ ಸತ್ತೂರ ಧಾರವಾಡದಲ್ಲಿ ಉಪಚಾರಕ್ಕೆ ದಾಖಲಿಸಿದಾಗ ಉಪಚಾರ ಪಲಿಸದೇ ಮರಣಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 95/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, March 13, 2018

CRIME INCIDENTS 13-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:13-03-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಹಾಳಕುಸಗಲ್ಲ ಗ್ರಾಮದ ಎಲ್.ಪಿ.ಟಿ ನಂ 08/2018 ನೇದ್ದರ ಅರ್ಜಿದಾರ ಮುತ್ತಪ್ಪ ದೊಡ್ಡಲಿಂಗಪ್ಪ ನಿಡುವಣಿ ಸಾ!! ಹಾಳಕುಸಗಲ್ ಈತನು 6 ವರ್ಷಗಳ ಹಿಂದೆ ತನ್ನ ಹೊಲದಲ್ಲಿನ ಗೋವಿನ ಜೋಳದ ತೆಣೆ ಸುಟ್ಟ ಬಗ್ಗೆ ನವಲಗುಂದ ಠಾಣೆಯಲ್ಲಿ ಪಿರ್ಯಾದಿ ನೀಡಿದ್ದು ಈಗ ಮಾನ್ಯ ನ್ಯಾಯಾಲಯದ ವಿಚಾರಣೆಯಲ್ಲಿರುತ್ತದೆ. 3ಜನರ ಕೂಡಿಕೊಂಡು ಅರ್ಜಿದಾರನಿಗೆ ಸಾಕ್ಷಿ ಹೇಳದಂತೆ ತಂಟೆ ತಕರಾರು ಮಾಡುತ್ತಾ ಬಂದಿದ್ದು ಸದರಿ ಎದರುಗಾರರಿಗೆ ಬಿಟ್ಟರೆ ಇದೇ ಕಾರಣವಾಗಿ ಯಾವ ವೇಳೆಯಲ್ಲಿ ಏನು ಮಾಡುತ್ತಾರೊ ಹೇಳಲು ಬಾರದ್ದರಿಂದ ಗುನ್ನಾನಂ 27/2018 ಕಲಂ ಮುಂಜಾಗೃತ ಕ್ರಮವಾಗಿ 107 ಸಿ. ಆರ್.ಪಿ. ಸಿ151 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಗರಗ ಗ್ರಾಮದ ವಿನಾಯಕ ಇವರ  ಮನೆಯಲ್ಲಿ ಯಾರೋ ಕಳ್ಳರು ದಿನಾಂಕಃ 11-03-2018 ರಂದು ಮದ್ಯರಾತ್ರಿ 1-30 ಗಂಟೆಯಿಂದಾ ಬೆಳಗಿನ 5-00 ಗಂಟೆಯ ನಡುವಿನ ಅವಧಿಯಲ್ಲಿ ನಮ್ಮ ಮನೆಯ ಮುಂಚಿ ಬಾಗಿಲದ ಕೀಲಿ ಮುರಿದು ಒಳಹೊಕ್ಕು ಮನೆಯಲ್ಲಿಯ ಕೀಲಿ ಹಾಕಿದ್ದ ಟ್ರೇಜರಿ ಬಾಗಿಲನ್ನು ಮುರಿದು ಅದರಲ್ಲಿ ಇಟ್ಟ ರೋಖ ರಕಂಃ 6000/-ರೂ ಮತ್ತು 1,15,500/-ರೂ ಕಿಮ್ಮತ್ತಿನ ಬಂಗಾರ, ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 380.457 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕರಡಿಗುಡ್ಡ ಗ್ರಾಮದ ಆರೋಪಿತನಾದ ಬಸಪ್ಪ ಚನ್ನಬಸಪ್ಪ ಮಾಟರ ಇವನು ತನ್ನ ಹೆಂಡಿತಿ ಲಲಿತಾ ಕೋಂ ಬಸಪ್ಪ ಮಾಟಾರ ವಯಾಃ45 ವರ್ಷ ಜಾತಿಹಿಂದೂ ಲಿಂಗಾಯತ ಉದ್ಯೋಗಃಅಂಗನವಾಡಿ ಸಹಾಯಕಿ  ಸಾಃಗೌಡ್ರ ಓಣಿ ಕರಡಿಗುಡ್ಡ ಇವಳೊಂದಿಗೆ ಆಗ್ಗಾಗ ತನ್ನ ಖರ್ಚಿಗೆ ಹಣ ಕೊಡು ಅಂತಾ ಜಗಳ ತೆಗೆಯುತಿದ್ದನು ಆದರೆ ಕಳೆದ ಮೂರು ತಿಂಗಳಿಂದ ತನ್ನ ಖರ್ಚಿಗೆ ಹಣ ಕೊಟ್ಟಿಲ್ಲ ಅಂತಾ ಸಿಟ್ಟಾಗಿ ದಿಃ13-03-2018 ರಂದು ಬೆಳಗಿನ ಜಾವ 01-30 ಗಂಟೆಗೆ  ತಮ್ಮ ಮನೆಯ ಅಡುಗೆ ಕೊಣೆಯಲ್ಲಿ ತನ್ನ ಹೆಂಡತಿ ಲಲಿತಾ ಕೋಂ ಬಸಪ್ಪ ಮಾಟಾರ ವಯಾಃ45 ವರ್ಷ ಇವಳಿಗೆ ಕುಡಗೋಲಿನಿಂದ ಕುತ್ತಿಗೆಗೆ ಕೈಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 91/2018 ಕಲಂ 302 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ.

4.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಸೋಲಾರಗೊಪ್ಪ ಗ್ರಾಮದಲ್ಲಿ ಮಹಾದೇವಪ್ಪಾ ಬಳಿಗಾರ ಇತನು  ರೌಡಿ ಶೀಟರ್ ಇದ್ದು ಸದರಿಯವನು ಬೀಟ ಸಿಬ್ಬಂದಿಯು ಬೀಟ ಸಂಚರಣೆ ಕಾಲಕ್ಕೆ ಹೋದಾಗ ಅವರಿಂದ ತಪ್ಪಿಸಿಕೊಂಡು ಹೋಗುವದು ಮಾಡುತ್ತಿದ್ದು ಈ ಬಗ್ಗೆ ಗ್ರಾಮಸ್ಥರಲ್ಲಿ ವಿಚಾರಿಸಲಾಗಿ ಸದರಿಯವನು ಅಕ್ರಮವಾಗಿ ಸರಯಾಯಿ ಮಾರಾಟ ಮಾಡುತ್ತಿರುವದಾಗಿ ತಿಳಿಸಿದ ಪ್ರಕಾರ ಎದರುಗಾರನ ಮನೆಗೆ ಚೆಕ್ ಮಾಡಲಾಗಿ ಸದರಿಯವನ ಮನೆಯಲ್ಲಿ ಸರಾಯಿ ಪಾಕೀಟುಗಳು ಸಿಕ್ಕಿರುವದಿಲ್ಲಾ, & ಅವನ ಮನೆಯ ಪಕ್ಕಕ್ಕೆ ಖಾಲಿ ಸರಾಯಿ ಪಾಕೀಟುಗಳು ಬಿದ್ದಿದ್ದು ಸದರಿಯವನಿಗೆ ಹಾಗೆ ಬಿಟ್ಟಲ್ಲಿ ಗ್ರಾಮದಲ್ಲಿ ಸರಾಯಿ ಮಾರಾಟ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿ ಗ್ರಾಮದಲ್ಲಿ ಶಾಂತಿ ಸುವ್ಯೆವಸ್ಥೆಯನ್ನು ಹಾಳು ಮಾಡಿ ಇನ್ನು ಹೆಚ್ಚಿನ ಘೋರ ಅಪರಾಧ ಎಸಗುವ ಸಂಭವ ಇದ್ದರಿಂದ ಸದರಿಯವನ ಮೇಲೆ ಗುನ್ನಾನಂ 91/2018 ಕಲಂ 110(ಇ)(ಜಿ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಇಂಗಳಹಳ್ಳಿ ಕ್ರಾಸ್ ನಲ್ಲಿ, ಹುಬ್ಬಳ್ಳಿ ಗದಗ ರಸ್ತೆ ಮೇಲೆ, ಆರೋಪಿ ಟ್ಯಾಂಕರ ಲಾರಿ ನಂಬರ ಕೆಎ-19-ಬಿ-3408 ನೇದ್ದರ ಚಾಲಕ ದಾವಲಸಾಬ ತಂದೆ ಇಮಾಮಸಾಬ ಸಾ. ಗೋರಿಗುಡ್ಡ, ಕಂಕನಾಡಿ, ಮಂಗಳೂರು ಇವನು ಟ್ಯಾಂಕರ ಲಾರಿ ನಂಬರ ಕೆಎ-19-ಬಿ-3408 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ, ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ, ಮಕ್ತುಂಹುಸೇನ ಕಾಶಿಮಸಾಬ ಮೊಮಿನ್ ಸಾ. ಶಿರಹಟ್ಟಿ ಓಣಿ, ಗದಗ-ಬೆಟಗೇರಿ ಇವನು ಚಾಲನೆ ಮಾಡಿಕೊಂಡು ಬರುತ್ತಿದ್ದ ಬೊಲೆರೋ ಮ್ಯಾಕ್ಸಿಟ್ರಕ್ ವಾಹನ ನಂಬರ ಕೆಎ-25-ಎಎ-7767 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಬೊಲೆರೋ ವಾಹನದ ಚಾಲಕ ಮಕ್ತುಂಹುಸೇನ ಕಾಶಿಮಸಾಬ ಮೊಮಿನ್ ಇವನಿಗೆ ಸಾದಾ ಗಾಯಪಡಿಸಿ, ಬಶೀರಅಹ್ಮದ ಹೊನ್ನೂರಸಾಬ ಚಿನ್ನೂರ ಸಾ. ಗಣೇಶ ನಗರ, ಕನ್ನಾಳ ಅಗಸಿ, ಗದಗ ಬೆಟಗೇರಿ ಇವನಿಗೆ ತೀವ್ರ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿಗುನ್ನಾನಂ 93/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರತ್ತದೆ.

Monday, March 12, 2018

CRIME INCIDENTS 12-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:12-03-2018 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರದ ಮಾನಕಾಪೂರದ ಡೌಗಿ ನಾಲಾ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ 1]  ಅಲ್ಲಾಭಕ್ಷ ತಂದೆ ರಫೀಕ ಶೇಖ, ವಯಾ 28 ಜಾತಿ ಮುಸ್ಲಿಂ ಉದ್ಯೋಗ ಸ್ಟೇಷನರಿ ವ್ಯಾಪಾರ ಸಾ ಃ ಅಳ್ನಾವರ ತಿಲಕ ನಗರ 2] ಬಸಯ್ಯ ತಂದೆ ದುಂಡಯ್ಯ ಮರಗಯ್ಯನವರಮಠ, ವಯಾ 42 ಜಾತಿ ಹಿಂದೂ ಲಿಂಗಾಯತ ಉದ್ಯೋಗ ಇಲೆಕ್ಟ್ರಿಷಿಯನ್ ಸಾ ಃ ಅಳ್ನಾವರ ವಿದ್ಯಾನಗರ 3] ಈರಣ್ಣಾ ತಂದೆ ಶಿವರಾಯ ಅವರೊಳ್ಳಿ, ವಯಾ 37 ಜಾತಿ ಹಿಂದೂ ಲಿಂಗಾಯತ ಉದ್ಯೋಗ ಪೆಂಟಿಂಗ್ ಕೆಲಸ ಸಾ ಃ ಹಳಿಯಾಳ ಅಂಬೇಡ್ಕರ 4] ನಾಷೀರ ತಂದೆ ಲಾಲಾಸಬ ದುರ್ಗದ, ವಯಾ 35 ಜಾತಿ ಮುಸ್ಲಿಂ ಉದ್ಯೋಗ ಮಾವಿನ ಹಣ್ಣಿನ ವ್ಯಾಪಾರ ಸಾ ಃ ತೇರಗಾಂವ ತಾ ಃ ಹಳಿಯಾಳ 5] ರುದ್ರಪ್ಪಾ ತಂದೆ ಗದಿಗೆಪ್ಪಾ ಮಾಸ್ತಮರಡಿ, ವಯಾ 35 ಜಾತಿ ಹಿಂದೂ ವಾಲ್ಮೀಕಿ ಉದ್ಯೋಗ ಮಾವಿನಕಾಯಿ ವ್ಯಾಪಾರ ಸಾ ಃ ಮದ್ನಳ್ಳಿ ತಾ ಃ ಹಳಿಯಾಳ 6] ಮಹ್ಮದಹುಸೇನ ತಂದೆ ಮಹ್ಮದಅಲಿ ದುಗರ್ಾಡಿ, ವಯಾ 35 ಜಾತಿ ಮುಸ್ಲಿಂ ಉದ್ಯೋಗ ಕೂಲಿ ಕೆಲಸ ಸಾ ಃ ಹಳಿಯಾಳ ಕೆ.ಇ.ಬಿ. ಕಚೇರಿ ಹತ್ತಿರ ಇವರುಗಳು ತಮ್ಮ ತಮ್ಮ ಫಾಯದೇಗೋಸ್ಕರ 52 ಇಸ್ಪೇಟ್ ಎಲೆಗಳ ಸಹಾಯದಿಂದ  ಅಂದರ್-ಬಾಹರ್ '' ಎಂಬ ಜೂಜಾಟ ಆಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಸದರಿ ಆಪಾದಿತರಿಂದ ರೋಖ ರಕಂ 10,655/- ರೂ. ಗಳು ಹಾಗೂ 52 ಇಸ್ಪೇಟ್ ಎಲೆಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಅಳ್ನಾವರ ಪೊಲೀಸ ಠಾಣೆಯಲ್ಲಿ ಗುನ್ನಾನಂ 19/2018 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಬಸಾಪುರ  ಗ್ರಾಮದ ನಾಗಪ್ಪಾ ತಳವಾರ ಇತನು ಆರೋಪಿತನ ಮನೆಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ತನ್ನ ಬಳಿಗೆ ಯಾವುದೇ ಪಾಸ್ ಹಾಗು ಪರ್ಮಿಟ್ ಇಲ್ಲದೇ ಅಕ್ರಮವಾಗಿ ತನ್ನ ಫಾಯದೇಗೋಸ್ಕರ 180 ಎಮ್.ಎಲ್ ಅಳತೆಯ ಒಟ್ಟು 30 ಓಲ್ಟ ಟಾವರ್ನ ಕಂಪನಿಯ ವಿಸ್ಕಿ ತುಂಬಿದ ಟೆಟ್ರಾ ಪಾಕೀಟುಗಳು. ಒಟ್ಟು ಅಕಿ 2070/-ರೂ ನೇದ್ದವುಗಳನ್ನು ಒಂದು ಚೀಲದಲ್ಲಿ ಇಟ್ಟುಕೊಂಡು  ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 28/2018 ಅಬಕಾರಿ ಕಾಯ್ದೆ 32.34 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ ತನ್ನ ಲಾರಿ ನಂ.ಕೆಎ-25-ಬಿ-6448 ಅ.ಕಿ. 8,00,000=00 ನೇದ್ದನ್ನು ಶಿರಸಂಗಿಯಿಂದ ಶಿರೂರ ಇನಾಮಹೊಂಗಲ ರಸ್ತೆ ಮಾರ್ಗವಾಗಿ ನಡೆಯಿಸಿಕೊಂಡು ಹೊರಟಾಗ ಹಳ್ಳದ ಬ್ರಿಡ್ಜ ಮೇಲೆ ಲಾರಿ ಬಂದ್ ಬಿದ್ದಾಗ ಅದನ್ನು ಅಲ್ಲೆ ಬಿಟ್ಟು ಫಿರ್ಯಾದಿಯು ಇನಾಮಹೊಂಗಲಕ್ಕೆ ಬಂದು ಮೇಸ್ತ್ರಿಗೆ ಹುಡುಕಾಡಿ ವಾಪಸ್ಸು ಲಾರಿ ಹತ್ತಿರ ರಾತ್ರಿ 12-30 ಗಂಟೆಗೆ ಹೋದಾಗ ಸದರ ಲಾರಿ ಕಳುವಾಗಿದ್ದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 26/2018 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಗುನ್ನಾನಂ 88/2018.89/2018 ಮುಂಜಾಗೃತ ಕ್ರಮವಾಗಿ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ ಮೃತ ದುರಗಪ್ಪ ತಂದೆ ಹನಮಂತ ಮಾದರ ವಯಾ 26 ವರ್ಷ ಸಾ!! ಗುಡಿಸಾಗರ ಇತನಿಗೆ 1 ವರ್ಷದಿಂದ  ಹೊಟ್ಟೆ ನೋವಿನ ಬೆನ್ನೆ ಇದ್ದು ಗಾಂವಟಿ ಉಪಚಾರ ಮಾಡಿಸಿದರು ಅರಾಮ ಆಗಿರಲ್ಲಿಲ್ಲಾ ಸದರಿಯವನು ತನ್ನಿಗಿದ್ದ ಹೊಟ್ಟೆ ನೋವಿನ ಬೆನೆ ತಾಳಲಾರದೆ ದಿನಾಂಕ:11-03-2018 ರ ರಾತ್ರಿ 11.30 ಗಂಟೆಯಿಂದ ಈ ದಿವಸ ದಿನಾಂಕ:12-03-2018 ರ ಬೆಳಗಿನ 6.30 ಗಂಟೆ ನಡುವಿನ ಅವಧಿಯಲ್ಲಿ ತನ್ನಷ್ಟಕ್ಕೆ ತಾನೇ ತಿಪ್ಪವ್ವ ಉಳ್ಳಾಗಡ್ಡಿ ಇವರ ಹೊಲದಲ್ಲಿಯ ಬನ್ನಿ ಗಿಡಕ್ಕೆ ವಾಯರ ಹಗ್ಗದಿಂದ ಉರುಲು ಹಾಕಿಕೊಂಡು ಮರಣ ಹೊಂದಿರುತ್ತಾನೆ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವದಿಲ್ಲಾ ಫಿಯಾಱಧಿ ನೀಡಿದ್ದು ಇರುತ್ತದೆ  ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 08/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಾರಿಹಾಳ ಗ್ರಾಮದ, ಪಾಲಿಟೆಕ್ನಿಕ್ ಬಿಲ್ಡಿಂಗ್ ಮೇಲೆ, ಮೃತ ಚೇತನ ಕುಮಾರ ತಂದೆ ಪ್ರಭು ಗೊಟಗೋಡಿ ವಯಾ. 24 ವರ್ಷ ಸಾ. ತಾರಿಹಾಳ, ವಾಜಪೇಯ ನಗರ, ಇವನು ತನ್ನಷ್ಟಕ್ಕೆ ತಾನೇ ಯಾವುದೋ ವಿಷ ಸೇವನೆ ಮಾಡಿದ್ದು, ಸದರಿಯವನಿಗೆ ಉಪಚಾರ ಕುರಿತು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಉಪಚಾರಕ್ಕೆ ಅಂತ ಎಸ್.ಡಿ.ಎಂ. ಆಸ್ಪತ್ರೆಗೆ ದಾಖಲಿಸಿದ್ದು, ಉಪಚಾರ ಫಲಿಸದೇ ಈ ದಿವಸ ದಿನಾಂಕ: 12-03-2018 ರಂದು ಬೆಳಗಿನ ಜಾವ 2-53 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಸದರಿಯವನು ತನ್ನಷ್ಟಕ್ಕೆ ತಾನೇ ಯಾವುದೋ ವಿಷ ಸೇವನೆ ಮಾಡಿ ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ತನ್ನದಾಗಲಿ ತನ್ನ ಮನೆಯವರದಾಗಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಮೃತನ ಸಹೋದರನು ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ17/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.