ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, May 22, 2018

CRIME INCIDENTS 22-05-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:22-05-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಆಲದಕಟ್ಟಿ ಗ್ರಾಮದ ಹತ್ತಿರ ದೇವೆಂದ್ರಪ್ಪ ತಂದೆ ಫಕ್ಕಿಪ್ಪ ಹರಿಜನ 40 ವರ್ಷ ಸಾ..ತುಮರಿಕೊಪ್ಪ ಇವನು ತನ್ನ ಬಾಭತ್ ಮೋಟಾರ್ ಸೈಕಲ್ ನಂ KA-31-V-0811 ನೇದ್ದನ್ನು ಅರಳಿಹೊಂಡ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಬಂದು ಆಲದಕಟ್ಟಿ ಕ್ರಾಸ್ ಸಮೀಪ ವೇಗದ ನಿಯಂತ್ರಣ ಮಾಡಲಾಗದೆ ರಸ್ತೆಯ ಬಲಬದಿ ಇರುವ ತೆಗ್ಗಿನಲ್ಲಿ ಕೆಡವಿ ತಾನೆ ತಲೆಗೆ ಮೈಕೈಗೆ ಗಂಭಿ ಗಾಯಪಡಿಸಿಕೊಂಡು ಸ್ಥಳದಲ್ಲಿಯೇ ಮರಣಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 143/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕುಸಗುಲ್ಲಗ್ರಾಮದ  ಆರೋಪಿ ಮಹ್ಮದ್ ಜಲಾನಿ ಮುಲ್ಲಾ ಸಾ!! ಕುಸಗಲ್ ಈತನು ದಿನಾಂಕ: 22-05-2018 ರಂದು ಮುಂಜಾನೆ 10-40 ಗಂಟೆ ಸುಮಾರಿಗೆ ಪಿರ್ಯಾದಿ ಚಲಾಯಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ನಂ ಕೆಎ42/ಎಪ್-919 ನೇದ್ದನ್ನು ತನ್ನ ಸಂಬಂದಿಕರನ್ನು ಕುಸಗಲಗೆ ಇಳಿಸದೆ ಹೆಬಸೂರಿಗೆ ಇಳಿಸಿ ಬಂದಿದ್ದರ ಸಿಟ್ಟಿನಿಂದ ಕುಸಗಲ್ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಅಡ್ಡಗಟ್ಟಿ ತರುಬಿ ಕಲ್ಲಿನಿಂದ ಹೊಡಿಬಡಿ ಮಾಡಿ ಅವಾಚ್ಯ ಬೈದಾಡಿ ಜೀವದ ಬೆದರಿಕೆ ಹಾಕಿದ ಸರಕಾರಿ ಕೆಲಸಕ್ಕೆ ಅಡೆತಡೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣಪ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 147/2018 ಕಲಂ 506.341.324.504.353.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಅಳಗವಾಡಿ ಗ್ರಾಮದ  ಮೃತಳನಾದ ಅನ್ನಪೂರ್ಣ ಕೋಂ ಸುರೇಶ ಗಾಣೀಗೆರ ವಯಾ:45 ವರ್ಷ ಿತಳು ಈಗ ಹೆಳೆಯ ಮನೆಯನ್ನು ಕೆಡವಿ ಹೊಸಮನೆಯನ್ನು ಕಟ್ಟಿಸುವ ಸಲುವಾಗಿ ತನ್ನಲ್ಲಿ ಹಣವಿಲ್ಲವೆಂದು ಮಾನಸಿಕ ಮಾಡಿಕೊಂಡು ಈ ದಿವಸ ದಿನಾಂಕ:22-05-2018 ರಂದು ಬೆಳಿಗ್ಗೆ 6 -00 ಗಂಟೆ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ತನ್ನಷ್ಟಕ್ಕೆ ತಾನೇ ಯಾವುದೇ ವಿಷ ಸೇವನೇ ಮಾಡಿ ಅಸ್ತವ್ಯಸ್ಥಗೊಂಡು ಉಪಚಾರಕ್ಕೆಂದು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೊಗುವಾಗ ದಾರಿಯ ಮದ್ಯದಲ್ಲಿ ಮೃತಪಟ್ಟಿರುತ್ತಾಳೆ ವಿನಹ ಸದರಿಯವಳ ಮರಣದಲ್ಲಿ ಬೇರೆ ಎನೂಸಂಶಯ ಇರುವಿದಿಲ್ಲಾ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 22/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ


Monday, May 21, 2018

CRIME INCIDENTS 21-05-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:21-05-2018 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಪಾಳೆ ಗ್ರಾಮದ ಹತ್ತಿರ ಆರೋಪಿತನಾದ ವಿರುಪಾಕ್ಷಪ್ಪ ಗುರಪ್ಪ ಸರಸ್ವತಿ 34 ವರ್ಷ ಸಾ!! ಪಾಳ್ಯ ಈತನು ದಿನಾಂಕ 21-05-2018 ರಂದು ಮುಂಜಾನೆ 05-30 ಗಂಟೆ ಸುಮಾರಿಗೆ ಸಣ್ಣ ಪುಟ್ಟ ಕಳ್ಳತನ ಮಾಡುವ ಉದ್ದೇಶದಿಂದ ಪಾಳ ಗ್ರಾಮದ ಕ್ರಾಸ್ ಹತ್ತಿರ ಸಂಶಯಾಸ್ಪದ ರೀತಿಯಲ್ಲಿ ನಿಂತುಕೊಂಡಿದ್ದು ಸದರಿಯವನಿಗೆ ಹಾಗೇ ಬಿಟ್ಟಲ್ಲಿ ಕಾಗ್ನೇಜೆಬಲ್ ಗುನ್ನೆ ಮಾಡಬಹುದು ಅಂತ ಕಂಡು ಬಂದಿದ್ದರಿಂದ ಸದರಿಯವನ ಮೇಲೆ ಗುನ್ನಾನಂ 145/2018  ಕಲಂ 109 ಸಿ.ಆರ್.ಪಿ.ಸಿ ಪ್ರಕಾರ ಕ್ರಮ ಕೈಗೊಂಡಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಗೊಬ್ಬರಗುಂಪ್ಪಿ ಗ್ರಾಮದ ಹತ್ತರಿ ಕೆ.ಎಸ್.ಆರ್.ಟಿ.ಸಿ. ಬಸ್ ನಂ.ಕೆಎ-29/ಎಫ್-1123 ನೇದ್ದರ ಚಾಲಕನು ತನ್ನ ಬಸ್ಸನ್ನು ಸೊಲ್ಲಾಪೂರ-ಹುಬ್ಬಳ್ಳಿ ರಸ್ತೆಯ ಮೇಲೆ ನರಗುಂದ ಕಡೆಯಿಂದ ನವಲಗುಂದ ಕಡೆಗೆ ಅತೀ ವೇಗವಾಗಿ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಗೊಬ್ಬರಗುಂಪಿ ಕ್ರಾಸ ಹತ್ತಿರ ನವಲಗುಂದ ಕಡೆಯಿಂದ ನರಗುಂದ ಕಡೆಗೆ ಹೊರಟ ಪಿರ್ಯಾದಿ ಲಾರಿ ನಂ.ಕೆಎ-19/ಎಬಿ-0705 ನೇದ್ದಕ್ಕೆ ಢಿಕ್ಕಿ ಮಾಡಿ ಅಪಘಾತಪಡಿಸಿ ಫಿರ್ಯಾದಿಗೆ ಮತ್ತು ಲಾರಿ ಚಾಲಕನಿಗೆ ಸಾದಾ ಗಾಯಪಡಿಸಿದ್ದಲ್ಲದೆ ತನ್ನ ಬಸ್ಸಿನಲ್ಲಿದ್ದ 4-5 ಪ್ರಯಾಣಿಕರಿಗೆ ಕಂಡಕ್ಟರನಿಗೆ ಸಾದಾ ವ ಭಾರಿ ಗಾಯಪಡಿಸಿದ್ದಲ್ಲದೆ ತಾನೂ ಸಹಾ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 114/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: NH 04 ಬೈಪಾಸ ರಸ್ತೆ ಹಳ್ಳಿಯಾಳ ಬ್ರಿಡ್ಜ ಹತ್ತಿರ ನಮೂದು ಮಾಡಿದ  ಮಿನಿ ಗೂಡ್ಸ ಲಾರಿ ನಂಬರ KA 24-3597 ನೇದ್ದರ ಚಾಲಕನು ತನ್ನ ವಾಹನವನ್ನು ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನದ ವೇಗ ನಿಯಂತ್ರಣ ಮಾಡಲಾಗದೇ ಹುಬ್ಬಳ್ಳಿ ಕಡೆಯಿಂದ ಬೆಳಗಾವ ಕಡೆಗೆ ರಸ್ತೆಯ ಎಡ ಸೈಡಿಗೆ ಹೊರಟ  ಟ್ಯಾಂಕರ ಲಾರಿ ನಂಬರ GJ 06 AX 9716 ನೆದ್ದಕ್ಕೆ ಡಿಕ್ಕಿ ಮಾಡಿ ತನಗೆ ಭಾರಿ ಸ್ವರೂಪದ ಘಾಯ ಪಡಿಸಿಕೊಂಡಿದ್ದಲ್ಲದೆ ಎರಡು ವಾಹನಗಳಿಗೆ  ಜಖಂಗೊಳಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 136/2018 ಕಲಂ 279.338.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಾರಿಹಾಳ ಗ್ರಾಮದ, ವಾಜಪೇಯ ನಗರದ, ಪಿರ್ಯಾದಿಯ ಮನೆಯಿಂದ ಆರೋಪಿತರಾದ 1] ಶಾಂತವ್ವ ಕೋಂ ಮಲ್ಲಪ್ಪ ವಡ್ಡಟ್ಟಿ 2] ಶೋಭಾ@ಹಾಲಮ್ಮ ತಂದೆ ಮಲ್ಲಪ್ಪ ವಡ್ಡಟ್ಟಿ 3] ಕವಿತಾ ತಂದೆ ಮಲ್ಲಪ್ಪ ವಡ್ಡಟ್ಟಿ, ಪಿರ್ಯಾದಿಯ ಮಗ ನವೀನ ತಂದೆ ಮಂಜುನಾಥ ಬಾರಕೇರ ವಯಾ. 9 ತಿಂಗಳು ಇವನಿಗೆ ಅಪಹರಣ ಮಾಡಿಕೊಂಡು ಬೆಂಗಳೂರಿಗೆ ಹೋಗಿ, ಆರೋಪಿತರಿಗೆ ಪರಿಚಯದವನಾದ ಪ್ರಕಾಶ ಇವನೊಂದಿಗೆ ಸೇರಿಕೊಂಡು ಮಗು ನವೀನ ಬಾರಕೇರ ಇವನ ತಲೆಗೆ ಚಾಕುವಿನಿಂದ ಕೊರೆದು ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 146/2018 ಕಲಂ 363.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, May 19, 2018

CRIME INCIDENTS 19-05-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-05-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: NH 04 ಬೈಪಾಸ ರಸ್ತೆ ಹದ್ದಿನಗುಡ್ಡ ಟಾಟಾ ಸಫಾರಿ ವಾಹನ ನಂ KA-44-M-2214 ನೇದರ ಚಾಲಕನು ತನ್ನ ವಾಹನವನ್ನು ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನದ ವೇಗ ನಿಯಂತ್ರಣ ಮಾಡಲಾಗದೇ ರಸ್ತೆಯ ಬಲಗಡೆ ಪಲ್ಟಿ ಮಾಡಿ ಕೆಡವಿ ವಾಹನವನ್ನು ಜಖಂಗೊಳಿಸಿದ್ದಲ್ಲದೇ ವಾಹನದಲ್ಲಿದ್ದ ಪಿರ್ಯಾದಿ ಹಾಗೂ ಸಿದ್ದೇಶ ಡಿ.ಎಸ್. ಇವರಿಗೆ ಸಾದಾ ವ ಬಾರೀ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 133/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದುಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಹುಬ್ಬಳ್ಳಿ ರಸ್ತೆಯ ಮೇಲೆ ಕಾಡನಕೊಪ್ಪ ಬಸ್ಟ್ಯಾಂಡ ಹತ್ತೀರ ಮೋಟಾರ್ ಸೈಕಲ್ ನಂ KA-25-ES-6289 ನೇದ್ದರ ಚಾಲಕನು ಹುಬ್ಬಳ್ಳಿ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಬಸ್ಟ್ಯಾಂಡದಿಂದ ಮನೆಯ ಕಡೆಗೆ ಹೊರಟ ಪಿರ್ಯಾಧಿಯ ಹೆಂಡತಿ ನಿಂಗವ್ವಾ ಕೊಂ ಮಹಾದೇವಪ್ಪ ಮೋರೆ 35 ವರ್ಷ ಸಾ..ಕಾಡನಕೊಪ್ಪ ಇವಳಿಗೆ ಡಿಕ್ಕಿ ಮಾಡಿ ಅಪಘಾಥಪಡಿಸಿ ಗಾಯಪಡಿಸಿ ಗಾಯಾಳುವಿಗೆ ಉಪಚಾರಕ್ಕೆ ಸಹಕರಿಸಿದೆ & ಘಟನೆಯ ವಿಷಯವನ್ನು ಪೊಲೀಸ ಠಾಣೆಗೆ ತಿಳಿಸದೆ ವಾಹನ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 279.338 ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಿಂಡಸಗೇರಿ ಗ್ರಾಮದ ಪಿರ್ಯಾಧಿ ಮೃತ ಉಮೇಶ ತಂದೆ ಸಂಗಪ್ಪ ದೊಡ್ಡಮನಿ 35 ವರ್ಷ ಸಾ..ಹಿಂಡಸಗೇರಿ ಇವನ ಹೆಂಡತಿಯಾದ ರತ್ನವ್ವಾ @ ಕರೆಮ್ಮಾ ಇವಳು ತನ್ನ ಗಂಡ ಉಮೇಶ ಇವನೊಂದಿಗೆ ಕಳೇದ 6 ವರ್ಷದ ಹಿಂದೆ ತಂಟೆ ಮಾಡಿಕೊಂಡು ತನ್ನ ತವರು ಮನೆಗೆ ಹೋಗಿದ್ದಕ್ಕೆ ಮಾನಸಿಕ ಅಸ್ವಸ್ಥನಾಗಿದ್ದರಿಂದ ಅವನಿಗೆ ಧಾರವಾಡ ಮಾನಸಿಕ ಆಸ್ಪತ್ರೆಗೆ ತೋರಿಸಿದರೂ ಸಹಾ ಕಡಿಮೆಯಾಗದೆ ಇದ್ದುದರಿಂದ ಅದೆ ಮಾನಸಿಕ ಸ್ಥಿತಿಯಲ್ಲಿ ನಮೂದ ದಿನಾಂಕರಂದು ತನ್ನ ಮನೆಯ ಹಿತ್ತಿದಲ್ಲಿರುವ ಸಾಗವಾನಿ ಮರಕ್ಕೆ ಹಗ್ಗದಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟ  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 29/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, May 18, 2018

CRIME INCIDENTS 18-05-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-05-2018 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರ ಗ್ರಾಮದ ಶ್ರೀ ನಾರಾಯಣ ತಂದೆ ಲಕ್ಷ್ಮಣ ಪಠಾಣ ಸಾ ಃ ಬೇಡರಶಿರಗುರ ಪೋಸ್ಟ ಬರ್ಚಿ  ತಾ ಃ ದಾಂಡೇಲಿ ಇವರು ದಿನಾಂಕಃ 26-02-2015 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ಅಳ್ನಾವರ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹತ್ತಿರ ಇರುವ ಗಾಯತ್ರಿ ಹೋಟೇಲ್ ಮುಂದೆ ತಮ್ಮ ಬಾಬತ್ ಮೋಟಾರ ಸೈಕಲ್ ನಂ. ಕೆಎ-65/ಇ-2642 ಅಃಕಿಃ 24,000/- ರೂ. ಕಿಮ್ಮತ್ತಿನೇದ್ದನ್ನು ಇಟ್ಟು ಚಹಾ ಕುಡಿಯಲು ಹೋದಾಗ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 66/2018 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 81/2018.82/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರನವನ್ನುದಾಖಲಿಸದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಬರದ್ವಾಡ ಗ್ರಾಮದ ಫಕ್ಕಿರಪ್ಪಾ ಮಾಡಳ್ಳಿ ಇತನ ಮನೆಯ ಬಾಗಿಲದ ಚಿಲಕವನ್ನು ಆರೋಪಿತನಾದ ಬಸವರಾಜ ಈರಪ್ಪ ಹಳ್ಳಿ, ಸಾ: ಬರದ್ವಾಡ, ಈತನು ತೆಗೆದು ಪಿರ್ಯಾದಿಯ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾದಿಯ ಹೆಂಡತಿ ಶ್ರೀಮತಿ ವಿಜಯಲಕ್ಷ್ಮೀ ಕೋಂ ಪಕ್ಕೀರಪ್ಪ ಮಾಡಳ್ಳಿ, ವಯಾ: 39 ವರ್ಷ, ಸಾ: ಬರದ್ವಾಡ ತಾ: ಕುಂದಗೋಳ ಇವಳನ್ನು ಮಾನಭಂಗಪಡಿಸುವ ಉದ್ದೇಶದಿಂದ ಅವಳು ಧರಿಸಿದ್ದ ಪತ್ತಲವನ್ನು ಹಿಡಿದು ಎಳೆದಾಡಿ ಮಾನಭಂಗಪಡಿಸಲು ಪ್ರಯತ್ನಿಸಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 96/2018 ಕಲಂ 448.354.(ಬಿ) ಐಪಿಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ:17-05-2018 ರಂದು ರಾತ್ರಿ 22-00 ಗಂಟೆಯಿಂದ ದಿನಾಂಕ:18-05-2018 ರಂದು ಬೆಳಗಿನ 06-00 ಗಂಟೆಯ ನಡುವಿನ ಅವದಿಯಲ್ಲಿ ಯಾರೋ ಕಳ್ಳರು ಕಲಘಟಗಿ ಪಟ್ಟಣದ ಜ್ಯೋತಿನಗರದಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿ ಹಾಗೂ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಕೊಠಡಿಯ ಬಾಗಿಲು ಕೀಲಿ ಮುರಿದು ಒಳಪ್ರವೇಶ ಮಾಡಿ ಟ್ರೇಜರಿಯ ಬಾಗಿಲು ಮುರಿದು ಅದರಲ್ಲಿ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳನ್ನು ಅಕಿ 1.53.000/- ರೂ ಕಿಮ್ಮತ್ತಿನವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 457.380 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಶೆರವಾಡ ಗ್ರಾಮದ  ಕಾಣೆಯಾದ ಮೃತ್ಯುಂಜಯ್ ತಂದೆ ಹುಚ್ಚಪ್ಪ ಮತ್ತಿಗಟ್ಟಿ 45 ವರ್ಷ ಸಾ!! ಶರೆವಾಡ ತಾ!! ಹುಬ್ಬಳ್ಳಿ ವಿಪರೀತ ಸರಾಯಿ ಕುಡಿದು ಮನೆಗೆ ಬಂದಿದ್ದರಿಂದ ಪಿರ್ಯಾದಿಯು ಸರಾಯಿ ಕುಡಿಯುವದನ್ನು ಬಿಡು ಅಂತ ಸಿಟ್ಟಿನಿಂದ ಬುದ್ದಿ ಮಾತು ಹೇಳಿದ್ದಕ್ಕೆ ಸಿಟ್ಟಾಗಿ ಮನೆಯಿಂದ ಹೋದವನು ವಾಪಸ್ ಮನೆಗೆ ಬಂದಿರುವದಿಲ್ಲ ಅಂತ ಕಾಣೆಯಾದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 142/2018 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಬಸಾಪುರ ಗ್ರಾಮದ ಮೃತನಾದ ನಿಂಗಪ್ಪ ತಂದೆ ಚನ್ನಬಸಪ್ಪ ಚವಡಿ ವಯಾ-38 ವರ್ಷ ಸಾ: ಬಸಾಪುರ ತಾ: ನವಲಗುಂದ ಈತನು ಹೋದ ವರ್ಷ ತನ್ನ ಹೊಲದ ಮೇಲೆ ಅಣ್ಣಿಗೇರಿ ಕೆನರಾ ಬ್ಯಾಂಕದಲ್ಲಿ 5 ಲಕ್ಷ 20 ಸಾವಿರ ರೂಪಾಯಿ ಬೆಳೆಸಾಲ ಹಾಗೂ ಬಸಾಪುರ ಸೊಸೈಟಿಯಲ್ಲಿ 25 ಸಾವಿರ ರೂಪಾಯಿ ಬೆಳೆ ಸಾಲವನ್ನು ತೆಗೆದುಕೊಂಡು ಅದನ್ನು ತನ್ನ ಹೊಲಕ್ಕೆ ಬೀಜ ಗೊಬ್ಬರ ಅಂತಾ ಖರ್ಚು ಮಾಡಿದ್ದು ಆದರೆ ಮಳೆ ಆಗದೇ ಬೇಳೆ ಬಾರದ್ದರಿಂದ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ತನ್ನ ಮನೆಯಲ್ಲಿನ ಕಟ್ಟಿಗೆಯ ಜಂತಿಗೆ ಪ್ಲಾಸ್ಟಿಕ ವಾಯರ್ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 10/2018 ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸದ್ದು ಇರುತ್ತದೆ.

Wednesday, May 16, 2018

CRIME INCIDENTS 16-05-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-05-2018 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಹಳ್ಳಿಕೇರಿ ಗ್ರಾಮದ ಹತ್ತಿರ ಆರೋಪಿತನಾದ ಕೃಷ್ಣಾ ಕಂದೂರ ಇತನು  ಚಲಾಯಿಸುತ್ತಿದ್ದ ಮೋಟರ್ ಸೈಕಲ್ ನಂಬರ್ KA-25/EA-4998 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಮೋಟರ್ ಸೈಕಲನ್ನು ಅತೀ ವೇಗ ಹಾಗು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ತನ್ನ ಮುಂದೆ ಹೊರಟ ಮೋಟರ್ ಸೈಕಲ್ಗಳನ್ನು ಓವರ್ಟೇಕ ಮಾಡಿಕೊಂಡು ರಸ್ತೆಯ ಬಲಗಡೆಗೆ ಮೋಟರ್ ಸೈಕಲನ್ನು ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಸೈಡಿನಲ್ಲಿ ನಾನು ಚಾಲನೆ ಮಾಡುತ್ತಿದ್ದ ಮೋಟರ್ ಸೈಕಲ್ ನಂಬರ್ KA-25/EX-7552 ನೇದ್ದಕ್ಕೆ ತನ್ನ ಮೋಟರ್ ಸೈಕಲನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ನನ್ನ ಮೋಟರ್ ಸೈಕಲ್ ಹಿಂಬದಿ ಸವಾರ ಪಿರ್ಯಾದಿಯ ತಂದೆಯ ತಲೆಗೆ ಭಾರೀ ಪ್ರಮಾಣದ ಗಾಯ ಪೆಟ್ಟು ಆಗುವಂತೆ ಮಾಡಿ ಉಪಚಾರ ಫಲಿಸದೇ ಮರಣ ಹೊಂದುವಂತೆ ಮಾಡಿದ್ದು ಅಲ್ಲದೇ ಪಿರ್ಯದಿ ಮತ್ತು ತನಗೆ ಸಾದಾ ವ ಭಾರಿ ಗಾಯ ಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 62/2018 ಕಲಂ 279.337.338.304(ಎ) ಹಾಗೂ ವಾಹನ ಕಾಯ್ದೆ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಹಂಗರಕಿ ಗ್ರಾಮದ ಹತ್ತಿರ ಕಲ್ಲಪ್ಪಾ ಹುಲ್ಲಗಣ್ಣವರ ಇತನು ವೀಕ್ಷಣೆ ಮಾಡುತ್ತಾ ಕುಳಿತು ಕೊಂಡಾಗ ಇರದಲ್ಲಿಯ ಆರೋಪಿತರು ಪ್ರಭು ಬೆಲಿಹಾಳ 2.ಶಿವನಗೌಡ ನಾಗನಗೌಡ ಇವರು  ಪಿರ್ಯಾದಿಯ ಮನೆಯ ಮುಂದೆ ನಿಂತು ಅವಾಚ್ಯವಾಗಿ ಬೈದಾಡುತ್ತಾ ಹೊರಗೆ ಬಾ ನಿನ್ನ ಜೀವ ಸಹೀತ ಬಿಡುವದಿಲ್ಲಾ ಅಂತಾ ಬೈದಾಡುತ್ತಿದ್ದಾಗ ಇವರಿಗೆ ಕೂಡಿಕೊಂಡು ಸಮಾಧಾನ ಹೇಳಲು ಹೋದಾಗಅಚ್ಯವಾಗಿ ಬೈದಾಡಿ ಸುರೇಶ ಹುಲಗಣ್ಣವರ ಇವನಿಗೆ ಕೈಯಿಂದ ಬಡಿಗೆಯಿಂದ ಹೊಡಿಬಡಿ ಮಾಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 80/2018 ಕಲಂ 506.34.324.323.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಂದ್ಲಿ ಗ್ರಾಮದ ಕಾಣಿಯಾದ ಶಿಲ್ಪಾ ಕೋಂ ಪರಶುರಾಮ ಶಿಂದೆ 26 ವರ್ಷ ಸಾ; ಸಂಕನಕೊಪ್ಪ ತಾ; ಹಳ್ಳಿಯಾಳ ಹಾಲಿ ವಸ್ತಿ  ಕಂದ್ಲಿ ಇವರು ಫಿರ್ಯಾದಿ ಮಗಳಿದ್ದು ಫಿರ್ಯಾದಿ ಜಮೀನಿಗೆ ಕೆಲಸಕ್ಕೆ ಹೋದಾಗ ಪಕ್ಕದ ಮನೆಯಲ್ಲಿ ನನಗೆ ಮೈಯಲ್ಲಿ ಆರಾಮಿಲ್ಲಾ ಕಲಘಟಗಿಗೆ ಆಸ್ಪತ್ರೆಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋದವಳು ಇಲ್ಲಿಯವರೆಗೆ ಮರಳಿ ಮನೆಗೆ ಬಾರದೇ ಕಾಣಿಯಾಗಿದ್ದು ಹುಡುಕಿ ಕೊಡಲು ಫಿರ್ಯಾದಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 138/2018 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

Monday, May 14, 2018

CRIME INCIDENTS 14-05-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:14-05-2018 ರಂದು ವರದಿಯಾದ ಪ್ರಕರಣಗಳು

1  ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 07-05-2018 ರಂದು 10-30 ಗಂಟೆಗೆ ಪಿರ್ಯಾದಿಯ ತಂದೆ ನಾಗಪ್ಪ ಡೂಳ್ಳಿನವರ ಈತನು ಮುಮ್ಮಿಗಟ್ಟಿ ಬಸ್ ನಿಲ್ದಾಣ ಹತ್ತಿರ ರಸ್ತೆ ದಾಟುತ್ತಿದ್ದಾಗ ಕಾರ ನಂಬರ ಕೆಎ 27-ಎಮ್-8048 ನೇದರ ಚಾಲಕನು ತನ್ನ ಕಾರನು ಧಾರವಾಡ ಕಡೆಯಿಂದಾ ಬೆಳಗಾವಿ ಕಡೆಗೆ ಅತೀ ಜೋರಿನಿಂದಾ ವ ನಿಷ್ಕಾಳಜೀತನದಿಂದಾ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಢಿ ಅಪಘಾತಪಡಿಸಿ ಪಿರ್ಯಾದಿಯ ತಂದೆಗೆ ಬಾರಿ ಸ್ವರೂಪದ ಗಾಯಪಡಿಸಿ ಕಾರನು ನೀಲ್ಲಿಸದೇ ಹೋದ ಅಪರಾಧ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 77/2018 ಕಲಂ INDIAN MOTOR VEHICLES ACT, 1988 (U/s-134,187); IPC 1860 (U/s-338,279) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2.  ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ-13-05-2018 ರಂದು ಸಂಜೆ 7-00 ಗಂಟೆಯ ಸುಮಾರಿಗೆ ನೆಲ್ಲಿಹರವಿ ಗ್ರಾಮದ ಪ್ಲಾಟ್ ದಲ್ಲಿರುವ ಬೋರ ಹತ್ತೀರ ಆರೋಪಿತರಾಧ ಮಂಜುನಾಥ ಬಾರಕೇರ, ರೇಣುಕಾ ಬಾರಕೇರ, ದೇವಕ್ಕಾ ಬಾರಕೇರ ಮತ್ತು ಮೈಲಾರಪ್ಪ ಬಾರಕೇರ ಇವರೆಲ್ಲರೂ ಪಿರ್ಯಾಧಿಯ ಹೆಂಡತಿ ಮಹಾದೇವಿ ಇವಳೊಂದಿಗೆ ನೀರು ತುಂಬುವ ಸಲುವಾಗಿ ತಂಟೆ ತೆಗೆದು ಆರೋಪಿ ನಂ 2 & 3 ನೇದವರು ಪಿರ್ಯಾಧಿಗೆ ಕೈಯಿಂದಾ ಹೊಡಿಬಡಿ ಮಾಡುತ್ತಿರುವಾಗ ಬಿಡಿಸಿಕೊಳ್ಳಲು ಬಂದ ಪಿರ್ಯಾಧಿಗೆ ಅವಾಚ್ಯ ಬೈದಾಡಿ ಆರೋಪಿ ನಂ 1 & 4 ನೇದವರು ಕಲ್ಲುಗಳಿಂದಾ ತಲೆಗೆ ಹೊಡೆದು ಗಾಯಪಡಿಸಿ ಇನ್ನೊಮ್ಮೆ ಸಿಕ್ಕರೆ ನಿಮ್ಮನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 137/2018 ಕಲಂ IPC 1860 (U/s-323,324,504,506,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.